the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

ನೂರಾರು ಕೋಟಿ ಆದಾಯವಿರುವ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಲೆಕ್ಕಪರಿಶೋಧನೆಯೇ ನಡೆದಿಲ್ಲ!

thefilestack by thefilestack
April 20, 2021
in GOVERNANCE
0
0
SHARES
0
VIEWS
Share on FacebookShare on Twitter

ಬೆಂಗಳೂರು; ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಳೆದ 5 ವರ್ಷದಲ್ಲಿ ₹ 100 ಕೋಟಿಗೂ ಹೆಚ್ಚು ಹಣ‌ ಸಂಗ್ರವಾಗಿದ್ದರೂ ಲೆಕ್ಕ ಪರಿಶೋಧನೆ ನಡೆದಿಲ್ಲ” ಎಂದು ಆರೋಪಿಸಿ ವಕೀಲ ಶ್ರೀಹರಿ ಕುತ್ಸ ಅವರು ಮುಖ್ಯಮಂತ್ರಿ ಹಾಗೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ ದೂರು ನೀಡಿದ್ದಾರೆ.

2020-21ನೇ ಆರ್ಥಿಕ ವರ್ಷದಲ್ಲಿ 68.94 ಕೋಟಿ ಆದಾಯ ಗಳಿಸಿರುವ ಬೆನ್ನಲ್ಲೇ ಕಳೆದ 5 ವರ್ಷದಲ್ಲಿ ಲೆಕ್ಕ ಪರಿಶೋಧನೆಯೇ ನಡೆದಿಲ್ಲ ಎಂದು ಸಲ್ಲಿಕೆಯಾಗಿರುವ ದೂರು ಮಹತ್ವ ಪಡೆದುಕೊಂಡಿದೆ.

“ರಾಜ್ಯದಲ್ಲಿ ಅತಿ ಹೆಚ್ಚು ಆದಾಯ ಮೂಲ ಹೊಂದಿರುವ ದೇವಸ್ಥಾನಗಳ ಪೈಕಿ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇಗುಲ ಅಗ್ರಸ್ಥಾನದಲ್ಲಿದೆ. ಆದರೆ, ಕಳೆದ 5 ವರ್ಷಗಳಿಂದ ದೇಗುಲದಲ್ಲಿ ಆದಾಯ ಮೂಲ ಹಾಗೂ ಖರ್ಚು ವೆಚ್ಚಗಳ ಲೆಕ್ಕ ಪರಿಶೋಧನೆಯೇ ನಡೆದಿಲ್ಲ” ಎಂದು ದೂರಿನಲ್ಲಿ ವಿವರಿಸಲಾಗಿದೆ. ಈ ದೂರಿನ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

“ಆಡಳಿತ ಮಂಡಳಿ ಎಲ್ಲಾ ನಿಯಮಗಳನ್ನ ಗಾಳಿಗೆ ತೂರಿ ಧಾರ್ಮಿಕೇತರ ಹಾಗೂ ನಿಷ್ಪ್ರಯೋಜಕ ಚಟುವಟಿಕೆಗಳಿಗೆ ₹ 60 ಕೋಟಿಗೂ ಹೆಚ್ಚು ಹಣ ಪೋಲು ಮಾಡಿದೆ. ಠೇವಣಿಗೆ ಸಂಬಂಧಿಸಿದಂತೆ ನೋಂದಣಿ ಪುಸ್ತಕ ಹಾಗೂ ಇನ್ನಿತರೆ ಅವಶ್ಯಕ ಮಾಹಿತಿಯ ದಾಖಲೆ ಪುಸ್ತಕ ನಿರ್ವಹಿಸಿಲ್ಲ” ಎಂದು ವಿವರಿಸಲಾಗಿದೆ.

“ದೇಗುಲಕ್ಕೆ ಸಂಬಂಧವೇ ಇಲ್ಲದ ವ್ಯಕ್ತಿಗಳು ದೇಗುಲದ ಲೇವಾದೇವಿ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. ದೇಗುಲದ ನಿತ್ಯ ನಿರ್ವಹಣಾ ಚಟುವಟಿಕೆಗಳಲ್ಲಿ ಸಾಕಷ್ಟು ಕಾನೂನು ಬಾಹಿರ ಅಂಶಗಳು ವ್ಯಕ್ತವಾಗಿದ್ದು ಕೂಡಲೇ ಇದಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಬೇಕು” ಎಂದು ಶ್ರೀಹರಿ ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.

2019-20ನೇ ಸಾಲಿನಲ್ಲಿ 98.92 ಕೋಟಿ ರು. ಗಳಿಸಿತ್ತು. ಲಾಕ್‌ಡೌನ್‌ನಿಂದಾಗಿ ಕಳೆದ ವರ್ಷ ಸೆ.8ರವರೆಗೆ ದೇವಸ್ಥಾನವೂ ಬಂದ್‌ ಆಗಿತ್ತು. ಕಳೆದ ಸಾಲಿಗಿಂತ ಈ ಸಾಲಿನಲ್ಲಿ ಬಂದಿರುವ ಆದಾಯಕ್ಕೆ ಹೋಲಿಸಿದರೆ 29.97 ಕೋಟಿ ರು. ಕಡಿಮೆಯಾಗಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಈಚೆಗಷ್ಟೇ ಹೇಳಿಕೆ ಬಿಡುಗಡೆ ಮಾಡಿದ್ದನ್ನು ಸ್ಮರಿಸಬಹುದು.

Tags: auditB S YediyurappaCharitble EndowmentDepartmentCommissionerD K ShivakumarDayanand IASh d kumarswamyHindu ReligiousKalladka PrabhakarKota Srinivas PujaryKukke SubrahmanyaLawyerMuzurai MinisterShreehari KutsaSiddaramaiahTemplesಆಯುಕ್ತರುಎಚ್‌ ಡಿ ಕುಮಾರಸ್ವಾಮಿಕಲ್ಲಡ್ಕ ಪ್ರಭಾಕರ್‌ ಭಟ್‌ಕುಕ್ಕೆ ಸುಬ್ರಹ್ಮಣ್ಯ ದೇಗುಲಕೋಟಾ ಶ್ರೀನಿವಾಸ ಪೂಜಾರಿಡಿ ಕೆ ಶಿವಕುಮಾರ್ದಯಾನಂದ ಐಎಎಸ್‌ದೇಗುಲಗಳುಬಿ ಎಸ್‌ ಯಡಿಯೂರಪ್ಪಲೆಕ್ಕಪರಿಶೋಧನೆವಕೀಲರುಶ್ರೀಹರಿಕುತ್ಸಾಸಿದ್ದರಾಮಯ್ಯಹಿಂದೂ ಧಾರ್ಮಿಕದತ್ತಿ ಇಲಾಖೆ
Advertisement Banner
Previous Post

ಟಾಸ್ಕ್‌ಪೋರ್ಸ್‌ನಲ್ಲಿ ತಳಮಟ್ಟದ ಅನುಭವಸ್ಥರಿಲ್ಲ, ಕಾರ್ಯಸೂಚಿಯಿಲ್ಲ, ಆರೋಗ್ಯ ಅರಾಜಕತೆಯೇ ಎಲ್ಲ

Next Post

ಕೋವಿಡ್‌ ಬಿಕ್ಕಟ್ಟು; ಪರಿಷತ್‌ ಸದಸ್ಯರು ಕೇಳಿದ್ದ ಪ್ರಶ್ನೆಗಳಿಗೆ ತಿಂಗಳಾದರೂ ಉತ್ತರಿಸದ ಸುಧಾಕರ್‌!

thefilestack

thefilestack

Next Post

ಕೋವಿಡ್‌ ಬಿಕ್ಕಟ್ಟು; ಪರಿಷತ್‌ ಸದಸ್ಯರು ಕೇಳಿದ್ದ ಪ್ರಶ್ನೆಗಳಿಗೆ ತಿಂಗಳಾದರೂ ಉತ್ತರಿಸದ ಸುಧಾಕರ್‌!

Discussion about this post

Recommended

ಕೆಎಸ್‌ಆರ್‌ಟಿಸಿಗೆ 220 ಕೋಟಿ ಸಾಲ; 3 ತಿಂಗಳಾದರೂ ನೆರವಿಗೆ ಬಾರದ ಹಣಕಾಸು ಸಂಸ್ಥೆಗಳು

5 years ago

273 ಅಕ್ರಮ ಖಾತೆ ಪ್ರಕರಣ; ಪಿಡಿಒ ರಕ್ಷಣೆಗೆ ನಿಂತಿತೇ ಸರ್ಕಾರ?

6 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd