the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

ಆರ್‌ಎಸ್‌ಎಸ್‌ ಒಡನಾಟದ ಬಗ್ಗೆ ಬಾಯ್ಬಿಟ್ಟ ಯುವರಾಜ್‌; ಹೇಳಿಕೆಯಲ್ಲಿದೆ ಹೆಸರುಗಳ ಪಟ್ಟಿ

thefilestack by thefilestack
August 5, 2021
in GOVERNANCE
0
0
SHARES
1
VIEWS
Share on FacebookShare on Twitter

ಬೆಂಗಳೂರು; ರಾಜಕೀಯ ಹುದ್ದೆ ಮತ್ತು ಸರಕಾರಿ ಕೆಲಸ ಕೊಡಿಸುವುದಾಗಿ ನಿವೃತ್ತ ನ್ಯಾಯಮೂರ್ತಿ ಇಂದ್ರಕಲಾ ಅವರಿಂದ ಹಿಡಿದು ಹಲವರ ಬಳಿ ಕೋಟ್ಯಂತರ ಹಣ ಪಡೆದು ವಂಚಿಸಿರುವ ಆರೋಪಕ್ಕೆ ಗುರಿಯಾಗಿರುವ ಯುವರಾಜಸ್ವಾಮಿ, ಆರ್‌ಎಸ್‌ಎಸ್‌ ಶಾಖೆಯಲ್ಲಿ ಪ್ರತಿ ಭಾನುವಾರ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದ ಎಂಬುದು ಆತನ ಹೇಳಿಕೆಯಲ್ಲಿ ದಾಖಲಾಗಿದೆ.

2021ರ ಜನವರಿ 3ರಂದು ನೀಡಿರುವ ಸ್ವ ಇಚ್ಛಾ ಹೇಳಿಕೆಯಲ್ಲಿ ತನ್ನ ಪೂರ್ವಾಪರವನ್ನು ಬಿಚ್ಚಿಟ್ಟಿದ್ದಾನೆ. ಆರ್‌ಎಸ್‌ಎಸ್‌ಗೂ ಯುವರಾಜ್‌ಸ್ವಾಮಿಗೂ ಸಂಬಂಧವಿಲ್ಲ ಎಂದು ಸಂಘಟನೆಯ ಹಿರಿಯ ಮುಖಂಡ ಮಾ ವೆಂಕಟರಾಮು ಸ್ಪಷ್ಟಪಡಿಸಿದ್ದರ ಬೆನ್ನಲ್ಲೇ ಸ್ವತಹ ಯುವರಾಜಸ್ವಾಮಿಯೇ ಆರ್‌ಎಸ್‌ಎಸ್‌ ಶಾಖೆಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೆ ಎಂದು ಸ್ವ ಇಚ್ಛಾ ಹೇಳಿಕೆ ನೀಡಿರುವುದು ಇದೀಗ ಬಹಿರಂಗವಾಗಿದೆ.

‘1989-1990ನೇ ಇಸವಿಯಿಂದ ನಾನು ಚಿತ್ರದುರ್ಗದಲ್ಲಿದ್ದ ಆರ್‌ಎಸ್‌ಎಸ್‌ ಶಾಖೆಯಲ್ಲಿ ಪ್ರತಿ ಭಾನುವಾರ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೆನು. ಅದೇ ಕಾರಣದಿಂದ ನನಗೆ ಬಿಜೆಪಿ ಪಕ್ಷದೊಂದಿಗೆ ನನ್ನ ಒಡನಾಟ ಹೆಚ್ಚಾಯಿತು. ಚಿತ್ರದುರ್ಗ ಆರ್‌ಎಸ್‌ಎಸ್‌ ಶಾಖೆಯ ಮುಖ್ಯಸ್ಥರಾಗಿದ್ದ ಚಂದ್ರಪ್ಪ ಹಾಗೂ ವೀರಪ್ಪಗೌಡ ಎಂಬುವರು ನನ್ನನ್ನು ಬೆಂಗಳೂರಿನಿಂದ ಬಂದಿದ್ದ ಅನಂತ್‌ಕುಮಾರ್‌ರವರಿಗೆ ಭೇಟಿ ಮಾಡಿಸಿ ನನ್ನನ್ನು ಜ್ಯೋತಿಷಿ ಎಂದು ಪರಿಚಯಿಸಿದರು,’ ಎಂದು ಹೇಳಿಕೆ ನೀಡಿರುವುದು ದೋಷಾರೋಪಣೆ ಪಟ್ಟಿಯಿಂದ ತಿಳಿದು ಬಂದಿದೆ.

1990ರಲ್ಲಿ ಚಿತ್ರದುರ್ಗದಲ್ಲಿ ನಡೆದಿದ್ದ ಬಿಜೆಪಿ ರ್ಯಾಲಿ ಸಂದರ್ಭದಲ್ಲಿ ಎಲ್‌ ಕೆ ಅಡ್ವಾಣಿ, ಪ್ರಮೋದ್‌ ಮಹಾಜನ್‌, ಬಂಗಾರು ಲಕ್ಷ್ಮಣ್‌ ಭಾಗವಹಿಸಿದ್ದರು. ಅನಂತಕುಮಾರ್‌ ಮೂಲಕ ಪ್ರಮೋದ್‌ ಮಹಾಜನ್‌ ಪರಿಚಯವಾಗಿದ್ದರು. ಈ ಗಣ್ಯ ವ್ಯಕ್ತಿಗಳಿಗೆ ಜ್ಯೋತಿಷ್ಯ ಹೇಳುವ ಮೂಲಕ ಬಿಜೆಪಿ ಮುಖಂಡರಿಗೆ ಹತ್ತಿರವಾದೆ ಎಂದು ಹೇಳಿಕೆಯಲ್ಲಿ ವಿವರಿಸಿದ್ದಾನೆ.

ಕೇವಲ ಪ್ರಮೋದ್‌ ಮಹಾಜನ್‌ ಮಾತ್ರವಲ್ಲ, ಗೋಪಿನಾಥ್‌ ಮುಂಡೆ ಸೇರಿದಂತೆ ಬಿಜೆಪಿ ಪಕ್ಷದ ರಾಷ್ಟ್ರೀಯ ಮುಖಂಡರು, ಕಾಂಗ್ರೆಸ್‌ ಮುಖಂಡರ ಪೈಕಿ ಧರಂಸಿಂಗ್‌, ಬಂಗಾರಪ್ಪ, ವೀರಭದ್ರಪ್ಪ ಅವರು ಜ್ಯೋತಿಷ್ಯ ಹೇಳುವಂತೆ ಮನೆಗೆ ಕರೆಸಿಕೊಳ್ಳುತ್ತಿದ್ದರು ಎಂಬುದನ್ನು ಹೇಳಿಕೆಯಲ್ಲಿ ದಾಖಲಿಸಿರುವುದು ಗೊತ್ತಾಗಿದೆ.

ಜ್ಯೋತಿಷ್ಯ ಹೇಳುವುದರ ಜತೆಗೇ ಪರಿಚಯ ಇರುವ ವ್ಯಕ್ತಿಗಳಿಗೆ ಹಣ ಕೊಡುವುದು ಹಾಗೂ ಹಣ ವಾಪಸ್‌ ಪಡೆಯುವ ಚಟುವಟಿಕೆ ನಡೆಸುತ್ತಿರುವ ಮಾಹಿತಿಯೂ ಹೇಳಿಕೆಯಲ್ಲಿದೆ. ಬಾಂಬೆ, ದೆಹಲಿಯಲ್ಲಿಯೂ ರಿಯಲ್‌ ಎಸ್ಟೇಟ್‌ ವ್ಯವಹಾರ ಮಾಡುತ್ತಿರುವ ಬಗ್ಗೆ ಹೇಳಿಕೆಯಲ್ಲಿ ತಿಳಿಸಿರುವ ಯುವರಾಜಸ್ವಾಮಿ ಈ ಎರಡೂ ನಗರಗಳಲ್ಲಿ ಯಾವುದೇ ಸ್ವತ್ತನ್ನು ರಿಜಿಸ್ಟರ್‌ ಮಾಡಿಸಿಕೊಳ್ಳದೆ ಕೇವಲ ಮಾರುವ ಮತ್ತು ಹಾಗೂ ಕೊಳ್ಳುವ ವ್ಯಕ್ತಿಗಳೊಂದಿಗೆ ಸಂಪರ್ಕವನ್ನಿಟ್ಟುಕೊಂಡು ಕೈ ಬದಲಾವಣೆ ಮಾಡಿ ಕಮಿಷನ್‌ ಹಣವನ್ನು ಮಾತ್ರ ಬ್ಯಾಂಕ್‌ ಖಾತೆಗೆ ಹಾಕಿಕೊಳ್ಳುತ್ತಿದ್ದರ ಬಗ್ಗೆ ವಿವರಣೆಯೂ ಹೇಳಿಕೆಯಲ್ಲಿದೆ.

‘ಮುಂಬೈಗೆ ಹೋದಾಗ ಗೋಪಿನಾಥ್‌ ಮುಂಡೆ ಅವರ ಮನೆ ಹಾಗೂ ಅವರು ವ್ಯವಸ್ಥೆ ಮಾಡಿದ್ದ ಮನೆ, ಹೋಟೆಲ್‌ನಲ್ಲಿ ಉಳಿದುಕೊಳ್ಳುತ್ತಿದ್ದೆ. ದೆಹಲಿಯಲ್ಲಿಯೂ ಸಹ ಗೋಪಿನಾಥ್‌ ಮುಂಡೆ ಅವರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದೆ,’ ಎಂದು ಹೇಳಿಕೆ ನೀಡಿರುವುದು ದೋಷಾರೋಪಣೆ ಪಟ್ಟಿಯಿಂದ ತಿಳಿದು ಬಂದಿದೆ.

ಸೇವಾಲಾಲ್‌ ಸಂಗನ ಬಸವ ಸ್ವಾಮೀಜಿ ಹೆಸರಿನಲ್ಲಿ ಡಾ ಕೆ ಆರ್‌ ಮೋಹನ್‌, ಡಾ ಜಿತೇಂದ್ರ, ನೀರಜ್‌ಕುಮಾರ್‌, ರಘುನಾಥ್‌, ಪರಮೇಶ್ವರ್‌, ಮನ್ಸೂರ್‌ ಆಲಿ, ಆಕಾಶ್‌ ತನ್ಮಯ್‌ ಮಂಡಲ್‌, ಚಕ್ರವರ್ತಿ, ನಿಸ್ಸದಾರ್‌ ಯೂಸೆಫ್‌, ಸುನೀಲ್‌ಕುಮಾರ್‌ ಸಿಂಗ್‌, ಅಜಿತೇಶ್‌ ಮಂಡಲ್, ಸುರೇಶ್‌, ಎಂ ಟಿ ಪ್ರಸಾದ್‌ರಾವ್‌, ನಾಯರ್‌, ಸಂಜೀವ್‌ ಮದನ್‌, ಶ್ರೀನಿವಾಸ್‌, ಸಂಜಯ್‌ ಜೈನ್‌, ಪಾಂಡೆ ಅವರೊಂದಿಗೆ ಸೇರಿಕೊಂಡು ಹಳೆ ಮದ್ರಾಸ್‌ ರಸ್ತೆ, ಕೆ ಆರ್‌ ಪುರಂ ಮೇಡಹಳ್ಳಿಯಲ್ಲಿ ಸೇವಾಲಾಲ್‌ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ನಡೆಸುತ್ತಿರುವಂತಗೆ ಕಟ್ಟಡ ಬಾಡಿಗೆ ತೆಗೆದುಕೊಂಡಿದ್ದರ ಬಗ್ಗೆಯೂ ವಿವರಣೆ ಒದಗಿಸಿರುವುದು ಗೊತ್ತಾಗಿದೆ.

2002-03ನೇ ಸಾಲಿನಲ್ಲೇ ಬಿಡಿಎಸ್‌ ಸೀಟ್‌ ಕೊಡಿಸುವುದಾಗಿ ಹೇಳಿ ಹಲವು ಜನರಿಂದ ಲಕ್ಷಾಂತರ ರುಪಾಯಿ ಹಣವನ್ನು ಪಡೆದುಕೊಂಡು ನಂತರ ಯಾವುದೇ ಸೀಟನ್ನೂ ಕೊಡಿಸದೆಯೇ ಹಣವನ್ನೂ ವಾಪಸ್‌ ನೀಡಿರಲಿಲ್ಲ. ಈ ಬಗ್ಗೆ ಬೆಂಗಳೂರು ನಗರದ ಉಪ್ಪಾರ ಪೇಟೆ ಪೊಲೀಸ್‌ ಠಾಣೆಯಲ್ಲಿ 8 ಪ್ರಕರಣಗಳು ದಾಖಲಾಗಿವೆ.

ಅದೇ ರೀತಿ 2017ರಲ್ಲಿ ಟಿ ರೋಹಿತ್‌ ಎಂಬುವರ ತಮ್ಮ ಪ್ರೀತಮ್‌ ಎಂಬುವರಿಗೆ ಎಂ ಎಸ್‌ ರಾಮಯ್ಯ ಕಾಲೇಜಿನಲ್ಲಿ ಮೆಡಿಕಲ್‌ ಸೀಟ್‌ ಕೊಡಿಸುವುದಾಗಿ ಹೇಳಿ ಅವರಿಮದ 1,85,00,000 ರು. ಹಣ ಪಡೆದುಕೊಂಡಿದ್ದ.

ಈ ಹಣದಲ್ಲಿ 75,00,000 ರು.ಗಳನ್ನು ಕಾಲೇಜಿಗೆ ಪಾವತಿಸಿ ಉಳಿದ 1,05,00,000 ರು.ಗಳನ್ನು ಸ್ವಂತಕ್ಕೆ ಬಳಸಿಕೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿರುವುದು ತಿಳಿದು ಬಂದಿದೆ.

Tags: Amith ShahAnanthkumarb l santhoshB S YediyurappaChargsheetchitradurgaD K ShivakumarGopinath Mundeh d kumarswamyJustice IndrakalakarnatakaL K AdvaniMaharastraMohan BhagwatN RavikumarNagpurPratap SimhaPromodh MahajanRockline VenkateshRSSSandeep Patil IPSSiddaramaiahWilson Garden Police StationYuvarajaswamiಅನಂತಕುಮಾರ್‌ಅಮಿತ್‌ ಶಾಆರ್‌ಎಸ್‌ಎಸ್‌ಎಚ್‌ ಡಿ ಕುಮಾರಸ್ವಾಮಿಎನ್‌ ರವಿಕುಮಾರ್‌ಎಲ್‌ ಕೆ ಅಡ್ವಾಣಿಗೋಪಿನಾಥ್‌ ಮುಂಡೆಚಿತ್ರದುರ್ಗಜಸ್ಟೀಸ್‌ ಇಂದ್ರಕಲಾಡಿ ಕೆ ಶಿವಕುಮಾರ್ದೋಷಾರೋಪಣೆ ಪಟ್ಟಿನಾಗಪುರಪ್ರತಾಪ್‌ ಸಿಂಹಪ್ರಮೋದ್‌ ಮಧ್ವರಾಜ್‌ಬಿ ಎಲ್‌ ಸಂತೋಷ್‌ಬಿ ಎಸ್‌ ಯಡಿಯೂರಪ್ಪಮಹಾರಾಷ್ಟ್ರಮೋಹನ್‌ ಭಾಗವತ್‌ಯುವರಾಜಸ್ವಾಮಿರಾಕ್‌ಲೈನ್‌ ವೆಂಕಟೇಶ್‌ವಿಲ್ಸನ್‌ ಗಾರ್ಡನ್‌ ಪೊಲೀಸ್‌ ಸ್ಟೇಷನ್‌ಸಂದೀಪ್‌ ಪಾಟೀಲ್‌ ಐಪಿಎಸ್‌ಸಿದ್ದರಾಮಯ್ಯ
Advertisement Banner
Previous Post

ಮೊಟ್ಟೆ ಖರೀದಿಯಲ್ಲಿ ಕಿಕ್‌ಬ್ಯಾಕ್‌ ; 15 ದಿನದೊಳಗೆ ವರದಿ ನೀಡಲು ಪಿಎಸಿ ಸೂಚನೆ

Next Post

ವೇತನ ಹಗರಣಕ್ಕೆ ಸಕ್ರಮದ ರಕ್ಷಾಕವಚ; ವರದಿ ಬರುವ ಮುನ್ನವೇ ನಿಲುವು ಬದಲಿಸಿದ್ದೇಕೆ?

thefilestack

thefilestack

Next Post

ವೇತನ ಹಗರಣಕ್ಕೆ ಸಕ್ರಮದ ರಕ್ಷಾಕವಚ; ವರದಿ ಬರುವ ಮುನ್ನವೇ ನಿಲುವು ಬದಲಿಸಿದ್ದೇಕೆ?

Discussion about this post

Recommended

ಗೃಹ ಜ್ಯೋತಿ; ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳ ಅಂಕಿ ಅಂಶಗಳೇ ಸರ್ಕಾರದಲ್ಲಿಲ್ಲ

1 year ago

ಬಿಜೆಪಿ ಅವಧಿಯಲ್ಲಿ ತಡೆಹಿಡಿದಿದ್ದ ಆದೇಶಕ್ಕೆ ಮರುಜೀವ; ಅಬಕಾರಿಯಲ್ಲಿ 1,000 ಕೋಟಿ ಅಕ್ರಮ ಆರೋಪ

3 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd