the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

ಕೆಎಸ್‌ಆರ್‌ಟಿಸಿಗೆ 220 ಕೋಟಿ ಸಾಲ; 3 ತಿಂಗಳಾದರೂ ನೆರವಿಗೆ ಬಾರದ ಹಣಕಾಸು ಸಂಸ್ಥೆಗಳು

thefilestack by thefilestack
April 19, 2021
in GOVERNANCE
0
0
SHARES
1
VIEWS
Share on FacebookShare on Twitter

ಬೆಂಗಳೂರು; ಕೊರೋನಾ ಮತ್ತು ನೌಕರರ ಮುಷ್ಕರಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳು ಸಾಲಕ್ಕಾಗಿ ಕೈ ಚಾಚಿದರೂ ಯಾವ ಹಣಕಾಸು ಸಂಸ್ಥೆಯೂ ಸಾಲದ ನೆರವು ನೀಡಲು ಮುಂದೆ ಬಂದಿಲ್ಲ. ಹೀಗಾಗಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಎರಡನೇ ಬಾರಿ ಮರು ಟೆಂಡರ್‌ ಆಹ್ವಾನಿಸಿದೆ.

ಕೊರೊನಾ, ಲಾಕ್‌ಡೌನ್‌ನಿಂದಾದ ಆರ್ಥಿಕ ಸಂಕಷ್ಟದಿಂದ ಚೇತರಿಸಿಕೊಳ್ಳುವ ಮೊದಲೇ ನೌಕರರು ಕಳೆದ 10 ದಿನಗಳಿಂದ ನಡೆಸುತ್ತಿರುವ ಮುಷ್ಕರದಿಂದಾಗಿ 170 ಕೋಟಿಗೂ ಅಧಿಕ ನಷ್ಟವನ್ನು ಅನುಭವಿಸಿ ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ. ನಷ್ಟದಿಂದ ಪಾರಾಗಲು 220 ಕೋಟಿ ರು.ಗಳನ್ನು ಸಾಲ ಎತ್ತಲು ಮುಂದಾಗಿದ್ದ ಕೆಎಸ್‌ಆರ್‌ಟಿಸಿ ಇದೀಗ 2021ರ ಏಪ್ರಿಲ್‌ 17ರಂದು ಮರು ಟೆಂಡರ್‌ ಆಹ್ವಾನಿಸಿದೆ.

‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಹಿಂಬಾಕಿ ಪಾವತಿ ಮಾಡುವ ಸಲುವಾಗಿ 220 ಕೋಟಿ ರು.ಗಳನ್ನು ಅವಧಿ ಸಾಲದ ರೂಪದಲ್ಲಿ ಪಡೆಯುಲು ಉದ್ದೇಶಿಸಿದೆ,’ ಎಂದು ಆಸಕ್ತಿ ವ್ಯಕ್ತಪಡಿಸುವ ಮರು ಟೆಂಡರ್‌ನಲ್ಲಿ ವಿವರಿಸಿದೆ.

ಪ್ರಸ್ತಾಪಿತ ಸಾಲದ ಮೊತ್ತವನ್ನು ಒಂದೇ ಕಂತಿನಲ್ಲಿ ಪಡೆಯುವುದು, ಸಾಲದ ಮರು ಪಾವತಿಯ ಅವಧಿಯನ್ನು 7 ವರ್ಷಗಳಿಗೆ ನಿಗದಿಪಡಿಸುವ ಷರತ್ತನ್ನೂ ವಿಧಿಸಿರುವುದು ಟೆಂಡರ್‌ ದಾಖಲೆಯಿಂದ ತಿಳಿದು ಬಂದಿದೆ.

ಡೀಸೆಲ್‌ ಬೆಲೆ ಏರಿಕೆ, ಸಿಬ್ಬಂದಿ ವೇತನ ಹೆಚ್ಚಳ, ಕೊರೋನಾ ಸೋಂಕಿನ ಕಾರಣದಿಂದ ಪ್ರಯಾಣಿಕರ ಕೊರತೆ ಸೇರಿ ಹಲವು ಕಾರಣಗಳು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳನ್ನೂ ನಷ್ಟಕ್ಕೆ ತಳ್ಳಿವೆ. ಇದನ್ನು ಸರಿದೂಗಿಸಲು ಅಧಿಕೃತ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಬಗ್ಗೆ ಆಸಕ್ತಿ ವ್ಯಕ್ತಪಡಿಸುವ ಟೆಂಡರ್‌ ಆಹ್ವಾನಿಸುತ್ತಲೇ ಇದೆ. ಆದರೆ ಈವರೆವಿಗೂ ಯಾವ ಹಣಕಾಸು ಸಂಸ್ಥೆಯೂ ಸಾಲ ನೀಡಲು ಮುಂದಾಗಿಲ್ಲ.

ಕೆಎಸ್‌ಆರ್‌ಟಿಸಿ ನೌಕರರು ನಡೆಸುತ್ತಿರುವ ಮುಷ್ಕರ ಮತ್ತು ಮುಂದೊಡ್ಡಿರುವ ಬೇಡಿಕೆಗಳನ್ನು ಬಗೆಹರಿಸುವಲ್ಲಿ ಸಚಿವ ಲಕ್ಷ್ಮಣ ಸವದಿ  ಅವರು ವಿಫಲರಾಗಿದ್ದಾರೆ ಎಂಬ ಆರೋಪಗಳ ಬೆನ್ನಲ್ಲೇ ಹಣಕಾಸು ಸಂಸ್ಥೆಗಳು ಸಾಲ ನೀಡಲು ಮುಂದೆ ಬಾರದಿರುವುದು ಬಿಕ್ಕಟ್ಟು ಇನ್ನಷ್ಟು ಉಲ್ಬಣಗೊಳ್ಳುವ ಲಕ್ಷಣಗಳು ಗೋಚರಿಸಲಾರಂಭಿಸಿವೆ.

ಕಳೆದ ಎರಡು ತಿಂಗಳ ಹಿಂದೆ ಆರ್ಥಿಕ ಸಂಕಷ್ಟದಿಂದ ಹೊರಬರಲು ಬಿಎಂಟಿಸಿ ಕೂಡ 230 ಕೋಟಿ ರು. ಸಾಲ ಪಡೆಯಲು ಟೆಂಡರ್‌ ಆಹ್ವಾನಿಸಿತ್ತು. ಅದಕ್ಕಾಗಿ ಬಿಎಂಟಿಸಿ ಒಡೆತನದ ಬಸ್ಸುಗಳು, ಭೂಮಿ ಮತ್ತು ಕಟ್ಟಡಗಳನ್ನು ಅಡಮಾನ ಇಡಲು ಮುಂದಾಗಿದ್ದನ್ನು ಸ್ಮರಿಸಬಹುದು.

ನೌಕರರ ಮುಷ್ಕರದಿಂದ ಜರ್ಜರಿತವಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಸಾಲಕ್ಕಾಗಿ ಕಳೆದ 2 ತಿಂಗಳುಗಳಿಂದ ಪರದಾಡುತ್ತಿದ್ದರೂ ಸಾಲದ ನೆರವು ಸಿಗದಿರುವುದು ಇನ್ನಷ್ಟು ಸಂಕಷ್ಟವನ್ನು ಎದುರಿಸುವ ಸಾಧ್ಯತೆಗಳಿವೆ.

ನಾಲ್ಕು ರಸ್ತೆ ಸಾರಿಗೆ ನಿಗಮಗಳು ಡಿಸೇಲ್‌ಗಾಗಿ ವಾರ್ಷಿಕ ಸುಮಾರು 4,821.65 ಕೋಟಿ, ನಿಗಮಗಳ ನೌಕರರ ವೇತನ ಬಾಬ್ತಿಗಾಗಿ 4,536.80 ಕೋಟಿ, ಸಾರಿಗೆ ಆದಾಯ ಮತ್ತು ಹಾಜರಾತಿಯ ಆಧಾರದ ಮೇಲೆ ಚಾಲಕ ನಿರ್ವಾಹಕರಿಗೆ ಪ್ರೋತ್ಸಾಹ ಧನ ನೀಡುವುದು ಮತ್ತು ನಗರ, ಸಬ್‌ಅರ್ಬನ್‌ ಸಾರಿಗೆ ಬಸ್‌ಗಳ ಸಾರಿಗೆ ಆದಾಯದ ಶೇ.3ರಷ್ಟು ಮತ್ತು ಇತರೆ ಎಲ್ಲಾ ಸೇವೆಗಳ ಸಾರಿಗೆ ಆದಾಯದ ಶೇ.2ರಷ್ಟನ್ನು ಪ್ರೋತ್ಸಾಹ ಧನ ರೂಪದಲ್ಲಿ ನೀಡುವುದು ಸೇರಿದಂತೆ ಒಟ್ಟು 4 ನಾಲ್ಕು ನಿಗಮಗಳು ವಾರ್ಷಿಕ 169.78 ಕೋಟಿ ರು.ಗಳನ್ನು ಭರಿಸುತ್ತಿದೆ.

ಇದಲ್ಲದೆ ಹೆಚ್ಚುವರಿ ಕರ್ತವ್ಯಕ್ಕೆ ಹೆಚ್ಚುವರಿ ವೇತನ ನೀಡುವ ಕಾಯ್ದೆಯನ್ವಯ 4 ಸಾರಿಗೆ ನಿಗಮಗಳು ಸೇರಿದಂತೆ ವಾರ್ಷಿಕ 254.80 ಕೋಟಿಗಳನ್ನು ಭರಿಸುತ್ತಿದೆ. ಹಾಗೆಯೇ ನಾಲ್ಕೂ ನಿಗಮಗಳ ವಾರ್ಷಿಕ ಸಾರಿಗೆ ಆದಾಯ ಸುಮಾರು 6,205 ಕೋಟಿ ರು.ಗಳಿವೆ.

Tags: Arun SinghB S YediyurappaChandrappaChief SecretaryCommerical BanksD K Shivakumarh d kumarswamyKSRTCKSRTC ChairmenKSRTC StrikeLaxman SavadiN Ravikumar MLCNEKRTCP RavikumarRBISiddaramaiahTerm loanTransport Ministerಅರುಣ್‌ ಸಿಂಗ್‌ಅವಧಿ ಸಾಲಆರ್‌ಬಿಐಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಎಚ್‌ ಡಿ ಕುಮಾರಸ್ವಾಮಿಎನ್‌ ರವಿಕುಮಾರ್‌ ಎಂಎಲ್‌ಸಿಕೆಎಸ್‌ಆರ್‌ಟಿಸಿಕೆಎಸ್‌ಆರ್‌ಟಿಸಿ ಅಧ್ಯಕ್ಷಕೆಎಸ್‌ಆರ್‌ಟಿಸಿ ನೌಕರರ ಮುಷ್ಕರಚಂದ್ರಪ್ಪಡಿ ಕೆ ಶಿವಕುಮಾರ್ಪಿ ರವಿಕುಮಾರ್‌ಬಿ ಎಸ್‌ ಯಡಿಯೂರಪ್ಪಮುಖ್ಯ ಕಾರ್ಯದರ್ಶಿಲಕ್ಷ್ಮಣ ಸವದಿವಾಣಿಜ್ಯ ಬ್ಯಾಂಕ್‌ಗಳುವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಸಾರಿಗೆ ಸಚಿವಸಿದ್ದರಾಮಯ್ಯ
Advertisement Banner
Previous Post

ಕೋವಿಡ್‌; ಸ್ಪುಟ್ನಿಕ್‌ ಲಸಿಕೆ ಬಂದರೂ ಜುಲೈಗೆ 500 ಮಿಲಿಯನ್‌ ಡೋಸ್‌ ಗುರಿ ಮುಟ್ಟುವುದೇ?

Next Post

ಟಾಸ್ಕ್‌ಪೋರ್ಸ್‌ನಲ್ಲಿ ತಳಮಟ್ಟದ ಅನುಭವಸ್ಥರಿಲ್ಲ, ಕಾರ್ಯಸೂಚಿಯಿಲ್ಲ, ಆರೋಗ್ಯ ಅರಾಜಕತೆಯೇ ಎಲ್ಲ

thefilestack

thefilestack

Next Post

ಟಾಸ್ಕ್‌ಪೋರ್ಸ್‌ನಲ್ಲಿ ತಳಮಟ್ಟದ ಅನುಭವಸ್ಥರಿಲ್ಲ, ಕಾರ್ಯಸೂಚಿಯಿಲ್ಲ, ಆರೋಗ್ಯ ಅರಾಜಕತೆಯೇ ಎಲ್ಲ

Discussion about this post

Recommended

ಘನತ್ಯಾಜ್ಯ ವಿಲೇವಾರಿ; 89 ಪ್ಯಾಕೇಜ್‌ಗಳಲ್ಲಿ ಬಿಡ್‌ ರಿಗ್ಗಿಂಗ್, ಶೇ.60ಕ್ಕೂ ಹೆಚ್ಚು ದರ ನಮೂದು, ಐಪಿ ವಿಳಾಸವೂ ಇಲ್ಲ

1 year ago

ಚೀನಾದ ಬಿವೈಡಿ ಕಂಪನಿಯಿಂದ ಮಾಸ್ಕ್‌ ಖರೀದಿ ಮಾಹಿತಿ ಮುಚ್ಚಿಟ್ಟ ಆರೋಗ್ಯ ಇಲಾಖೆ

6 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd