the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 1 ಕೆ ಜಿ ಅಕ್ಕಿ ; 1,960 ಕೋಟಿ ರು. ಹೊಂದಿಸಲು ತಿಣುಕಾಟ

thefilestack by thefilestack
January 28, 2023
in GOVERNANCE
0
ವರ್ಷ ಉರುಳಿದರೂ 122 ಕಾರ್ಯಕ್ರಮಗಳಿಗೆ ಸಿಗದ ಚಾಲನೆ, ಕೇಂದ್ರದಿಂದ ಬಾರದ 8,199 ಕೋಟಿ

photo credit;basavarajbommai twitter account

0
SHARES
0
VIEWS
Share on FacebookShare on Twitter

ಬೆಂಗಳೂರು; ಅನ್ನಭಾಗ್ಯ’ ಯೋಜನೆಯ ಫಲಾನುಭವಿಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ವಿತರಿಸಲಾಗುತ್ತಿರುವ 5 ಕೆ.ಜಿ ಆಹಾರ ಧಾನ್ಯದೊಂದಿಗೆ ಹೆಚ್ಚುವರಿಯಾಗಿ 1 ಕೆ.ಜಿ.ವಿತರಿಸುವ ಸಂಬಂಧ ಹೊರಡಿಸಿರುವ ಆದೇಶವನ್ನು ಅನುಷ್ಠಾನಗೊಳಿಸಿದಲ್ಲಿ ವಾರ್ಷಿಕ 1,960 ಕೋಟಿ ರು. ವೆಚ್ಚವಾಗಲಿದೆ.

 

ವಿಧಾನಸಭೆ ಚುನಾವಣೆಗೆ ಮೂರ್ನಾಲ್ಕು ತಿಂಗಳು ಇರುವಾಗಲೇ ಪಡಿತರದಾರರಿಗೆ 1 ಕೆ ಜಿ ಹೆಚ್ಚುವರಿ ಅಕ್ಕಿ ನೀಡುವುದಾಗಿ ಘೋಷಿಸಿ ಭರ್ಜರಿ ಪಡೆದುಕೊಂಡಿರುವ ರಾಜ್ಯ ಬಿಜೆಪಿ ಸರ್ಕಾರವು ಈ ಯೋಜನೆಗೆ ಹಣಕಾಸು ಹಂಚಿಕೆ ಮರು ಹೊಂದಿಸುವ ಲೆಕ್ಕಾಚಾರದಲ್ಲಿ ಮುಳುಗಿದೆ.

 

2023-24ನೇ ಸಾಲಿನ ಆಯವ್ಯಯಕ್ಕೆ ಸಂಬಂಧಿಸಿದಂತೆ ಲೆಕ್ಕಾಚಾರ ಮಾಡಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಕಿರು ಟಿಪ್ಪಣಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಅನ್ನಭಾಗ್ಯ ಯೋಜನೆಯ ಪ್ರಧಾನ ಲೆಕ್ಕಶೀರ್ಷಿಕೆಯಡಿಯಲ್ಲಿ ರಾಜ್ಯ ಪಡಿತರದಾರರಿಗೆ 1 ಕೆ ಜಿ ಹೆಚ್ಚುವರಿ ಅಕ್ಕಿಯೂ ಸೇರಿದಂತೆ ಆಹಾರ ಧಾನ್ಯಗಳ ವಿತರಣೆಗೆ 2,467 ಕೋಟಿ (ಕಳೆದ ವರ್ಷ 1,416 ಕೋಟಿ) ಆಗಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷಕ್ಕೆ 1,051 ಕೋಟಿ ಹೆಚ್ಚುವರಿಯಾಗಲಿದೆ. ಒಟ್ಟಾರೆ 2023-24ನೇ ಸಾಲಿನಲ್ಲಿ ಒಟ್ಟಾರೆ 3,862 ಕೋಟಿ ರು. ಅಂದಾಜು ವೆಚ್ಚವನ್ನು ಇಲಾಖೆಯು ಸಲ್ಲಿಸಿರುವುದು ಕಿರು ಟಿಪ್ಪಣಿಯಿಂದ ತಿಳಿದು ಬಂದಿದೆ. ಇದು ಕಳೆದ ವರ್ಷಕ್ಕಿಂತ (2,810 ಕೋಟಿ) ಒಟ್ಟಾರೆ 1,052 ಕೋಟಿ ರು. ಹೆಚ್ಚಳವಾದಂತಾಗಿದೆ.

 

ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆಯನ್ನು ಈಗಾಗಲೇ ಭಾರತ ಸರ್ಕಾರವು ರದ್ದುಗೊಳಿಸಿ ಎನ್‌ಎಫ್‌ಎಸ್‌ಎ ಹೆಸರಿನಲ್ಲಿ ಮತ್ತೊಂದು ಯೋಜನೆ ಜಾರಿಗೊಳಿಸಿರುವುದರಿಂದ ಕರ್ನಾಟಕ ಸರ್ಕಾರಕ್ಕೆ ಇದೇ ಆರ್ಥಿಕ ಸಾಲಿನಿಂದ 720 ಕೋಟಿ ರು. ಉಳಿಕೆಯಾಗಲಿದೆ. ಆದರೂ 1 ಕೆ ಜಿ ಹೆಚ್ಚುವರಿ ಅಕ್ಕಿ ವಿತರಣೆಯಿಂದಾಗಿ 1,960 ಕೋಟಿ ರು.ಗಳನ್ನು ಹೇಗೆ ಮರು ಹೊಂದಿಸುವುದು ಎಂದು ಚಿಂತಿತವಾಗಿದೆ.

 

ಆಹಾರ ನಾಗರಿಕ ಸರಬರಾಜು ಇಲಾಖೆ ಸಲ್ಲಿಸಿರುವ ಕಿರು ಟಿಪ್ಪಣಿ ಪ್ರತಿ

 

1 ಕೆ ಜಿ ಹೆಚ್ಚುವರಿ ಅಕ್ಕಿಯನ್ನು (ಪ್ರತಿ ಕೆ ಜಿ ಗೆ 23 ರು.) 2022ರ ಏಪ್ರಿಲ್‌ನಿಂದ ಡಿಸೆಂಬರ್‌ 2022ರವರೆಗೆ ನೀಡಲಾಗಿತ್ತು. ಇದನ್ನೀಗ ಜನವರಿ 2023ರಿಂದ ಮಾರ್ಚ್‌ 2023ರವರೆಗೆ ವಿಸ್ತರಿಸಲಾಗಿದೆ. ಇದಕ್ಕೆ 924 ಕೋಟಿ ರು. ವೆಚ್ಚವಾಗಲಿದೆ ಎಂದು ಇಲಾಖೆಯು ಲೆಕ್ಕ ಹಾಕಿರುವುದು ಲಭ್ಯವಿರುವ ಕಿರು ಟಿಪ್ಪಣಿಯಿಂದ ತಿಳಿದು ಬಂದಿದೆ.

 

ಅದೇ ರೀತಿ ಅಕ್ಕಿ ಸಾಗಾಣಿಕೆ ವೆಚ್ಚ, ಸಗಟು ಮತ್ತು ರೀಟೈಲ್‌ ಕಮಿಷನ್‌ ಹಣವನ್ನು ರಾಜ್ಯ ಸರ್ಕಾರವೇ ಭರಿಸಬೇಕಿದೆ. ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆ ಜಾರಿಯಲ್ಲಿದ್ದ ಅವಧಿಯಲ್ಲಿ ರಾಜ್ಯ ಸರ್ಕಾರವು 4 ತಿಂಗಳು 1 ಕೆ ಜಿ ಹೆಚ್ಚುವರಿಯಂತೆ 1.84 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿಯನ್ನು 2022-23ನೇ ಸಾಲಿನಲ್ಲಿ ನೀಡಿದ್ದರಿಂದ 466 ಕೋಟಿ ರು. ವೆಚ್ಚವಾಗಿತ್ತು.

 

ಇದೀಗ 1 ಕೆ ಜಿ ಹೆಚ್ಚುವರಿ ಅಕ್ಕಿಯನ್ನು 2023-24ನೇ ಸಾಲಿನಲ್ಲಿ 33 ರುಪಾಯಿ ದರದಲ್ಲಿ ನೀಡಲು 5.52 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿ ಬೇಕಾಗಲಿದೆ. ಇದಕ್ಕೆ 1,960 ಕೋಟಿ ರು. (1822+ 138) ವೆಚ್ಚವಾಗಲಿದೆ. ಪ್ರತಿ ಕೆ ಜಿ ಗೆ 23 ರು ದರದಲ್ಲಿ ನೀಡಿದರೆ 1,408 (1270+13*) ಕೋಟಿ ರು. ಆಗಲಿದೆ ಎಂದು ಲೆಕ್ಕ ಹಾಕಿದೆ.

 

ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಖರೀದಿ, ಸಾಗಾಣಿಕೆ, ರೀಟೈಲ್‌ ಮತ್ತು ಸಗಟು ಕಮಿಷನ್‌ , ಕಾರ್ಮಿಕ ವೆಚ್ಚವನ್ನು 2013-14ರಿಂದ ಪರಿಷ್ಕರಣೆ ಆಗಿಲ್ಲ. ಸಗಟು ಕಮಿಷನ್‌ ದರವನ್ನು 2013-14ರಿಂದ ಪರಿಷ್ಕರಿಸದ ಕಾರಣ 2023-24ರಿಂದ ಪ್ರತಿ ಕ್ವಿಂಟಾಲ್‌ಗೆ 35 ರು.ನಿಂದ 50 ರು. ಗೆ ಹೆಚ್ಚಳ ಮಾಡಬೇಕು ಎಂದು ಇಲಾಖೆಯು ಪ್ರಸ್ತಾಪಿಸಿದೆ. ಅದೇ ರೀತಿ 2018ರಿಂದ ಕಾರ್ಮಿಕ ವೆಚ್ಚವನ್ನು ಪರಿಷ್ಕರಿಸಿಲ್ಲ. ಹೀಗಾಗಿ ಇದೇ ಆರ್ಥಿಕ ಸಾಲಿನಿಂದ 16 ರು.ನಿಂದ 19 ರು.ಗೆ, ರೀಟೈಲ್‌ ಮತ್ತು ಸಗಟು ಕಮಿಷನ್‌ ದರವನ್ನು 7 ರು ನಿಂದ 10 ರು.ವರೆಗೆ ಹೆಚ್ಚಿಸಬೇಕಿದೆ ಎಂದೂ ಕಿರು ಟಿಪ್ಪಣಿಯಲ್ಲಿ ವಿವರಿಸಿದೆ.

 

2022–23ನೇ ಸಾಲಿನ ಬಜೆಟ್‌ನಲ್ಲಿ ಹೆಚ್ಚುವರಿಯಾಗಿ 1 ಕೆ.ಜಿ ಆಹಾರ ಧಾನ್ಯ ವಿತರಿಸುವುದಾಗಿ ಘೋಷಿಸಲಾಗಿತ್ತು. ಆ ಪ್ರಕಾರ 2022ರ ಏಪ್ರಿಲ್‌ನಿಂದ 5 ಕೆ.ಜಿ ಆಹಾರ ಧಾನ್ಯದ ಜತೆಗೆ ಹೆಚ್ಚುವರಿ 1 ಕೆ.ಜಿ ವಿತರಿಸಲು ಆರಂಭಿಸಲಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಅಂದರೆ 2022 ಮೇನಿಂದ ಸೆಪ್ಟೆಂಬರ್‌ವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಆದೇಶ ಹೊರಡಿಸಲಾಗಿತ್ತು.

 

ಪಿಎಂಜಿಕೆಎವೈ ಯೋಜನೆ ಅಡಿ ಆದ್ಯತಾ ವಲಯ (ಬಿಪಿಎಲ್‌) ಮತ್ತು ಅಂತ್ಯೋದಯ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ತಲಾ 5 ಕೆ.ಜಿ ಅಕ್ಕಿಯನ್ನು 2022 ರ ಅಕ್ಟೋಬರ್‌ನಿಂದ 2022 ಡಿಸೆಂಬರ್‌ ವರೆಗೆ ಮುಂದುವರಿಸಲಾಗಿತ್ತು. ಹೀಗಾಗಿ, ಆದ್ಯತಾ ವಲಯದ ಪಡಿತರ ಫಲಾನುಭವಿಗಳಿಗೆ 1 ಕೆ.ಜಿ ಅಕ್ಕಿಯನ್ನು ಹೆಚ್ಚುವರಿಯಾಗಿ ವಿತರಿಸುವುದನ್ನು ನಿಲ್ಲಿಸಲಾಗಿತ್ತು. ಪಿಎಂಜಿಕೆಎವೈ ಯೋಜನೆ ಡಿಸೆಂಬರ್‌ನಲ್ಲಿ ಕೊನೆಗೊಂಡಿದ್ದರಿಂದ 1 ಕೆ.ಜಿ ಆಹಾರ ಹೆಚ್ಚುವರಿಯಾಗಿ ವಿತರಿಸಲು ಸರ್ಕಾರ ಮುಂದಾಗಿತ್ತು.

 

ಕೇಂದ್ರ ಸರ್ಕಾರವು ಹೊಸ ವರ್ಷದಲ್ಲಿ 81 ಕೋಟಿ ಬಡವರ ಪಡಿತರದಲ್ಲಿ ಶೇ 50ರಷ್ಟು ಕಡಿತಗೊಳಿಸಿದೆ. ತಿಂಗಳಿಗೆ 10 ಕೆ.ಜಿ ಆಹಾರ ಧಾನ್ಯಕ್ಕೆ ಅರ್ಹರಾಗಿದ್ದ 81 ಕೋಟಿ ಭಾರತೀಯರು ಈಗ ಕೇವಲ ಐದು ಕೆ.ಜಿಯಷ್ಟನ್ನು ಮಾತ್ರ ಪಡೆಯಲಿದ್ದಾರೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಟೀಕಿಸಿದ್ದನ್ನು ಸ್ಮರಿಸಬಹುದು.

Tags: Anna BhagyaAnna Bhagya SchemeBasavaraj BommaiD K ShivakumarFood and Civil SuppliesFood Grainsh d kumarswamyNFSAPDSPMGKAYPradhan Mantri Garib Kalyan YojanaPublic Distribution SystemRetail CommissionRiceSiddaramaiahaState GovernmentTransportಅಕ್ಕಿಅನ್ನಭಾಗ್ಯಆಯವ್ಯಯಆಹಾರ ಧಾನ್ಯಗಳುಗರೀಬ್‌ ಕಲ್ಯಾಣ್‌ಜೈರಾಮ್‌ ರಮೇಶ್‌ಡಿ ಕೆ ಶಿವಕುಮಾರ್ಪಡಿತರಪ್ರಧಾನಮಂತ್ರಿಬಸವರಾಜ ಬೊಮ್ಮಾಯಿರಾಷ್ಟ್ರೀಯ ಆಹಾರ ಭದ್ರತಾರೀಟೈಲ್‌ ಕಮಿಷನ್‌ಸಾಗಾಣಿಕೆಸಾರ್ವಜನಿಕ ಪಡಿತರಸಿದ್ದರಾಮಯ್ಯಹೆಚ್‌ ಡಿ ಕುಮಾರಸ್ವಾಮಿಹೆಚ್ಚುವರಿ ಅಕ್ಕಿಹೋಲ್‌ಸೇಲ್‌ ಕಮಿಷನ್‌
Advertisement Banner
Previous Post

ಹಂಪಿ ಉತ್ಸವಕ್ಕೆ 4 ಕೋಟಿ; ವಿಜಯನಗರ ಜಿಲ್ಲೆಯ ದಲಿತ ವಿದ್ಯಾರ್ಥಿಗಳಿಗೆ ಬಿಡಿಗಾಸಿನ ಪ್ರೋತ್ಸಾಹ ಧನವೂ ಇಲ್ಲ

Next Post

ಜಮ್ಮಾ ಸೇರಿ ವಿಶೇಷ ಹಕ್ಕಿನ ಜಮೀನು; 5 ಎಕರೆಗೆ ಮೀರದಂತೆ 30 ವರ್ಷ ಗುತ್ತಿಗೆ ನೀಡಲು ಕಾಯ್ದೆಗೆ ತಿದ್ದುಪಡಿ

thefilestack

thefilestack

Next Post

ಜಮ್ಮಾ ಸೇರಿ ವಿಶೇಷ ಹಕ್ಕಿನ ಜಮೀನು; 5 ಎಕರೆಗೆ ಮೀರದಂತೆ 30 ವರ್ಷ ಗುತ್ತಿಗೆ ನೀಡಲು ಕಾಯ್ದೆಗೆ ತಿದ್ದುಪಡಿ

Recommended

ಕೊಳವೆ ಬಾವಿ ಕಾಮಗಾರಿ; ಅನುಮೋದನೆಯಿಲ್ಲದೇ ತುಂಡುಗುತ್ತಿಗೆ ಮುಂದುವರಿಕೆ,1.55 ಕೋಟಿ ನಷ್ಟ

3 years ago

ಶರಣರ ಭಾವಚಿತ್ರ ಪ್ರಕಟಣೆ; ‘ದಿ ಫೈಲ್‌’ ವಿರುದ್ಧದ ಪ್ರಕರಣದಲ್ಲಿ ‘ಬಿ’ ರಿಪೋರ್ಟ್‌ ಅಂಗೀಕಾರ

4 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd