the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

ಕೋಲ್ಡ್‌ ಸ್ಟೋರೇಜ್‌ ಕಾಮಗಾರಿ ಪ್ಯಾಕೇಜ್‌ ಟೆಂಡರ್‌ನಲ್ಲಿ ಅಕ್ರಮ; ನಿರ್ದಿಷ್ಟ ಗುತ್ತಿಗೆದಾರರಿಗೆ ಅನುಕೂಲ?

thefilestack by thefilestack
July 1, 2022
in GOVERNANCE
0
0
SHARES
0
VIEWS
Share on FacebookShare on Twitter

ಬೆಂಗಳೂರು; ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕಾಗಿ ಸಿವಿಲ್‌ ಕಾಮಗಾರಿಗಳಿಗಾಗಿ ಟೆಂಡರ್‌ ಪ್ರಕ್ರಿಯೆ ನಡೆಸಿರುವ ಕೃಷಿ ಇಲಾಖೆಯು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೊರಡಿಸಿದ್ದ ಆದೇಶವನ್ನೇ ಉಲ್ಲಂಘಿಸಿದೆ ಎಂಬ ಗುರುತರವಾದ ಆರೋಪ ಕೇಳಿ ಬಂದಿದೆ.

 

ರಾಜ್ಯಮಟ್ಟದ ಕೆಲವೇ ಕೆಲವು ನಿರ್ದಿಷ್ಟ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವ ಭಾಗವಾಗಿಯೇ ಸಚಿವ ಬಿ ಸಿ ಪಾಟೀಲ್‌ ತವರು ಕ್ಷೇತ್ರ ಹಿರೇಕೆರೂರು ಸೇರಿದಂತೆ ವಿವಿಧ ಜಿಲ್ಲೆಗಳನ್ನು ಒಟ್ಟುಗೂಡಿಸಿ ಪ್ಯಾಕೇಜ್‌ಗಳನ್ನು ರೂಪಿಸಿರುವುದರ ಹಿಂದೆ ದೊಡ್ಡಮಟ್ಟದ ಭ್ರಷ್ಟಾಚಾರ ನಡೆದಿದೆ ಎಂಬ ಬಲವಾದ ಆಪಾದನೆ ಕೇಳಿ ಬಂದಿದೆ. ಈ ಸಂಬಂಧ ರಾಜ್ಯಪಾಲರಿಗೆ ದೂರು ಸಲ್ಲಿಕೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲ ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಆಯಾ ಜಿಲ್ಲೆಗೆ ಅಗತ್ಯವಿರುವ ಕಾಮಗಾರಿಗಳಿಗೆ ಅನುಗುಣವಾಗಿ ಆಯಾ ಜಿಲ್ಲೆಗಳಿಗೆ ಸೀಮಿತಗೊಳಿಸಿ ಕಾಮಗಾರಿ ಪ್ಯಾಕೇಜ್‌ಗಳನ್ನು ಮಾಡಬೇಕು ಎಂದು ಮುಖ್ಯಮಂತ್ರಿ ಹೊರಡಿಸಿದ್ದ ಆದೇಶವನ್ನೇ ಉಲ್ಲಂಘಿಸಿರುವ ಕೃಷಿ ಇಲಾಖೆಯು ಸಿವಿಲ್ ಕಾಮಗಾರಿಗಳನ್ನು ನಡೆಸಲು ಕರ್ನಾಟಕ ಗೃಹ ಮಂಡಳಿಗೆ ವಹಿಸಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

ಶೇ. 40ರಷ್ಟು ಕಮಿಷನ್‌ಗೆ ಬೇಡಿಕೆ ಇಡಲಾಗುತ್ತಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘವು ಆರೋಪಿಸಿ ಸಲ್ಲಿಸಿದ್ದ ದೂರಿನ ಕುರಿತು ಪ್ರಧಾನಿ ಕಚೇರಿಯು ವಿವರಣೆ ಕೇಳಿರುವ ಬೆನ್ನಲ್ಲೇ ಕೃಷಿ ಇಲಾಖೆಯು ಸರ್ಕಾರದ ಆದೇಶ ಉಲ್ಲಂಘಿಸಿ ಪ್ಯಾಕೇಜ್‌ ಟೆಂಡರ್‌ ಕರೆದಿರುವುದು ಮುನ್ನೆಲೆಗೆ ಬಂದಿದೆ.

 

ಕೃಷಿ ಇಲಾಖೆಯು ಕರ್ನಾಟಕ ಗೃಹ ಮಂಡಳಿಯ ಮೂಲಕ 79 ಕೋಟಿ ರೂಪಾಯಿಗಳ ವಿವಿಧ ಯೋಜನೆಗಳಿಗೆ ಹಿರೇಕೆರೂರು, ಕೋಡ, ರಟ್ಟೆಹಳ್ಳಿ, ಶಿಗ್ಗಾವ್, ಬನವಾಸಿ, ಕಲ್ಬುರ್ಗಿ, ಕೊಟ್ಟೂರು, ಕೊಪ್ಪಳ, ಧಾರವಾಡ, ಬಾಗಲಕೋಟೆ ಮತ್ತು ಬೆಳಗಾವಿ ಸೇರಿಸಿ ಪ್ಯಾಕೇಜ್ ಮಾಡಿ ಟೆಂಡರ್ ಆಹ್ವಾನಿಸಿದೆ. ಟೆಂಡರ್ ಕರೆಯುವಾಗ ಇಲಾಖೆಯು ವಿವಿಧ ಜಿಲ್ಲೆಗಳನ್ನು ಸೇರಿಸಿ ಪ್ಯಾಕೇಜ್ ಮಾಡಿರುವುದು ಆರ್ಥಿಕ ಇಲಾಖೆ ಹೊರಡಿಸಿದ ನಿರ್ದೇಶನಗಳ ಸ್ಪಷ್ಟ ಉಲ್ಲಂಘನೆಯಾಗಿದೆ ರಾಜ್ಯಪಾಲರಿಗೆ ಸಲ್ಲಿಕೆಕಯಾಗಿರುವ ದೂರಿನಲ್ಲಿ ವಿವರಿಸಲಾಗಿದೆ ಎಂದು ಗೊತ್ತಾಗಿದೆ.

 

ರಾಜ್ಯಪಾಲರಿಗೆ ಸಲ್ಲಿಕೆಯಾಗಿರುವ ದೂರಿನ ಪ್ರತಿ

 

ಪ್ಯಾಕೇಜುಗಳ ವಿವರ

 

ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲೂಕಿನ ಕೋಡ, ರಟ್ಟಹಳ್ಳಿ ಮತ್ತು ಶಿಗ್ಗಾವ್, ಉತ್ತರ ಕನ್ನಡ ಜಿಲ್ಲೆಯ ಬನವಾಸಿ ತಾಲೂಕು, ಕಲ್ಬುರ್ಗಿ ಜಿಲ್ಲೆಯ ಕೊಟ್ಟೂರು, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕು, ಧಾರವಾಡ ಜಿಲ್ಲೆ, ಬಾಗಲಕೋಟೆ ಜಿಲ್ಲೆ, ಬೆಳಗಾವಿಯ ಸವದತ್ತಿ ಸೇರಿ ಒಂದು ಪ್ಯಾಕೇಜ್‌ ಮಾಡಲಾಗಿದೆ.

 

ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ದಾವಣಗೆರೆ ಜಿಲ್ಲೆಯಲ್ಲಿ ಕೋಲ್ಡ್ ಸ್ಟೋರೇಜ್ ಘಟಕದ ನಿರ್ಮಾಣಕ್ಕೆ ಪ್ಯಾಕೇಜ್‌ ರೂಪಿಸಿದ್ದರೆ ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ ಬೆಂಗಳೂರು ನಗರ ಜಿಲ್ಲೆಗಳಲ್ಲಿ ಕೃಷಿ ಕೇಂದ್ರಕ್ಕಾಗಿ ಇಂಟೆಲಿಜೆನ್ಸ್ ನಿರ್ಮಾಣ ಕಾಮಗಾರಿ ಪ್ಯಾಕೇಜ್ ಮಾಡಲಾಗಿದೆ.

 

ಅದೇ ರೀತಿ ಹಾಸನ, ದಕ್ಷಿಣ ಕನ್ನಡ, ಮಡಿಕೇರಿ ಮತ್ತು ಮಂಡ್ಯದಲ್ಲಿ ಸಮಗ್ರ ಕೃಷಿ ವ್ಯವಸ್ಥೆಯ ಉತ್ತೇಜನದ ಉತ್ಕೃಷ್ಟತೆಯ ನಿರ್ಮಾಣ ಮತ್ತು ಮೈಸೂರಿನಲ್ಲಿ ಕೃಷಿ ಕೇಂದ್ರದ ಕೃತಕ ಬುದ್ಧಿಮತ್ತೆ ನಿರ್ಮಾಣ, ಬಾಗಲಕೋಟ, ಗದಗ, ಚಿಕ್ಕೋಡಿ, ವಿಜಯಪುರ, ಉತ್ತರ ಕನ್ನಡ ಮತ್ತು ಹಾವೇರಿಯಲ್ಲಿ ಸಮಗ್ರ ಕೃಷಿ ಪದ್ಧತಿಯ ಉತ್ತೇಜನದ ಉತ್ಕೃಷ್ಟತೆಯ ನಿರ್ಮಾಣ. ಹಾವೇರಿಯಲ್ಲಿ ರೈತರ ವಸತಿ ನಿಲಯ, ಬಯಲು ರಂಗಮಂದಿರ ಮತ್ತು ಕೃಷಿ ವಸ್ತುಸಂಗ್ರಹಾಲಯ ನಿರ್ಮಾಣ ಪ್ಯಾಕೇಜ್‌ ರೂಪಿಸಲಾಗಿದೆ.

 

ವಿಜಯಪುರ, ರಾಯಚೂರು, ಕಲ್ಬುರ್ಗಿಯಲ್ಲಿ ಸಮಗ್ರ ಕೃಷಿ ವ್ಯವಸ್ಥೆಯ ಉತ್ತೇಜನದ ಉತ್ಕೃಷ್ಟತೆಯ ನಿರ್ಮಾಣ ಕಾಮಗಾರಿ ನಡೆಸಲು ಕರ್ನಾಟಕ ಗೃಹ ಮಂಡಳಿ ಮೂಲಕ ಟೆಂಡರ್‌ ಆಹ್ವಾನಿಸಿರುವುದು ಗೊತ್ತಾಗಿದೆ.

 

ಟೆಂಡರ್ ಅಧಿಸೂಚನೆ ಹಾಗೂ ಮಾಡಿರುವ ಕಾಮಗಾರಿ ಪ್ಯಾಕೇಜ್‌ಗಳನ್ನು ರದ್ದುಪಡಿಸಲು ನಿರ್ದೇಶನ ನೀಡುವಂತೆ ಮರಿಲಿಂಗೇಗೌಡ ಮಾಲಿ ಪಾಟೀಲ್‌ ಎಂಬುವರು ರಾಜ್ಯಪಾಲರಿಗೆ ಸಲ್ಲಿಸಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.

 

‘ಇಲಾಖೆಯು ಜಿಲ್ಲಾ ವ್ಯಾಪ್ತಿಯನ್ನು ಮೀರಿ ಪ್ಯಾಕೇಜ್‌ ಮಾಡಿದೆ. ಹಣಕಾಸು ಇಲಾಖೆಯ ಇತ್ತೀಚಿನ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ. ಇದರಿಂದ ತಾಲ್ಲೂಕು ಮಟ್ಟದ ಸಣ್ಣ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ. ರಾಜ್ಯ ಮಟ್ಟದಲ್ಲಿ ಕೆಲವು ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲಿದೆ,’ ಎಂದು ಮರಿಲಿಂಗೇಗೌಡ ಮಾಲಿ ಪಾಟೀಲ್‌ ಅವರು ಆರೋಪಿಸುತ್ತಾರೆ.

 

ಆದರೆ ಇಲಾಖೆ ಅಧಿಕಾರಿಗಳು ‘ಯಾವುದೇ ಪ್ಯಾಕೇಜ್ ಮಾಡಿ ಟೆಂಡರ್ ಕರೆದಿಲ್ಲ. ಕಾಮಗಾರಿಯನ್ನು ಕರ್ನಾಟಕ ಗೃಹ ಮಂಡಳಿಗೆ ವಹಿಸಿದ್ದು, ಯಾವುದೇ ಪ್ಯಾಕೇಜ್ ಮಾಡಿಲ್ಲ,’  ಎಂದು ಸಮರ್ಥಿಸಿಕೊಂಡಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಸಚಿವರಾಗಿದ್ದ ಕೆ ಎಸ್‌ ಈಶ್ವರಪ್ಪ ಅವರು ರಾಜೀನಾಮೆ ನೀಡುವ ಮುನ್ನ ಅಂದಾಜು 6,500 ಕೋಟಿ ರು. ಮೊತ್ತದ ಕಾಮಗಾರಿಗಳನ್ನು ನಡೆಸಲು ಕರೆದಿದ್ದ ಟೆಂಡರ್‌ನಲ್ಲಿಯೂ ಗುರುತರ ಆರೋಪಗಳು ಕೇಳಿ ಬಂದಿದ್ದನ್ನು ಸ್ಮರಿಸಬಹುದು.

Tags: AgriculturalB C PatilBasavaraj Bommaicivil worksContractorsD K ShivakumarEngieeersGovernarGovt Tendersh d kumarswamyHirekeruruKarnataka Housing BoardKHBKTTP ActPackaging TenderSiddaramaiahTaluksThavar Chand GeholetViolationಎಚ್‌ ಡಿ ಕುಮಾರಸ್ವಾಮಿಕರ್ನಾಟಕ ಗೃಹಮಂಡಳಿಕೃಷಿ ಇಲಾಖೆಕೃಷಿ ಯಾಂತ್ರೀಕರಣಕೃಷಿ ವಸ್ತು ಸಂಗ್ರಹಾಲಯಕೃಷಿಗೆ ಉತ್ತೇಜನಗುತ್ತಿಗೆದಾರರಿಗೆ ಲಾಭಗುತ್ತಿಗೆದಾರರುಟೆಂಡರ್‌ ಅಕ್ರಮಡಿ ಕೆ ಶಿವಕುಮಾರ್ಥಾವರ್‌ಚಂದ್‌ ಗೆಹ್ಲೋಟ್‌ನಿರ್ದಿಷ್ಟ ಗುತ್ತಿಗೆದಾರರುಪ್ಯಾಕೇಜಿಂಗ್‌ ಟೆಂಡರ್‌ಬಸವರಾಜ ಬೊಮ್ಮಾಯಿಬಿ ಸಿ ಪಾಟೀಲ್‌ರಾಜ್ಯಪಾಲರುಶೇ.40 ಪರ್ಸೆಂಟ್‌ ಕಮಿಷನ್‌ಸಮಗ್ರ ಕೃಷಿಸಿದ್ದರಾಮಯ್ಯಸಿವಿಲ್‌ ಕಾಮಗಾರಿಹಿರೇಕೆರೂರು ತಾಲೂಕು
Advertisement Banner
Previous Post

ಶೇ.2ರ ಬಡ್ಡಿ ಸಹಾಯಧನ ಸ್ಥಗಿತ; ಕೇಂದ್ರದ ನಿರ್ಧಾರದಿಂದ ರಾಜ್ಯದ ಹೆಗಲಿಗೆ ಕೋಟ್ಯಂತರ ರುಪಾಯಿ ಹೊರೆ

Next Post

ಅನಿಶ್ಚಿತ ಅವಧಿ ಬಂಧನ; 38 ಪ್ರಜೆಗಳ ಬಿಡುಗಡೆಗೆ ಸಿಎಂ ಮೊರೆ ಹೊಕ್ಕ ಶ್ರೀಲಂಕಾ ಡೆಪ್ಯುಟಿ ಹೈ ಕಮಿಷನ್‌

thefilestack

thefilestack

Next Post

ಅನಿಶ್ಚಿತ ಅವಧಿ ಬಂಧನ; 38 ಪ್ರಜೆಗಳ ಬಿಡುಗಡೆಗೆ ಸಿಎಂ ಮೊರೆ ಹೊಕ್ಕ ಶ್ರೀಲಂಕಾ ಡೆಪ್ಯುಟಿ ಹೈ ಕಮಿಷನ್‌

Recommended

495 ಕೋಟಿ ರು ನಷ್ಟ; ಮೂವರು ಐಎಎಸ್‌ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆಗೆ ಆದೇಶ

2 years ago

ಕೋಟಿ ವೆಚ್ಚದಲ್ಲಿ ಸಮೀಕ್ಷೆ; ಗೌಪ್ಯತೆಗೆ ಖಾತ್ರಿ ನೀಡಿದರಷ್ಟೇ ಭೌಗೋಳಿಕ ಸ್ಥಳ, ದಾಖಲೆಗಳ ಸಲ್ಲಿಕೆ, ಪತ್ರ ಮುನ್ನೆಲೆಗೆ

12 months ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd