the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home LEGISLATURE

ಬೇಡ ಜಂಗಮ ಜಾತಿ ಪ್ರಮಾಣ ಪತ್ರ ವಿವಾದ ; ಬೆಂಕಿ ಹಾಕುವ ಬೆದರಿಕೆಯೊಡ್ಡಿದ್ದ ಹಿರೇಮಠ್‌ ವಿರುದ್ಧ ದೂರು

thefilestack by thefilestack
May 13, 2022
in LEGISLATURE
0
0
SHARES
1
VIEWS
Share on FacebookShare on Twitter

ಬೆಂಗಳೂರು; ಅನುಸೂಚಿತ ಜಾತಿಯ ಪಟ್ಟಿಯಲ್ಲಿರುವ ಬೇಡ ಜಂಗಮ ಸಮುದಾಯದ ಹೆಸರಿನಲ್ಲಿ ಇತರೆ ಸಮುದಾಯವರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವ ಬಗ್ಗೆ ಕಂದಾಯ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಸಂಬಂಧ ಪಟ್ಟ ಇಲಾಖೆಗಳೊಂದಿಗೆ ಕರ್ನಾಟಕ ವಿಧಾನಸಭೆಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಸಭೆಗೆ ಏಕಾಏಕೀ ನುಗ್ಗಿ ದಾಂಧಲೆ ನಡೆಸಿದ್ದ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಹಾಗೂ ವಕೀಲರೂ ಆದ ಬಿ ಡಿ ಹಿರೇಮಠ್‌ ಅವರ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಾಗಿದೆ.

 

ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವ ಕುರಿತು ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯು ಶಾಸಕರ ಭವನದಲ್ಲಿ ಶಾಸಕರ ಭವನದಲ್ಲಿ 2022ರ ಏಪ್ರಿಲ್‌ 27ರಂದು ನಡೆಸಿದ್ದ ಸಭೆಯಲ್ಲಿ ಬಿ ಡಿ ಹಿರೇಮಠ್‌ ಅವರು ಯಾವ ಅನುಮತಿಯೂ ಇಲ್ಲದೆಯೂ ನುಗ್ಗಿ ಸಮಿತಿಯ ಅಧ್ಯಕ್ಷರು ಸದಸ್ಯರುಗಳು ಹಾಗೂ ಇಲಾಖಾಧಿಕಾರಿಗಳಿಗೆ ತಮ್ಮನ್ನು ನೋಡಿಕೊಳ್ಳುವುದಾಗಿ ಬೆದರಿಕೆ ಹಾಕುವುದರ ಜತೆ ವಿಧಾನಸೌಧಕ್ಕೆ ಬೆಂಕಿ ಹಾಕುವುದಾಗಿಯೂ ಸಹ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

 

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸಮಿತಿಯು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಗಮನಕ್ಕೆ ತಂದಿತ್ತು. ಅವರ ನಿರ್ದೇಶನದಂತೆ ವಿಧಾನಸಭೆ ಸಚಿವಾಲಯದ ಅಧೀನ ಕಾರ್ಯದರ್ಶಿ ವಸುಂಧರಾದೇವಿ ಅವರು ವಿಧಾನಸೌಧ ಪೊಲೀಸ್‌ ಠಾಣೆಗೆ ಮೇ 10ರಂದು ದೂರು ದಾಖಲಿಸಿದ್ದಾರೆ. ದೂರಿನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ವಿಧಾನಸೌಧ ಠಾಣೆಗೆ ಸಲ್ಲಿಸಿರುವ ದೂರಿನ ಪ್ರತಿ

 

ದೂರಿನಲ್ಲೇನಿದೆ?

 

ಸುಮಾರು 11-30 ಗಂಟೆಗೆ ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಹಾಗೂ ವಕೀಲರೂ ಆದ ಬಿ ಡಿ ಹಿರೇಮಠ್‌ ಅವರು ಸಮಿತಿ ಸಭೆಗೆ ಯಾವುದೇ ಅನುಮತಿ ಪಡೆಯದೇ ಏಕಾಏಕೀ ಅತಿಕ್ರಮವಾಗಿ ಪ್ರವೇಶಿಸಿ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರುಗಳಿಗೆ ಯಾವುದೇ ಗೌರವ ಕೊಡೆದೇ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವ ವಿಷಯವನ್ನು ಚರ್ಚಿಸಲು ಅಡಚಣೆ ಉಂಟು ಮಾಡಿರುತ್ತಾರೆ. ಅಲ್ಲದೆ ಸಮಿತಿಯ ಅಧ್ಯಕ್ಷರು ಸದಸ್ಯರುಗಳು ಹಾಗೂ ಇಲಾಖಾಧಿಕಾರಿಗಳಿಗೆ ತಮ್ಮನ್ನು ನೋಡಿಕೊಳ್ಳುವುದಾಗಿ ಬೆದರಿಕೆ ಹಾಕುವುದರ ಜತೆ ವಿಧಾನಸೌಧಕ್ಕೆ ಬೆಂಕಿ ಹಾಕುವುದಾಗಿಯೂ ಸಹ ಬೆದರಿಕೆ ಹಾಕಿರುತ್ತಾರೆ.

 

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರು ಸದಸ್ಯರು ಮತ್ತು ಇಲಾಖಾಧಿಕಾರಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಲು ಅಡಚಣೆ ಉಂಟು ಮಾಡಿರುತ್ತಾರೆ. ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಸಮಿತಿಯ ಅಧ್ಯಕ್ಷರು ಸಭಾಧ್ಯಕ್ಷರಿಗೆ ಹಕ್ಕುಚ್ಯುತಿ ಸೂಚನೆಯನ್ನು ಸಲ್ಲಿಸಿದ್ದಾರೆ. ಇವರ ವಿರುದ್ಧ ದೂರು ದಾಖಲಿಸಿ ಕಾನೂನುಕ್ರಮ ಕೈಗೊಳ್ಳಬೇಕು ಎಂದು ಸಭಾಧ್ಯಕ್ಷರು ನಿರ್ದೇಶಿಸಿದ್ದಾರೆ.

 

ಈ ಸಭೆಯಲ್ಲಿ ಕಂದಾಯ, ಸಮಾಜ ಕಲ್ಯಾಣ, ಕಾನೂನು ಇಲಾಖೆ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಿದ ಡಿಜಿಪಿ, ಬೆಂಗಳೂರು ನಗರ ಜಿಲ್ಲಾಧಿಕಾರಿ ಇನ್ನಿತರೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

 

ಶಾಸಕ ಎಂ ಪಿ ರೇಣುಕಾಚಾರ್ಯ ಅವರ ಪುತ್ರಿಗೆ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡಿದ್ದ ಪ್ರಕರಣವು ಬಹಿರಂಗಗೊಂಡಿದ್ದ ಬೆನ್ನಲ್ಲೇ ಸಮಿತಿಯು ಸುಳ್ಳು ಜಾತಿಪ್ರಮಾಣ ಪತ್ರ ಪಡೆಯುತ್ತಿರುವ ಪ್ರಕರಣಗಳ ಕುರಿತು ವಿಚಾರಣೆಗೆ ಕೈಗೆತ್ತಿಕೊಂಡಿರುವುದನ್ನು ಸ್ಮರಿಸಬಹುದು.

Tags: B D HiremathBasavaraj BommaiBeda JangamabengaluruCaste CertificateComplaintD K Shivkumarh d kumarswamyM P KumarswamyMeetingSC ST CommittieeSiddaramaiahSpeakerVidhana Soudha Police StationVishweshar Hegde Kageriಅನುಸೂಚಿತ ಜಾತಿಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಎಂ ಪಿ ಕುಮಾರಸ್ವಾಮಿಎಂ ಪಿ ರೇಣುಕಾಚಾರ್ಯಎಚ್‌ ಡಿ ಕುಮಾರಸ್ವಾಮಿಎಸ್‌ ಸಿ ಎಸ್‌ ಟಿ ದೌರ್ಜನ್ಯಕೆಂಪಯ್ಯಡಿ ಕೆ ಶಿವಕುಮಾರ್ನಿರ್ದೇಶನಬಸವರಾಜ ಬೊಮ್ಮಾಯಿಬಿ ಡಿ ಹಿರೇಮಠ್‌ಬೆದರಿಕೆಬೇಡ ಜಂಗಮ ಜಾತಿ ಪ್ರಮಾಣಪತ್ರವಿಧಾನಸೌಧ ಪೊಲೀಸ್‌ ಠಾಣೆವಿಧಾನಸೌಧಕ್ಕೆ ಬೆಂಕಿವಿಶ್ವೇಶ್ವರ ಹೆಗಡೆ ಕಾಗೇರಿಸಭಾಧ್ಯಕ್ಷರುಸಿದ್ದರಾಮಯ್ಯಸುಳ್ಳು ಜಾತಿ ಪ್ರಮಾಣ ಪತ್ರ
Advertisement Banner
Previous Post

ಮಿನಿ ಫುಡ್‌ ಪಾರ್ಕ್‌ ಯೋಜನೆ ; ನಿರ್ದಿಷ್ಟ ಅನುದಾನ ಮೀಸಲಿರಿಸದೇ ಆಯವ್ಯಯದಲ್ಲಿ ಘೋಷಣೆ

Next Post

ರಾಜ್ಯದಲ್ಲಿ ಬಿಹಾರ ವಾತಾವರಣ ಸೃಷ್ಟಿ; ಅಂದಾಜು ಸಮಿತಿ ಶಾಸಕರ ಮೇಲೆ ಗುತ್ತಿಗೆದಾರರು ಮುಗಿಬಿದ್ದರೂ ಮೌನ

thefilestack

thefilestack

Next Post

ರಾಜ್ಯದಲ್ಲಿ ಬಿಹಾರ ವಾತಾವರಣ ಸೃಷ್ಟಿ; ಅಂದಾಜು ಸಮಿತಿ ಶಾಸಕರ ಮೇಲೆ ಗುತ್ತಿಗೆದಾರರು ಮುಗಿಬಿದ್ದರೂ ಮೌನ

Recommended

ಗುರುರಾಘವೇಂದ್ರ ಬ್ಯಾಂಕ್‌, ಸೊಸೈಟಿಯಲ್ಲಿ 2,692 ಕೋಟಿ ರು. ದುರುಪಯೋಗ ಪತ್ತೆ; ಮರು ಲೆಕ್ಕಪರಿಶೋಧನೆ

4 years ago

ಆತ್ಮನಿರ್ಭರ ; ಹಣದ ವಿವರ ಬಹಿರಂಗಪಡಿಸದ ಬಿಜೆಪಿ ಸರ್ಕಾರದಿಂದ 40,724 ಕೋಟಿ ರು. ಯೋಜನೆ ಸಿದ್ಧ

6 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd