the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

ಕೋವಿಡ್‌ ಜಾಹೀರಾತು; 1. 60 ಕೋಟಿ ವೆಚ್ಚದಲ್ಲಿ ಹೊಸದಿಗಂತಕ್ಕೆ ಸಿಂಹಪಾಲು

thefilestack by thefilestack
September 1, 2021
in GOVERNANCE
0
0
SHARES
1
VIEWS
Share on FacebookShare on Twitter

ಬೆಂಗಳೂರು; ಕೋವಿಡ್‌ ನಿಯಂತ್ರಣಕ್ಕೆ ಸರ್ಕಾರ ಹಮ್ಮಿಕೊಂಡಿರುವ ಯೋಜನೆ, ಕಾರ್ಯಕ್ರಮಗಳ ಸಮಗ್ರ ಚಿತ್ರಣವನ್ನು ಬಿಂಬಿಸುವ ನಾಲ್ಕು ಪುಟಗಳ ಪ್ರಾಯೋಜಿತ ಪುರವಣಿಗಾಗಿ 2020ರಲ್ಲಿ ಒಟ್ಟು 1.60 ಕೋಟಿ ರು.ಗಳನ್ನು ವೆಚ್ಚ ಮಾಡಿದೆ. ಈ ಪೈಕಿ ಹೊಸ ದಿಗಂತ ಪತ್ರಿಕೆ ಸಿಂಹಪಾಲು ಪಡೆದಿದ್ದು, ಉಳಿದೆಲ್ಲ ಪತ್ರಿಕೆಗಳಿಗಿಂತ ಅತಿ ಹೆಚ್ಚಿನ ಮೊತ್ತದ ಜಾಹೀರಾತು ನೀಡಿರುವುದು ಗೊತ್ತಾಗಿದೆ.

ಈ ಪ್ರಾಯೋಜಿತ ಪುರವಣಿಗಳು 2020ರ ಜುಲೈ 25ರಿಂದ ಜುಲೈ 27ರ ಅವಧಿಯಲ್ಲಿ ಪ್ರಕಟಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕಾರ್ಯಾದೇಶ ನೀಡಿತ್ತು. ಈ ಅವಧಿಯಲ್ಲಿ ಸರ್ಕಾರದ ಅಂಗೀಕೃತ ಏಜೆನ್ಸಿಗಳಿಗೆ ಜಾಹೀರಾತು ಬಿಡುಗಡೆ ಮಾಡದ ಸರ್ಕಾರವು ನೇರವಾಗಿ ಪತ್ರಿಕೆಗಳಿಗೆ ಕಾರ್ಯಾದೇಶ ನೀಡಿತ್ತು ಎಂದು ತಿಳಿದು ಬಂದಿದೆ.

ವೆಚ್ಚದ ವಿವರ

ವಿ ಆರ್‌ ಎಲ್‌ ಮೀಡಿಯಾ ಪ್ರೈವೈಟ್‌ ಲಿಮಿಟೆಡ್‌ (ವಿಜಯವಾಣಿ) – 19, 73, 915 ರು.

ಮೆಟ್ರೋಪಾಲಿಟಿನ್‌ ಮೀಡಿಯಾ ಕಂಪನಿ ಲಿಮಿಟೆಡ್‌ (ವಿಜಯಕರ್ನಾಟಕ ) 13, 36, 474 ರು

ದಿ ಪ್ರಿಂಟರ್ಸ್ (ಮೈಸೂರು) ಪ್ರೈ ಲಿ (ಪ್ರಜಾವಾಣಿ) – 14, 85, 043 ರು.

ಮಣಿಪಾಲ್‌ ಮೀಡಿಯಾ ನೆಟ್‌ವರ್ಕ್‌ ಲಿಮಿಟೆಡ್‌ – 9, 68, 675 ರು.

ಕನ್ನಡ ಪ್ರಭ ಪಬ್ಲಿಕೇಷನ್ಸ್‌ ಲಿಮಿಟೆಡ್‌ (ಕನ್ನಡ ಪ್ರಭ) 7, 91, 280 ರು.

ಲೋಕ ಶಿಕ್ಷಣ ಟ್ರಸ್ಟ್‌, ಬೆಂಗಳೂರು (ಸಂಯುಕ್ತ ಕರ್ನಾಟಕ) 8, 23, 329 ರು.

ಹೊಸ ದಿಗಂತ ಕನ್ನಡ ಡೈಲಿ (ಹೊಸ ದಿಗಂತ) 23, 73, 840 ರು.

ವಿಶ್ವವಾಣಿ ಕನ್ನಡ ದಿನಪತ್ರಿಕೆ – 7, 91, 280 ರು.

ವಾರ್ತಾ ಭಾರತಿ ಕನ್ನಡ ದಿನ ಪತ್ರಿಕೆ – 2, 19, 870 ರು.

ಬೆನೆಟ್‌ ಅಂಡ್‌ ಕೋಲ್ಮನ್‌ ಕಂಪನಿ ಲಿಮಿಟೆಡ್‌ – 15, 21, 589 ರು.

ದಿ ಪ್ರಿಂಟರ್ಸ್ (ಮೈಸೂರು ) ಪ್ರೈ ಲಿ (ಡೆಕ್ಕನ್‌ ಹೆರಾಲ್ಡ್‌) – 7, 87, 878 ರು.

ದಿ ಪಬ್ಲಿಷಿಂಗ್‌ ಪ್ರೈವೈಟ್‌ ಲಿಮಿಟೆಡ್‌ ( ದಿ ಹಿಂದೂ) 9, 03, 876 ರು.

ಎಕ್ಸ್‌ಪ್ರೆಸ್‌ ಪಬ್ಲಿಕೇಷನ್ಸ್‌ (ಮಧುರೈ) ಪ್ರೈ ಲಿ (ಇಂಡಿಯನ್‌ ಎಕ್ಸ್‌ಪ್ರೆಸ್‌ ) – 4, 73, 760 ರು.

ಕರ್ನಾಟಕ ನ್ಯೂಸ್‌ ಪ್ಲಬಿಕೇಷನ್ಸ್‌ ಪ್ರೈ ಲಿ (ಸಂಜೆವಾಣಿ) – 3, 72, 960 ರು.

ಈ ಸಂಜೆ – 3, 72, 960 ರು.

ಆಂದೋಲನ ಪ್ರಿಂಟರ್ಸ್‌ ಪಬ್ಲಿಷರ್ಸ್ ಮೈಸೂರು – 3, 72, 960 ರು.

ಅಕಾಡೆಮಿ ನ್ಯೂಸ್‌ ಪೇಪರ್ರ್ಸ್ ಪ್ರೈವೈಟ್‌ ಲಿ (ಮೈಸೂರು ಮಿತ್ರ) – 3, 72, 960 ರು.

ಅಕಾಡೆಮಿ ನ್ಯೂಸ್‌ ಪೇಪರ್ರ್ಸ್ ಪ್ರೈ ಲಿ (ಸ್ಟಾರ್‌ ಆಫ್‌ ಮೈಸೂರ್‌) – 1, 14, 620 ರು.

ರಾಜ್ಯ ಬಿಜೆಪಿ ಸರ್ಕಾರವು ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬಕ್ಕೆ ನೀಡಿದ್ದ ಪತ್ರಿಕೆಗಳ ಪ್ರಾಯೋಜಿತ ಪುರವಣಿಗಳಿಗೆ 44.85 ಲಕ್ಷ ರು.ಗಳನ್ನು ವೆಚ್ಚ ಮಾಡಿದ್ದರು. ಅದೇ ರೀತಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕಾರ್ಯಕ್ರಮಗಳ ಜಾಹೀರಾತಿಗೆ 89 ಲಕ್ಷ ರು. ಖರ್ಚು ಮಾಡಿರುವುದನ್ನು ಸ್ಮರಿಸಬಹುದು.

ಅತಿಥಿ ಉಪನ್ಯಾಸಕರಿಗೆ ಗೌರವ ಸಂಭಾವನೆ, ಆಟೋ ಚಾಲಕರು, ತರಕಾರಿ, ಹೂ ಬೆಳೆಗಾರರು, ನೇಕಾರರು, ಸವಿತಾ ಸಮಾಜ, ವಲಸೆ ಕಟ್ಟಡ ಕಾರ್ಮಿಕರು ಸೇರಿದಂತೆ ಇನ್ನಿತರರಿಗೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ನೀಡದ ಸರ್ಕಾರ ಜಾಹೀರಾತಿಗೆ ಕೋಟ್ಯಂತರ ರುಪಾಯಿ ವೆಚ್ಚ ಮಾಡುತ್ತಿರುವುದು ಸಾರ್ವಜನಿಕ ಟೀಕೆಗೆ ಗುರಿಯಾಗಿದೆ.

Tags: AdvertisementsAndolanaAndolanaB S YediyurappaBasavaraj BommaiCovid 19Deccan HearldDr P S HarshaEE SanjeHosa DigantaIndian ExpressInformation DepartmentPrajavaniSanje VaaniSiddaramaiahStar Of MysoreTimes Of IndiaVaartha BharatiVishwa Vaniಆಂದೋಲನಇಂಡಿಯನ್‌ ಎಕ್ಸ್‌ಪ್ರೆಸ್‌ಈ ಸಂಜೆಕೋವಿಡ್‌ 19ಜಾಹೀರಾತುಟೈಮ್ಸ್‌ ಆಫ್‌ ಇಂಡಿಯಾಡಾ ಪಿ ಎಸ್‌ ಹರ್ಷಡೆಕ್ಕನ್ ಹೆರಾಲ್ಡ್‌ಪ್ರಜಾವಾಣಿಬಸವರಾಜ ಬೊಮ್ಮಾಯಿಬಿ ಎಸ್‌ ಯಡಿಯೂರಪ್ಪವಾರ್ತಾ ಭಾರತಿವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆವಿಶ್ವವಾಣಿಸಂಜೆವಾಣಿಸಿದ್ದರಾಮಯ್ಯಸ್ಟಾರ್‌ ಆಫ್‌ ಮೈಸೂರ್‌ಹೊಸ ದಿಗಂತ
Advertisement Banner
Previous Post

ಅಹಿತಕರ ಘಟನೆ; ಕಾರ್ಯದರ್ಶಿ ಕಾರ್ಯನಿರ್ವಹಣೆಗೆ ನಿರ್ಬಂಧಿಸಲಿಲ್ಲ, ಇಲಾಖೆ ವಿಚಾರಣೆಯೂ ನಡೆದಿಲ್ಲ

Next Post

ಬಿಡಿಗಾಸೂ ನೀಡದ ಕೇಂದ್ರದ ಧೋರಣೆ ಕುರಿತು ‘ದಿ ಫೈಲ್‌’ ವರದಿ ವಿಸ್ತರಿಸಿದ ಪ್ರಜಾವಾಣಿ

thefilestack

thefilestack

Next Post

ಬಿಡಿಗಾಸೂ ನೀಡದ ಕೇಂದ್ರದ ಧೋರಣೆ ಕುರಿತು 'ದಿ ಫೈಲ್‌' ವರದಿ ವಿಸ್ತರಿಸಿದ ಪ್ರಜಾವಾಣಿ

Discussion about this post

Recommended

21,767 ವಕ್ಫ್‌ ಆಸ್ತಿಗಳ ಖಾತೆ ಬದಲಾವಣೆ; 7 ತಿಂಗಳ ಹಿಂದೆಯೇ ಕಂದಾಯ ಇಲಾಖೆಗೆ ಸೂಚನೆ, ಪತ್ರ ಬಹಿರಂಗ

1 year ago

ರೋಗಗ್ರಸ್ಥ ವಿದ್ಯುತ್ ವಲಯದ ಸ್ಥಿತಿ ಮತ್ತಷ್ಟು ಉಲ್ಬಣಕ್ಕೆ ಕಾರಣವಾಗಲಿದೆಯೇ ಗೃಹ ಜ್ಯೋತಿ?

3 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd