the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

ಕೇಂದ್ರ ಅನುದಾನದಲ್ಲಿ ಶೇ.17.55ರಷ್ಟು ಇಳಿಕೆ; ಉಸಿರೆತ್ತದ ಬಿಜೆಪಿ ಸರ್ಕಾರ

thefilestack by thefilestack
March 15, 2021
in GOVERNANCE
0
0
SHARES
0
VIEWS
Share on FacebookShare on Twitter

ಬೆಂಗಳೂರು; ರಾಜ್ಯಕ್ಕೆ ಒದಗಬೇಕಿದ್ದ ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನ ಸೇರಿದಂತೆ ಒಟ್ಟಾರೆಯಾಗಿ ಕೇಂದ್ರೀಯ ಅನುದಾನದ ಮೊತ್ತವು ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿದೆ. 2019-20 ಮತ್ತು 2020-21ರಲ್ಲಿ ಶೇಕಡವಾರು 17.55ಕ್ಕೆ ಇಳಿಕೆಯಾಗಿದೆ. ಆದರೆ ರಾಜ್ಯವನ್ನು ಪ್ರತಿನಿಧಿಸಿರುವ ಸಂಸದರು ಮತ್ತು ರಾಜ್ಯ ಬಿಜೆಪಿ ಸರ್ಕಾರವೂ ಈ ಬಗ್ಗೆ ಉಸಿರೆತ್ತದೇ ಮೌನವಾಗಿದೆ.

ಕೇಂದ್ರೀಯ ಅನುದಾನದ ಹಂಚಿಕೆ ಮತ್ತು ಇಳಿಕೆ ಕುರಿತು 2020-21ನೇ ಸಾಲಿನ ಕರ್ನಾಟಕ ಆರ್ಥಿಕ ಸಮೀಕ್ಷೆಯಲ್ಲಿ ಚರ್ಚಿಸಲಾಗಿದೆ.

2019-20ರಲ್ಲಿ (ಪ.ಅಂ)ರಲ್ಲಿ 37,088.83 ಕೋಟಿ ಇದ್ದದ್ದು 2020-21ರಲ್ಲಿ 31,570.46 ಕೋಟಿ (ಶೇ. 14.87ರಷ್ಟು) ರು.ಗೆ ಇಳಿಕೆಯಾಗಿದೆ. ಅದೇ ರೀತಿ 2019-20ರಲ್ಲಿ (ಪ.ಅಂ)ಸಾಲನ್ನು 2020-21ನೇ ಸಾಲಿಗೆ ಹೋಲಿಸಿದಾಗ ರಾಜಸ್ವ ಜಮೆಯಲ್ಲಿ ಅನುದಾನ ಶೇ.20.92ರಿಂದ ಶೇ.17.55ಕ್ಕೆ ಇಳಿಕೆಯಾಗಿರುವುದು ಕರ್ನಾಟಕ ಆರ್ಥಿಕ ಸಮೀಕ್ಷೆಯಿಂದ ತಿಳಿದು ಬಂದಿದೆ.

ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸಂಬಂಧಿಸಿದಂತೆ 2018-19ರಲ್ಲಿ 10,393.44 ಕೋಟಿ (ಶೇ.6.30), 2019-20ರಲ್ಲಿ 11,740.67 ಕೋಟಿ (ಶೇ.6.62) 2020-21ರಲ್ಲಿ 9,897.46 ಕೋಟಿ (ಶೇ.5.50)ರು. ರಾಜ್ಯಕ್ಕೆ ಲಭ್ಯವಾಗಿದೆ. ಅದೇ ರೀತಿ ಹಣಕಾಸು ಆಯೋಗದ ಅನುದಾನಕ್ಕೆ ಸಂಬಂಧಿಸಿದಂತೆ 2018-19ರಲ್ಲಿ 3,373.89 ಕೋಟಿ (ಶೇ.2.05), 2019-20ರಲ್ಲಿ 5,109.81 ಕೋಟಿ (ಶೇ.2.88), 2020-21ರಲ್ಲಿ 5,557.00 ಕೋಟಿ (ಶೇ.3.09) ಕೋಟಿ, ಶಾಸಕಾಂಗವಿರುವ ರಾಜ್ಯಗಳಿಗೆ ಇತರೆ ವರ್ಗಾವಣೆ/ಧನ ಸಹಾಯ ಲೆಕ್ಕದಲ್ಲಿ 2018-19ರಲ್ಲಿ 11,713.92 ಕೋಟಿ (ಶೇ.7.10), 2019-20ರಲ್ಲಿ 20,238.35 ಕೋಟಿ (ಶೇ.11.42), 2020-21ರಲ್ಲಿ 16,116.00 ಕೋಟಿ (ಶೇ.8.96), ಒಟ್ಟು ಕೇಂದ್ರೀಯ ಜಮೆಗಳಿಗೆ ಸಂಬಂಧಿಸಿದಂತೆ 2018-19ರಲ್ಲಿ 25,481.25 ಕೋಟಿ (ಶೇ.15.45), 2019-20ರಲ್ಲಿ 37,088.83 ಕೋಟಿ (ಶೇ.20.92), 2020-21ರಲ್ಲಿ 31,570.46 ಕೋಟಿ (ಶೇ.17.55) ಸೇರಿದಂತೆ ರಾಜಸ್ವ ಜಮೆಗಳು 2018-19ರಲ್ಲಿ 164978.66 ಕೋಟಿ, 2019-20ರಲ್ಲಿ 177255.48 ಕೋಟಿ, 2020-21ರಲ್ಲಿ 179919.76 ಕೋಟಿ ರು. ಇರುವುದು ಕರ್ನಾಟಕ ಆರ್ಥಿಕ ಸಮೀಕ್ಷೆಯಿಂದ ಗೊತ್ತಾಗಿದೆ.

ಕೇಂದ್ರೀಯ ಅನುದಾನವು ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನಗಳು, ಗ್ರಾಮೀಣ ಸ್ಥಳೀಯ ಸಂಸ್ಥೆಗಳು, ನಗರ ಸ್ಥಳೀಯ ಸಂಸ್ಥೆಗಳು, ರಾಜ್ಯ ವಿಕೋಪ ತುರ್ತು ನಿಧಿ, ಇತರೆ ವರ್ಗಾವಣೆಗಳು, ಶಾಸಕಾಂಗವಿರುವ ರಾಜ್ಯಗಳಿಗೆ ಅನುದಾನ, ರಾಷ್ಟ್ರೀಯ ವಿಕೋಪ ತುರ್ತು ನಿಧಿಗೆ ಧನ ಸಹಾಯ ಹಾಗೂ ಸರಕು ಸೇವಾ ತೆರಿಗೆ ಅಳವಡಿಕೆಯಿಂದ ಉಂಟಾದ ನಷ್ಟ ಪರಿಹಾರವು  ಒಳಗೊಂಡಿರುತ್ತದೆ.

ವಿಶೇಷ ಎಂದರೆ ವಸತಿ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಬೈರತಿ ಬಸವರಾಜು ಗೋವಿಂದ ಕಾರಜೋಳ, ಡಾ ಕೆ ಸುಧಾಕರ್‌, ಬಿ ಶ್ರೀರಾಮುಲು ಇಲಾಖೆಗಳಿಗೆ ಕೇಂದ್ರ ಪುರಸ್ಕೃತದ ಕೆಲ ಯೋಜನೆಗಳಿಗೆ ಬಿಡಿಗಾಸನ್ನೂ ನೀಡದಿದ್ದರೂ ಈ ಸಚಿವರ್ಯಾರು ತುಟಿ ಬಿಚ್ಚಿಲ್ಲ. ಸ್ವಚ್ಛ ಭಾರತ, ಪೂರಕ ಪೌಷ್ಠಿಕ ಆಹಾರ, ರಾಷ್ಟ್ರೀಯ ಉಚ್ಚತರ ಶಿಕ್ಷಣ ಅಭಿಯಾನ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ ಯೋಜನೆ ಸೇರಿದಂತೆ 17ಕ್ಕೂ ಹೆಚ್ಚಿನ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಒಟ್ಟು ಅನುದಾನದಲ್ಲಿ ಶೇ. 50ಕ್ಕಿಂತಲೂ ಕಡಿಮೆ ಬಿಡುಗಡೆ ಮಾಡಿದೆ. ಕೇಂದ್ರ ಪುರಸ್ಕೃತ ಯೋಜನೆ, ಕಾರ್ಯಕ್ರಮಗಳಿಗೆ ಕೇಂದ್ರ ಸರ್ಕಾರವು ಒಟ್ಟು ಅನುದಾನದಲ್ಲಿ ಇನ್ನೂ 2,419.01 ಕೋಟಿ ರು. ಬಾಕಿ ಉಳಿಸಿಕೊಂಡಿದೆ.

ಶೇ. 50ಕ್ಕಿಂತಲೂ ಕಡಿಮೆ ಅನುದಾನ ಬಿಡುಗಡೆಯಾಗಿರುವುದು ಮತ್ತು ಸಕಾಲದಲ್ಲಿ ಅನುದಾನ ಬಿಡುಗಡೆ ಆಗದ ಕಾರಣ ಕೇಂದ್ರ ಪುರಸ್ಕೃತ ಯೋಜನೆಗಳು ರಾಜ್ಯದಲ್ಲಿ ತೆವಳುತ್ತಿವೆ. 100 ಕೋಟಿ ರು.ಗಿಂತ ಹೆಚ್ಚಿನ ಅನುದಾನವಿರುವ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಿಗೆ 2020-21ನೇ ಸಾಲಿಗೆ ಒಟ್ಟು 2,948.94 ಕೋಟಿ ರು. ಅನುದಾನವನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಿತ್ತು. ಆದರೆ ಈ ಪೈಕಿ 2020ರ ಡಿಸೆಂಬರ್‌ ಅಂತ್ಯಕ್ಕೆ ಕೇವಲ 529.93 ಕೋಟಿ ರು. ಮಾತ್ರ ಬಿಡುಗಡೆ ಮಾಡಿದೆ. ಇನ್ನೂ 2,419.01 ಕೋಟಿ ರು.ಗಳನ್ನು ಬಿಡುಗಡೆ ಮಾಡಿಲ್ಲ ಎಂಬುದು ದಾಖಲೆಯಿಂದ ಗೊತ್ತಾಗಿದೆ.

ಅದೇ ರೀತಿ 10 ಕೋಟಿ ರು.ಗಳಿಗಿಂತ ಹೆಚ್ಚಿನ ಅನುದಾನವಿರುವ ಕಾರ್ಯಕ್ರಮಗಳಲ್ಲೂ ಶೇ.50ಕ್ಕಿಂತ ಕಡಿಮೆ ಬಿಡುಗಡೆಯಾಗಿದೆ. ತುಂಗಾ ಮೇಲ್ದಂಡೆ ಯೋಜನೆ ಸೇರಿದಂತೆ ಹಲವು ಯೋಜನೆಗಳಿಗೆ 242.29 ಕೋಟಿ ರು.ಗಳನ್ನು ಕೇಂದ್ರ ಸರ್ಕಾರವು ಅನುದಾನ ಒದಗಿಸಬೇಕಿತ್ತು. ಆದರೆ ಡಿಸೆಂಬರ್‌ 2020ರ ಅಂತ್ಯಕ್ಕೆ ಕೇವಲ 23.72 ಕೋಟಿ ರು. ಮಾತ್ರ ಬಿಡುಗಡೆ ಮಾಡಿ ಇನ್ನೂ 218.57 ಕೋಟಿ ರು. ಬಾಕಿ ಉಳಿಸಿಕೊಂಡಿದೆ.

ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ ಅನುಷ್ಠಾನಗೊಂಡಿರುವ ಸ್ವಚ್ಛ ಭಾರತ (ನಗರ) ಯೋಜನೆಗೆ ಒಟ್ಟು 120 ಕೋಟಿ ರು.ಅನುದಾನ ಘೋಷಿಸಿದ್ದ ಕೇಂದ್ರ ಸರ್ಕಾರವು ಡಿಸೆಂಬರ್‌ 2020ರ ಅಂತ್ಯದವರೆಗೂ ನಯಾ ಪೈಸೆ ಬಿಡುಗಡೆ ಮಾಡಿಲ್ಲ. ಅದೇ ರೀತಿ ವಸತಿ ಇಲಾಖೆ ವ್ಯಾಪ್ತಿಯಲ್ಲಿ ಅನುಷ್ಠಾನಗೊಂಡಿರುವ ಪ್ರಧಾನ ಮಂತ್ರಿ ಆವಾಜ್‌ ಯೋಜನೆ (ಗ್ರಾಮೀಣ)ಗೆ 300 ಕೋಟಿ ರು. ಅನುದಾನ ಘೋಷಣೆಯಾಗಿದೆಯಾದರೂ ಡಿಸೆಂಬರ್‌ 2020ರ ಅಂತ್ಯಕ್ಕೆ ಬಿಡಿಗಾಸನ್ನೂ ನೀಡಿಲ್ಲ.

ಪೂರಕ ಪೌಷ್ಠಿಕ ಆಹಾರ ಯೋಜನೆಗೆ ಕೇಂದ್ರ ಸರ್ಕಾರವು ಘೋಷಿಸಿದ್ದ 599.44 ಕೋಟಿ ರು. ಅನುದಾನದ ಪೈಕಿ ಡಿಸೆಂಬರ್‌ 2020ರ ಅಂತ್ಯಕ್ಕೆ 156.60 ಕೋಟಿ ರು.ಮಾತ್ರ ಬಿಡುಗಡೆ ಮಾಡಿದೆ. ಪ್ರಧಾನಮಂತ್ರಿ ಆವಾಜ್‌ ಯೋಜನೆ (ನಗರ)ಗೆ 515.00 ಕೋಟಿ ರು ಪೈಕಿ ಕೇವಲ 9.19 ಕೋಟಿ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್‌)ಗೆ 402.05 ಕೋಟಿ ರು. ಪೈಕಿ 117.29 ಕೋಟಿ, ಅಮೃತ್‌ ಮಿಷನ್‌ ಯೋಜನೆಗೆ 290.57 ಕೋಟಿ ರು. ಪೈಕಿ ಕೇವಲ 0.51 ಕೋಟಿ, ಹಿಂದುಳಿದ ವರ್ಗಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ 237.50 ಕೋಟಿ ರು.ನಲ್ಲಿ 79.13 ಕೋಟಿ, ನಾರಾಯಣಪುರ ಎಡದಂಡೆ ಕಾಲುವೆ ಯೋಜನೆಗೆ 218.97 ಕೋಟಿ ರು.ನಲ್ಲಿ 109.48 ಕೋಟಿ ರು., ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ 145.50 ಕೋಟಿ ರು. ಪೈಕಿ 11.22 ಕೋಟಿ, ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನ ಯೋಜನೆಗೆ 119.91 ಕೋಟಿ ರು.ನಲ್ಲಿ 46.51 ಕೋಟಿ ರು.ಮಾತ್ರ ಬಿಡುಗಡೆ ಮಾಡಿದೆ.

ಅದೇ ರೀತಿ 10 ಕೋಟಿಗಿಂತ ಹೆಚ್ಚಿನ ಅನುದಾನವಿರುವ ಕಾರ್ಯಕ್ರಮಗಳಾದ ತುಂಗಾ ಮೇಲ್ದಂಡೆ ಯೋಜನೆಗೆ 66.89 ಕೋಟಿ ರು.ಪೈಕಿ ಬಿಡುಗಡೆ ಮಾಡಿದ್ದು ಕೇವಲ 4.45 ಕೋಟಿ ಮಾತ್ರ. ಸಮಗ್ರ ಮಕ್ಕಳ ಸಂರಕ್ಷಣಾ ಯೋಜನೆಗೆ 55.08 ಕೋಟಿ ರು.ನಲ್ಲಿ 14.63 ಕೋಟಿ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರವು ರಾಷ್ಟ್ರೀಯ ಉಚ್ಚತರ ಶಿಕ್ಷಣ ಅಭಿಯಾನಕ್ಕೆ ಘೋಷಿಸಿದ್ದ 50.40 ಕೋಟಿ ರು.ನಲ್ಲಿ, ರಾಷ್ಟ್ರೀಯ ಆಯುಷ್‌ ಅಭಿಯಾನಕ್ಕೆ 19.63 ಕೋಟಿ, ಮೀನುಗಾರಿಕೆ ಬಂದರುಗಳ ನಿರ್ಮಾಣಕ್ಕೆ 18.75 ಕೋಟಿ, ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ವೇತನಕ್ಕೆ 18.15 ಕೋಟಿ ರು.ನಲ್ಲಿ ಬಿಡಿಗಾಸನ್ನೂ ನೀಡಿಲ್ಲ.

Tags: Amit ShahArun Singhb l santhoshB S YediyurappaBJP KarnatakaCentral FundCentral governmentCentral GrantsD K ShivakumarEconomic Surveyh d kumarswamykarnatakaKPCCN Ravikumar MLCnarendra modiNirmala SitaramanPrhalad JoshiSiddaramaiahಅಮಿತ್‌ ಶಾಅರುಣ್‌ ಸಿಂಗ್‌ಆರ್ಥಿಕ ಸಮೀಕ್ಷೆಎಚ್‌ ಡಿ ಕುಮಾರಸ್ವಾಮಿಎನ್‌ ರವಿಕುಮಾರ್‌ ಎಂಎಲ್‌ಸಿಕರ್ನಾಟಕಕೆಪಿಸಿಸಿಕೇಂದ್ರ ಅನುದಾನಕೇಂದ್ರ ಪುರಸ್ಕೃತ ಯೋಜನೆಕೇಂದ್ರ ಸರ್ಕಾರಡಿ ಕೆ ಶಿವಕುಮಾರ್ನರೇಂದ್ರ ಮೋದಿನಿರ್ಮಲಾ ಸೀತಾರಾಮನ್‌ಪ್ರಹ್ಲಾದ್‌ ಜೋಷಿಬಿ ಎಲ್‌ ಸಂತೋಷ್‌ಬಿ ಎಸ್‌ ಯಡಿಯೂರಪ್ಪಬಿಜೆಪಿ ಕರ್ನಾಟಕಸಿದ್ದರಾಮಯ್ಯ
Advertisement Banner
Previous Post

ಅಲ್ಪಸಂಖ್ಯಾತರ ಸಂಘಸಂಸ್ಥೆಗಳ ಕೈವಶಕ್ಕೆ ವಿಧೇಯಕ; ಸಂವಿಧಾನ ವಿರೋಧಿ ಕೃತ್ಯ?

Next Post

ಒಕ್ಕಲಿಗರ ಸಂಘ; ಚುನಾವಣಾಧಿಕಾರಿ ನೇಮಿಸಿ ಬೈಲಾ ತಿದ್ದುಪಡಿ ಗೊಂದಲಕ್ಕೆ ತೆರೆ ಎಳೆದ ಸರ್ಕಾರ

thefilestack

thefilestack

Next Post

ಒಕ್ಕಲಿಗರ ಸಂಘ; ಚುನಾವಣಾಧಿಕಾರಿ ನೇಮಿಸಿ ಬೈಲಾ ತಿದ್ದುಪಡಿ ಗೊಂದಲಕ್ಕೆ ತೆರೆ ಎಳೆದ ಸರ್ಕಾರ

Discussion about this post

Recommended

ಆರ್‌ಬಿಐ ಗೌಪ್ಯ ವರದಿ; ರಾಜ್ಯದ ಪಟ್ಟಣ ಸಹಕಾರಿ ಬ್ಯಾಂಕ್‌ಗಳಲ್ಲಿ ಎನ್‌ಪಿಎ ಪ್ರಮಾಣ ಹೆಚ್ಚಳ

6 years ago

ಗ್ಯಾರಂಟಿ ಬೆನ್ನಲ್ಲೇ ಅಬಕಾರಿ ರಾಜಸ್ವ 35,000 ಕೋಟಿಗೂ ಅಧಿಕ ಗುರಿ ನಿಗದಿ?; ಮದ್ಯ ಮಾರಾಟದಲ್ಲಿ ಹೆಚ್ಚಿನ ನಿರೀಕ್ಷೆ

3 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd