the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

ಎಂಇಎಸ್‌ ಮುಖಂಡನ ಸೊಸೈಟಿ ಮೇಲೆ ಹಿಡಿತವಿಲ್ಲ; ಸಿಐಡಿ ತನಿಖೆ ಜಾರಿಯಲ್ಲಿದ್ದರೂ ಠೇವಣಿ ಆಕರ್ಷಣೆ

thefilestack by thefilestack
January 23, 2021
in GOVERNANCE
0
0
SHARES
0
VIEWS
Share on FacebookShare on Twitter

ಬೆಂಗಳೂರು; ಎಂಇಎಸ್‌ ಮುಖಂಡ ಕಿರಣ್‌ ಠಾಕೂರ್‌ ಒಡೆತನದಲ್ಲಿರುವ ಬೆಳಗಾವಿಯ ಲೋಕಮಾನ್ಯ ಮಲ್ಟಿಪರ್ಪಸ್‌ ಕೋ ಆಪರೇಟೀವ್‌ ಸೊಸೈಟಿ ಅಕ್ರಮಗಳ ಕುರಿತು ಸಿಐಡಿ ತನಿಖೆ ನಡೆಸುತ್ತಿರುವ ಹೊತ್ತಿನಲ್ಲೇ ಠೇವಣಿದಾರನ್ನು ಆಕರ್ಷಿಸುವುದನ್ನು ಮುಂದುವರೆಸಿದೆ.

ಅಂದಾಜು 2 ಸಾವಿರ ಕೋಟಿ ರು. ವಂಚನೆ ಮಾಡಿರುವ ಆರೋಪಕ್ಕೆ ಗುರಿಯಾಗಿರುವ ಈ ಸೊಸೈಟಿಯು ಠೇವಣಿದಾರರನ್ನು ಆಕರ್ಷಿಸುವುದನ್ನು ಮುಂದುವರೆಸಿದ್ದರೂ ಸಹಕಾರ ಇಲಾಖೆ ಯಾವುದೇ ಕ್ರಮ ವಹಿಸಿಲ್ಲ. ಈ ಕುರಿತು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಪ್ರಾಂತೀಯ ನಿರ್ದೇಶಕರು ರಾಜ್ಯ ಸರ್ಕಾರಕ್ಕೆ ಅರೆ ಸರ್ಕಾರಿ ಪತ್ರವನ್ನು (DO.FIDD(BG)NO 112/02.03.051/2020-21 ದಿನಾಂಕ 22.12.2020) ಬರೆದಿದ್ದಾರೆ ಎಂದು ತಿಳಿದು ಬಂದಿದೆ. ಈ ಪತ್ರವನ್ನಾಧರಿಸಿ ಸಹ ಆರ್ಥಿಕ ಇಲಾಖೆಯ (ವಿತ್ತೀಯ ಸುಧಾರಣೆ) ಸರ್ಕಾರದ ಕಾರ್ಯದರ್ಶಿ ಮಂಜು ಪ್ರಸನ್ನನ್‌ ಪಿಳ್ಳೈ ಅವರು ಸಹಕಾರ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ 2021ರ ಜನವರಿ 12ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

‘ಲೋಕಮಾನ್ಯ ಮಲ್ಟಿ ಪರ್ಪಸ್‌ ಕೋ ಆಪರೇಟೀವ್‌ ಸೊಸೈಟಿಯ ಬಗ್ಗೆ ಸಿಐಡಿಯಲ್ಲಿ ತನಿಖೆ ನಡೆಯುತ್ತಿದ್ದರೂ ಕೋ ಆಪರೇಟೀವ್‌ ಸೊಸೈಟಿಯು ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಠೇವಣಿದಾರನ್ನು ಆಕರ್ಷಿಸುತ್ತಿದೆ. ಮಲ್ಟಿ ಕೋ ಆಪರೇಟೀವ್‌ ಸೊಸೈಟಿಗಳ ಮೇಲ್ವಿಚಾರಣೆಯಲ್ಲಿ ಲೋಪದೋಷಗಳನ್ನು ಸರಿಪಡಿಸಲು ಕೇಂದ್ರದ ಸಹಕಾರಿ ಸಂಘಗಳ ರಿಜಿಸ್ಟ್ರಾರ್‌ರೊಂದಿಗೆ ವಿಷಯವನ್ನು ಪ್ರಸ್ತಾಪಿಸಬೇಕು,’ ಎಂದು ಮಂಜು ಪ್ರಸನ್ನನ್‌ ಪಿಳ್ಳೈ ಅವರು ಅನಧಿಕೃತ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.

ಬೆಳಗಾವಿಯಲ್ಲಿರುವ ಈ ಸೊಸೈಟಿಯು ಎಂಇಎಸ್ ಮುಖಂಡ ಕಿರಣ್ ಠಾಕೂರ್ ಒಡೆತನಕ್ಕೆ ಸೇರಿದೆ. ಈ ಸೊಸೈಟಿಯಲ್ಲಿ ಠೇವಣಿದಾರರು ಇಟ್ಟಿದ್ದ 2 ಸಾವಿರ ಕೋಟಿಗೂ ಅಧಿಕ ಮೊತ್ತ ದುರುಪಯೋಗವಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.

ಶಾಸಕ ಅಭಯ ಪಾಟೀಲ್ ಸೇರಿ 60 ಶಾಸಕರಿಂದ ಇ.ಡಿ, ಕೇಂದ್ರ ಹಣಕಾಸು ಇಲಾಖೆ, ರಾಜ್ಯ ಸರ್ಕಾರಕ್ಕೆ ದೂರು ನೀಡಿದ್ದರು. ಪ್ರಕರಣ ಸಂಪೂರ್ಣ ತನಿಖೆಗೆ ಸಹಕಾರ ಇಲಾಖೆಗೆ ಸೂಚಿಸಿತ್ತು. ಇಲಾಖೆ ರಿಜಿಸ್ಟ್ರಾರ್ ಶಿವಪ್ರಕಾಶ್ ನೇತೃತ್ವದಲ್ಲಿ ಅಧಿಕಾರಿಗಳು ಟಿಳಕವಾಡಿ ಬ್ರ್ಯಾಂಚ್​ಗೆ ಭೇಟಿ ನೀಡಿ ದಾಖಲೆಗಳನ್ನ ಪರಿಶೀಲನೆ ನಡೆಸಿದ್ದರು.

ಗೋವಾ, ಮಹಾರಾಷ್ಟ್ರ, ಕರ್ನಾಟಕದ ಹಲವು ರಾಜಕಾರಣಿಗಳು ಈ ಸೊಸೈಟಿಯಲ್ಲಿ ಹಣ ಹೂಡಿಕೆ ಮಾಡಿದ್ದರು ತಿಳಿದುಬಂದಿದೆ.

Tags: b l santhoshB S YediyurappaBJP KarnatakaChief SecretaryCIDCo-OperationD K ShivakumarDeposiotorsh d kumarswamyINC KarnatakainvestigationkarnatakaKiran TakurLokmanya Multipurpose Co-op SocietyMESP RavikumarPrinicipal SecretaryRBIRegistrarS T SomshekharSiddaramaiahTushar Girinath IASಆರ್‌ಬಿಐಎಂಇಎಸ್‌ಎಚ್‌ ಡಿ ಕುಮಾರಸ್ವಾಮಿಎಸ್‌ ಟಿ ಸೋಮಶೇಖರ್‌ಕರ್ನಾಟಕಕಾಂಗ್ರೆಸ್‌ಕಿರಣ್‌ ಠಾಕೂರ್‌ಡಿ ಕೆ ಶಿವಕುಮಾರ್ತನಿಖೆತುಷಾರ್‌ ಗಿರಿನಾಥ್ಪಿ ರವಿಕುಮಾರ್‌ಪ್ರಧಾನ ಕಾರ್ಯದರ್ಶಿಬಿ ಎಲ್‌ ಸಂತೋಷ್‌ಬಿ ಎಸ್‌ ಯಡಿಯೂರಪ್ಪಬಿಜೆಪಿಮುಖ್ಯ ಕಾರ್ಯದರ್ಶಿರಿಜಿಸ್ಟ್ರಾರ್‌ಲೋಕಮಾನ್ಯ ಮಲ್ಟಿಪರ್ಪಸ್‌ ಕೋ ಆಪರೇಟೀವ್‌ ಸೊಸೈಟಿಸಹಕಾರ ಇಲಾಖೆಸಿಐಡಿಸಿದ್ದರಾಮಯ್ಯಹೂಡಿಕೆದಾರರು
Advertisement Banner
Previous Post

ಡಿನೋಟಿಫಿಕೇಷನ್‌; ಬಿಎಸ್‌ವೈ, ನಿರಾಣಿ, ಬಳಿಗಾರ್‌ಗೆ ಎಸಿಬಿಯಿಂದ ಕ್ಲೀನ್‌ ಚಿಟ್‌

Next Post

ಕೇಂದ್ರ ಪುರಸ್ಕೃತ ಯೋಜನೆ; 2,948 ಕೋಟಿಯಲ್ಲಿ 523 ಕೋಟಿ ಕೊಟ್ಟರೂ ತುಟಿಬಿಚ್ಚದ ಸರ್ಕಾರ

thefilestack

thefilestack

Next Post

ಕೇಂದ್ರ ಪುರಸ್ಕೃತ ಯೋಜನೆ; 2,948 ಕೋಟಿಯಲ್ಲಿ 523 ಕೋಟಿ ಕೊಟ್ಟರೂ ತುಟಿಬಿಚ್ಚದ ಸರ್ಕಾರ

Discussion about this post

Recommended

ಮತಾಂತರ ನಿಷೇಧ ವಿಧೇಯಕ ಜಾರಿಗೊಳಿಸಲು ಸುಗ್ರೀವಾಜ್ಞೆಗೆ ಅಂತಿಮ ಸ್ವರೂಪ ನೀಡಿದ ಸರ್ಕಾರ

4 years ago

ಇ-ವಿಧಾನ್‌ ಯೋಜನೆ ಗೌಪ್ಯ ಮಾಹಿತಿ ಮಾಧ್ಯಮಗಳಿಗೆ ಸೋರಿಕೆ ಆರೋಪ; ಅಧಿಕಾರಿ ಅಮಾನತು

3 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd