the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

ಅನುಭವಮಂಟಪ ; ಸಿಎಂ ಭಾಷಣದ ನೇರಪ್ರಸಾರಕ್ಕೆ 42.26 ಲಕ್ಷ ರು. ವೆಚ್ಚ

thefilestack by thefilestack
September 3, 2021
in GOVERNANCE
0
0
SHARES
1
VIEWS
Share on FacebookShare on Twitter

ಬೆಂಗಳೂರು; ಬೀದರ್‌ ಜಿಲ್ಲೆಯ ಬಸವ ಕಲ್ಯಾಣದಲ್ಲಿ ನಡೆದಿದ್ದ ನೂತನ ಅನುಭವ ಮಂಟಪ ನಿರ್ಮಾಣ ಮತ್ತು ಇನ್ನಿತರೆ ಪೂಜಾ ಕಾರ್ಯುಕ್ರಮಗಳಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿಗಳ ಭಾಷಣವನ್ನು 30 ನಿಮಿಷ ಅವಧಿಯ ನೇರ ಪ್ರಸಾರಕ್ಕೆ ಬಿಜೆಪಿ ಸರ್ಕಾರವು ಒಟ್ಟು 42.26 ಲಕ್ಷ ರು. ಖರ್ಚು ಮಾಡಿತ್ತು. ಮುಖ್ಯಮಂತ್ರಿಗಳ ಭಾಷಣದ ನೇರ ಪ್ರಸಾರಕ್ಕೂ ಜಾಹೀರಾತು ರೂಪದಲ್ಲಿ ಲಕ್ಷಾಂತರ ರುಪಾಯಿ ವೆಚ್ಚ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

2021ರ ಜನವರಿ 6ರಂದು ಬೀದರ್‌ ಜಿಲ್ಲೆಯ ಬಸವ ಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣ ಮತ್ತು ಇನ್ನಿತರೆ ಭೂಮಿ ಪೂಜೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇದೇ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಭಾಷಣವನ್ನು 30 ನಿಮಿಷಗಳ ಕಾಲ ಸುದ್ದಿ ವಾಹಿನಿಗಳು ನೇರ ಪ್ರಸಾರ ಮಾಡಿದ್ದವು. ಇದಕ್ಕಾಗಿ ಒಟ್ಟು 42.26 ಲಕ್ಷ ರು.ಗಳನ್ನು ಸುದ್ದಿವಾಹಿನಿಗಳಿಗೆ ಪಾವತಿಸಿರುವುದು ತಿಳಿದು ಬಂದಿದೆ.

ಸುದ್ದಿವಾಹಿನಿವಾರು ವೆಚ್ಚದ ವಿವರ

ಟಿ ವಿ 9 ಕನ್ನಡ – ( ಪ್ರತಿ ಸೆಕೆಂಡಿಗೆ 4,400 ) – 7, 92, 000 ರು.

ಸುವರ್ಣ ನ್ಯೂಸ್‌ ( 2,100 ) 3, 78, 000 ರು.

ಪಬ್ಲಿಕ್‌ ಟಿ ವಿ ( 3,250 ) 5, 85, 000 ರು.

ನ್ಯೂಸ್‌ 18 ( 2,300) – 4, 14, 000 ರು.

ಬಿ ಟಿ ವಿ ನ್ಯೂಸ್‌ ( 2,000 ) 3, 60, 000 ರು.

ಪ್ರಜಾ ಟಿ ವಿ ( 1,600 ) 2, 88, 000 ರು.

ಕಸ್ತೂರಿ ನ್ಯೂಸ್‌ ( 1,600 ) 2, 88, 000 ರು.

ರಾಜ್‌ ನ್ಯೂಸ್‌ ( 1,500) – 2, 70, 000 ರು.

ದಿಗ್ವಿಜಯ್‌ ಟಿ ವಿ ( 2,000 ) – 3, 60, 000 ರು.

ಟಿ ವಿ 5 ಕನ್ನಡ ( 1,500)- 2, 70, 000 ರು.

ಪವರ್‌ ಟಿ ವಿ ( 1,500- 15 ನಿಮಿಷ) – 1, 35, 000

ಜಿ ಎಸ್‌ ಟಿ ವೆಚ್ಚವೂ ಸೇರಿ ಒಟ್ಟು 48, 85, 200 ರು.ಗಳು ವೆಚ್ಚವಾಗಬಹುದೆಂದು ಅಂದಾಜಿಸಿದ್ದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕಡೆಯಲ್ಲಿ 42,26,760 ರು.ಗಳನ್ನು ಪಾವತಿಸಲು ಮಂಜೂರಾತಿ ನೀಡಿತ್ತು ಎಂದು ತಿಳಿದು ಬಂದಿದೆ.

ಅಲ್ಲದೆ ಜನ ಸಾಮಾನ್ಯರ ಕಲ್ಯಾಣಕ್ಕಾಗಿ ರೂಪಿಸಿದ್ದ ಯೋಜನೆಗಳ ಸಮಗ್ರ ಚಿತ್ರಣವನ್ನೊಳಗೊಂಡ ಮತ್ತು ಕೋವಿಡ್‌ ನಿಯಂತ್ರಣಕ್ಕೆ ಕೈಗೊಂಡಿದ್ದಕ್ರಮಗಳ ಕುರಿತು 15ರಿಂದ 30 ನಿಮಿಷದ ಕಾರ್ಯಕ್ರಮ ಪ್ರಸಾರ ಮಾಡಿರುವ ಟಿ ವಿ ಚಾನಲ್‌ಗಳಿಗೆ ರಾಜ್ಯ ಬಿಜೆಪಿ ಸರ್ಕಾರವು 57. 02 ಲಕ್ಷ ರು.ಗಳನ್ನು ವೆಚ್ಚ ಮಾಡಿತ್ತು.

ರಾಜ್ಯ ಬಿಜೆಪಿ ಸರ್ಕಾರವು ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬಕ್ಕೆ ಪತ್ರಿಕೆಗಳ ಪ್ರಾಯೋಜಿತ ಪುರವಣಿಗಳಿಗೆ 44.85 ಲಕ್ಷ ರು.ಗಳನ್ನು ವೆಚ್ಚ ಮಾಡಿತ್ತು. ಅಮಿತ್‌ ಶಾ ಕಾರ್ಯಕ್ರಮಗಳ ಜಾಹೀರಾತಿಗೆ 89 ಲಕ್ಷ ರು. ಖರ್ಚು ಮಾಡಿದ್ದನ್ನು ಸ್ಮರಿಸಬಹುದು.

ಕೋವಿಡ್‌ ನಿಯಂತ್ರಣಕ್ಕೆ ಸರ್ಕಾರ ಹಮ್ಮಿಕೊಂಡಿರುವ ಯೋಜನೆ, ಕಾರ್ಯಕ್ರಮಗಳ ಸಮಗ್ರ ಚಿತ್ರಣವನ್ನು ಬಿಂಬಿಸುವ ನಾಲ್ಕು ಪುಟಗಳ ಪ್ರಾಯೋಜಿತ ಪುರವಣಿಗಾಗಿ 2020ರಲ್ಲಿ ಒಟ್ಟು 1.60 ಕೋಟಿ ರು.ಗಳನ್ನು ವೆಚ್ಚ ಮಾಡಿದೆ. ಈ ಪೈಕಿ ಹೊಸ ದಿಗಂತ ಪತ್ರಿಕೆ ಸಿಂಹಪಾಲು ಪಡೆದಿದ್ದು, ಉಳಿದೆಲ್ಲ ಪತ್ರಿಕೆಗಳಿಗಿಂತ ಅತಿ ಹೆಚ್ಚಿನ ಮೊತ್ತದ ಜಾಹೀರಾತು ನೀಡಿತ್ತು.

ಅತಿಥಿ ಉಪನ್ಯಾಸಕರಿಗೆ ಗೌರವ ಸಂಭಾವನೆ, ಆಟೋ ಚಾಲಕರು, ತರಕಾರಿ, ಹೂ ಬೆಳೆಗಾರರು, ನೇಕಾರರು, ಸವಿತಾ ಸಮಾಜ, ವಲಸೆ ಕಟ್ಟಡ ಕಾರ್ಮಿಕರು ಸೇರಿದಂತೆ ಇನ್ನಿತರರಿಗೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ನೀಡದ ಸರ್ಕಾರ ನೇರ ಪ್ರಸಾರದ ಹೆಸರಿನಲ್ಲಿ ಲಕ್ಷಾಂತರ ರುಪಾಯಿಗಳನ್ನು ವೆಚ್ಚ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.

Tags: AdvertisementsB S YediyurappaBasavaraj BommaiDr P S HarshaKasturi NewsPower TVPraja TVRaj NewsRajiv ChandrashekharSiddaramaiahSuvarana NewsTV 5TV 9TV ChannelsVijaya Sankeshwarಅನುಭವ ಮಂಟಪ ನಿರ್ಮಾಣ ಕಾಮಗಾರಿಕಸ್ತೂರಿ ನ್ಯೂಸ್‌ಜಾಹೀರಾತುಟಿ ವಿ 5ಟಿ ವಿ 9ಡಾ ಪಿ ಎಸ್‌ ಹರ್ಷಪವರ್‌ ಟಿ ವಿಪ್ರಜಾ ಟಿ ವಿಬಸವರಾಜ ಬೊಮ್ಮಾಯಿಬಿ ಎಸ್‌ ಯಡಿಯೂರಪ್ಪರಾಜೀವ್‌ ಚಂದ್ರಶೇಖರ್‌ರಾಜ್‌ ನ್ಯೂಸ್‌ರಾಜ್‌ ನ್ಯೂಸ್‌ವಾರ್ತಾ ಇಲಾಖೆ ಆಯುಕ್ತರುವಾರ್ತಾ ಇಲಾಖೆ ಆಯುಕ್ತರುವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆವಿಜಯ ಸಂಕೇಶ್ವರ್‌ಸಾರ್ವಜನಿಕ ಸಂಪರ್ಕ ಇಲಾಖೆಸಿದ್ದರಾಮಯ್ಯಸುದ್ದಿ ವಾಹಿನಿಗಳುಸುವರ್ಣ ನ್ಯೂಸ್‌
Advertisement Banner
Previous Post

ಲಸಿಕೆ ಪಡೆಯದಿದ್ದರೂ ಪಡಿತರ, ಪಿಂಚಣಿ ರದ್ದಾಗದು; ವಿವಾದ ತೀವ್ರಗೊಳ್ಳುತ್ತಿದ್ದಂತೆ ನಿರ್ಬಂಧ ಹಿಂತೆಗೆತ

Next Post

ಮದರಸಗಳಲ್ಲಿ ಸಾಮಾಜಿಕ ಜೀವನ ಬೋಧನೆ; ಸಿಟಿಆರ್‌ ಹೇಳಿಕೆ ಬೆನ್ನಲ್ಲೇ ಮುನ್ನೆಲೆಗೆ ಬಂದ ಉತ್ತರ

thefilestack

thefilestack

Next Post

ಮದರಸಗಳಲ್ಲಿ ಸಾಮಾಜಿಕ ಜೀವನ ಬೋಧನೆ; ಸಿಟಿಆರ್‌ ಹೇಳಿಕೆ ಬೆನ್ನಲ್ಲೇ ಮುನ್ನೆಲೆಗೆ ಬಂದ ಉತ್ತರ

Discussion about this post

Recommended

ವಿಧಾನ ಪರಿಷತ್‌ನಲ್ಲಿ ಕಾರ್ಯದರ್ಶಿ 2 ಹುದ್ದೆ; ಹಾಲಿ ಕಾರ್ಯದರ್ಶಿ ಅಸಮ್ಮತಿ, ಸಚಿವಾಲಯದಲ್ಲಿ ತಿಕ್ಕಾಟ?

2 years ago

ಕೋವಿಡ್ ಭ್ರಷ್ಟಾಚಾರ; ಕಾಂಗ್ರೆಸ್‌ ವಿರುದ್ಧ ಕೆಂಪಣ್ಣ ಆಯೋಗ ವರದಿಯ ಪ್ರತ್ಯಾಸ್ತ್ರ?

6 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd