the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

ಅವಾಂತರ; ಪಠ್ಯಪುಸ್ತಕಗಳು ಮರುಮುದ್ರಣವಾದರೆ 158.21 ಕೋಟಿ ಖರ್ಚು, ಅನಗತ್ಯ ವೆಚ್ಚಕ್ಕೆ ಯಾರು ಹೊಣೆ?

thefilestack by thefilestack
June 9, 2022
in GOVERNANCE
0
0
SHARES
0
VIEWS
Share on FacebookShare on Twitter

ಬೆಂಗಳೂರು; ಆರರಿಂದ ಹತ್ತನೇ ತರಗತಿಯ ಸಮಾಜ ವಿಜ್ಞಾನ, ಭಾಷಾ ಪಠ್ಯಗಳೂ ಸೇರಿದಂತೆ ಇನ್ನಿತರೆ ವಿಷಯಗಳ ಪಠ್ಯಪುಸ್ತಕಗಳ ಪರಿಷ್ಕರಣೆಯು ವಿವಾದಕ್ಕೀಡಾಗಿರುವ ಬೆನ್ನಲ್ಲೇ ‘ತಪ್ಪುಗಳನ್ನು ಸರಿಪಡಿಸಿ ಮರುಮುದ್ರಣ ಮಾಡಲು ಸಿದ್ಧರಿದ್ದೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿಕೆ ನೀಡಿದ್ದಾರೆ. ಒಂದೊಮ್ಮೆ ಇಡೀ ಪಠ್ಯಪುಸ್ತಕಗಳನ್ನು ಮರು ಮುದ್ರಣ ಮಾಡಿದ್ದೇ ಆದಲ್ಲಿ 158.21 ಕೋಟಿ ರು. ಬೊಕ್ಕಸಕ್ಕೆ ಹೊರೆ ಬೀಳಲಿದೆ. ಇದರ ನೇರ ಹೊಣೆಗಾರಿಕೆಯನ್ನು ಸರ್ಕಾರ ಮತ್ತು ರೋಹಿತ್‌ ಚಕ್ರತೀರ್ಥ ಸಮಿತಿಯೇ ಹೊರಬೇಕಿದೆ!

 

ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಬೈಸಿಕಲ್‌ ಮತ್ತು ರಾಜ್ಯಾದಾದ್ಯಂತ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಿಸಲು ಅನುದಾನ ಇಲ್ಲವೆಂದು ಕೈಚೆಲ್ಲಿ ಅಸಹಾಯಕವಾಗಿರುವ ರಾಜ್ಯ ಸರ್ಕಾರ, ರೋಹಿತ್‌ ಚಕ್ರತೀರ್ಥ ಸಮಿತಿಯು ಮಾಡಿರುವ ಎಡವಟ್ಟಿನಿಂದಾಗಿ ಒಂದೊಮ್ಮೆ ಇಡೀ ಪಠ್ಯಪುಸ್ತಕಗಳನ್ನು ಮರುಮುದ್ರಣ ಮಾಡಿದ್ದೇ ಆದಲ್ಲಿ ಶಿಕ್ಷಣ ಇಲಾಖೆಯು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಬೀಳಲಿದೆ.

 

ಪಠ್ಯ ಪರಿಷ್ಕರಣೆ ಮತ್ತು ಮರು ಪರಿಷ್ಕರಣೆಯು ಕ್ರಮಬದ್ಧವಾಗಿದ್ದು ಮತ್ತು ವಿವಾದಕ್ಕೆ ಕಾರಣವಾಗದೇ ಇದ್ದಿದ್ದರೆ ಮರು ಮುದ್ರಣದ ಅಗತ್ಯತೆಯೇ ಕಂಡು ಬರುತ್ತಿರಲಿಲ್ಲ. ಅಲ್ಲದೆ 158.21 ಕೋಟಿ ಹೊರೆ ಅಥವಾ ನಷ್ಟದ ಮಾತೂ ಕೇಳಿ ಬರುತ್ತಿರಲಿಲ್ಲ. ಆದರೀಗ ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿಯು ಪರಿಷ್ಕರಿಸಿರುವ ವಿವಾದಿತ ಪಠ್ಯಗಳನ್ನೇ 2022-23ನೇ ಶೈಕ್ಷಣಿಕ ಸಾಲಿಗೆ ಮುದ್ರಣ ಮಾಡಲಾಗಿದೆ. ಈಗಾಗಲೇ ಮರು ಪರಿಷ್ಕರಿಸಿರುವ ಪಠ್ಯಪುಸ್ತಕಗಳು ರಾಜ್ಯದ ಶೇ.50ರಷ್ಟು ಶಾಲೆಗಳಿಗೆ ಮಾತ್ರ ತಲುಪಿವೆ ಎಂದು ಗೊತ್ತಾಗಿದೆ.

 

ಸಮಿತಿ ಪರಿಷ್ಕರಿಸಿರುವ ಅಂಶಗಳನ್ನು ಒಪ್ಪಿಕೊಂಡಿರುವ ಸಚಿವ ಬಿ ಸಿ ನಾಗೇಶ್‌ ಕೂಡ ಆಕ್ಷೇಪಣೆಗಳನ್ನಾಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಅಂತಿಮವಾಗಿ ಆಕ್ಷೇಪಣೆಗಳನ್ನು ಒಪ್ಪಿ ಪುನಃ ಪರಿಷ್ಕರಿಸಿ ಮುದ್ರಿಸಿದರೆ ಇದು ಅನಗತ್ಯ ವೆಚ್ಚಕ್ಕೆ ದಾರಿಮಾಡಿಕೊಟ್ಟಂತಾಗುತ್ತದೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.

 

ಈ ಸಮಿತಿಯು ಪರಿಷ್ಕರಿಸಿರುವ ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ವಿತರಿಸಬಾರದು ಎಂದು ಆಗ್ರಹಿಸಿ ನಡೆಯುತ್ತಿರುವ ಹೋರಾಟ ಇನ್ನೂ ನಿಂತಿಲ್ಲ. ಈ ನಡುವೆ ತಪ್ಪುಗಳನ್ನು ಸರಿಪಡಿಸಿ ಇಡೀ ಪಠ್ಯಪುಸ್ತಕಗಳನ್ನೇ ಮರುಮುದ್ರಣ ಮಾಡಲು ಹೊರಟರೆ ಪುನಃ 158.21 ಕೋಟಿ ರು.ಗಳನ್ನು ವೆಚ್ಚ ಮಾಡಬೇಕಾದ ಅನಿವಾರ್ಯತೆಯೂ ಇದೆ.

 

ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1ನೇ ತರಗತಿಯಿಂದ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 59.30 ಲಕ್ಷ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯ ಪುಸ್ತಕ ವಿತರಿಸಲು 158.21 ಕೋಟಿ ರು. 2021ರ ಡಿಸೆಂಬರ್‌ 21ರಂದೇ ಬಿಡುಗಡೆಯಾಗಿತ್ತು. ಇದರಲ್ಲಿ 1ರಿಂದ 3ನೇ ತರಗತಿ ನಲಿ ಕಲಿ ಘಟಕಗಳಿಗೆ ಹವಾಮಾನ ನಕ್ಷೆ ಮತ್ತು ಪ್ರಗತಿ ನೋಟ, ವಿತರಿಸುವುದು ಮತ್ತು ಪಠ್ಯಪುಸ್ತಕ ರಚನಾ ಕಾರ್ಯಾಗಾರ, ಸಾಗಾಣಿಕೆ ವೆಚ್ಚಮತ್ತು ವೇತನೇತರ ವೆಚ್ಚವೂ ಒಳಗೊಂಡಿದೆ.

 

ಕುವೆಂಪು, ಬಸವೇಶ್ವರ, ಅಂಬೇಡ್ಕರ್‌ ಅವರಿಗೆ ಸಂಬಂಧಿಸಿದ ಮಹತ್ವದ ಮಾಹಿತಿಗಳನ್ನು ಕೈಬಿಟ್ಟಿರುವುದು ಮತ್ತು ತಪ್ಪು ಮಾಹಿತಿಗಳನ್ನು ಸೇರಿಸಿರುವ ಅಂಶಗಳನ್ನು ತೆಗೆದು ಹಿಂದಿನ ಸಮಿತಿ ಪರಿಷ್ಕರಿಸಿರುವ ಪಠ್ಯಪುಸ್ತಕಗಳಲ್ಲಿದ್ದ ಅಂಶಗಳನ್ನೊಳಗೊಂಡ ಕೇವಲ ಪುಟಗಳನ್ನಷ್ಟೇ ಮರು ಮುದ್ರಣ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಈ ಪುಟಗಳು ಕೇವಲ ಶಿಕ್ಷಕರಿಗೆ ಮಾತ್ರ ನೀಡಲಾಗುತ್ತದೆಯೇ ವಿನಃ ಮಕ್ಕಳಿಗೆ ನೀಡುವುದಿಲ್ಲ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

 

ಪಠ್ಯಪುಸ್ತಕದಲ್ಲಿ ಟಿಪ್ಪುವಿನ ಕುರಿತಾದ ಮಹತ್ವದ ಸಂಗತಿಗಳನ್ನು ಸಮಿತಿಯು ಕೈಬಿಟ್ಟಿತ್ತು. ರಾಕೆಟ್‌ ತಂತ್ರಜ್ಞಾನ, ಶೃಂಗೇರಿ ಮಠಕ್ಕೆ ನೀಡಿದ ದೇಣಿಗೆ, ರೇಷ್ಮೆ ವ್ಯವಸಾಯ ಪಾಠಾಂಶವನ್ನು ಕೈಬಿಟ್ಟಿತ್ತು. ಪಾಠಾಂಶವನ್ನು ಕೈಬಿಟ್ಟಿದೆ.

 

ಇದಲ್ಲದೆ ಸಿಂಧೂ ಜತೆಗೆ ಸರಸ್ವತಿ ಸೇರ್ಪಡೆ ಮಾಡಿದ್ದ ಸಮಿತಿಯು ಸ್ವಾತಂತ್ರ್ಯ ಸಂಗ್ರಾಮ ಪಠ್ಯದಲ್ಲಿ ದಂಗೆ ಎಂಬ ಪದವನ್ನು ಕಿತ್ತೊಗೆದಿತ್ತು. ಪಠ್ಯ ಪರಿಷ್ಕರಣೆಯಿಂದಾಗಿ 2.5 ಕೋಟಿ ರು. ನಷ್ಟವಾಗಿತ್ತು. ಅಲ್ಲದೆ 6.76 ಲಕ್ಷ ಪುಸ್ತಕಗಳು ಅನುಪಯುಕ್ತವಾಗಿದ್ದವಲ್ಲದೆ ಹರಾಜಿಗೂ ನಕಾರ ವ್ಯಕ್ತವಾಗಿತ್ತು.

Tags: B C NageshBaraguru RamchandrappaBasavaraj BommaiD K ShivakumarGovernment Schoolsh d kumarswamyH VishwanathLingayat seersNali KaliPU History Text Book RevisedRe Print Text BooksRohit ChakratirthaSiddaramaiahText Book Revisedಅನಗತ್ಯ ವೆಚ್ಚಎಚ್‌ ಡಿ ಕುಮಾರಸ್ವಾಮಿಎಚ್‌ ವಿಶ್ವನಾಥ್‌ಡಿ ಕೆ ಶಿವಕುಮಾರ್ನಲಿ ಕಲಿನಿಷ್ಫಲ ವೆಚ್ಚಪಠ್ಯ ಪರಿಷ್ಕರಣೆಪಠ್ಯ ಪುಸ್ತಕಗಳ ಮರು ಮುದ್ರಣಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಪಿಯು ಇತಿಹಾಸ ಪರಿಷ್ಕರಣೆಬರಗೂರು ರಾಮಚಂದ್ರಪ್ಪಬಸವರಾಜ ಬೊಮ್ಮಾಯಿಬಿ ಸಿ ನಾಗೇಶ್‌ರೋಹಿತ್‌ ಚಕ್ರತೀರ್ಥಲಿಂಗಾಯತ ಮಠಗಳುಲಿಂಗಾಯತ ಮಠಾಧೀಶರುಸರ್ಕಾರಿ ಶಾಲೆಗಳುಸಿದ್ದರಾಮಯ್ಯ
Advertisement Banner
Previous Post

ಕೈಕಾಲು ಸ್ವಾಧೀನ ಕಳೆದುಕೊಂಡ ಯುವಕನ ಪ್ರಕರಣ; ಕೋವ್ಯಾಕ್ಸಿನ್‌ ಲಸಿಕೆಯ ವ್ಯತಿರಿಕ್ತ ಪರಿಣಾಮವೇ?

Next Post

ಆರನೇ ತರಗತಿಯಲ್ಲಿ ‘ಹೊಸ ಧರ್ಮಗಳ ಉದಯ’ಕ್ಕೆ ಕತ್ತರಿ, ದ್ವಿತೀಯ ಪಿಯುಸಿಯಲ್ಲಿ ಮುಂದುವರಿಕೆ

thefilestack

thefilestack

Next Post

ಆರನೇ ತರಗತಿಯಲ್ಲಿ 'ಹೊಸ ಧರ್ಮಗಳ ಉದಯ'ಕ್ಕೆ ಕತ್ತರಿ, ದ್ವಿತೀಯ ಪಿಯುಸಿಯಲ್ಲಿ ಮುಂದುವರಿಕೆ

Recommended

ಕೊರೊನಾ ವೈರಸ್‌ ವಿರುದ್ಧ ಹೋರಾಟವನ್ನು ಮುನ್ನಡೆಸದ ಪರಿಸರ ಇಲಾಖೆ; ಎಲ್ಲಿದ್ದಾರೆ ಸಚಿವ ಆನಂದ್‌ಸಿಂಗ್‌?

6 years ago

ಪ್ರತಾಪ್‌ ಸೋದರ ವಿಕ್ರಂ ಸಿಂಹ ವಿರುದ್ಧ ಪ್ರಕರಣ; ತಹಶೀಲ್ದಾರ್‍‌ ನೇತೃತ್ವದ ಮಹಜರು ವರದಿ ಬಹಿರಂಗ

2 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd