the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home IT/ED

ಕೃಷಿಯಿಂದ ಗಳಿಸಿದ ಹಣವನ್ನು ದೆಹಲಿಗೆ ಸಾಗಿಸಿದ್ಹೇಗೆ?: ಐ ಟಿ ಮುಂದೆ ಬಾಯಿಬಿಡದ ಡಿಕೆಶಿ

thefilestack by thefilestack
March 11, 2024
in IT/ED
0
0
SHARES
1
VIEWS
Share on FacebookShare on Twitter

ಬೆಂಗಳೂರು; ನವ ದೆಹಲಿಯ ಸಫ್ದರ್‍‌ಜಂಗ್‌ ಎನ್‌ಕ್ಲೇವ್‌ನಲ್ಲಿನ ಬಂಗಲೆಯಲ್ಲಿ ಸಿಕ್ಕಿದ್ದ ಹಣವು ಕೃಷಿ ಮೂಲಗಳಿಂದ ಗಳಿಸಿದ್ದ ಆದಾಯ ಎಂದು ಹೇಳಿಕೆ ನೀಡಿದ್ದ ಮೊದಲನೇ ಆರೋಪಿ ಡಿ ಕೆ ಶಿವಕುಮಾರ್‍‌ ಅವರು ಕೃಷಿ ಮೂಲಗಳಿಂದ ಗಳಿಸಿದ್ದ ಹಣವನ್ನು ದೆಹಲಿಗೆ ಹೇಗೆ ಸಾಗಿಸಿದರು ಎಂಬುದನ್ನು ಬಾಯ್ಬಿಟ್ಟಿಲ್ಲ ಎಂದು ಆದಾಯ ತೆರಿಗೆ ಇಲಾಖೆಯು ಹೇಳಿದೆ.

 

ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪದಡಿಯಲ್ಲಿ ಡಿ ಕೆ ಶಿವಕುಮಾರ್‍‌ ಅವರ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್‍‌ ದಾಖಲಿಸಿರುವ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆಯ ಉಪ ನಿರ್ದೇಶಕರು ನ್ಯಾಯಾಲಯಕ್ಕೆ ಸಲ್ಲಿಸಿರುವ ಸಂಪೂರ್ಣ ವಿವರಗಳು ಮುನ್ನೆಲೆಗೆ ಬಂದಿವೆ.

 

ಈ ಸಂಬಂಧ ‘ದಿ ಫೈಲ್‌’ ಸಮಗ್ರ ಕಡತವನ್ನು ಆರ್‍‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

 

‘ವಿಚಾರಣೆ ಸಂದರ್ಭದಲ್ಲಿ ನಂ.107, ಬಿ-2, ಸಫ್ದರ್‍‌ಜಂಗ್‌ ಎನ್‌ಕ್ಲೇವ್‌ ನವದೆಹಲಿ ಬಂಗಲೆ ತನಗೆ ಸೇರಿದ್ದು ಎಂದು ಆರೋಪಿ -1 ಹೇಳಿದ್ದಾರೆ. ಮತ್ತು ಈ ಬಂಗಲೆಯಲ್ಲಿ ಸಿಕ್ಕಿದ್ದ ಹಣವೂ ನನಗೆ ಸೇರಿದ್ದೆಂದು ಹೇಳಿದ್ದಾರೆ. ಇದು ನಾನು ಕೃಷಿ ಮೂಲಗಳಿಂದ ಗಳಿಸಿದ ಆದಾಯ ಎಂದು ತಿಳಿಸಿದ್ದಾರೆ. ಈ ಹೇಳಿಕೆ ಒಪ್ಪಲು ಸಾಧ್ಯವಿಲ್ಲ ಎಂದು ತನಿಖಾ ಸಂಸ್ಥೆಗಳು ಹೇಳಿವೆ,’ ಎಂದು ವಿವರಿಸಿದೆ.

 

ಅಲ್ಲದೇ ವಿಚಾರಣೆ ಸಂದರ್ಭದಲ್ಲಿ ಮೊದಲನೇ ಆರೋಪಿ ಡಿ ಕೆ ಶಿವಕುಮಾರ್‍‌ ಈ ಆದಾಯದಲ್ಲಿ ಗಳಿಸಿದ್ದು ಕೃಷಿ ಮೂಲಕ ಎಂದು ಹೇಳಿದ್ದಾರೆ. ಅವರ ತಾಯಿ ಕೃಷಿ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಆದರೆ ಈ ಹಣವನ್ನು ದೆಹಲಿಗೆ ಹೇಗೆ ಸಾಗಿಸಿದರು ಎಂಬುದನ್ನು ಬಾಯಿ ಬಿಟ್ಟಿಲ್ಲ ಎಂದೂ ಇಲಾಖೆಯು ನ್ಯಾಯಾಲಯಕ್ಕೆ ಸಲ್ಲಿಸಿರುವ ವಿವರಣೆಯಲ್ಲಿ ಉಲ್ಲೇಖಿಸಿದೆ.

 

ನವ ದೆಹಲಿಯ ಸಫ್ದರ್‍‌ಜಂಗ್‌ ಎನ್‌ಕ್ಲೇವ್‌ನಲ್ಲಿನ ಬಂಗಲೆಯಲ್ಲಿನ ಮನೆಗಳಲ್ಲಿ 6.67 ಕೋಟಿ ರೂ. ಲಭ್ಯವಾಗಿತ್ತು. ಮೊದಲನೇ ಆರೋಪಿ ಡಿ ಕೆ ಶಿವಕುಮಾರ್‍‌ ಅವರು ಈ ಭಾರೀ ಪ್ರಮಾಣದ ಹಣ ಸಂಪಾದನೆ ಮತ್ತು ಇದರ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜತೆಗೆ ಇದಕ್ಕೆ ಮೂರು ಮತ್ತು ನಾಲ್ಕನೇ ಆರೋಪಿಗಳನ್ನು ಬಳಸಿಕೊಂಡಿದ್ದಾರೆ ಎಂಬುದು ತಿಳಿದು ಬರುತ್ತದೆ ಎಂಬ ಅಂಶವೂ ನ್ಯಾಯಾಲಯಕ್ಕೆ ಸಲ್ಲಿಸಿರುವ ವಿವರಣೆಯಲ್ಲಿದೆ.

 

'ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದಾಗ ಮೊದಲನೇ ಆರೋಪಿಯು ಬೆಂಗಳೂರು ಮತ್ತು ದೆಹಲಿಯಲ್ಲಿ ತನಗೆ ಬೇಕಾದಂತೆ ಎಲ್ಲ ವ್ಯವಹಾರಗಳನ್ನು ಮಾಡಿರುವುದು ಕಂಡುಬರಲಿದೆ. ದೆಹಲಿಯ ಬಂಗಲೆಗಳಲ್ಲಿ ವಶಕ್ಕೆ ಪಡೆದ 8.5 ಕೋಟಿ ರು.ಗಳು ಮೊದಲನೇ ಆರೋಪಿಗೆ ಸೇರಿದೆ. ಮುಂದುವರೆದಂತೆ ಮೊದಲನೇ ಆರೋಪಿಯು ನವದೆಹಲಿಯ ಸಫ್ದರ್‍‌ಜಂಗ್‌ ರಸ್ತೆಯ ಫ್ಲಾಟ್‌ ನಂ.107, ಬಿ-2ನ್ನು ಖರೀದಿಸಿದ್ದಾರೆ. ಎರಡನೇ ಆರೋಪಿ ಸಚಿನ ನಾರಾಯಣ್‌ ಮೊದಲನೇ ಆರೋಪಿಗೆ ನಿಕಟವಾಗಿದ್ದಾರೆ. ಅವರು ಸ್ವತಂತ್ರ ವಹಿವಾಟನ್ನು ಹೊಂದಿದ್ದಾರೆ,' ಎಂದು ವಿವರಿಸಿದ್ದಾರೆ.

https://stack.thefile.in/2024/03/it-ed/22366/

ಎರಡನೇ ಆರೋಪಿಯು ಮೊದಲನೇ ಆರೋಪಿಯೊಂದಿಗೆ ಸಂಪೂರ್ಣವಾಗಿ ಸಹಕರಿಸಿದ್ದಾರೆ. ಮತ್ತು ಹಣವು ಮೊದಲನೇ ಆರೋಪಿಗೆ ಸೇರಿದೆ ಎಂಬ ಹೇಳಿಕೆಯನ್ನೂ ನೀಡಿದ್ದಾರೆ. ಈ ವಿಷಯಗಳ ಕುರಿತು ಮೊದಲನೇ ಆರೋಪಿ ಸ್ಪಷ್ಟನೆ ನೀಡಲು ಎರಡು ತಿಂಗಳು ಸಮಯಾವಕಾಶ ಕೇಳಿದ್ದರು. ಸಮಯಾವಕಾಶ ಕೊಟ್ಟ ನಂತರವೂ ಸ್ಪಷ್ಟನೆ ನೀಡಲಿಲ್ಲ. ವಿಳಂಬ ತಂತ್ರಗಳನ್ನು ಅನುಸರಿಸಿದ್ದರು ಎಂಬುದು ತಿಳಿದು ಬಂದಿದೆ.

https://stack.thefile.in/2024/03/it-ed/22372/

'ಮೊದಲನೇ ಆರೋಪಿ ಬೇರೆ ಬೇರೆ ದಿನಗಳಂದು ನೀಡಿದ್ದ ಹೇಳಿಕೆಗಳನ್ನು ಕೂಲಂಕಷವಾಗಿ ವಿಶ್ಲೇಷಿಸಲಾಗಿದೆ. ಈ ವೇಳೆಯಲ್ಲಿ ಈ ಹಿಂದೆ ನೀಡಿದ್ದ ಹೇಳಿಕೆಗಳನ್ನು ಸಂಪೂರ್ಣವಾಗಿ ಹಿಂಪಡೆದಿದ್ದಾರೆ. ಮನೆ ಸಂಖ್ಯೆ ಬಿ – ಸಫ್ದರ್‍‌ ಜಂಗ್ ರಸ್ತೆಯ ನಿವಾಸದಲ್ಲಿ ವಶಕ್ಕೆ ಪಡೆದಿದ್ದ 41,03,600 ಲಕ್ಷ ರುಗಳಿಗೆ ಸಂಬಂಧಿಸಿ ಈ ಪೈಕಿ 15.00 ಲಕ್ಷ ರು.ಗಳನ್ನು ಕೃಷಿಯಿಂದ ಗಳಿಸಿದ್ದು ಎಂದು ಹೇಳಿದ್ದಾರೆ.

https://stack.thefile.in/2024/03/it-ed/22364/

ಅಲ್ಲದೇ  ಹಣ ದೊರೆತ ಬಂಗಲೆ ನನ್ನದಲ್ಲ ಎಂದೂ ಹೇಳಿದ್ದಾರೆ. ಹಾಗೆಯೇ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿರುವ ದಾಖಲೆಗಳಲ್ಲಿರುವ ಕೈ ಬರಹವೂ ನನ್ನದಲ್ಲ ಎಂದಿದ್ದಾರೆ,' ಎಂಬ ಅಂಶವು ಇಲಾಖೆಯು ನ್ಯಾಯಾಲಯಕ್ಕೆ ಸಲ್ಲಿಸಿರುವ ವಿವರಣೆಯಲ್ಲಿ ಉಲ್ಲೇಖವಾಗಿದೆ.

Tags: agricultureBasanagouda Patil YatnalbjpD K ShivakumarEnforcementFlath d kumarswamyIncomeNew DelhiSafdarjungSiddaramaiahaTAXಅಕ್ರಮಅನಧಿಕೃತಆದಾಯಇಡಿಐಟಿಕೃಷಿ ಆದಾಯಕೃಷಿ ಮೂಲಜಾರಿ ನಿರ್ದೇಶನಾಲಯಡಿ ಕೆ ಶಿವಕುಮಾರ್ತೆರಿಗೆದೆಹಲಿನವ ದೆಹಲಿಫ್ಲಾಟ್‌ಬಸನಗೌಡ ಪಾಟೀಲ್‌ ಯತ್ನಾಳ್‌ವಂಚನೆಸಿದ್ದರಾಮಯ್ಯಹಣ ಸಾಗಣೆಹೆಚ್‌ ಡಿ ಕುಮಾರಸ್ವಾಮಿ
Advertisement Banner
Previous Post

ಹಣ ಬಚ್ಚಿಡಲು ಫ್ಲಾಟ್‌ಗಳ ಬಳಕೆ; 4 ಕೋಟಿ ರು. ಬೇನಾಮಿ ಹೂಡಿಕೆ, ಬಾಯ್ಬಿಟ್ಟ 5ನೇ ಆರೋಪಿ

Next Post

ಶಾಲಾ ಮಕ್ಕಳ ಉತ್ತರ ಪತ್ರಿಕೆಗಳಿಗೆ ಹಣವಿಲ್ಲವೆಂದ ಸರ್ಕಾರ, ದೇಗುಲ-ಮಠಗಳಿಗೆ ಕೊಟ್ಟಿದ್ದು 25.82 ಕೋಟಿ

thefilestack

thefilestack

Next Post

ಶಾಲಾ ಮಕ್ಕಳ ಉತ್ತರ ಪತ್ರಿಕೆಗಳಿಗೆ ಹಣವಿಲ್ಲವೆಂದ ಸರ್ಕಾರ, ದೇಗುಲ-ಮಠಗಳಿಗೆ ಕೊಟ್ಟಿದ್ದು 25.82 ಕೋಟಿ

Recommended

ಕೋವಿಡ್‌ ಸಾವಿನ ಪರಿಹಾರ ವ್ಯಾಪ್ತಿಗೊಳಪಡದ ಇಡಬ್ಲ್ಯೂಎಸ್‌ ವರ್ಗ; ಸರ್ಕಾರದಿಂದಲೇ ತಾರತಮ್ಯ

4 years ago

ಟಿಎ ಬಿಲ್‌ಗಳ ಗೋಲ್ಮಾಲ್‌; ಪ್ರಯಾಣ ಉದ್ದೇಶ, ವಿವರಗಳಿಲ್ಲ, ಖಜಾನಾಧಿಕಾರಿಗಳ ಸಹಿಯೂ ಇಲ್ಲ

2 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd