the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

ಜಾರಕಿಹೊಳಿ ಸೋದರರಿಗೆ ‘ಸಾಹುಕಾರ’ ಪದ ಬಳಕೆ; ಸುದ್ದಿ ವಾಹಿನಿಗಳಿಗೆ ನೋಟೀಸ್‌

thefilestack by thefilestack
March 19, 2021
in GOVERNANCE
0
0
SHARES
1
VIEWS
Share on FacebookShare on Twitter

ಬೆಂಗಳೂರು; ಸಚಿವರಾಗಿದ್ದ ರಮೇಶ್‌ ಜಾರಕಿಹೊಳಿ ಅವರು ಇದ್ದಾರೆ ಎನ್ನಲಾದ ಸಿ ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಸಾಹುಕಾರ’, ಗೋಕಾಕ ಸಾಹುಕಾರ’, ‘ಬೆಳಗಾವಿ ಸಾಹುಕಾರ’ ಎಂಬ ಶೀರ್ಷಿಕೆಗಳಲ್ಲಿ ಕಾರ್ಯಕ್ರಮ, ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವ ಸುದ್ದಿವಾಹಿನಿಗಳಿಗೆ ನೋಟೀಸ್‌ ಜಾರಿಯಾಗಿದೆ.

ಬೆಳಗಾವಿಯ ಸಂತೋಷ ಸಿದ್ದಯ್ಯಾ ಪೂಜಾರಿ, ಕೆದಾರಿ ರಾಮಪ್ಪ ಪವಾರ, ಮಹ್ಮದ್‌ ಫಾರುಕ ಅಬ್ದುಲ್‌ ರೆಹಮಾನ್‌, ಪೀರಜಾದೆ, ಬಾಬು ಹಸನಸಾಬ ಮುಲ್ಲಾ ಎಂಬುವರ ಪರವಾಗಿ ವಕೀಲ ಸಿ ಬಿ ಗಿಡ್ಡವರ ಎಂಬುವರು ಏಷ್ಯಾನೆಟ್‌ ಸುವರ್ಣ ನ್ಯೂಸ್‌, ನ್ಯೂಸ್‌ 18, ಟಿ ವಿ 9, ದಿಗ್ವಿಜಯ, ಪ್ರಜಾ, ಪವರ್‌, ಟಿವಿ 5, ನ್ಯೂಸ್‌ ಫಸ್ಟ್‌ ಸೇರಿದಂತೆ ಹಲವು ಸುದ್ದಿವಾಹಿನಿಗಳಿಗೆ ನೋಟೀಸ್‌ ಜಾರಿಗೊಳಿಸಿದ್ದಾರೆ. ಇದರ ಪ್ರತಿ ‘ದಿ ಫೈಲ್‌’ ಲಭ್ಯವಾಗಿದೆ.

ನೋಟೀಸ್‌ನಲ್ಲೇನಿದೆ?

‘ರಮೇಶ್‌ ಜಾರಕಿಹೊಳಿ, ಸತೀಶ್‌ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಅವರ ಕುರಿತು ಸುದ್ದಿಗಳನ್ನು ಬಿತ್ತರಿಸುವ ಸಂದರ್ಭದಲ್ಲಿ ಸಾಹುಕಾರ, ಗೋಕಾಕ ಸಾಹುಕಾರ, ಬೆಳಗಾವಿ ಸಾಹುಕಾರ ಎಂದು ಸಂಬೋಧಿಸುತ್ತಿರುವುದು ನಮ್ಮ ಮನಸ್ಸಿಗೆ ತುಂಬಾ ನೋವು ಹಾಗೂ ಖೇದ ಉಂಟು ಮಾಡಿದೆ. ಈ ಪದಗಳನ್ನು ವೈಭವೀಕರಿಸುತ್ತಿರುವುದು ನಮಗೆ ಮಾನಸಿಕ ಹಿಂಸೆ ಹಾಗೂ ತೇಜೋವಧೆ ಆಗುತ್ತಿದೆ,’ ಎಂದು ನೋಟೀಸ್‌ನಲ್ಲಿ ಹೇಳಲಾಗಿದೆ.

‘ಸಾಹುಕಾರ’ ಎಂಬ ಪದದ ಅರ್ಥ ಸಾಲದ ರೂಪದಲ್ಲಿ ಹಣ ನೀಡುವವರು ಅಥವಾ ಸಾಲ ಕೊಡುವವರು ಎಂದು ಅರ್ಥವಾಗುತ್ತದೆ.ಆದ್ದರಿಂದ ಗೋಕಾಕ್‌ನಲ್ಲಿ ಅಥವಾ ಬೆಳಗಾವಿಯಲ್ಲಿ ಅವರು ಯಾರಿಗೂ ಯಾವತ್ತೂ ಸಾಲ ವಗೈರೆ ಕೊಟ್ಟಿಲ್ಲ. ಅವರ ಹತ್ತಿರ ನಾವು ಯಾವುದೇ ಸಾಲ ವಗೈರೆ ಪಡೆದುಕೊಂಡಿಲ್ಲ. ಆದ್ದರಿಂದ ಅವರ ಹೆಸರಿನ ಮುಂದೆ ಸಾಹುಕಾರ, ಗೋಕಾಕ ಸಾಹುಕಾರ, ಬೆಳಗಾವಿ ಸಾಹುಕಾರ ಎಂಬ ಪದಗಳನ್ನು ಬಳಸುವುದು ಅನಾವಶ್ಯಕ,’ ಎಂದೂ ನೋಟೀಸ್‌ನಲ್ಲಿ ವಿವರಿಸಲಾಗಿದೆ.

ನೋಟೀಸ್‌ ತಲುಪಿದ ಕೂಡಲೇ ತಮ್ಮ ಮಾಧ್ಯಮದಲ್ಲಿ ಜಾರಕಿಹೊಳಿ ಸೋದರರನ್ನು ಸಾಹುಕಾರ, ಗೋಕಾಕ ಸಾಹುಕಾರ, ಬೆಳಗಾವಿ ಸಾಹುಕಾರ ಎಂಬ ಪದಗಳನ್ನು ಬಳಸಿದ್ದಲ್ಲಿ ತಮ್ಮ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲು ನನ್ನ ಕಕ್ಷಿದಾರರಿಗೆ ಸಲಹೆ ನೀಡಬೇಕಾಗುತ್ತದೆ ಎಂದು ವಕೀಲ ಸಿ ಬಿ ಗಿಡ್ಡವರ ಅವರು ಮಾಧ್ಯಮಗಳ ಮುಖ್ಯಸ್ಥರಿಗೆ ನೋಟೀಸ್‌ನಲ್ಲಿ ತಿಳಿಸಿದ್ದಾರೆ.

ಜಮೀನ್ದಾರಿ ಪದ್ಧತಿ, ಮಹಲ್ವಾರಿ ಪದ್ಧತಿ, ರೈತವಾರ ಪದ್ಧತಿ, ಸಾಹುಕಾರಿ ಪದ್ಧತಿ, ಜೀತ ಪದ್ಧತಿ ಇವೆಲ್ಲವೂ ರದ್ದಾಗಿ ಎಲ್ಲರೂ ಸಮಾನರು, ಎಲ್ಲರಿಗೂ ಸಮಾನ ಹಕ್ಕು ಲಭಿಸಿದೆ. ಹೀಗಾಗಿ ಎಲ್ಲರನ್ನೂ ಸಮಾನವಾಗಿ ಕಾಣುವುದು ಹಾಗೂ ಎಲ್ಲರನ್ನೂ ಅವರವರ ಹೆಸರಿನಿಂದ ಸಂಬೋಧಿಸುವುದು ಮಾಧ್ಯಮಗಳ ಸಂವಿಧಾನಿಕ ಕರ್ತವ್ಯ. ಆದರೆ ನಿಮ್ಮ ವಾಹಿನಿಯಲ್ಲಿ ಹಲವು ಬಾರಿ ಜಾರಕಿಹೊಳಿ ಸೋದರರನ್ನು ಸಂಬೋಧಿಸುವ ಸಂದರ್ಭದಲ್ಲಿ ಅನಾವಶ್ಯಕವಾಗಿ ಸಾಹುಕಾರ ಎಂದು ವೈಭವೀಕರಿಸಲಾಗುತ್ತಿದೆ. ಇದು ಮಾಧ್ಯಮ ಸಮೂಹಕ್ಕೆ ಶೋಭೆ ತರುವಂತದ್ದಲ್ಲ ಎಂದು ನೋಟೀಸ್‌ನಲ್ಲಿ ಹೇಳಲಾಗಿದೆ.

ಯಾರದ್ದೋ ಪ್ರತಿಷ್ಠೆ ಹೆಚ್ಚಿಸಲು ಇನ್ಯಾರಿಗೋ ಮನ ನೋಯಿಸುವ ರೀತಿಯಲ್ಲಿ ಪದಬಳಕೆ ಮಾಡುವುದು ಹಾಗೂ ವರದಿಗಳನ್ನು, ವಾರ್ತೆಗಳನ್ನು ಬಿತ್ತರಿಸಬಾರದು. ಹಾಗೆಯೇ ಯಾವುದೇ ಪದ ಬಳಕೆ ಮಾಡುವ ಮುನ್ನ ಅವರ ಪೂರ್ವಪರ ಇತಿಹಾಸ ತಿಳಿದುಕೊಂಡು ಸಾಕ್ಷ್ಯಾಧಾರ ಪಡೆದುಕೊಂಡು ಪದ ಪ್ರಯೋಗ ಮಾಡಬೇಕೇ ಹೊರತು ಅದು ಇನ್ನೊಬ್ಬರ ಮನನೋಯಿಸುವ ಕೃತ್ಯ ಆಗಬಾರದು. ಈ ರೀತಿಯಾದಂತಹ ಪದ ಬಳಕೆ ನಮ್ಮ ಕಕ್ಷಿದಾರರ ಸಮೂಹ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ ಎಂದು ನೋಟೀಸ್‌ ಮೂಲಕ ಸುದ್ದಿವಾಹಿನಿಗಳ ಮುಖ್ಯಸ್ಥರನ್ನು ಎಚ್ಚರಿಸಿದೆ.

Tags: Balachandra JarkioliBelagaviC B GiddavaraDigvijaya News ChannelLakhan JarkiholiLegal NoticeNewsFirst ChannelPower TVRamesh JarkioliSahukaraSatish JarkiholiSuvarana TV ChannelTV 9ಗೋಕಾಕ್‌ ಸಾಹುಕಾರಟಿ ವಿ 9ದಿಗ್ವಿಜಯನೋಟೀಸ್‌ನ್ಯೂಸ್‌ ಫಸ್ಟ್‌ಪವರ್‌ ಟಿ ವಿ ಚಾನಲ್‌ಬಾಲಚಂದ್ರ ಜಾರಕಿಹೊಳಿಬೆಳಗಾವಿ ಸಾಹುಕಾರರಮೇಶ್‌ ಜಾರಕಿಹೊಳಿಲಖನ್‌ ಜಾರಕಿಹೊಳಿಸತೀಶ್‌ ಜಾರಕಿಹೊಳಿಸಾಹುಕಾರಸಿ ಬಿ ಗಿಡ್ಡವರಸುವರ್ಣ ಟಿ ವಿ ಚಾನಲ್‌
Advertisement Banner
Previous Post

ತೆರಿಗೆಯೇತರ ವರಮಾನದಲ್ಲಿ ಭಾರೀ ಇಳಿಕೆ; ಅನ್ಯ ರಾಜ್ಯಗಳಿಗಿಂತ ಕರ್ನಾಟಕದಲ್ಲೆ ಅತ್ಯಂತ ಕಡಿಮೆ

Next Post

ಜಗಜ್ಯೋತಿ ಬಸವಣ್ಣ ಹೆಸರು ನಾಮಕರಣ; ಬಿಬಿಎಂಪಿ ಕೌನ್ಸಿಲ್‌ ನಿರ್ಣಯ ರದ್ದುಗೊಳಿಸಿದ ಸರ್ಕಾರ

thefilestack

thefilestack

Next Post

ಜಗಜ್ಯೋತಿ ಬಸವಣ್ಣ ಹೆಸರು ನಾಮಕರಣ; ಬಿಬಿಎಂಪಿ ಕೌನ್ಸಿಲ್‌ ನಿರ್ಣಯ ರದ್ದುಗೊಳಿಸಿದ ಸರ್ಕಾರ

Discussion about this post

Recommended

ಕನ್ನಡ ಅನುಷ್ಠಾನ; ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸ್ಸು

6 years ago

ಪರಿಶಿಷ್ಟರ ಸ್ಮಶಾನಕ್ಕೆ ಮೀಸಲಿಟ್ಟ 27.23 ಎಕರೆ ಗೋಮಾಳ ಒತ್ತುವರಿ; ವಸ್ತು ಸ್ಥಿತಿ ವರದಿ ಬಹಿರಂಗ

11 months ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd