the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

ಪ್ರಮೋದ್‌ ಮಧ್ವರಾಜ್‌ ಖಾತೆಯಿಂದ ಯುವರಾಜಸ್ವಾಮಿ ಖಾತೆಗೆ 90 ಲಕ್ಷ ರು. ಸಂದಾಯ

thefilestack by thefilestack
August 3, 2021
in GOVERNANCE
0
0
SHARES
1
VIEWS
Share on FacebookShare on Twitter

ಬೆಂಗಳೂರು; ಗಣ್ಯಾತಿಗಣ್ಯರಿಗೆ ವಂಚನೆ ಮಾಡಿರುವ ಆರೋಪಕ್ಕೆ ಗುರಿಯಾಗಿ ಜೈಲಿನಲ್ಲಿರುವ ಯುವರಾಜಸ್ವಾಮಿ ಹೊಂದಿರುವ ಬ್ಯಾಂಕ್‌ ಖಾತೆಗೆ ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರ  ಖಾತೆಯಿಂದ ಒಟ್ಟು 90 ಲಕ್ಷ ರು. ಸಂದಾಯವಾಗಿರುವುದು ತಿಳಿದು ಬಂದಿದೆ.

ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ಇಂದ್ರಕಲಾ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಲ್ಸನ್‌ ಗಾರ್ಡನ್‌ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯಲ್ಲಿ ಲಗತ್ತಿಸಿರುವ ಬ್ಯಾಂಕ್‌ ಖಾತೆಯ ವಹಿವಾಟಿನ ದಾಖಲೆಯಲ್ಲಿ ಹಣ ಸಂದಾಯವಾಗಿರುವುದು ನಮೂದಾಗಿದೆ. ದೋಷಾರೋಪಣೆ ಪಟ್ಟಿಯ ದೃಢೀಕೃತ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಮಾಜಿ ಸಚಿವ ಬಿ ಶ್ರೀರಾಮುಲು ಅವರು ಬ್ಯಾಂಕ್‌ನಲ್ಲಿ ಹೊಂದಿರುವ ಖಾತೆಗೆ ಯುವರಾಜಸ್ವಾಮಿಯು 18 ಲಕ್ಷ ರು. ಸಂದಾಯ ಮಾಡಿರುವ ವಿಚಾರ ಬಹಿರಂಗವಾದ ಬೆನ್ನಲ್ಲೇ ಪ್ರಮೋದ್‌ ಮಧ್ವರಾಜ್‌ ಅವರ ಖಾತೆಯಿಂದ 90 ಲಕ್ಷ ರು. ಸಂದಾಯವಾಗಿರುವ ಬ್ಯಾಂಕ್‌ ವಹಿವಾಟಿನ ದಾಖಲೆಗಳು ಮುನ್ನೆಲೆಗೆ ಬಂದಿವೆ.

2020ರ ಜನವರಿ 10, 13, 17 ಮತ್ತು 2020ರ ಫೆಬ್ರುವರಿ 24ರಂದು ಪ್ರಮೋದ್‌ ಮಧ್ವರಾಜ್‌ ಅವರ ಖಾತೆಯಿಂದ (ಖಾತೆ ಸಂಖ್ಯೆ; SYNBH20010144813, SYNBH20010155024, SYNBH200131192232, SYNBH20017250240, SYNBH20055752271) ಯುವರಾಜಸ್ವಾಮಿಯು ಕರ್ನಾಟಕ ಬ್ಯಾಂಕ್‌ನಲ್ಲಿ ಹೊಂದಿರುವ ಖಾತೆಗೆ (ಖಾತೆ ಸಂಖ್ಯೆ; 5502000100052301) ಒಟ್ಟು 90 ಲಕ್ಷ ರು., ಆರ್‌ಟಿಜಿಎಸ್‌ ಮೂಲಕ ಸಂದಾಯವಾಗಿರುವುದು ಬ್ಯಾಂಕ್‌ ಖಾತೆಯ ವಹಿವಾಟಿನಿಂದ ಗೊತ್ತಾಗಿದೆ.

2020ರ ಜನವರಿ 10ರಂದು SYNBH20010144813 ಖಾತೆಯಿಂದ 25 ಲಕ್ಷ ಮತ್ತು SYNBH20010155024 ಖಾತೆಯಿಂದ 10 ಲಕ್ಷ ರು. ವರ್ಗಾವಣೆಯಾಗಿದೆ.

 

2020ರ ಜನವರಿ 13ರಂದು SYNBH200131192232 ಖಾತೆಯಿಂದ 25 ಲಕ್ಷ, 2020ರ ಜನವರಿ 17ರಂದು SYNBH20017250240 ಖಾತೆಯಿಂದ 20 ಲಕ್ಷ ರು. ವರ್ಗಾವಣೆಯಾಗಿದೆ.

2020ರ ಫೆಬ್ರುವರಿ 24ರಂದು SYNBH20055752271 ಖಾತೆಯಿಂದ 10 ಲಕ್ಷ ರು. ಯುವರಾಜಸ್ವಾಮಿ ಖಾತೆಗೆ ಸಂದಾಯವಾಗಿರುವುದು ಬ್ಯಾಂಕ್‌ ಖಾತೆಯ ವಹಿವಾಟಿನಿಂದ ತಿಳಿದು ಬಂದಿದೆ.

ಪ್ರಮೋದ್‌ ಮಧ್ವರಾಜ್‌ ಅವರನ್ನು ‘ದಿ ಫೈಲ್‌’ ಸಂಪರ್ಕಿಸಲಾಗಿ ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಳಿದಾಗ  ಈ ವಿಷಯ ಸಬ್‌ ಜುಡಿಸ್‌ ಆಗಿರುತ್ತದೆ ಎಂದು ಪ್ರಮೋದ್‌ ಮಧ್ವರಾಜ್ ಅವರು ತಿಳಿಸಿರುತ್ತಾರೆ. ಫೈಲ್‌ ಪರವಾಗಿ ಯಾವ ವಿಷಯದ ಬಗ್ಗೆ ಕೇಳುತ್ತಿದ್ದೀರಿ ಎಂದು ನನಗೆ ಗೊತ್ತಿದೆ, ವಿಷಯ ಸಬ್‌ ಜುಡಿಸ್‌ ಎಂದಷ್ಟೇ ಪ್ರತಿಕ್ರಿಯಿಸಿದರು.

36 ಸೆಕೆಂಡಿನ ಸಂಭಾಷಣೆಯಲ್ಲೇನಿದೆ?
(ಆಗಸ್ಟ್‌ 2, 2021ರ ರಾತ್ರಿ 10.20ಕ್ಕೆ)

ದಿ ಫೈಲ್‌; ನಾನ್‌ ಮಹಂತೇಶ್‌ ಅಂತ್ಹೇಳಿ ದಿ ಫೈಲ್‌ ವೆಬ್‌ಸೈಟಿಂದ ಮಾತಾಡ್ತಿರೋದು

ಪ್ರಮೋದ್‌ ಮಧ್ವರಾಜ್‌; ಎಲ್ಲಿಂದ?

ದಿ ಫೈಲ್‌; ದಿ ಫೈಲ್‌ ವೆಬ್‌ಸೈಟಿಂದ

ಪ್ರಮೋದ್‌ ಮಧ್ವರಾಜ್‌; ಹೂಂ

ದಿ ಫೈಲ್‌; ಒಂದು ಸ್ಟೋರಿಗೆ ಒಪಿನಿಯನ್‌ ಬೇಕಾಗಿತ್ತು, ಅದಕ್ಕೆ ನಿಮ್ಮನ್ನೇ ಕೇಳ್ಕೊಂಡು ಬರೆಯೋಣ ಅಂತ ಕಾಲ್‌ ಮಾಡಿದ್ದು ನಿಮಗೆ…

ಪ್ರಮೋದ್‌ ಮಧ್ವರಾಜ್‌; ಅದು ಸಬ್‌ ಜುಡಿಸ್‌ ಇದೆ, ಐ ಡೋಂಟ್‌ ವಾಟ್‌ ಟು ಕಮೆಂಟ್‌

ದಿ ಫೈಲ್‌; ಯಾವ ವಿಚಾರ ಹೇಳಿ ಸಾರ್‌

ಪ್ರಮೋದ್‌ ಮಧ್ವರಾಜ್‌; ಫೈಲ್‌ನವರು ಏನ್‌ ಮಾಡ್ತೀರಿ ಅಂತ ಗೊತ್ತಿದೆ. ಅದ್ರ ಬಗ್ಗೆ ಹೇಳ್ತೀದಿನಿ

ದಿ ಫೈಲ್‌; ನಿಮಗೆ ವಿಷಯಾನೇ ಹೇಳಿಲ್ಲ ಸಾರ್‌ ನಿಮಗೀಗ…

ಪ್ರಮೋದ್‌ ಮಧ್ವರಾಜ್‌; ನನಗೆ ಗೊತ್ತಿದೆ…ನೀವ್‌ ಏನ್ ಕೇಳ್ತೀರಿ ಅಂತ ಅದಕ್ಕೆ ಐ ಡೋಂಟ್‌ ವಾಂಟ್‌ ಟು ಕಮೆಂಟ್‌

ದಿ ಫೈಲ್‌; ಯುವರಾಜಸ್ವಾಮಿ ಅವರಿಗೆ..

ಪ್ರಮೋದ್‌ ಮಧ್ವರಾಜ್‌; ಈ ಡೋಂಟ್‌ ವಾಂಟ್‌ ಟು ಕಮೆಂಟ್‌……. ಥ್ಯಾಂಕ್ಯು ಯು

ಇನ್ನು, ಬಿ ಶ್ರೀರಾಮುಲು ಅವರ ಖಾತೆಗೆ ಯುವರಾಜಸ್ವಾಮಿ ಖಾತೆಯಿಂದ ಒಟ್ಟು 13 ಲಕ್ಷ ರು. ಸಂದಾಯವಾಗಿದ್ದನ್ನು ಸ್ಮರಿಸಬಹುದು. ಯುವರಾಜಸ್ವಾಮಿಯು ಕರ್ನಾಟಕ ಬ್ಯಾಂಕ್‌ನಲ್ಲಿ ಹೊಂದಿದ್ದ ಖಾತೆಯಿಂದ (ಖಾತೆ ಸಂಖ್ಯೆ; 5502000100052301) ಬಿ ಶ್ರೀರಾಮುಲು ಖಾತೆಗೆ (ಖಾತೆ ಸಂಖ್ಯೆ; KARBH19210399488) 2019ರ ಜುಲೈ 29ರಂದು 5 ಲಕ್ಷ ಹಾಗೂ 2019ರ ಆಗಸ್ಟ್‌ 1ರಂದು 13 ಲಕ್ಷ ರು. (ಖಾತೆ ಸಂಖ್ಯೆ ;KARBH19213654613) ಆರ್‌ಟಿಜಿಎಸ್‌ ಮೂಲಕ ಹಣ ವರ್ಗಾವಣೆ ಆಗಿರುವುದು ದೋಷಾರೋಪಣೆ ಪಟ್ಟಿಯಲ್ಲಿ ಲಗತ್ತಿಸಿರುವ ಬ್ಯಾಂಕ್‌ನ ವಹಿವಾಟಿನ ದಾಖಲೆಯಿಂದ ತಿಳಿದು ಬಂದಿತ್ತು.

Tags: b l santhoshB S YediyurappaB Y VijayendraBasavaraja BommaiBJP KarnatakaCCBChargshettchief ministerD K ShivakumarFisheries Ministerh d kumarswamyjdsJustice IndrakalakarnatakaMadhwarajManorama MaddhwarajPramod Malpe MadhwarajRSSSandeep Patil IPSSiddaramaiahWilson Garden Police StationYuvarajaswamiಆರ್‌ಎಸ್‌ಎಸ್‌ಎಚ್‌ ಡಿ ಕುಮಾರಸ್ವಾಮಿಕರ್ನಾಟಕಜೆಡಿಎಸ್‌ಡಿ ಕೆ ಶಿವಕುಮಾರ್ದೋಷಾರೋಪಣೆ ಪಟ್ಟಿನ್ಯಾಯಾಧೀಶೆ ಇಂದ್ರಕಲಾಪ್ರಮೋದ್‌ ಮಧ್ವರಾಜ್‌ಬಸವರಾಜ ಬೊಮ್ಮಾಯಿಬಿ ಎಲ್‌ ಸಂತೋಷ್‌ಬಿ ಎಸ್‌ ಯಡಿಯೂರಪ್ಪಬಿ ವೈ ವಿಜಯೇಂದ್ರಬಿಜೆಪಿ ಕರ್ನಾಟಕಮಧ್ವರಾಜ್‌ಮನೋರಮಾ ಮಧ್ವರಾಜ್‌ಮೀನುಗಾರಿಕೆ ಸಚಿವಮುಖ್ಯಮಂತ್ರಿಯುವರಾಜಸ್ವಾಮಿವಿಲ್ಸನ್‌ ಗಾರ್ಡನ್‌ ಪೊಲೀಸ್‌ ಸ್ಟೇಷನ್‌ಸಂದೀಪ್‌ ಪಾಟೀಲ್‌ ಐಪಿಎಸ್‌ಸಿದ್ದರಾಮಯ್ಯಸಿಸಿಬಿ
Advertisement Banner
Previous Post

ಇಂದ್ರಕಲಾ ಪ್ರಕರಣ; 2ನೇ ಆರೋಪಿ ಪಾಪಯ್ಯರನ್ನು ದೋಷಾರೋಪಣೆಯಲ್ಲಿ ಕೈ ಬಿಟ್ಟ ತನಿಖಾ ತಂಡ

Next Post

ರಾಜಕೀಯ ಸಂಪರ್ಕದಲ್ಲಿದ್ದವರಿಗಷ್ಟೇ ಆದೇಶ; ಆಡಿಯೋದಲ್ಲಿ ಅಂಜುಂ, ಜಾವೇದ್‌ ಹೆಸರು ಪ್ರಸ್ತಾಪ

thefilestack

thefilestack

Next Post

ರಾಜಕೀಯ ಸಂಪರ್ಕದಲ್ಲಿದ್ದವರಿಗಷ್ಟೇ ಆದೇಶ; ಆಡಿಯೋದಲ್ಲಿ ಅಂಜುಂ, ಜಾವೇದ್‌ ಹೆಸರು ಪ್ರಸ್ತಾಪ

Discussion about this post

Recommended

ಸೌಜನ್ಯ ಕೊಲೆ ಮರು ತನಿಖೆ; ಸಿಐಡಿ ಡಿಜಿಪಿ ಸಲೀಂ ಅವರ ಅಭಿಪ್ರಾಯ ವರದಿ ಬಹಿರಂಗ

10 months ago

ದಿನೇಶ್‌ ಕಲ್ಲಹಳ್ಳಿ ದೂರನ್ನಾಧರಿಸಿ ಎಫ್‌ಐಆರ್‌ ದಾಖಲಿಸದ ಪಂತ್‌ ವಿರುದ್ಧ ಖಾಸಗಿ ದೂರು?

5 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd