the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

‘ದಿ ಫೈಲ್‌’ಗೆ ಸಮನ್ಸ್‌; ಕೋವಿಡ್‌ ಅಕ್ರಮಗಳ ಕುರಿತು ಪ್ರಕಟಿಸಿದ ವರದಿ ಸಲ್ಲಿಕೆ, ಆಯೋಗದ ಮುಂದೆ ಹೇಳಿಕೆ ದಾಖಲು

thefilestack by thefilestack
October 25, 2024
in GOVERNANCE
0
‘ದಿ ಫೈಲ್‌’ಗೆ ಸಮನ್ಸ್‌; ಕೋವಿಡ್‌ ಅಕ್ರಮಗಳ ಕುರಿತು ಪ್ರಕಟಿಸಿದ ವರದಿ ಸಲ್ಲಿಕೆ, ಆಯೋಗದ ಮುಂದೆ ಹೇಳಿಕೆ ದಾಖಲು
0
SHARES
0
VIEWS
Share on FacebookShare on Twitter

ಬೆಂಗಳೂರು; ಕೋವಿಡ್‌ ಕಾಲದಲ್ಲಿ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ನಡೆದಿದೆ ಎನ್ನಲಾಗಿರುವ ನಿಯಮಗಳ ಉಲ್ಲಂಘನೆ, ಅವ್ಯವಹಾರ ಸೇರಿದಂತೆ ವಿವಿಧ ರೀತಿಯ ಅಕ್ರಮಗಳ ಕುರಿತು ವಿಚಾರಣೆ ನಡೆಸುತ್ತಿರುವ ಹೈಕೋರ್ಟ್‌ ನಿವೃತ್ತ ನ್ಯಾಯಾಧೀಶ ಮೈಕಲ್‌ ಡಿ ಕುನ್ಹಾ ಅವರ ನೇತೃತ್ವದ ಆಯೋಗವು ‘ದಿ ಫೈಲ್‌’ಗೆ ಸಮನ್ಸ್‌ ಜಾರಿ ಮಾಡಿದೆ.

 

ಈ ವರದಿಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ದಾಖಲೆಗಳನ್ನು ಸಲ್ಲಿಸಬೇಕು ಎಂದು ಕುನ್ಹಾ ಅವರ ನೇತೃತ್ವದ ವಿಚಾರಣೆ ಆಯೋಗವು ಖುದ್ದು ಹಾಜರಾತಿಗೆ ಸಮನ್ಸ್‌ ಜಾರಿಗೊಳಿಸಿತ್ತು.

 

 

ಆಯೋಗದ ಸೂಚನೆಯಂತೆ ‘ದಿ ಫೈಲ್‌’ 2024ರ ಅಕ್ಟೋಬರ್‍‌ 24ರಂದು ಆಯೋಗದ ಮುಂದೆ ಹಾಜರಾಗಿತ್ತು.

 

 

ಸರಣಿ ರೂಪದಲ್ಲಿ ಪ್ರಕಟಿಸಿದ್ದ ವರದಿಗಳ ಪಿಡಿಎಫ್‌ ಪ್ರತಿಗಳನ್ನು ಪೆನ್‌ಡ್ರೈವ್‌ನಲ್ಲಿ ಅಡಕಗೊಳಿಸಿ ಸಲ್ಲಿಸಿದೆ.

 

 

ಅಲ್ಲದೇ ವಿಚಾರಣೆ ಆಯೋಗವು ಕೇಳಿದ್ದ ಪ್ರಶ್ನೆಗಳಿಗೂ ‘ದಿ ಫೈಲ್‌’ ಉತ್ತರ ಒದಗಿಸಿದೆ.

 

 

ಎನ್‌-95 ಮಾಸ್ಕ್‌, ಪಲ್ಸ್‌ ಆಕ್ಸಿಮೀಟರ್‍‌, ಪ್ಯಾರಾಮೀಟರ್‍‌, ರ್‍ಯಾಟ್‌ ಕಿಟ್‌, ವೆಂಟಿಲೇಟರ್ಸ್‌, ಸ್ಯಾನಿಟೈಜರ್ಸ್‌ ಸೇರಿದಂತೆ ಇನ್ನಿತರೆ ವೈದ್ಯಕೀಯ ಸಲಕರಣೆಗಳ ಖರೀದಿ ಸಂಬಂಧ ಪ್ರಾಥಮಿಕ ದಾಖಲೆಗಳನ್ನಾಧರಿಸಿ 'ದಿ ಫೈಲ್‌' 2020ರಿಂದಲೇ ವರದಿಗಳನ್ನು ಪ್ರಕಟಿಸಿತ್ತು.

 

https://stack.thefile.in/2020/08/governance/4850/

 

ಅಲ್ಲದೇ ಕುನ್ಹಾ ಅವರ ನೇತೃತ್ವದ ವಿಚಾರಣೆ ಆಯೋಗವು ಸರ್ಕಾರಕ್ಕೆ ಸಲ್ಲಿಸಿದ್ದ ಮಧ್ಯಂತರ ವರದಿ ಆಧರಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಚಿವ ಸಂಪುಟಕ್ಕೆ ಸಲ್ಲಿಸಿದ್ದ ಮುಖ್ಯಾಂಶಗಳನ್ನು ಆಧರಿಸಿ 'ದಿ ಫೈಲ್‌' ವರದಿಗಳನ್ನು ಪ್ರಕಟಿಸಿತ್ತು.

 

ಅಂದು ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಸದನದಲ್ಲಿ 'ದಿ ಫೈಲ್‌' ವರದಿಗಳನ್ನು ಉಲ್ಲೇಖಿಸಿ ಹಿಂದಿನ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದನ್ನು ಸ್ಮರಿಸಬಹುದು.

 

ದಾಖಲೆಗಳು ಇಲ್ಲದೆಯೇ 'ದಿ ಫೈಲ್‌' ವರದಿಗಳನ್ನು ಪ್ರಕಟಿಸಿಲ್ಲ. ಕೋವಿಡ್‌ ಅವಧಿಯಲ್ಲಿ ವೈದ್ಯಕೀಯ ಸಲಕರಣೆಗಳ ಖರೀದಿಗೆ ಸಂಬಂಧಿಸಿದಂತೆಯೂ ಅಂದು  ಲಭ್ಯವಿದ್ದ ಪ್ರಾಥಮಿಕ ದಾಖಲೆಗಳನ್ನು ಆಧರಿಸಿ ವರದಿಗಳನ್ನು  ಪ್ರಕಟಿಸಿತ್ತು. ಪ್ರಕಟವಾಗಿದ್ದ ವರದಿಗಳಲ್ಲಿಯೇ ದಾಖಲೆಗಳನ್ನು ಅಡಕಗೊಳಿಸಿತ್ತು. ಹಾಗಾಗಿಯೇ ವಿಚಾರಣೆ ಆಯೋಗದ ಮುಂದೆ 'ದಿ ಫೈಲ್‌' ತನ್ನ ಹೇಳಿಕೆಯನ್ನು ದಾಖಲು ಮಾಡಿದೆ. ಅಲ್ಲದೇ ಇದು ಪತ್ರಿಕೋದ್ಯಮದ ಸರಿಯಾದ ಮಾದರಿ ಎಂದು ನಾವು ತಿಳಿದಿದ್ದೇವೆ.

Tags: B SriramulubjpCommissionCOVIDD CunhaD K ShivakumarDocumentsdr k sudhakarenquiryGuesth d kumarswamyHouseJusticeKumara KrupalokayuktaMaterialsMichelScamsSiddaramaiahaಅಕ್ರಮಅತಿಥಿಆಕ್ಸಿಜನ್‌ಆಕ್ಸಿಜನ್‌ ಕಾನ್ಸ್‌ಟ್ರೇಟರ್‌ಆಕ್ಸಿಮೀಟರ್‍‌ಆಯೋಗಕುನ್ಹಾಕುಮಾರಕೃಪಾಕೋವಿಡ್‌ಖುದ್ದುಗೃಹಡಾ ಕೆ ಸುಧಾಕರ್‌ಡಿ ಕುನ್ಹಾಡಿ ಕೆ ಶಿವಕುಮಾರ್ಬಸವರಾಜ ಬೊಮ್ಮಾಯಿಬಿ ಎಸ್‌ ಯಡಿಯೂರಪ್ಪಬಿ ಶ್ರೀರಾಮುಲುಮೈಕಲ್‌ವಿಚಾರಣೆವೆಂಟಿಲೇಟರ್ಸ್‌ವೈದ್ಯಕೀಯಸಮನ್ಸ್‌ಸಲಕರಣೆಸಿದ್ದರಾಮಯ್ಯಹಾಜರುಹೆಚ್‌ ಡಿ ಕುಮಾರಸ್ವಾಮಿಹೈಕೋರ್ಟ್‌
Advertisement Banner
Previous Post

ಕಟ್ಟಡ ಕುಸಿತ ಪ್ರಕರಣ; ‘ದಿ ಫೈಲ್‌’ ವರದಿ ಬೆನ್ನಲ್ಲೇ ವಲಯ ಆಯುಕ್ತರ ವಿರುದ್ಧ ಕ್ರಮಕ್ಕೆ ಸೂಚಿಸಿದ ಸಿಎಂ

Next Post

ಕಳಪೆ ಕಾಮಗಾರಿ, ಕಳಪೆ ಗುಣಮಟ್ಟದ ಸಾಮಗ್ರಿಗಳ ಬಳಕೆ; ನಂದಿ ಸಕ್ಕರೆ ಕಾರ್ಖಾನೆಗೆ 123.56 ಕೋಟಿ ನಷ್ಟ

thefilestack

thefilestack

Next Post
ಕಳಪೆ ಕಾಮಗಾರಿ, ಕಳಪೆ ಗುಣಮಟ್ಟದ ಸಾಮಗ್ರಿಗಳ ಬಳಕೆ; ನಂದಿ ಸಕ್ಕರೆ ಕಾರ್ಖಾನೆಗೆ 123.56 ಕೋಟಿ ನಷ್ಟ

ಕಳಪೆ ಕಾಮಗಾರಿ, ಕಳಪೆ ಗುಣಮಟ್ಟದ ಸಾಮಗ್ರಿಗಳ ಬಳಕೆ; ನಂದಿ ಸಕ್ಕರೆ ಕಾರ್ಖಾನೆಗೆ 123.56 ಕೋಟಿ ನಷ್ಟ

Recommended

ಬೀಳಗಿ ಸಕ್ಕರೆ ಕಾರ್ಖಾನೆಗೆ ದೊರೆಯದ ಎನ್‌ಒಸಿ; ಅಪೆಕ್ಸ್‌ ಹೆಗಲಿಗೆ ಬಿದ್ದಿದೆ ಸಾಲದ ಹೊಣೆಗಾರಿಕೆ

5 years ago

1 ಲಕ್ಷ 17 ಸಾವಿರ 884 ಸರ್ಕಾರಿ ನೌಕರರಿಗೆ 3 ತಿಂಗಳಾದರೂ ಪಾವತಿಯಾಗದ ವೇತನ; 834.89 ಕೋಟಿ ಬಾಕಿ

7 months ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd