the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

ಐಟಿ ದಾಳಿ ಬೆನ್ನಲ್ಲೇ ಹೆಟಿರೋ ರೆಮ್‌ಡಿಸಿವಿರ್‌ ವಹಿವಾಟು ಬಹಿರಂಗ; ಸಾವಿರ ಕೋಟಿ ವಹಿವಾಟು!

thefilestack by thefilestack
October 13, 2021
in GOVERNANCE
0
0
SHARES
0
VIEWS
Share on FacebookShare on Twitter

ಬೆಂಗಳೂರು; 550 ಕೋಟಿ ಮೊತ್ತದ ದಾಖಲೆ ರಹಿತ ಆದಾಯವನ್ನು ಹೊಂದಿರುವ ಹೈದರಾಬಾದ್‌ ಮೂಲದ ಹೆಟಿರೋ ಫಾರ್ಮಾಸ್ಯುಟಿಕಲ್ಸ್‌ ಸಮೂಹ ಸಂಸ್ಥೆಗೆ ಕೋವಿಡ್‌ 2ನೇ ಅಲೆಯ ಸಂದರ್ಭದಲ್ಲಿ ಅಂದಾಜು 1,036 ಕೋಟಿ ರು. ಮೌಲ್ಯದ 29.65 ಲಕ್ಷ ರೆಮ್‌ಡಿಸಿವರ್‌ ವಯಲ್‌ಗಳನ್ನು ಸರಬರಾಜು ಮಾಡಲು ಕೇಂದ್ರ ಆರೋಗ್ಯ ಸಚಿವಾಲಯವು ಹಂಚಿಕೆ ಮಾಡಲು ಗುರಿ ನಿಗದಿಪಡಿಸಿತ್ತು.

ಅಲ್ಲದೆ ಕರ್ನಾಟಕಕ್ಕೆ  3,46,000 ವಯಲ್‌ಗಳನ್ನು ಹಂಚಿಕೆ ಮಾಡಲು ಕೇಂದ್ರ ಗುರಿ ನಿಗದಿಪಡಿಸಿದ್ದರೂ ಒಂದೇ ಒಂದು ವಯಲ್‌ನ್ನೂ ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡದೆಯೇ ರಾಜ್ಯದೊಳಗಿನ ಮುಕ್ತ ಮಾರುಕಟ್ಟೆಗೆ 1,89,906 ವಯಲ್‌ಗಳನ್ನು ಬಿಡುಗಡೆ ಮಾಡಿತ್ತು ಎಂಬ ಅಂಶ ಇದೀಗ ಮುನ್ನೆಲೆಗೆ ಬಂದಿದೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಈ ಕಂಪನಿಯ ಮೇಲೆ ದಾಳಿ ನಡೆಸಿದ್ದ ವೇಳೆಯಲ್ಲಿ 550 ಕೋಟಿ ಮೊತ್ತದ ದಾಖಲೆ ರಹಿತ (ಲೆಕ್ಕವಿಲ್ಲದ) ಆದಾಯವನ್ನು ಪತ್ತೆ ಮಾಡಿದ್ದರ ಬೆನ್ನಲ್ಲೇ ಈ ಕಂಪನಿಯು ರೆಮ್‌ಡಿಸಿವಿರ್‌ನ್ನು ಸರಬರಾಜು ಮಾಡಿದ್ದ  ವಿವರಗಳು ಬಹಿರಂಗವಾಗಿವೆ.

ಏಪ್ರಿಲ್‌ ಮತ್ತು ಮೇ ತಿಂಗಳ ಮಧ್ಯದಲ್ಲಿ ರೆಮ್‌ಡಿಸಿವಿರ್‌ ವಯಲ್‌ಗೆ ತೀವ್ರ ಬೇಡಿಕೆ ಇದ್ದುದ್ದರಿಂದ ಹೆಟಿರೋ ಕಂಪನಿ ಸೇರಿದಂತೆ ಹಲವು ಕಂಪನಿಗಳು ವಯಲ್‌ಗೆ ಗರಿಷ್ಠ 5,400 ರು. ವರೆಗೆ ನಿಗದಿಪಡಿಸಿತ್ತು. ಭಾರತೀಯ ಔಷಧ ಪ್ರಾಧಿಕಾರವು ಮಧ್ಯ ಪ್ರವೇಶಿಸಿದ ನಂತರ ಕಂಪನಿಗಳು ತಮ್ಮ ದರವನ್ನು ಪರಿಷ್ಕರಿಸಿದ್ದವು. ಈ ಪೈಕಿ ಹೆಟಿರೋ ಕಂಪನಿಯು 5,400 ರು. ಗಳಿಂದ 3,490 ರು.ಗಳಿಗೆ (100 ಎಂಜಿ ವಯಲ್‌) ಇಳಿಸಿತ್ತು.

ಏಪ್ರಿಲ್‌ 21ರಿಂದ ಮೇ 31ರವರೆಗೆ ದೇಶದ ಎಲ್ಲಾ ರಾಜ್ಯಗಳಿಗೂ ರೆಮ್‌ಡಿಸಿವಿರ್‌ ಹಂಚಿಕೆ ಮಾಡಲು ಹೆಟಿರೋ ಕಂಪನಿಗೆ ಗುರಿ ನಿಗದಿಪಡಿಸಿದ್ದ 29.65 ಲಕ್ಷ ವಯಲ್‌ಗೆ ಪ್ರತಿ ವಯಲ್‌ಗೆ 3,490 ರು ಲೆಕ್ಕಾಚಾರದ ಪ್ರಕಾರ 1,036 ಕೋಟಿ ರು.ಮೌಲ್ಯದ್ದಾಗಿತ್ತು. ಒಟ್ಟು 29.65 ಲಕ್ಷ ವಯಲ್‌ಗಳ ಪೈಕಿ ದೇಶದ ರಾಜ್ಯಗಳಿಗೆ ಏಪ್ರಿಲ್‌ 21ರಿಂದ ಮೇ 9ರವರೆಗೆ 11, 21, 550 ವಯಲ್‌ಗಳನ್ನು ಹಂಚಿಕೆ ಮಾಡಿತ್ತು. ಇದರ ಮೊತ್ತ 560, 77, 50, 000 ರು. ಎಂದು ಗೊತ್ತಾಗಿದೆ.

ರಾಜ್ಯದ ಮುಕ್ತಮಾರುಕಟ್ಟೆಗೆ 66.77 ಕೋಟಿ ಮೌಲ್ಯದ ವಯಲ್‌ ಬಿಡುಗಡೆ

ವಿಶೇಷವೆಂದರೆ ಹೆಟಿರೋ ಫಾರ್ಮಾಸ್ಯುಟಿಕಲ್ಸ್‌ ಕಂಪನಿಯು ರಾಜ್ಯ ಸರ್ಕಾರಕ್ಕೆ 2021ರ ಏಪ್ರಿಲ್‌ 21ರಿಂದ ಮೇ 31ರವರೆಗೆ ಒಂದೇ ಒಂದು ವಯಲ್‌ನ್ನು ಬಿಡುಗಡೆ ಮಾಡಿರಲಿಲ್ಲ. ಆದರೆ ಮುಕ್ತ ಮಾರುಕಟ್ಟೆಗೆ 1,89,906 ವಯಲ್‌ಗಳನ್ನು ಪೂರೈಕೆ ಮಾಡಿತ್ತು. ಇದರ ಮೊತ್ತವೇ 66.77 ಕೋಟಿ ರು. ಎಂದು ತಿಳಿದು ಬಂದಿದೆ.

ಅಲ್ಲದೆ ಆಂಧ್ರ ಪ್ರದೇಶದಲ್ಲಿ ಈ ಕಂಪನಿಯು 9.60 ಕೋಟಿ ರು. ಮೌಲ್ಯದ 2,59,600 ವಯಲ್‌ ಮತ್ತು 4.65 ಕೋಟಿ ರು.ಮೌಲ್ಯದ 1,33,300 ವಯಲ್‌ಗಳನ್ನು ತೆಲಂಗಾಣಕ್ಕೆ ಬಿಡುಗಡೆ ಮಾಡಿತ್ತು ಎಂಬುದು ಕೇಂದ್ರ ಆರೋಗ್ಯ ಸಚಿವಾಲಯವು ಬಿಡುಗಡೆ ಮಾಡಿದ್ದ ದಾಖಲೆಯಿಂದ ಗೊತ್ತಾಗಿದೆ.

ಹೈದರಾಬಾದ್‌ ಮೂಲದ ಹೆಟಿರೊ ಫಾರ್ಮಸುಟಿಕಲ್ಸ್‌ ಸಮೂಹ ಸಂಸ್ಥೆಯು ಅಮೆರಿಕ, ಯುರೋಪ್, ದುಬೈ ಮತ್ತು ಇತರ ಆಫ್ರಿಕನ್ ದೇಶಗಳಿಗೆ ಹೆಚ್ಚಿನ ಉತ್ಪನ್ನಗಳನ್ನು ರಫ್ತು ಮಾಡುತ್ತದೆ. ಈ ಕಂಪನಿ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು, ₹550 ಕೋಟಿ ಮೊತ್ತದ ದಾಖಲೆ ರಹಿತ ಆದಾಯವನ್ನು (ಲೆಕ್ಕವಿಲ್ಲದ) ಪತ್ತೆ ಮಾಡಿದ್ದರು. ಅಲ್ಲದೆ ₹142 ಕೋಟಿಗೂ ಅಧಿಕ ನಗದನ್ನು ವಶಪಡಿಸಿಕೊಂಡಿರುವ ಬಗ್ಗೆ ಆದಾಯ ತೆರಿಗೆ ಇಲಾಖೆ ಪ್ರಕಟಣೆ ನೀಡಿದ್ದನ್ನು ಸ್ಮರಿಸಬಹುದು.

ಮೈಲಾನ್‌ ಸೇರಿದಂತೆ ಒಟ್ಟು 7 ಕಂಪನಿಗಳು 2021ರ ಏಪ್ರಿಲ್‌ 21ರಿಂದ ಮೇ 31ರವರೆಗೆ ರಾಜ್ಯಕ್ಕೆ 10,11,431 ವಯಲ್ಸ್‌ಗಳನ್ನು ಪೂರೈಕೆ ಮಾಡಿತ್ತು. ಈ ಪೈಕಿ ಸರ್ಕಾರಕ್ಕೆ 4,26,784 ವಯಲ್‌ ಹಂಚಿಕೆ ಮಾಡಿದ್ದರೆ ಮುಕ್ತ ಮಾರುಕಟ್ಟೆಗೆ 5,84,647 ವಯಲ್‌ಗಳನ್ನು ಬಿಡುಗಡೆ ಮಾಡಿತ್ತು. ಸರ್ಕಾರಕ್ಕೆ 268,51,88,000 ರು. ಮೌಲ್ಯ ಮತ್ತು ಮುಕ್ತ ಮಾರುಕಟ್ಟೆಯಲ್ಲಿ 226, 02,66,050 ಕೋಟಿ ರು. ಮೌಲ್ಯದ ರೆಮ್‌ಡಿಸಿವೀರ್‌ ವಯಲ್‌ಗಳನ್ನು ಬಿಡುಗಡೆ ಮಾಡಿದ್ದವು.

ಮೈಲಾನ್‌ ಕಂಪನಿಯು (4,800 ರು.ದರ) 67,18,32,000 ರು.ಮೌಲ್ಯದ ರೆಮ್‌ಡಿಸಿವಿರ್‌ 1,39,965 ವಯಲ್‌ಗಳನ್ನು ಸರ್ಕಾರಕ್ಕೆ ಪೂರೈಕೆ ಮಾಡಿದ್ದರೆ ಮುಕ್ತ ಮಾರುಕಟ್ಟೆಗೆ 39, 12, 91,200 ರು. ಮೌಲ್ಯದ 81,519 ವಯಲ್‌ಗಳನ್ನು ಬಿಡುಗಡೆ ಮಾಡಿತ್ತು.

ಅದೇ ರೀತಿ ಸಿನ್‌ಜಿನ್‌ ಕಂಪನಿಯು 57,79,96,000 ರು. ಮೌಲ್ಯದ 1,44,499 ವಯಲ್‌ಗಳನ್ನು ಸರ್ಕಾರಕ್ಕೆ 66,07,80,000 ರು. ಮೌಲ್ಯದ 1,65,195 ವಯಲ್‌ಗಳನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಜ್ಯುಬಿಲಿಯೆಂಟ್‌ ಕಂಪನಿಯು 20,53,60,000 ರು. ಮೌಲ್ಯದ 60,4000 ವಯಲ್‌ಗಳನ್ನು ಸರ್ಕಾರಕ್ಕೆ 4,19,93,400 ರು. ಮೌಲ್ಯದ 12,351 ವಯಲ್‌ಗಳನ್ನು ಮುಕ್ತ ಮಾರುಕಟ್ಟೆಗೆ ಸರಬರಾಜು ಮಾಡಿತ್ತು.

ಇನ್ನು, ಡಾ ರೆಡ್ಡೀಸ್‌ ಲ್ಯಾಬ್‌ 16,69,15,150 ರು.ಮೌಲ್ಯದ 42,257 ವಯಲ್‌ಗಳನ್ನು ಮುಕ್ತ ಮಾರುಕಟ್ಟೆಗೆ ಪೂರೈಕೆ ಮಾಡಿತ್ತು. ಕ್ಯಾಡಿಲಾ ಕಂಪನಿಯು 4,97,56,000 ರು. ಮೌಲ್ಯದ 17,770 ವಯಲ್‌ಗಳನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು.

ಮೈಲಾನ್‌ ಕಂಪನಿಯು ದೇಶದ ರಾಜ್ಯಗಳಿಗೆ 248,30,40,000 ರು. ಮೌಲ್ಯದ 5,17,300 ವಯಲ್‌ಗಳನ್ನು ಸರಬರಾಜು ಮಾಡಿದೆ. ಸಿಪ್ಲಾ ಕಂಪನಿಯು 185,56,00,000 ಮೌಲ್ಯದ 4,63,900 ವಯಲ್‌, ಸಿನ್‌ಜಿನ್‌ ಕಂಪನಿಯು 69,83,60,000 ರು.ಮೌಲ್ಯದ 1,76,800 ವಯಲ್‌, ಜ್ಯುಬಿಲಿಯೆಂಟ್‌ ಕಂಪನಿಯು 77,96,20,000 ರು.ಮೌಲ್ಯದ 2,29,300 ವಯಲ್‌, ಡಾ ರೆಡ್ಡೀಸ್‌ ಲ್ಯಾಬ್‌ 70,13,22,500 ಕೋಟಿ ರು. ಮೌಲ್ಯದ 1,77,550 ವಯಲ್‌, ಕ್ಯಾಡಿಲಾ ಕಂಪನಿಯು 213,80,80,000 ರು.ಮೌಲ್ಯದ 7,63,600 ವಯಲ್‌ಗಳನ್ನು ಏಪ್ರಿಲ್‌ 21ರಿಂದ ಮೇ 9ರವರೆಗೆ ಪೂರೈಕೆ ಮಾಡಿದ್ದನ್ನು ಸ್ಮರಿಸಬಹುದು.

ಸರಿಯಾದ ಸಮಯಕ್ಕೆ ರೆಮ್‌ಡಿಸಿವಿರ್‌ ಚುಚ್ಚುಮದ್ದು ದೊರೆಯದ ಕಾರಣ ಕೋವಿಡ್‌ ರೋಗಿಗಳು ಮತ್ತು ಅವರ ಕುಟುಂಬ ಸದಸ್ಯರು ಪರದಾಡುತ್ತಿದ್ದರೆ ಇತ್ತ ರೆಮ್‌ಡಿಸಿವಿರ್‌ ತಯಾರಿಕೆ ಕಂಪನಿಗಳು ಸರ್ಕಾರಕ್ಕಿಂತಲೂ ಮುಕ್ತ ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸರಬರಾಜು ಮಾಡಿದ್ದವು.

Tags: AfricanB S YediyurappaBank LockersBasavaraj BommaiCentral Board of Direct TaxesCovid-19dr k sudhakarEuropean countriesGovernmen IndiaHetero Pharmaceutical GroupHyderabadIncome Tax DepartmentIT RaidkarnatakaKarnataka Drug ControllerPharmaceutical IngredientsRemdesivirRemdesivir VialsSiddaramaiahSputnik VUndisclosed Income Detectedಅಘೋಷಿತ ಆದಾಯಆದಾಯ ತೆರಿಗೆ ಇಲಾಖೆಎಚ್‌ ಡಿ ಕುಮಾರಸ್ವಾಮಿಐಟಿ ದಾಳಿಔಷಧ ತಯಾರಿಕೆ ಕಚ್ಛಾ ವಸ್ತುಗಳುಔಷಧ ನಿಯಂತ್ರಣ ಪ್ರಾಧಿಕಾರಕರ್ನಾಟಕಕೋವಿಡ್‌ 19ಡಾ ಕೆ ಸುಧಾಕರ್‌ಡಿ ಕೆ ಶಿವಕುಮಾರ್ನೇರ ತೆರಿಗೆಬಸವರಾಜ ಬೊಮ್ಮಾಯಿಬಿ ಎಲ್‌ ಸಂತೋಷ್‌ಬಿ ಎಸ್‌ ಯಡಿಯೂರಪ್ಪಬ್ಯಾಂಕ್‌ ಲಾಕರ್ಸ್‌ಭಾರತ ಸರ್ಕಾರರೆಮ್‌ಡಿಸಿವಿರ್‌ ವಯಲ್ಸ್‌ಸಿದ್ದರಾಮಯ್ಯಹೆಟಿರೋ ಔಷಧ ಕಂಪನಿಹೈದರಾಬಾದ್‌
Advertisement Banner
Previous Post

ಪರಿಶಿಷ್ಟರಿಗಿಟ್ಟಿದ್ದ 300 ಕೋಟಿ ಅನ್ಯ ಉದ್ದೇಶಕ್ಕೆ ಖರ್ಚು; ಪೇಶ್ವೆಗೆ ಆಯೋಗದಿಂದ ನೋಟೀಸ್‌ ಜಾರಿ

Next Post

ಪರೇಶ್‌ ಮೇಸ್ತಾ ಹತ್ಯೆ; ಸಿಬಿಐ ವರದಿಗೂ ಮುನ್ನವೇ ಪ್ರಕರಣಗಳ ವಿಚಾರಣೆ ಕೈಬಿಟ್ಟಿದ್ದೇಕೆ?

thefilestack

thefilestack

Next Post

ಪರೇಶ್‌ ಮೇಸ್ತಾ ಹತ್ಯೆ; ಸಿಬಿಐ ವರದಿಗೂ ಮುನ್ನವೇ ಪ್ರಕರಣಗಳ ವಿಚಾರಣೆ ಕೈಬಿಟ್ಟಿದ್ದೇಕೆ?

Recommended

ಕಲ್ಬುರ್ಗಿಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದ ಕೆಲಗಂಟೆಗಳ ಕಾರ್ಯಕ್ರಮಕ್ಕೆ 11.18 ಕೋಟಿ ರು. ವೆಚ್ಚ

3 years ago

‘ದೊಡ್ಡ ಪ್ರಮಾಣದಲ್ಲಿ 2023-2028ರವರೆಗೆ ಆಯ್ಕೆಯಾಗಿ ಬಂದಿದ್ದೇವೆ, ನಮ್ಮ ಪರಿಸ್ಥಿತಿ ಏನು?’

2 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd