the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

ಅರಣ್ಯ ಅಭಿವೃದ್ಧಿ ನಿಗಮದಲ್ಲೂ ಶೇ.3ರಿಂದ ಶೇ.40ರಷ್ಟು ಕಮಿಷನ್‌ಗೆ ಬೇಡಿಕೆ; ಗುತ್ತಿಗೆದಾರರ ಆರೋಪ

thefilestack by thefilestack
April 24, 2022
in GOVERNANCE
0
0
SHARES
1
VIEWS
Share on FacebookShare on Twitter

ಬೆಂಗಳೂರು; ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ವ್ಯಾಪ್ತಿಯಲ್ಲಿ ಬಿದಿರು, ಮೆದುಮರಗಳ ಕಡಿತಲೆ, ಸಾಗಾಣಿಕೆ ಸೇರಿದಂತೆ ಇನ್ನಿತರೆ ಕಾಮಗಾರಿ ನಿರ್ವಹಿಸಿರುವ ಗುತ್ತಿಗೆದಾರರಿಂದಲೂ ಕಮಿಷನ್‌ಗೆ ಬೇಡಿಕೆ ಇರಿಸಲಾಗುತ್ತಿದೆ ಎಂಬ ಆರೋಪ ಮುನ್ನೆಲೆಗೆ ಬಂದಿದೆ.

 

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಲ್ಲಿ ಕಾಮಗಾರಿ ನಿರ್ವಹಿಸಿರುವ ಗುತ್ತಿಗೆದಾರರಿಂದ ಶೇ. 40ರಷ್ಟು ಕಮಿಷನ್‌ಗೆ ಬೇಡಿಕೆ ಇಡಲಾಗುತ್ತಿದೆ ಎಂಬ ಆರೋಪಗಳ ಬೆನ್ನಲ್ಲೇ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಗುತ್ತಿಗೆದಾರರಿಂದಲೂ ಕಮಿಷನ್‌ಗೆ ಬೇಡಿಕೆ ಇರಿಸುತ್ತಿರುವ ಆರೋಪವು ಪರ್ಸೆಂಟೇಜ್‌ ಪ್ರಕರಣಗಳನ್ನು ಮತ್ತಷ್ಟು ವಿಸ್ತರಿಸಿದಂತಾಗಿದೆ.

 

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಧಾರವಾಡ ವಿಭಾಗದ ವ್ಯಾಪ್ತಿಯಲ್ಲಿ ಇಂತಹದ್ದೊಂದು ಆರೋಪ ಕೇಳಿ ಬಂದಿದೆ. ನಿಗಮದ ಆಡಳಿತಮಂಡಳಿಯೂ ಸೇರಿದಂತೆ ಮತ್ತಿತರೆ ಅಧಿಕಾರಿಗಳು ಚಿಕ್ಕಮಗಳೂರು ವಿಭಾಗಕ್ಕೆ 2021ರ ಜೂನ್‌ 1ರಿಂದ 2022ರ ಫೆಬ್ರುವರಿವರೆಗೆ ಭೇಟಿ ನೀಡಿದಾಗ ಕಮಿಷನ್‌ ಹಣವನ್ನು ತಲುಪಿಸಲಾಗಿದೆ ಎಂದು ಗೊತ್ತಾಗಿದೆ.

 

ಇದೊಂದೇ ವಿಭಾಗದಲ್ಲಿ ಸಾಗಾಣಿಕೆ, ಕಡಿತಲೆ, ವಿವಿಧ ಕಾಮಗಾರಿಗಳಿಗೆಂದು ಕಳೆದ ಒಂದು ವರ್ಷದಲ್ಲಿ ಒಟ್ಟು 9,34, 2,389.00 ರು ಬಿಡುಗಡೆಯಾಗಿದೆ. ಈ ಹಣವನ್ನು ಪಡೆಯಲು ಗುತ್ತಿಗೆದಾರರು ಶೇ. 3ರಿಂದ ಶೇ. 40ರವರೆಗೆ ಕಮಿಷನ್‌ ನೀಡಬೇಕಿದೆ ಎಂದು ತಿಳಿದು ಬಂದಿದೆ. ಕಮಿಷನ್‌ ಮೊತ್ತವನ್ನು ಆಯಾ ಕಾಮಗಾರಿವಾರು, ಬಿಡುಗಡೆ ಆಗುವ ಮೊತ್ತವಾರು ಆಧರಿಸಿ ನಿರ್ಧರಿಸಲಾಗುತ್ತದೆ ಎಂದು ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮದ ಗುತ್ತಿಗೆದಾರರೊಬ್ಬರು ‘ದಿ ಫೈಲ್‌’ಗೆ ತಿಳಿಸಿದ್ದಾರೆ.

 

ಧಾರವಾಡ ವಿಭಾಗದ 2019-20ನೇ ಸಾಲಿನಲ್ಲಿ ಅಕೇಶಿಯಾ ನೆಡುತೋಪಿನಲ್ಲಿ 2ನೇ ವರ್ಷದ ನಿರ್ವಹಣೆ ಕಾಮಗಾರಿ, ಧಾರವಾಡ ವಿಭಾಗದ 2019-20ನೇ ಸಾಲಿನಲ್ಲಿ ಕೈಗೊಂಡಿರುವ ಫೈರ್‌ ಟ್ರೇಸಿಂಗ್‌ ಕಾಮಗಾರಿ, 2019ರಲ್ಲಿ ಬೆಳೆಸಲಾಗಿದ್ದ ನೆಡುತೋಪುಗಳಲ್ಲಿ 2ನೇ ವರ್ಷದ ನಿರ್ವಹಣೆ ಕಾಮಗಾರಿಗೆ ಸಂಬಂಧಿಸಿದಂತೆ, ಮಾರಿಹಾಳದಲ್ಲಿನ ಬಿದಿರು ಕಡಿತಲೆ ಮತ್ತು ಸಾಗಾಣಿಕೆ, 2020ನೇ ಸಾಲಿನಲ್ಲಿ ಹೊಸದಾಗಿ ನೆಡುತೋಪು ಬೆಳೆಸುವ ಸಂಬಂಧ ಫ್ಲಾಂಟಿಂಗ್‌ ಕಾಮಗಾರಿ, 2019ನೇ ಸಾಲಿನಲ್ಲಿ 2ನೇ ವರ್ಷದ ನಿರ್ವಹಣೆ ಮುಕ್ತಾಯವಾಗಿರುವ ಕಾಮಗಾರಿ, 2020-21ನೇ ಸಾಲಿನಲ್ಲಿ ಮೆದುಮರಗಳ ಕಡಿತಲೆ ಹಾಗೂ ಸಾಗಾಣಿಕೆ ಕೆಲಸಕ್ಕೆ ಗುರುತಿಸಿರುವ ನೆಡುತೋಪುಗಳಲ್ಲಿ ದೊರೆಯುವ ಅಂದಾಜು ಇಳುವರಿ, ಧಾರವಾಡ ವಿಭಾಗದ ಚಿಕ್ಕೇರಿ-ಹೊಸಹಳ್ಳಿ ಅಂದಾಜು ಇಳುವರಿ ಕಂಡುಹಿಡಿಯುವ ಕುರಿತು ಬಿಡುಗಡೆಯಾಗಿರುವ ಹಣದಲ್ಲಿ ಕಮಿಷನ್‌ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

 

ಅರಣ್ಯ ಅಭಿವೃದ್ಧಿ ನಿಗಮದ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಚಿಕ್ಕಮಗಳೂರು ವಿಭಾಗಕ್ಕೆ ಭೇಟಿ ನೀಡಿದಾಗ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಮೂಲಕ ಕಮಿಷನ್‌ ಹಣವನ್ನು ತಲುಪಿಸಲಾಗಿದೆ ಎಂದು ಗುತ್ತಿಗೆದಾರರೊಬ್ಬರು ದಿನಾಂಕ ಸಮೇತ ವಿವರ ಒದಗಿಸಿದ್ದಾರೆ. ಚಿಕ್ಕಮಗಳೂರು ಮಾತ್ರವಲ್ಲದೇ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿಯೂ ನೆಡುತೋಪು ಅಧೀಕ್ಷರ ಮೂಲಕವೂ ಕಮಿಷನ್‌ ಹಣವನ್ನು ತಲುಪಿಸಲಾಗಿದೆ ಎಂದೂ ಗುತ್ತಿಗೆದಾರರು ಆರೋಪಿಸಿದ್ದಾರೆ.

 

ಮತ್ತೊಂದು ಸಂಗತಿ ಎಂದರೆ ನೆಡುತೋಪುಗಳಲ್ಲಿ ನಿರ್ವಹಣೆ ಕಾಮಗಾರಿಗೆ ಡೋಜರ್‌ನಿಂದ ಅಂತರ್‌ ಉಳುಮೆಗೆ ಸಂಬಂಧಿಸಿದಂತೆ ಡೀಸೆಲ್‌ ಹಾಕಿಸಿದ ಮೊತ್ತವನ್ನು ನೇರವಾಗಿ ಚೆಕ್‌ ಮುಖಾಂತರ ಪೆಟ್ರೋಲ್‌ ಬಂಕ್‌ನವರಿಗೆ ನೀಡಲಾಗುತ್ತಿದ್ದರೂ ಈ ತರಹದ ಕಾಮಗಾರಿಗೆ ಕಮಿಷನ್‌ ನೀಡಿರುವುದಿಲ್ಲ. ಆದರೆ ಈ ಬಾರಿ ಇಂತಹ ಕಾಮಗಾರಿಗೂ ಕಮಿಷನ್‌ ಹಣಕ್ಕೆ ಬೇಡಿಕೆ ಇರಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಅರಣ್ಯ ಅಭಿವೃದ್ಧಿ ನಿಗಮದಲ್ಲಿ ಕಮಿಷನ್‌ಗೆ ಬೇಡಿಕೆ ಇರಿಸುತ್ತಿರುವುದನ್ನು ಸಚಿವ ಉಮೇಶ್‌ ಕತ್ತಿ ಅವರ ಗಮನಕ್ಕೂ ತಂದಿದ್ದರೂ ಅವರು ಯಾವುದೇ ಕ್ರಮ ವಹಿಸಿಲ್ಲ ಎಂದು ಗೊತ್ತಾಗಿದೆ.

 

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಜಲಸಂಪನ್ಮೂಲ, ಕೃಷ್ಣಭಾಗ್ಯ ಜಲನಿಗಮ ಸೇರಿದಂತೆ ನೀರಾವರಿ ನಿಗಮಗಳು, ನಗರಾಭಿವೃದ್ಧಿ ಇಲಾಖೆಯಲ್ಲಿ ಇಂಜನಿಯರ್‌ಗಳ ಮುಂಬಡ್ತಿಗೆ ಲಂಚಕ್ಕೆ ಬೇಡಿಕೆ ಇರಿಸಿದ್ದನ್ನು ಸ್ಮರಿಸಬಹುದು.

Tags: B S YediyurappaBasavaraj BommaiChief SecretaryChikkamagaluruCommissionContractorsD K ShivakumarForet Departmenth d kumarswamyHubballi Air PortJawaid AktharKarnataka Forest Development BoardSiddaramaiahTara AnuradhaUmesh Kattiಅಂತರ್‌ ಉಳುಮೆಅರಣ್ಯ ಅಭಿವೃದ್ದಿ ನಿಗಮಅರಣ್ಯ ಅಭಿವೃದ್ಧಿ ನಿಗಮದ ಗುತ್ತಿಗೆದಾರರುಅರಣ್ಯ ಇಲಾಖೆಉಮೇಶ್‌ ಕತ್ತಿಎಚ್‌ ಡಿ ಕುಮಾರಸ್ವಾಮಿಕಮಿಷನ್‌ಗೆ ಬೇಡಿಕೆಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮಕಾಮಗಾರಿಕೃಷ್ಣಭಾಗ್ಯ ಜಲನಿಗಮಗುತ್ತಿಗೆದಾರರುಗ್ರಾಮೀಣಾಭಿವೃದ್ದಿ ಪಂಚಾಯತ್‌ ರಾಜ್‌ ಇಲಾಖೆಚಿಕ್ಕಮಗಳೂರುಜಲಸಂಪನ್ಮೂಲಜಾವೇದ್‌ ಅಖ್ತರ್‌ಡಿ ಕೆ ಶಿವಕುಮಾರ್ತಾರಾ ಅನುರಾಧನಗರಾಭಿವೃದ್ಧಿನೆಡುತೋಪುಪರ್ಸೆಂಟೇಜ್‌ಬಸವರಾಜ ಬೊಮ್ಮಾಯಿಬಿ ಎಸ್‌ ಯಡಿಯೂರಪ್ಪಮುಖ್ಯ ಕಾರ್ಯದರ್ಶಿಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳುಸಿದ್ದರಾಮಯ್ಯಹುಬ್ಬಳ್ಳಿ ವಿಮಾನ ನಿಲ್ದಾಣ
Advertisement Banner
Previous Post

ಸಿಂಧೂ ಜತೆಗೆ ಸರಸ್ವತಿ ಸೇರ್ಪಡೆ; ಸ್ವಾತಂತ್ರ್ಯ ಸಂಗ್ರಾಮ ಪಠ್ಯದಲ್ಲಿ ದಂಗೆ ಎಂಬ ಪದ ಕಿತ್ತೊಗೆದ ಸಮಿತಿ

Next Post

ತರಳಬಾಳು ಜಗದ್ಗುರು, ಇತರರಿಂದ ಜೀವ ಭಯದ ಆರೋಪ; ಪೊಲೀಸ್‌ ಠಾಣೆ ಮೆಟ್ಟಿಲೇರಿದ ಮಹಿಳೆ

thefilestack

thefilestack

Next Post

ತರಳಬಾಳು ಜಗದ್ಗುರು, ಇತರರಿಂದ ಜೀವ ಭಯದ ಆರೋಪ; ಪೊಲೀಸ್‌ ಠಾಣೆ ಮೆಟ್ಟಿಲೇರಿದ ಮಹಿಳೆ

Recommended

VR Is the Use of Computer Technology to Create a Simulated Environment.

7 years ago

ಶಿಕ್ಷೆಗೆ ಒಳಪಡಬೇಕಾದ ಅಪರಾಧಿಗಳಿಗೆ ನೆರವಾಗುವ ಪೊಲೀಸರು; ಆಯೋಗದ ವರದಿ ಬಹಿರಂಗ

4 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd