the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

ಕೊಡಗಿನಲ್ಲಿ ಮೂವರನ್ನು ಬಲಿ ಪಡೆದಿದ್ದು ಗಂಡು ಹುಲಿ; ಜೆನೆಟಿಕ್‌ ಮ್ಯಾಪಿಂಗ್‌ ಸುಳಿವು

thefilestack by thefilestack
March 12, 2021
in GOVERNANCE
0
0
SHARES
0
VIEWS
Share on FacebookShare on Twitter

ಬೆಂಗಳೂರು: ಕೊಡಗಿನ ಶ್ರೀಮಂಗಲ ವಲಯದ ಕುಮಟೂರು, ಶೆಟ್ಟಿಗೇರಿ, ಬೆಳ್ಳೂರು ಗ್ರಾಮದಲ್ಲಿ ಮೂವರನ್ನು ಹತ್ಯೆ ಮಾಡಿದ್ದು ಗಂಡು ಹುಲಿ ಎಂಬ ಮಹತ್ವದ ಸುಳಿವು ಅರಣ್ಯಾಧಿಕಾರಿಗಳಿಗೆ ಲಭ್ಯವಾಗಿದೆ.

ಕೊಡಗಿನ ಶ್ರೀಮಂಗಲ ವ್ಯಾಪ್ತಿಯಲ್ಲಿ ಹಿಡಿದಿರುವ ಹುಲಿಯ ರಕ್ತದ ಮಾದರಿ ಹಾಗೂ ಹತ್ಯೆಗೀಡಾಗಿರುವವರ ದೇಹದ ಮೇಲೆ ದೊರೆತಿರುವ ಹುಲಿಯ ಕೂದಲನ್ನು ಹೈದರಾಬಾದ್‌ನ ಸೆಂಟರ್‌ ಫಾರ್‌ ಸೆಲ್ಯುಲರ್‌ ಅಂಡ್‌ ಮಾಲಕ್ಯುಲರ್‌ ಬಯಾಲಜಿ (Centre for Cellular & Molecular Biology) ಸಂಸ್ಥೆಗೆ ಕಳಿಸಿ ಜೆನೆಟಿಕ್‌ ಮ್ಯಾಪಿಂಗ್‌ ಮಾಡಿಸಲಾಗಿತ್ತು.

ಸಾಯಿಸಲ್ಪಟ್ಟಿದ್ದ ಜನರ ಮೇಲೆ ದೊರೆತಿರುವ ಹುಲಿಯ ಕೂದಲು ಗಂಡು ಹುಲಿಯದ್ದಾಗಿದೆ ಎಂದು ಗೊತ್ತಾಗಿದೆ. ಅರಣ್ಯಾಧಿಕಾರಿಗಳು ಈ ಕುರಿತು ಸರ್ಕಾರಕ್ಕೆ ವರದಿಯನ್ನೂ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಮನುಷ್ಯರ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಗಂಡು ಹುಲಿ ಎಂದು ಪತ್ತೆ ಹಚ್ಚಲಾಗಿದೆ. ಅದೇ ಭಾಗದಲ್ಲಿ ಜಾನುವಾರುಗಳನ್ನು ಹತ್ಯೆ ಮಾಡುತ್ತಿರುವ ಸ್ಥಳದಲ್ಲಿ ಕ್ಯಾಮರಾ ಟ್ರ್ಯಾಪ್‌ ಅಳವಡಿಸಲಾಗಿದೆ. ಅದರಲ್ಲಿ ಗಂಡು ಹುಲಿಯ ಇರುವಿಕೆ ಕಂಡು ಬಂದಿದೆ. ಅದನ್ನು ಹಿಡಿಯಲು ತಂಡಗಳು ಕಾರ್ಯಾಚರಣೆಯಲ್ಲಿ ಮುಂದುವರೆದಿವೆ ಎಂಬ ಮಾಹಿತಿಯನ್ನು ಹಿರಿಯ ಅರಣ್ಯಾಧಿಕಾರಿಯೊಬ್ಬರು ‘ದಿ ಫೈಲ್‌’ಗೆ ಹಂಚಿಕೊಂಡಿದ್ದಾರೆ.

ಕಳೆದ ಮೂರು ವಾರದಲ್ಲಿ ನಡೆದಿರುವ ಹುಲಿ ದಾಳಿಗೆ ಮೂವರು ಬಲಿಯಾಗಿದ್ದರು. ನರಭಕ್ಷಕ ಹುಲಿ ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ನಡೆಸಿದ್ದ ಕಾರ್ಯಾಚರಣೆ ವೇಳೆಯಲ್ಲಿ ಹೆಣ್ಣು ಹುಲಿಯೊಂದು ಸಿಕ್ಕಿಬಿದ್ದಿದೆ ಎಂದು ಗೊತ್ತಾಗಿದೆ.

2019-20ರಲ್ಲಿ ಕೊಡಗು ವೃತ್ತದಲ್ಲಿ ಹುಲಿ ದಾಳಿ ನಡೆದಿಲ್ಲ. 2020-21ರಲ್ಲಿ ಶ್ರೀಮಂಗಲ ವಲಯ, ಪೊನ್ನಂಪೇಟೆಯಲ್ಲಿ ಕುಮಟರೂ ಗ್ರಾಮದ ಎರವರ ಅಯ್ಯಪ್ಪ, ಬೊಳ್ಳಕ್ಕ, ರಂಗಸ್ವಾಮಿ ಎಂಬುವರ ಮೇಲೆ ಹುಲಿ ದಾಳಿ ನಡೆಸಿದೆ.

ಕೊಡಗಿನ ಪೊನ್ನಂಪೇಟೆ ಸುತ್ತಮುತ್ತ ಗ್ರಾಮಗಳು ನರಭಕ್ಷಕ ಹುಲಿಯ ಭೀತಿಯಲ್ಲಿವೆ. ಶ್ರೀಮಂಗಲ, ಮಂಚಳ್ಳಿ, ತೆರಾಲು, ತಾವಳಗೇರಿ, ಕುಮಟೂರು, ಬಾಡಗಕೇರಿ, ಬೆಳ್ಳೂರು, ನಿಟ್ಟೂರು, ಹುದಿಕೇರಿ ಮತ್ತಿತರ ಗ್ರಾಮಗಳ ಕಾಫಿ ಎಸ್ಟೇಟ್‌ ಸುತ್ತಮುತ್ತ ಹುಲಿ ದಾಳಿ ಭೀತಿ ಆವರಿಸಿದೆ.

Tags: AiyappaAravinda LimbavaliB S YediyurappaCentre for Cellular & Molecular BiologyChief Conservator of ForestD K ShivakumarDR Sandeep Daveforest AuthoritiesForest DepartmentForest Ministerh d kumarswamyK G Bopaiahkilling HumansKodaguMan-Animal ConflictsPlantationPonnampet RangeSiddaramaiahWildlife Activistsಅಯ್ಯಪ್ಪಅರಣ್ಯ ಸಚಿವಅರವಿಂದ ಲಿಂಬಾವಳಿಎಚ್‌ ಡಿ ಕುಮಾರಸ್ವಾಮಿಕೆ ಜಿ ಬೋಪಯ್ಯಕೊಡಗುಡಿ ಕೆ ಶಿವಕುಮಾರ್ನರ ಭಕ್ಷಕ ಹುಲಿಪೊನ್ನಂಪೇಟೆ ಅರಣ್ಯ ವಲಯಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಬಿ ಎಸ್‌ ಯಡಿಯೂರಪ್ಪಮಾನವ-ಪ್ರಾಣಿ ಸಂಘರ್ಷಮುಖ್ಯ ಕಾರ್ಯದರ್ಶಿವನ್ಯಜೀವಿಸಿದ್ದರಾಮಯ್ಯಸೆಂಟರ್‌ ಫಾರ್‌ ಸೆಲ್ಯುಲರ್‌ ಮಾಲಕ್ಯುಲರ್‌ ಬಯಾಲಜಿ
Advertisement Banner
Previous Post

ಆಡಳಿತ ಅವ್ಯವಸ್ಥೆ ಪ್ರಶ್ನಿಸುವುದು ಅಪರಾಧವೇ?; ಅಭಿಯಾನಕ್ಕೆ ಬೆದರಿದ ಅಧಿಕಾರಿಶಾಹಿ

Next Post

ಎಪಿಎಂಸಿ ಕಾಯ್ದೆ; ಸಂತೆಗಳಲ್ಲಿ ಶುದ್ಧ ಕುಡಿಯುವ ನೀರು ಘಟಕ ಸ್ಥಾಪನೆಗೂ ಅಡ್ಡಿ

thefilestack

thefilestack

Next Post

ಎಪಿಎಂಸಿ ಕಾಯ್ದೆ; ಸಂತೆಗಳಲ್ಲಿ ಶುದ್ಧ ಕುಡಿಯುವ ನೀರು ಘಟಕ ಸ್ಥಾಪನೆಗೂ ಅಡ್ಡಿ

Discussion about this post

Recommended

ನಾರಾಯಣಪುರ ಎಡದಂಡೆ ಕಾಲುವೆ; ಯೋಜನಾ ಮೊತ್ತ ಪರಿಷ್ಕರಣೆಯಿಂದ ಬೊಕ್ಕಸಕ್ಕೆ 700 ಕೋಟಿ ಹೊರೆ

3 years ago

671 ಕೋಟಿ ರು.ಮೊತ್ತದ ಯೋಜನೆ ಕಡತ ನಾಶ; ದಾಖಲೆ ನೀಡದೇ ಕಳ್ಳಾಟ, ಕಾರಜೋಳ ಮೌನ

4 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd