the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home RTI

ಕೋವಾಕ್ಸಿನ್‌ ಲಸಿಕೆ ಪಡೆದ 7ನೇ ದಿನಕ್ಕೆ ಕಾಲುಬಾವು, ನಂತರ ಮೂತ್ರ ವಿಸರ್ಜನೆ ಸ್ಥಗಿತ; ವರದಿ ಬಹಿರಂಗ

thefilestack by thefilestack
July 16, 2022
in RTI
0
0
SHARES
0
VIEWS
Share on FacebookShare on Twitter

ಬೆಂಗಳೂರು; ಕೋವ್ಯಾಕ್ಸಿನ್‌ ಲಸಿಕೆ ಪಡೆದು 6 ದಿನಗಳವರೆಗೆ ಆರೋಗ್ಯವಾಗಿದ್ದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಎಣ್ಣೆಕೊಪ್ಪ ಗ್ರಾಮದ ಮನುಚಂದ್ರ ಎಂಬ ಯುವಕನಿಗೆ ಏಳನೇ ದಿನಕ್ಕೆ ಕಾಲು ಬಾವು ಕಾಣಿಸಿಕೊಂಡಿತ್ತು. ಇದಾಗಿ 4 ದಿನಗಳ ನಂತರ ಮೂತ್ರ ವಿಸರ್ಜನೆಯೂ ನಿಂತಿತ್ತು ಎಂದು ಆರೋಗ್ಯ ಮತ್ತು ಕುಟುಂಬ ಸೇವೆಗಳ ನಿರ್ದೇಶನಾಲಯದ ಉಪ ನಿರ್ದೇಶಕ (ಲಸಿಕೆ) ವರದಿ ನೀಡಿದ್ದರು.

 

ಲಸಿಕೆಯ ಅಡ್ಡ ಮತ್ತು ವ್ಯತಿರಿಕ್ತ ಪರಿಣಾಮಗಳ ಕುರಿತು ನಿರ್ಣಯ ಕೈಗೊಳ್ಳುವ ಸಂಬಂಧ ರಾಷ್ಟ್ರಮಟ್ಟಕ್ಕೆ ರಾಜ್ಯದ ಪ್ರಕರಣವನ್ನು ಕೊಂಡೊಯ್ದಿರುವ ಬೆನ್ನಲ್ಲೇ ಲಸಿಕಾಕರಣದ ನಂತರ ಸಂಭವಿಸಿರುವ ಅಡ್ಡ ಪರಿಣಾಮ ಕುರಿತು ನೀಡಿರುವ ವರದಿಯು ಮುನ್ನೆಲೆಗೆ ಬಂದಿದೆ. ಈ ವರದಿಯನ್ನು 'ದಿ ಫೈಲ್‌' ಆರ್‌ಟಿಐ ಮೂಲಕ ಪಡೆದುಕೊಂಡಿದೆ.

 

ಮುಂದಿನ 75 ದಿನಗಳಲ್ಲಿ ಕರ್ನಾಟಕದಾದ್ಯಂತ 8,000 ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಸುಮಾರು 4.34 ಕೋಟಿ ಅರ್ಹ ಫಲಾನುಭವಿಗಳಿಗೆ ಮುನ್ನೆಚ್ಚರಿಕೆ ಡೋಸ್ ವಿತರಿಸುವ ಯೋಜನೆ ರೂಪಿಸಲಾಗಿದೆ ಮತ್ತು 31.55 ಲಕ್ಷ ಡೋಸ್ ಕೋವ್ಯಾಕ್ಸಿನ್ ಲಸಿಕಾ ದಾಸ್ತಾನು ಹೊಂದಲಾಗಿದೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್‌ ಅವರು ಹೇಳಿಕೆ ನೀಡಿರುವ ಬೆನ್ನಲ್ಲೇ ಲಸಿಕಾಕರಣದ ನಂತರ ಸಂಭವಿಸಿರುವ ಅಡ್ಡ ಪರಿಣಾಮದ ಕುರಿತು ಸಲ್ಲಿಕೆಯಾಗಿರುವ ವರದಿಯು ಮಹತ್ವ ಪಡೆದುಕೊಂಡಿದೆ.

 

ಕೈಕಾಲು ಸ್ವಾಧೀನ ಕಳೆದುಕೊಂಡಿರುವುದಕ್ಕೆ ಕೋವ್ಯಾಕ್ಸಿನ್‌ ಲಸಿಕೆ ಪಡೆದಿರುವುದು ಕಾರಣವೇ ಅಥವಾ ಇಲ್ಲವೇ ಎಂಬುದನ್ನು ರಾಷ್ಟ್ರಮಟ್ಟದಲ್ಲಿ ಚರ್ಚಿಸಿ ನಿರ್ಣಯಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನಿರ್ಧರಿಸಿತ್ತು.

 

ರಾಜ್ಯದ ಬೆಂಗಳೂರು ನಗರ ಸೇರಿದಂತೆ ವಿವಿಧೆಡೆ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿರುವ ಹೊತ್ತಿನಲ್ಲಿಯೇ ಲಸಿಕೆಯ ಅಡ್ಡ ಮತ್ತು ವ್ಯತಿರಿಕ್ತ ಪರಿಣಾಮಗಳ ಕುರಿತು ನಿರ್ಣಯ ಕೈಗೊಳ್ಳುವ ಸಂಬಂಧ ರಾಷ್ಟ್ರಮಟ್ಟಕ್ಕೆ ರಾಜ್ಯದ ಪ್ರಕರಣವನ್ನು ಕೊಂಡೊಯ್ದಿರುವುದು ಮುನ್ನೆಲೆಗೆ ಬಂದಿದೆ.

 

ಕೋವ್ಯಾಕ್ಸಿನ್‌ ಲಸಿಕೆ ಪಡೆದ ನಂತರ ಕೈ ಕಾಲು ಸ್ವಾಧೀನ ಕಳೆದುಕೊಂಡಿರುವ ಪ್ರಕರಣದ ಕುರಿತು ಈಗಾಗಲೇ ಚರ್ಚಿಸಿರುವ ಜಿಲ್ಲಾ ಮತ್ತು ರಾಜ್ಯಮಟ್ಟದ ಎಇಎಫ್‌ಐ ಸಮಿತಿ ಸಭೆಯು ಅಂತಿಮವಾಗಿ ರಾಷ್ಟ್ರಮಟ್ಟದಲ್ಲಿ ಚರ್ಚಿಸಿ ನಿರ್ಣಯಿಸಲು ನಿಲುವು ತಳೆದಿದೆ. ಈ ಕುರಿತು ಟಿಪ್ಪಣಿ ಹಾಳೆಯೊಂದು 'ದಿ ಫೈಲ್‌'ಗೆ ಲಭ್ಯವಾಗಿದೆ.

 

ಕೋವ್ಯಾಕ್ಸಿನ್‌ ಲಸಿಕೆ ಪಡೆದ ನಂತರ ಕೈ ಕಾಲು ಸ್ವಾಧೀನ ಕಳೆದುಕೊಂಡಿರುವ ಪ್ರಕರಣದ ಕುರಿತು ಈಗಾಗಲೇ ಚರ್ಚಿಸಿರುವ ಜಿಲ್ಲಾ ಮತ್ತು ರಾಜ್ಯಮಟ್ಟದ ಎಇಎಫ್‌ಐ ಸಮಿತಿ ಸಭೆಯು ಅಂತಿಮವಾಗಿ ರಾಷ್ಟ್ರಮಟ್ಟದಲ್ಲಿ ಚರ್ಚಿಸಿ ನಿರ್ಣಯಿಸಲು ನಿಲುವು ತಳೆದಿತ್ತು. ಈ ನಡುವೆ ಬಹಿರಂಗವಾಗಿರುವ ವರದಿಯು ಲಸಿಕೆ ಅಡ್ಡ ಪರಿಣಾಮಗಳ ಕುರಿತು ವೈದ್ಯಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು 'ದಿ ಫೈಲ್‌' ಮತ್ತು ವಾರ್ತಾಭಾರತಿ 2022ರ ಜೂನ್‌ 8ರಂದು ವರದಿ ಪ್ರಕಟಿಸಿತ್ತು.

https://stack.thefile.in/2022/06/governance/12169/

 

ವರದಿಯ ಪೂರ್ಣ ವಿವರ

 

ಸಾಗರ ತಾಲೂಕು ಆವಿನಹಳ್ಳಿಯ ಜೋಸೆಫ್‌ ನಗರದಲ್ಲಿನ ಅಟಲ್‌ ಬಿಹಾರಿ ವಾಜೇಪೇಯಿ ವಸತಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮನುಚಂದ್ರ (16) ಎಂಬಾತನಿಗೆ 2022ರ ಜನವರಿ 12ರಂದು ಕೋವಾಕ್ಸಿನ್‌ ಲಸಿಕೆ ನೀಡಲಾಗಿತ್ತು. ಆ ದಿನದಂದು ಕೋವ್ಯಾಕ್ಸಿನ್‌ (ಬ್ಯಾಚ್‌ನಂ;37ಎಚ್‌21153ಎ, ಎಫ್‌ಎಫ್‌ಜಿ 11/2021. EXP DATE 10/2022) ಲಸಿಕೆ ನೀಡಲಾಗಿತ್ತು. ಇದೇ ಲಸಿಕೆಯನ್ನು 84 ಮಕ್ಕಳಿಗೂ ನೀಡಲಾಗಿತ್ತು. ಮನುಚಂದ್ರ ಅವರನ್ನು ಹೊರತುಪಡಿಸಿ ಉಳಿದ 83 ಮಕ್ಕಳು ಆರೋಗ್ಯದಿಂದಿರುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

 

ಲಸಿಕೆ ಪಡೆದ 6 ದಿನಗಳ ಕಾಲ ಮನುಚಂದ್ರ ಅವರು ಯಾವುದೇ ರೋಗ ಲಕ್ಷಣಗಳು/ಅಡ್ಡಪರಿಣಾಮಗಳು ಇಲ್ಲದೇ ಆರೋಗ್ಯವಾಗಿದ್ದರು. 2022ರ ಜನವರಿ 18ರಂದು ಇವರಿಗೆ ಕಾಲು ಭಾವು ಕಾಣಿಸಿಕೊಂಡಿದ್ದು, ಸಾಗರ ಉಪ ವಿಭಾಗ ಆಸ್ಪತ್ರೆಯಲ್ಲಿ ಹೊರವಿಭಾಗ ರೋಗಿಯಾಗಿ ಚಿಕಿತ್ಸೆ ಪಡೆದಿದ್ದರು. 2022ರ ಜನವರಿ 22ರಂದು ಮೂತ್ರ ವಿಸರ್ಜನೆ ನಿಂತಿದ್ದರಿಂದ ಪುನಃ ಸಾಗರ ಉಪ ವಿಭಾಗ ಆಸ್ಪತ್ರೆಯಲ್ಲಿ ಒಳ ವಿಭಾಗ ರೋಗಿಯಾಗಿ ದಾಖಲಾಗಿದ್ದರು. ದಾಖಲಾದ ಸಮಯದಲ್ಲಿ ಮನುಚಂದ್ರ ಬಿಪಿ 123/60mmhg ಮತ್ತು ರಕ್ತ ಪರೀಕ್ಷೆ ವರದಿ ಹಾಗೂ ಇತರ ಪರೀಕ್ಷೆಗಳ ರಿಪೋರ್ಟ್‌ ನಾರ್ಮಲ್‌ ಇತ್ತು. ಅಲ್ಲದೆ ಜೀವನಿರೋಧಕ, ಐವಿ ಫ್ಲ್ಯೂಡ್ಸ್‌ನಿಂದ ಚಿಕಿತ್ಸೆ ನೀಡಲಾಗಿತ್ತು ಎಂದು ವರದಿಯಲ್ಲಿ ವಿವರಿಸಲಾಗಿದೆ.

 

 

ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ನೀಡಿರುವ ವರದಿಯ ಪ್ರತಿ

 

2022ರ ಜನವರಿ 23ರಂದು ಪೋಷಕರು ಮನುಚಂದ್ರ ಅವರನ್ನು ವೈದ್ಯಕೀಯ ಸಲಹೆ ವಿರುದ್ಧ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಸ್ವಂತ ಊರಾದ ಎಣ್ಣೆಕೊಪ್ಪಕ್ಕೆಗೆ ಕರೆದೊಯ್ದಿದ್ದರು. ಆ ನಂತರ ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿದ್ದರಲ್ಲದೆ ಕಿಡ್ನಿ ಸಮಸ್ಯೆ ಇದೆ ಎಂದು ವೈದ್ಯರು ಪೋಷಕರಿಗೆ ತಿಳಿಸಿದ್ದರು. ವೈದ್ಯರ ಸೂಚನೆ ಮೇರೆಗೆ ಮೆಗ್ಗಾನ್‌ ಆಸ್ಪತ್ರೆಯಲ್ಲಿ 2022ರ ಜನವರಿ 24ರಂದು ದಾಖಲಾಗಿ, ಆ ನಂತರ ನಂಜಪ್ಪ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು ಎಂದು ವರದಿಯಲ್ಲಿ ಚಿಕಿತ್ಸೆ ವಿವರಗಳ ಮಾಹಿತಿ ಒದಗಿಸಿದ್ದಾರೆ.

 

ನಂಜಪ್ಪ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ಕಾಲಿನ ಬಾವಿನ ಜತೆಯಲ್ಲಿ ದೇಹದ ಇತರೆ ಭಾಗಗಳು ಬಾವು ಬಂದಿದೆ ಮತ್ತು ಇತರೆ ವೈಟಲ್ಸ್‌ ಆದ ಬಿ ಪಿ , ಪಲ್ಸ್‌ ರೇಟ್‌, ಸ್ಯಾಚುರೇಷನ್‌, ನಾರ್ಮಲ್‌ ಇದೆ ಎಂದು ಆಸ್ಪತ್ರೆಯ ವರದಿಯಲ್ಲಿ ದಾಖಲಾಗಿದೆ. ಆ ನಂತರ ಮನುಚಂದ್ರ ಅವರಿಗೆ ಕೋವಿಡ್‌ 19 ಸೋಂಕು ದೃಢಪಟ್ಟಿತ್ತು. ಆದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಇವರನ್ನು ಮೆಗ್ಘಾನ್‌ ಬೋಧನಾ ಜಿಲ್ಲಾಸ್ಪತ್ರೆಗೆ ಶಿಫಾರಸ್ಸು ಮಾಡಲಾಗಿತ್ತು. ಆದರೆ ಅವರ ತಂದೆ, ತಾಯಿ ಇಂದಿರಾಗಾಂಧಿ ಸರ್ಕಾರಿ ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರಲ್ಲದೆ ಅಲ್ಲಿ ಒಳ ರೋಗಿಯಾಗಿ ದಾಖಲು ಮಾಡಿದ್ದರು ಎಂಬ ಮಾಹಿತಿ ವರದಿಯಿಂದ ತಿಳಿದು ಬಂದಿದೆ.

 

2022ರ ಫೆ.14ರಂದು ಜಿಲ್ಲಾ ಎಎಎಫ್‌ಐ ಸಮಿತಿಯು ಸದಸ್ಯರೊಂದಿಗೆ ಈ ಕುರಿತು ಸಭೆ ನಡೆಲಾಗಿತ್ತು. ಲಭ್ಯವಿದ್ದ ಎಲ್ಲಾ ದಾಖಲೆಗಳನ್ನು ಪರಿಸೀಲಿಸಿದ ನಂತರ ಮನುಚಂದ್ರ ಅವರಲ್ಲಿ ಅಕ್ಯೂಟ್‌ ರೆನಲ್‌ ಫೈಲ್ಯೂರ್‌/ನೆಫ್ರೋಟಿಕ್‌ ಸಿಂಡ್ರೋಮ್‌ ರೋಗ ಲಕ್ಷಣಗಳು ಕಂಡುಬಂದಿದೆ ಎಂದು ತೀರ್ಮಾನ ಮಾಡಲಾಗಿತ್ತು ಎಂಬುದು ವರದಿಯಿಂದ ಗೊತ್ತಾಗಿದೆ.

 

‘ಲಸಿಕಾಕರಣದ ನಂತರ ಯಾವುದೇ ತೀವ್ರ ಮತ್ತು ಗಂಭೀರ ಎಇಎಫ್‌ಐ ಪ್ರಕರಣಗಳು ವರದಿಯಾದ ತಕ್ಷಣವೇ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿ ಜಿಲ್ಲಾಮಟ್ಟದ ಎಇಎಫ್‌ಐ ಸಮಿತಿ ಸಭೆ ನಡೆಸಬೇಕು ಮತ್ತು ಸಂಬಂಧಪಟ್ಟ ವರದಿಯನ್ನು ರಾಜ್ಯಮಟ್ಟಕ್ಕೆ ಸಲ್ಲಿಸಬೇಕು,’ ಎಂದು ಸೂಚಿಸಲಾಗಿತ್ತು ಎಂಬುದು ತಿಳಿದು ಬಂದಿದೆ.

 

 

ಈ ಪ್ರಕರಣದ ಕುರಿತು ಜಿಲ್ಲಾ ಎಇಎಫ್‌ಐ ಸಭೆಯಲ್ಲಿ Acute Ischmemic Stroke ಎಂದು ನಿರ್ಣಯಿಸಿದ ಹಿನ್ನೆಲೆಯಲ್ಲಿ ಚರ್ಚಿಸಿ ನಂತರ ರಾಜ್ಯಮಟ್ಟದ ಎಇಎಫ್‌ಐ ಸಮಿತಿ ಸಭೆ ನಡೆಸಿತ್ತು. ಸಮಿತಿಯು ಈ ಪ್ರಕರಣವನ್ನು Acute Ischmemic Stroke Secondary to 1) Prothrombotic state inheritable , 2) Vasculitis with Anemia ಎಂಬ ರೋಗ ನಿರ್ಣಯವನ್ನಾಧರಿಸಿ B1, C (B-1Temporal relationship is consistent but there is insufficient definitive evidence for vaccine causing event (may be new Vaccine lilnked event) 3) coincidental-underlying or emerging condition or conditions caused by exposure to something other than vaccine ಎಂದು ಎಇಎಫ್‌ಐ ವರ್ಗಿಕರಿಸಿತ್ತು.

 

‘ಈ ಪ್ರಕರಣವನ್ನು ರಾಷ್ಟ್ರಮಟ್ಟದಲ್ಲಿ ಚರ್ಚಿಸಿ ನಿರ್ಣಯಿಸಲಾಗುವುದು. ಆದ್ದರಿಂದ ಲಭ್ಯವಿರುವ ಮಾಹಿತಿಯ ಅನ್ವಯ ಪ್ರಕರಣದ ಪ್ರಾಥಮಿಕ ವರದಿ ಸಲ್ಲಿಸಿದೆ. ರಾಷ್ಟ್ರಮಟ್ಟದಿಂದ ಅಂತಿಮ ನಿರ್ಣಯ ಬಂದ ನಂತರ ಅಂತಿಮ ವರದಿ ಸಲ್ಲಿಸಲಾಗುವುದು,’ ಎಂದು ತಿಳಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

Tags: Basavaraj BommaiCovaxinCovid-19CovishieldD K Shivakumardr k sudhakarh d kumarswamyhealth departmentShimogaShivamoggaSiddaramaiahSide EffectSorabavaccineಅಡ್ಡ ಪರಿಣಾಮಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಇಂದಿರಾಗಾಂಧಿ ಸರ್ಕಾರಿ ಮಕ್ಕಳ ಆಸ್ಪತ್ರೆಉಚಿತ ಲಸಿಕೆ ಅಭಿಯಾನಉಪ ವಿಭಾಗ ಆಸ್ಪತ್ರೆಎಇಎಫ್‌ಐ ಸಮಿತಿಎಚ್‌ ಡಿ ಕುಮಾರಸ್ವಾಮಿಎಣ್ಣೆಕೊಪ್ಪಕಾಲುಬಾವುಕೈಕಾಲುಸ್ವಾಧೀನ ಕಳೆದುಕೊಂಡ ಯುವಕಕೋವಾಕ್ಸಿನ್‌ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಕೋವಿಶೀಲ್ಡ್‌ಡಿ ಕೆ ಶಿವಕುಮಾರ್ಬಸವರಾಜ ಬೊಮ್ಮಾಯಿಮನುಚಂದ್ರಮೂತ್ರ ವಿಸರ್ಜನೆ ಸ್ಥಗಿತಲಸಿಕಾಕರಣ ಅಭಿಯಾನಲಸಿಕೆವ್ಯತಿರಿಕ್ತ ಪರಿಣಾಮವ್ಯಾಕ್ಸಿನ್‌ಶಿವಮೊಗ್ಗಸಾಗರ ಉಪ ವಿಭಾಗಸಿದ್ದರಾಮಯ್ಯಸೊರಬ
Advertisement Banner
Previous Post

ರಾಜ್ಯದ ಎಲ್ಲಾ ಶಾಲಾ ಮಕ್ಕಳಿಗೆ 100 ದಿನಗಳವರೆಗೆ ಮೊಟ್ಟೆ ವಿತರಣೆಗಿಲ್ಲ ಸಮ್ಮತಿ; 46 ದಿನಕ್ಕಷ್ಟೇ ಅನುಮತಿ

Next Post

ಪಿಡಬ್ಲ್ಯೂಡಿ ಹೊರತುಪಡಿಸಿ ಸಚಿವಾಲಯದ ಕಚೇರಿಗಳಲ್ಲಿ ಅಳವಡಿಕೆಯಾಗದ ಸಿಸಿಟಿವಿ!

thefilestack

thefilestack

Next Post

ಪಿಡಬ್ಲ್ಯೂಡಿ ಹೊರತುಪಡಿಸಿ ಸಚಿವಾಲಯದ ಕಚೇರಿಗಳಲ್ಲಿ ಅಳವಡಿಕೆಯಾಗದ ಸಿಸಿಟಿವಿ!

Recommended

ಈಗಲ್ಟನ್‌ ಗಾಲ್ಫ್‌ ರೆಸಾರ್ಟ್‌ ಪ್ರಕರಣ; ಚರ್ಚೆಗೆ ಕೈಗೆತ್ತಿಕೊಂಡ ದಿನವೇ ಭರವಸೆ ಮುಕ್ತಾಯಗೊಳಿಸಿದ್ದ ಸಮಿತಿ

4 years ago

ಪ್ರಯಾಣ ದಿನಚರಿಯೂ ಇಲ್ಲ, ಹಾಜರಾತಿ ಪತ್ರವೂ ಇಲ್ಲ; ಪ್ರೌಢಶಿಕ್ಷಣ ಮಂಡಳಿಯ ‘ಬಿಲ್ವಿದ್ಯೆ’ ಬಹಿರಂಗ

6 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd