the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

8 ಸಚಿವಾಲಯಗಳಲ್ಲಿ 35,471 ಕಡತಗಳು ವಿಲೇವಾರಿಗೆ ಬಾಕಿ; 21,009 ಕಡತಗಳಿಗೆ ತ್ರಿಶಂಕು ಭಾಗ್ಯ

thefilestack by thefilestack
May 20, 2024
in GOVERNANCE
0
0
SHARES
0
VIEWS
Share on FacebookShare on Twitter

ಬೆಂಗಳೂರು; ಒಂದು ವರ್ಷದ ಸಂಭ್ರಮಾಚರಣೆಗೆ ರಾಜ್ಯ ಕಾಂಗ್ರೆಸ್‌ ಸರ್ಕಾರವು  ಸಿದ್ಧತೆ ನಡೆಸುತ್ತಿದ್ದರೇ ಇಲಾಖೆಗಳ ಸಚಿವಾಲಯಗಳಲ್ಲಿನ ಅಧಿಕಾರಶಾಹಿ ಮಾತ್ರ ಇನ್ನೂ ಗಾಢ ನಿದ್ದೆಯಿಂದ ಎಚ್ಚೆತ್ತುಕೊಂಡಿಲ್ಲ. ನಿಗದಿತ ಅವಧಿಯೊಳಗೆ ಕಡತಗಳನ್ನು ವಿಲೇವಾರಿ ಮಾಡಬೇಕು ಎಂದು ನಿಯಮಗಳಿದ್ದರೂ  ಕಂದಾಯ ಸಚಿವಾಲಯ ಸೇರಿದಂತೆ ಒಟ್ಟು 8 ಇಲಾಖೆಗಳ ಸಚಿವಾಲಯದಲ್ಲಿ  2024ರ ಮೇ 7ರ ಅಂತ್ಯಕ್ಕೆ ಒಟ್ಟಾರೆ 35,471 ಕಡತಗಳು ವಿಲೇವಾರಿಗೆ ಬಾಕಿ ಇರಿಸಿಕೊಂಡಿದೆ.

 

ವಿಧಾನಸೌಧ, ವಿಕಾಸ ಸೌಧ ಮತ್ತು ಬಹುಮಹಡಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ  ಇಲಾಖೆಗಳ 8  ಸಚಿವಾಲಯಗಳಲ್ಲೇ 35,471 ಕಡತಗಳು ವಿಲೇವಾರಿಗೆ ಬಾಕಿ ಇರುವುದು ಅಧಿಕಾರಿಶಾಹಿಯ ಕಾರ್ಯಕ್ಷಮತೆಗೆ ಕೈಗನ್ನಡಿ ಹಿಡಿದಂತಾಗಿದೆ.

 

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಮೇ 15ರಂದು ನಡೆಯಬೇಕಿದ್ದ ಸಭೆಗೆ ಸಚಿವಾಲಯಗಳ ಮುಖ್ಯಸ್ಥರು ಮಂಡಿಸಿರುವ ವಿವರಣೆಗಳಲ್ಲಿ ಈ ಅಂಕಿ ಅಂಶಗಳಿವೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌,  ಸತೀಶ್‌ ಜಾರಕಿಹೊಳಿ, ಡಾ ಜಿ ಪರಮೇಶ್ವರ್‍‌, ಕೃಷ್ಣಬೈರೇಗೌಡ ಅವರು ಸಚಿವರಾಗಿರುವ ಇಲಾಖೆಗಳಲ್ಲೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಡತಗಳು ವಿಲೇವಾರಿಯಾಗದೇ ಬಾಕಿ ಇರುವುದು ಚರ್ಚೆಗೆ ಗ್ರಾಸವಾಗಿದೆ.

 

35,471 ಕಡತಗಳ ಪೈಕಿ  14,372 ಕಡತಗಳು ಚಲನೆಯಲ್ಲಿವೆ. ಇನ್ನುಳಿದ  21,009 ಕಡತಗಳಿಗೆ ಸಂಬಂಧಿಸಿದಂತೆ ಯಾವುದೇ ತೀರ್ಮಾನ ಕೈಗೊಳ್ಳದೇ ಸಚಿವಾಲಯಗಳ ಅಧಿಕಾರಿಗಳ ಹಂತದಲ್ಲೇ ಪಾರ್ಕ್‌ ಮಾಡಲಾಗಿದೆ. ಅತ್ತ ತೀರ್ಮಾನ ಕೈಗೊಳ್ಳುತ್ತಿಲ್ಲ, ಇತ್ತ ಕಡತವನ್ನು ಮುಕ್ತಾಯಗೊಳಿಸುತ್ತಿಲ್ಲ. ಒಂದು ರೀತಿಯಲ್ಲಿ 21,009 ಕಡತಗಳದ್ದು ತ್ರಿಶಂಕು ಸ್ಥಿತಿಯಾಗಿದೆ.

 

ಸಚಿವಾಲಯವಾರು ವಿವರ

 

ಲೋಕೋಪಯೋಗಿ ಇಲಾಖೆಯ ಸಚಿವಾಲಯದಲ್ಲಿ 2,099 ಕಡತಗಳು ಚಲನೆಯಲ್ಲಿವೆ. 1,988 ಕಡತಗಳು ಪಾರ್ಕ್‌ ಮಾಡಿರುವುದು ಸೇರಿದಂತೆ 4,087 ಕಡತಗಳು ವಿಲೇವಾರಿಗೆ  ಬಾಕಿ ಇವೆ. ಅದೇ ರೀತಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಸಚಿವಾಲಯದಲ್ಲಿ 532 ಕಡತಗಳು ಚಲನೆಯಲ್ಲಿದ್ದರೇ 455 ಕಡತಗಳನ್ನು ಪಾರ್ಕ್‌ ಮಾಡಿಡಲಾಗಿದೆ. ಒಟ್ಟಾರೆ 987 ಕಡತಗಳು ವಿಲೇವಾರಿ ಆಗಿಲ್ಲ. ಕಂದಾಯ ಸಚಿವಾಲಯದಲ್ಲಿ 4,120 ಕಡತಗಳು ಚಲನೆಯಲ್ಲಿದ್ದರೇ 4,869 ಕಡತಗಳು ಪಾರ್ಕ್‌ ಮಾಡಿರುವುದು ಸೇರಿದಂತೆ 8,989 ಕಡತಗಳು ವಿಲೇವಾರಿಗೆ ಬಾಕಿ ಇವೆ.

 

ಜಲಸಂಪನ್ಮೂಲ ಇಲಾಖೆಯ ಸಚಿವಾಲಯದದಲ್ಲಿ 977 ಕಡತಗಳು ಚಲನೆಯಲ್ಲಿದ್ದರೇ 3,376 ಕಡತಗಳನ್ನು ಪಾರ್ಕ್ ಮಾಡಿಡಲಾಗಿದೆ. ಈ ಸಚಿವಾಲಯದಲ್ಲಿ 3,376 ಕಡತಗಳು ವಿಲೇವಾರಿಯಾಗಿಲ್ಲ. ಸಣ್ಣ ನೀರಾವರಿ ಸಚಿವಾಲಯದಲ್ಲಿ 414 ಕಡತಗಳು ಚಲನೆಯಲ್ಲಿವೆ. 173 ಕಡತಗಳು ಪಾರ್ಕ್‌ ಮಾಡಿಟ್ಟಿದ್ದರೆ ಒಟ್ಟಾರೆ 587 ಕಡತಗಳು ವಿಲೇವಾರಿಗೆ ಬಾಕಿ ಇರಿಸಿಕೊಂಡಿದೆ.

 

ನಗರಾಭಿವೃದ್ಧಿ ಇಲಾಖೆ ಸಚಿವಾಲಯದಲ್ಲಿ 3,006 ಕಡತಗಳು ಚಲನೆಯಲ್ಲಿದ್ದು 6,411 ಕಡತಗಳು ಪಾರ್ಕ್‌ ಮಾಡಿಡಲಾಗಿದೆ. ಒಟ್ಟಾರೆ 9,417 ಕಡತಗಳಿಗೆ ಮುಕ್ತಿ ದೊರೆತಿಲ್ಲ. ವಸತಿ ಇಲಾಖೆಯ ಸಚಿವಾಲಯದಲ್ಲಿ 632 ಕಡತಗಳು ಚಲನೆಯಲ್ಲಿದ್ದು 457 ಕಡತಗಳು ಪಾರ್ಕ್‌ ಆಗಿವೆ. ಒಟ್ಟಾರೆ 1,089 ಕಡತಗಳು ವಿಲೇವಾರಿಗೆ ಬಾಕಿ ಇವೆ.

ಗೃಹ ಸಚಿವಾಲಯದಲ್ಲಿ 2,592 ಕಡತಗಳು ಚಲನೆಯಲ್ಲಿದ್ದು 3,370 ಕಡತಗಳು ಪಾರ್ಕ್‌ ಆಗಿವೆ. ಈ ಸಚಿವಾಲಯದಲ್ಲಿ 5,962 ಕಡತಗಳಿಗೆ ಮುಕ್ತಿ ದೊರೆತಿಲ್ಲ. ಈ 8 ಸಚಿವಾಲಯಗಳಲ್ಲಿ ತೆರೆದಿದ್ದ ಒಟ್ಟು ಕಡತಗಳ ಪೈಕಿ 5,329 ಕಡತಗಳನ್ನಷ್ಟೇ ಮುಕ್ತಾಯಗೊಳಿಸಿರುವುದು ಗೊತ್ತಾಗಿದೆ.

 

ಅಧಿಕಾರಿ ನೌಕರರ ವರ್ಗಾವಣೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಂಪನ್ಮೂಲ ಕ್ರೋಢೀಕರಣ ಮತ್ತು ಪಕ್ಷ ಹಾಗೂ ಶಾಸಕರ ಒಳಬೇಗುದಿಯಲ್ಲಿ ಕಾಂಗ್ರೆಸ್‌ ಸರ್ಕಾರವು ಬೇಯುತ್ತಿದ್ದ ಹೊತ್ತಿನಲ್ಲಿಯೇ  ಸರ್ಕಾರದ ಇಲಾಖೆಗಳಲ್ಲಿ 2023ರ ಜುಲೈ 26ರ ಅಂತ್ಯಕ್ಕೆ ಒಟ್ಟಾರೆ 1,49,959 ಕಡತಗಳು ವಿಲೇವಾರಿಯಾಗದೇ ಬಾಕಿ ಇದ್ದವು.

 

ಕಾಂಗ್ರೆಸ್‌ ಸರ್ಕಾರವು ಒಂದು ವರ್ಷವನ್ನು  ಪೂರ್ಣಗೊಳಿಸಿದ್ದರೂ ಸಹ ಕಡತಗಳ ವಿಲೇವಾರಿಯಲ್ಲಿ ಆಸಕ್ತಿ ತೋರಿಸುತ್ತಿಲ್ಲ. ಹೀಗಾಗಿ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿನ  ಕಡತಗಳಿಗೆ ಮೆತ್ತಿಕೊಂಡಿರುವ ಧೂಳನ್ನು ಇನ್ನೂ ಒರೆಸಿಲ್ಲ.  ವರ್ಗಾವಣೆ ಸಂಬಂಧಿತ ಕಡತಗಳಷ್ಟೇ ಚಿರತೆ ವೇಗದಲ್ಲಿ ವಿಲೇವಾರಿಯಾಗಿದ್ದವು.  ಇತರೆ ವಿಷಯಗಳ ಕುರಿತಾದ ಕಡತಗಳು ಈಗಲೂ  ತೆವಳುತ್ತಿವೆ ಎಂದು ತಿಳಿದು ಬಂದಿದೆ.

 

ವಿಶೇಷವೆಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರಾಗಿರುವ  ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ 11,017 ಕಡತಗಳು ವಿಲೇವಾರಿಯಾಗದೇ ಧೂಳು ಮೆತ್ತಿಕೊಂಡಿತ್ತು.

 

ಎಫ್‌ಎಂಎಸ್‌ ಮತ್ತು ಇ-ಆಫೀಸ್‌ನಲ್ಲಿ ಪ್ರಾರಂಭದಲ್ಲಿ ತೆರೆದಿದ್ದ ಕಡತಗಳೂ ಸೇರಿದಂತೆ  ಜೂನ್‌ 1ರಿಂದ ಜುಲೈ 26ರವರೆಗೆ ಒಟ್ಟಾರೆ 1,49,959 ಸಂಖ್ಯೆಯಲ್ಲಿ ಕಡತಗಳು ವಿಲೇವಾರಿಗೆ ಬಾಕಿ ಇವೆ. ಕಡತಗಳ ವಿಲೇವಾರಿಯಲ್ಲಿ ಮೂಲಭೂತ ಸೌಲಭ್ಯ ಅಭಿವೃದ್ಧಿ, ಸಣ್ಣ ನೀರಾವರಿ, ಸಿಬ್ಬಂದಿ ಆಡಳಿತ ಸುಧಾರಣೆ,ಆಹಾರ ನಾಗರಿಕ ಸರಬರಾಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಹಕಾರ ಇಲಾಖೆಯು ಶೇ.50ಕ್ಕಿಂತ ಕಡಿಮೆ ವಿಲೇವಾರಿ ಮಾಡಿ ಡಿ ವರ್ಗದಲ್ಲಿವೆ. ಇದರಲ್ಲಿ  ಹೊಸದಾಗಿ ತೆರೆದಿದ್ದ  33,657 ಕಡತಗಳಿದ್ದವು.

 

 

 

ಅದೇ ರೀತಿ ನಗರಾಭಿವೃದ್ಧಿ ಇಲಾಖೆ ಸೇರಿದಂತೆ ಒಟ್ಟು 26ಕ್ಕೂ  ಹೆಚ್ಚು ಇಲಾಖೆಗಳು ಕಡತ ವಿಲೇವಾರಿಯಲ್ಲಿ (ಶೇ.50ರಿಂದ 75) ಸಿ ವರ್ಗದಲ್ಲಿತ್ತು.

 

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ)ಎಫ್‌ಎಂಎಸ್‌ ಮತ್ತು ಇ ಆಫೀಸ್‌ನಲ್ಲಿ 3,973, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಲ್ಲಿ 3,035,  ಸಣ್ಣ ನೀರಾವರಿಯಲ್ಲಿ 1,706, ಮೂಲಭೂತ ಸೌಕರ್ಯ ಅಭಿವೃದ್ಧಿ ಇಲಾಖೆಯಲ್ಲಿ 1,452, ಸಹಕಾರ ಇಲಾಖೆಯಲ್ಲಿ 1,797 ಕಡತಗಳು ವಿಲೇವಾರಿಗೆ ಬಾಕಿ ಇದ್ದವು.

 

ಸಿ ವರ್ಗದಲ್ಲಿರುವ ಉನ್ನತ ಶಿಕ್ಷಣ ಇಲಾಖೆಯಲ್ಲಿ 4,069, ನಗರಾಭಿವೃದ್ಧಿಯಲ್ಲಿ 15,069, ಜಲಸಂಪನ್ಮೂಲದಲ್ಲಿ 6,483, ಅರಣ್ಯ ಪರಿಸರ ಜೀವಿಶಾಸ್ತ್ರದಲ್ಲಿ 7,608, ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಕಲ್ಲಿ 11,017, ವಾಣಿಜ್ಯ ಮತ್ತು ಕೈಗಾರಿಕೆಯಲ್ಲಿ 6,714, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ನಲ್ಲಿ 5,708, ವಸತಿಯಲ್ಲಿ 1,388, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯಲ್ಲಿ 1,561, ಕೌಶಲ್ಯಾಭಿವೃದ್ಧಿಯಲ್ಲಿ 1,789, ಇಂಧನ ಇಲಾಖೆಯಲ್ಲಿ 2,356 ಕಡತಗಳು ವಿಲೇವಾರಿಗೆ ಬಾಕಿ ಇತ್ತು.

 

ಬಿ ವರ್ಗದಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯಲ್ಲಿ 10,411, ಲೋಕೋಪಯೋಗಿಯಲ್ಲಿ 6,444, ತೋಟಗಾರಿಕೆ ಮತ್ತು ರೇಷ್ಮೆಯಲ್ಲಿ 2,472, ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 5,176, ಒಳಾಡಳಿತ ಇಲಾಖೆಯಲ್ಲಿ 7,209, ಕಾರ್ಮಿಕ ಇಲಾಖೆಯಲ್ಲಿ 1,101, ಸಮಾಜ ಕಲ್ಯಾಣ ಇಲಾಖೆಯಲ್ಲಿ 1,492 ಕಡತಗಳು ವಿಲೇವಾರಿಗೆ ಬಾಕಿ ಇತ್ತು.

 

 

ಅಡಿಯಲ್ಲಿ ಕಡತಗಳು  ಕಳೆದ 5,244 ದಿನಗಳಿಂದಲೂ ಹಾಗೇ ಉಳಿದುಕೊಂಡಿದ್ದು  ವಿಲೇವಾರಿಯಾಗದೇ ಬಾಕಿ ಇರುವುದು ಇದೀಗ ಬಹಿರಂಗವಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿಯೇ ಈ ಮಾಹಿತಿಯನ್ನು ಒದಗಿಸಲಾಗಿದೆ.

 

 

ಸಚಿವಾಲಯದ ಇಲಾಖೆಗಳಲ್ಲಿ ಕಡತ ವಿಲೇವಾರಿ ವಿಳಂಬವಾಗುತ್ತಿರುವ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿನ ಕೆಡಿಪಿ ಸಭೆಗಳಲ್ಲಿ ಚರ್ಚೆಯಾಗುತ್ತಿದ್ದರೂ ಸಮಾಜ ಕಲ್ಯಾಣ ಇಲಾಖೆಯೊಂದರಲ್ಲೇ 5,244 ದಿನಗಳಿಂದ 832 ಕ್ಕೂ ಹೆಚ್ಚು ಕಡತಗಳು ವಿಲೇವಾರಿಗೆ ಬಾಕಿ ಇರುವುದು ಮುನ್ನೆಲೆಗೆ ಬಂದಿದೆ.

 

 

ಸಮಾಜ ಕಲ್ಯಾಣ ಇಲಾಖೆಯ ಸಚಿವರ ಬಳಿಯೇ ಆರಂಭದಲ್ಲಿದ್ದ 119 ಕಡತಗಳೂ ಸೇರಿದಂತೆ  2023ರ ಆಗಸ್ಟ್‌ 2ರಿಂದ 3 ರ ಅಂತ್ಯಕ್ಕೆ ಬಾಕಿ ಇರುವ ಕಡತಗಳು ಒಟ್ಟಾರೆಯಾಗಿ 5,116  ದಿನಗಳಿಂದಲೂ ಬಾಕಿ ಇವೆ.

 

ಎಸ್‌ ಟಿ ಇಲಾಖೆಯ ಸಚಿವರ ಬಳಿ 17, ಇಲಾಖೆಯ ಉಪ ಕಾರ್ಯದರ್ಶಿ (1) ಬಳಿ 302 7  ಕಡತಗಳು 617   ದಿನದಿಂದಲೂ ಬಾಕಿ  ಇವೆ.

 

 

ಅದೇ ರೀತಿ ಉಪ ಕಾರ್ಯದರ್ಶಿ (2) ಬಳಿ 145 ಕಡತಗಳು 480 ದಿನ, ಉಪ ಕಾರ್ಯದರ್ಶಿ (3) ಬಳಿ 117 ಕಡತಗಳು 857  ದಿನಗಳಿಂದ, ಅಧೀನ ಕಾರ್ಯದರ್ಶಿ (1) ಬಳಿ 169 ಕಡತಗಳು 407  ದಿನ, ಅಧೀನ ಕಾರ್ಯದರ್ಶಿ (2) ಬಳಿ 169 ಕಡತಗಳು 215  ದಿನ, ಅಧೀನ ಕಾರ್ಯದರ್ಶಿ (3) ಬಳಿ 8  ಕಡತಗಳು 54 ದಿನದಿಂದಲೂ ಬಾಕಿ ಇರುವುದು ಇಲಾಖೆಯು ವೆಬ್‌ಸೈಟ್‌ನಲ್ಲಿ ಒದಗಿಸಿರುವ ಮಾಹಿತಿಯಿಂದ ತಿಳಿದು ಬಂದಿದೆ.

 

 

2023 ರ ಏಪ್ರಿಲ್‌ 25ರಿಂದ 26ರವರೆಗೆ ಒಟ್ಟು 557 ಕಡತಗಳ ಪೈಕಿ 231  ಕಡತಗಳನ್ನು ಇಲಾಖೆಯು ಸ್ವೀಕರಿಸಿತ್ತು. ಇದರಲ್ಲಿ 36 ಕಡತಗಳನ್ನಷ್ಟೇ ಮುಕ್ತಾಯಗೊಳಿಸಿದೆ. 234 ಕಡತಗಳನ್ನು ಮುಂದಿನ ಹಂತಕ್ಕೆ ರವಾನಿಸಿದೆ. ಒಟ್ಟು 383 ಕಡತಗಳು ವಿಲೇವಾರಿಗೆ ಬಾಕಿ ಇದ್ದವು. ಕಡತಗಳ ರಾಶಿ ಬೆಟ್ಟದಷ್ಟಿದ್ದರೂ ಅವುಗಳನ್ನು ವಿಲೇವಾರಿ ಮಾಡದೇ ವಿಳಂಬಕ್ಕೆ ಕಾರಣವಾಗಿದ್ದ ಹಿಂದಿನ  ಬಿಜೆಪಿ ಸರ್ಕಾರವು ಪ್ರತಿಪಕ್ಷ ಸ್ಥಾನದಲ್ಲಿದ್ದ ಕಾಂಗ್ರೆಸ್‌ನ ಕೆಂಗಣ್ಣಿಗೆ ಗುರಿಯಾಗಿತ್ತು.

 

ಈ ಕುರಿತು 'ದಿ ಫೈಲ್‌' ವರದಿ ಪ್ರಕಟಿಸಿತ್ತು.

https://stack.thefile.in/2023/04/governance/16160/

 

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಪದಗ್ರಹಣ ಮಾಡಿ ತಮ್ಮ ಅವಧಿ ಪೂರ್ಣಗೊಳಿಸುವ ಹಂತಕ್ಕೆ ಬಂದಿದ್ದರೂ ಮುಖ್ಯಮಂತ್ರಿ ಮತ್ತು ವಿವಿಧ ಸಚಿವರೂ ಸೇರಿದಂತೆ ಕರ್ನಾಟಕ ಸರ್ಕಾರದ ಸಚಿವಾಲಯ ಮತ್ತು ಇಲಾಖೆಗಳಲ್ಲಿ 2023ರ ಮಾರ್ಚ್‌ 16ರವರೆಗೆ ಒಟ್ಟು 1,48,782 ಕಡತಗಳು ವಿಲೇವಾರಿಗೆ ಬಾಕಿ ಇದ್ದವು.

 

https://stack.thefile.in/2023/03/governance/15855/

2023 ಮಾರ್ಚ್‌ 16ರ ಅಂತ್ಯಕ್ಕೆ ಎಫ್‌ಎಂಎಸ್‌ನಲ್ಲಿ ಒಟ್ಟು 43,376 ಮತ್ತು ಇ ಆಫೀಸ್‌ನಲ್ಲಿ 1,02,425 ಕಡತಗಳಿದ್ದವು. ಒಟ್ಟಾರೆ 1,45,801 ಕಡತಗಳಿದ್ದವು. ಇದೇ ಅವಧಿಯಲ್ಲಿ ಹೊಸದಾಗಿ ಎಫ್‌ಎಂಎಸ್‌ನಲ್ಲಿ 3,200 ಮತ್ತು ಇ ಆಫೀಸ್‌ನಲ್ಲಿ 27,420 ಸೇರಿ ಒಟ್ಟು  30,620 ಕಡತಗಳಿದ್ದವು.

 

ಎಫ್ಎಂಎಸ್‌ನಲ್ಲಿದ್ದ 43,376 ಕಡತಗಳ ಪೈಕಿ ಮುಕ್ತಾಯಗೊಂಡ ಕಡತಗಳ ಸಂಖ್ಯೆ 2,060 ಸಂಖ್ಯೆಯಲ್ಲಿದ್ದರೇ ಈ ಆಫೀಸ್‌ನಲ್ಲಿದ್ದ 1,02,425 ಕಡತಗಳ ಪೈಕಿ 25,639 ಸೇರಿ ಒಟ್ಟಾರೆ 27,699 ಕಡತಗಳು ಮುಕ್ತಾಯಗೊಂಡಿದ್ದವು. ಉಳಿದಂತೆ ವಿಲೇವಾರಿಗೆ ಎಫ್‌ಎಂಎಸ್‌ನಲ್ಲಿ 44,576, ಇ ಅಫೀಸ್‌ನಲ್ಲಿ 104,206 ಸೇರಿ ಒಟ್ಟಾರೆ 1,48,782 ಕಡತಗಳು ಬಾಕಿ ಇದ್ದವು.

https://stack.thefile.in/2022/04/governance/11578/

2021ರ ಅಕ್ಟೋಬರ್‌ 25ರ ಅಂತ್ಯಕ್ಕೆ ಒಟ್ಟು 31,308 ಕಡತಗಳು ವಿಲೇವಾರಿಗೆ ಬಾಕಿ ಉಳಿದಿದ್ದವು. ಇದೇ ಅವಧಿಯಲ್ಲಿ 18 ಇಲಾಖೆಗಳ ಮುಖ್ಯಸ್ಥರ ಹಂತದಲ್ಲೇ 31,308 ಕಡತಗಳು  ವಿಲೇವಾರಿಯಾಗಿರಲಿಲ್ಲ. ಬಸವರಾಜ ಬೊಮ್ಮಾಯಿ ಅವರು ನಿಭಾಯಿಸುವ ಹಣಕಾಸು ಇಲಾಖೆಯಲ್ಲಿಯೇ 2021ರ ಅಕ್ಟೋಬರ್‌ 27ರ ಅಂತ್ಯಕ್ಕೆ 3,351 ಕಡತಗಳು ಬಾಕಿ ಉಳಿದಿದ್ದವು.

 

2021ರ ಆಗಸ್ಟ್‌ ಅಂತ್ಯಕ್ಕೆ 41 ಆಡಳಿತ ಇಲಾಖೆಗಳಲ್ಲಿ 1.60 ಲಕ್ಷ ಕಡತಗಳು ವಿಲೇವಾರಿಗೆ ಬಾಕಿ ಇದ್ದವು. ಈ ಪೈಕಿ 31,077 ಕಡತಗಳು ಈ ಆಫೀಸ್‌ನಲ್ಲಿಯೇ ವಿಲೇವಾರಿ ಆಗಿರಲಿಲ್ಲ. ನಗರಾಭಿವೃದ್ಧಿ ಇಲಾಖೆಯಲ್ಲಿ 11,250, ಕಂದಾಯ ಇಲಾಖೆಯಲ್ಲಿ 9,314, ಪ್ರಾಥಮಿಕ, ಪ್ರೌಢಶಿಕ್ಷಣದಲ್ಲಿ 7,689, ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯಲ್ಲಿ 5,446, ಜಲ ಸಂಪನ್ಮೂಲ ಇಲಾಖೆಯಲ್ಲಿ 5,490 ಕಡತಗಳು ಬಾಕಿ ಇದ್ದವು. ಈ ಕುರಿತು 'ದಿ ಫೈಲ್‌' ಸೆ.2ರಂದು ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.

 

ವಿಲೇವಾರಿಗೆ ಬಾಕಿ ಇವೆ 1.69 ಲಕ್ಷ ಕಡತಗಳು; ಕುಂತಲ್ಲೇ ಕುಳಿತಿದೆ ಮೈಗಳ್ಳರ ಸರ್ಕಾರ!

ಕಡತಗಳ ವಿಲೇವಾರಿಗೆ ಅಧೀನ ಕಾರ್ಯದರ್ಶಿ ಅಥವಾ ಉಪಕಾರ್ಯದರ್ಶಿಗಳನ್ನು ಕಡತ ವಿಲೇವಾರಿ ನೋಡಲ್ ಅಧಿಕಾರಿಯನ್ನಾಗಿ ನೇಮಿಸಲು ಮುಂದಾಗಿದೆ. ನೋಡೆಲ್ ಅಧಿಕಾರಿಗಳು ಕಾನೂನು ಇಲಾಖೆ ಸಂಯೋಜನೆ ಮಾಡಿ ಎರಡು ತಿಂಗಳೊಳಗೆ ಕಡತ ವಿಲೇವಾರಿ ಮಾಡಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದನ್ನು ಸ್ಮರಿಸಬಹುದು.

Tags: Chief SecretaryD K ShivakumarDevelopmentDR G ParameshwarFileh d kumarswamyhomeHousingIDDIrrigationKrishna ByregowdaMinorMovementPendencyResourcesrevenueSatish JarkiholisecretariatSiddaamaiahaUDDUrbanUrganWaterಇ ಆಫೀಸ್‌ಕಡತಕಂದಾಯಕೃಷ್ಣಬೈರೇಗೌಡಖಾನ್‌ಗೃಹಗ್ಯಾರಂಟಿಚಲನೆಜಮೀರ್‌ ಅಹ್ಮದ್‌ಜಲಡಾ ಜಿ ಪರಮೇಶ್ವರ್‌ಡಿ ಕೆ ಶಿವಕುಮಾರ್ನಗರಾಭಿವೃದ್ಧಿನೀರಾವರಿಬಾಕಿಬಿಜೆಪಿಬೋಸರಾಜುಮೂಲ ಸೌಕರ್ಯವರ್ಗಾವಣೆವಸತಿವಿಲೇವಾರಿಸಚಿವಾಲಯಸಣ್ಣನೀರಾವರಿಸತೀಶ್‌ ಜಾರಕಿಹೊಳಿಸಂಪನ್ಮೂಲಸಿದ್ದರಾಮಯ್ಯಹೆಚ್‌ ಡಿ ಕುಮಾರಸ್ವಾಮಿ
Advertisement Banner
Previous Post

ಮ್ಯಾನ್‌ಹೋಲ್‌, ಸೆಪ್ಟಿಂಕ್‌ ಟ್ಯಾಂಕ್‌, ಒಳಚರಂಡಿಗಳಲ್ಲಿ ವಿಷಪೂರಿತ ಗಾಳಿ; 94 ಕಾರ್ಮಿಕರು ಮೃತ

Next Post

ಐಪಿಎಲ್‌; ಕ್ರಿಕೆಟ್‌ ಸಂಸ್ಥೆಗೆ ಬಹು ಕೋಟಿ ಆದಾಯ, ಸರ್ಕಾರಕ್ಕಿಲ್ಲ ಬಿಡಿಗಾಸು, ಗುತ್ತಿಗೆ ಷರತ್ತು ಉಲ್ಲಂಘನೆ!

thefilestack

thefilestack

Next Post

ಐಪಿಎಲ್‌; ಕ್ರಿಕೆಟ್‌ ಸಂಸ್ಥೆಗೆ ಬಹು ಕೋಟಿ ಆದಾಯ, ಸರ್ಕಾರಕ್ಕಿಲ್ಲ ಬಿಡಿಗಾಸು, ಗುತ್ತಿಗೆ ಷರತ್ತು ಉಲ್ಲಂಘನೆ!

Recommended

ಪರೀಕ್ಷೆ ಹಣದ ಲೆಕ್ಕಾಚಾರದಲ್ಲಿ ಅಪರಾತಪರಾ; ಪ್ರೌಢಶಿಕ್ಷಣ ಮಂಡಳಿಯ ಮುಖವಾಡ ಕಳಚಿಸಿತು ಲೆಕ್ಕ ಪರಿಶೋಧನೆ

6 years ago

ಕೋವಿಡ್‌ ಭ್ರಷ್ಟಾಚಾರ; ಪೆನ್‌ಡ್ರೈವ್‌ ಬೆನ್ನಲ್ಲೇ ಹೊರಬಿತ್ತು ಜಿಲ್ಲಾ ವಿಪತ್ತು ನಿಧಿಯಲ್ಲಿನ ಅಕ್ರಮ

6 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd