the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

ರಾಜ್ಯಪಾಲರಾಗಲು ಬಯಸಿದ್ದ ಇಂದ್ರಕಲಾರಿಗೆ ರಾಕ್‌ಲೈನ್‌ ವೆಂಕಟೇಶ್‌ರಿಂದಲೂ 50 ಲಕ್ಷ ನೆರವು

thefilestack by thefilestack
July 30, 2021
in GOVERNANCE
0
0
SHARES
0
VIEWS
Share on FacebookShare on Twitter

ಬೆಂಗಳೂರು; ರಾಜ್ಯಪಾಲ ಹುದ್ದೆಯ ಆಮಿಷಕ್ಕೊಳಗಾಗಿದ್ದ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾಗಿದ್ದ ಬಿ ಎಸ್‌ ಇಂದ್ರಕಲಾ ಅವರಿಗೆ ಖ್ಯಾತ ಸಿನಿಮಾ ನಿರ್ಮಾಪಕ ಹಾಗೂ ನಟ ರಾಕ್‌ಲೈನ್‌ ವೆಂಕಟೇಶ್‌ ಕೂಡ ಒಟ್ಟು 50 ಲಕ್ಷ ರು.ಗಳನ್ನು ನೀಡಿದ್ದರು ಎಂಬುದು ಇದೀಗ ಬಹಿರಂಗವಾಗಿದೆ.

ಗಣ್ಯರು ಮತ್ತು ಪ್ರಭಾವಿಗಳಿಗೆ ಕೋಟ್ಯಂತರ ರು ವಂಚನೆ ಮಾಡಿರುವ ಆರೋಪಕ್ಕೆ ಗುರಿಯಾಗಿ ಜೈಲಿನಲ್ಲಿರುವ ಯುವರಾಜಸ್ವಾಮಿ ಅವರ ವಿರುದ್ಧದ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ರಾಕ್‌ಲೈನ್‌ ವೆಂಕಟೇಶ್‌ ಅವರಿಂದಲೂ ಸಾಕ್ಷ್ಯ ಹೇಳಿಕೆ ಪಡೆದಿರುವುದು ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ದೋಷಾರೋಪಣೆ ಪಟ್ಟಿಯಿಂದ ತಿಳಿದು ಬಂದಿದೆ. ದೋಷಾರೋಪಣೆ ಪಟ್ಟಿಯ ದೃಢೀಕೃತ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

‘ಯುವರಾಜ್‌ರವರಿಗೆ ಅತೀ ತುರ್ತಾಗಿ 25,00,000 ಲಕ್ಷ ರು. ಹಣ ಕೊಡಬೇಕಾಗಿರುವುದರಿಂದ 25,00,000 ರು.ಗಳನ್ನು ಕೇಳಿದ ಮೇರೆಗೆ ಉದ್ದೇಶದಿಂದ ಮೇಡಂರವರಿಗೆ ನೀಡಿರುತ್ತೇನೆ,’ ಎಂದು ರಾಕ್‌ಲೈನ್‌ ವೆಂಕಟೇಶ್‌ ಅವರು ಸಾಕ್ಷ್ಯ ಹೇಳಿಕೆ ನೀಡಿರುವುದು ದೋಷಾರೋಪಣೆ ಪಟ್ಟಿಯಿಂದ ತಿಳಿದು ಬಂದಿದೆ.

25 ಲಕ್ಷ ರು.ಗಳನ್ನು ನಗದು ನೀಡುವ ಮುನ್ನ ಜನತಾ ಸೇವಾ ಕೋ ಆಪರೇಟೀವ್‌ ಬ್ಯಾಂಕ್‌ನ ಮಹಾಲಕ್ಷ್ಮಿಪುರಂನಲ್ಲಿನ ಶಾಖೆಯಲ್ಲಿ ರಾಕ್‌ಲೈನ್‌ ಎಂಟರ್‌ಟೈನ್‌ಮೆಂಟ್ ಹೆಸರಿನಲ್ಲಿ ಹೊಂದಿದ್ದ ಖಾತೆ (004110100000357) ಮೂಲಕ 2018ರ ಆಗಸ್ಟ್‌ 21ರಂದು ಐಸಿಐಸಿಐ ಬ್ಯಾಂಕ್‌ನಲ್ಲಿದ್ದ (369501500327) ಖಾತೆಗೆ 25 ಲಕ್ಷ ರು.ಗಳನ್ನು ಆರ್‌ಟಿಜಿಎಸ್‌ ಮೂಲಕ ಹಣ ವರ್ಗಾವಣೆ ಮಾಡಿದ್ದರು ಎಂಬ ಸಂಗತಿ ಗೊತ್ತಾಗಿದೆ.

ರಾಕ್‌ಲೈನ್‌ ವೆಂಕಟೇಶ್‌ ಅವರ ಸೋದರಿ ಪರಿಮಳ ಅವರು ಇಂದ್ರಕಲಾ ಅವರ ಸ್ನೇಹಿತೆ. ಇವರ ಮೂಲಕ ರಾಕ್‌ಲೈನ್‌ ವೆಂಕಟೇಶ್‌ ಅವರು ಹೊಂದಿದ್ದ ಜನತಾ ಸೇವಾ ಕೋ ಆಪರೇಟೀವ್‌ ಬ್ಯಾಂಕ್‌ನಲ್ಲಿದ್ದ ರಾಕ್‌ಲೈನ್‌ ಎಂಟರ್‌ಟೈನ್‌ಮೆಂಟ್‌ ಹೆಸರಿನಲ್ಲಿದ್ದ ಖಾತೆಯಿಂದ 25 ಲಕ್ಷ ರು.ಗಳನ್ನು ಆರೋಪಿ ಯುವರಾಜ್‌ ಹೆಸರಿನಲ್ಲಿದ್ದ ಖಾತೆಗೆ ಇಂದ್ರಕಲಾ ಅವರು ಹಣವನ್ನು ವರ್ಗಾವಣೆ ಮಾಡಿಸಿದ್ದರು ಎಂಬುದು ತಿಳಿದು ಬಂದಿದೆ.

ನಿವೃತ್ತ ಎಸ್‌ ಪಿ ಪಾಪಯ್ಯ ಎಂಬುವರ ಮೂಲಕ 2018ರಲ್ಲಿ ನಿವೃತ್ತ ನ್ಯಾಯಮೂರ್ತಿ ಇಂದ್ರಕಲಾ ಅವರನ್ನು ಪರಿಚಯಿಸಿಕೊಂಡಿದ್ದ ಯುವರಾಜಸ್ವಾಮಿ ‘ನೀವು ಕೇಂದ್ರ ಸರ್ಕಾರದ ಮಟ್ಟದಲ್ಲಿ ಉನ್ನತ ಹುದ್ದೆ ಪಡೆಯುತ್ತೀರಾ,’ ಎಂದು ಭವಿಷ್ಯ ಹೇಳಿದ್ದ. ಆ ಮೂಲಕ ಅವರಲ್ಲಿ ಆಸೆ ಹುಟ್ಟಿಸಿದ್ದ ಯುವರಾಜಸ್ವಾಮಿ ಪಾರ್ಟಿ ಫಂಡ್‌ಗಾಗಿ ಹಣ ನೀಡಬೇಕು ಎಂದು ತಿಳಿಸಿ ಅವರಿಂದ ಹಂತ ಹಂತವಾಗಿ 3,77,50,002 ರು.ಗಳನ್ನು ಬ್ಯಾಂಕ್‌ನ ವಿವಿಧ ಖಾತೆಗಳ ಮೂಲಕ ಪಡೆದುಕೊಂಡಿದ್ದ.

ಈ ಪೈಕಿ ಇಂದ್ರಕಲಾ ಅವರ ಸ್ನೇಹಿತರಾದ ಸುನೀತಾ ಅವರ ಖಾತೆಯಿಂದ 25,00,00 ರು.ಗಳನ್ನು ಪರಿಮಳ ಎಂಬುವರ ಖಾತೆಯಿಂದ 25,00,000 ರು.ಗಳನ್ನು ಯುವರಾಜಸ್ವಾಮಿ ತನ್ನ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದ ಎಂಬ ಮಾಹಿತಿ ದೋಷಾರೋಪಣೆ ಪಟ್ಟಿಯಲ್ಲಿದೆ.

ಅಲ್ಲದೆ ಇಂದ್ರಕಲಾ ಅವರ ಸ್ನೇಹಿತರು, ಹಿತೈಷಿಗಳು ಮತ್ತು ಸಹದ್ಯೋಗಿಗಳಿಂದ 4,50,00,000 ರು.ಗಳನ್ನು ನಗದು ರೂಪದಲ್ಲಿ ಪಡೆದಿದ್ದನಲ್ಲದೆ ಅವರ ಸ್ನೇಹಿತರಾಗಿದ್ದ ನಾಗರಬಾವಿಯ ವಿನಯ್‌ ಎಂಬುವರಿಂದಲೂ 30,00,000 ರು.ಗಳನ್ನು ಪಡೆದಿದ್ದ ಎಂಬುದು ದೋಷಾರೋಪಣೆ ಪಟ್ಟಿಯಿಂದ ತಿಳಿದು ಬಂದಿದೆ.

Tags: Amit Shab l santhoshB S YediyurappaBasavaraja BommaiBJP KarnatakaD K Shivakumardr k sudhakarh d kumarswamyHigh CourtJ P NaddaJustice IndrakalakarnatakaMurgesh R NiraniNalinkumar KatilRadhika KumarswamyRockline VenkateshSiddaramaiahYuvarajaswamiಅಮಿತ್‌ ಶಾಎಚ್‌ ಡಿ ಕುಮಾರಸ್ವಾಮಿಕರ್ನಾಟಕಜೆ ಪಿ ನಡ್ಡಾಡಾ ಕೆ ಸುಧಾಕರ್‌ಡಿ ಕೆ ಶಿವಕುಮಾರ್ನಳೀನ್‌ ಕುಮಾರ್‌ ಕಟೀಲುನ್ಯಾಯಮೂರ್ತಿ ಇಂದ್ರಕಲಾಬಸವರಾಜ ಬೊಮ್ಮಾಯಿಬಿ ಎಲ್‌ ಸಂತೋಷ್‌ಬಿ ಎಸ್‌ ಯಡಿಯೂರಪ್ಪಬಿ ವೈ ವಿಜಯೇಂದ್ರಬಿಜೆಪಿ ಕರ್ನಾಟಕಮುನಿರತ್ನಮುರುಗೇಶ್‌ ಆರ್‌ ನಿರಾಣಿಯುವರಾಜಸ್ವಾಮಿರಾಕ್‌ಲೈನ್‌ ವೆಂಕಟೇಶ್‌ರಾಧಿಕಾ ಕುಮಾರಸ್ವಾಮಿಸಿದ್ದರಾಮಯ್ಯಹೈಕೋರ್ಟ್‌
Advertisement Banner
Previous Post

ರಾಜ್ಯಪಾಲರಾಗಲು ಬಯಸಿದ್ದ ಇಂದ್ರಕಲಾರಿಗೆ ರಾಕ್‌ಲೈನ್‌ ವೆಂಕಟೇಶ್‌ರಿಂದಲೂ 50 ಲಕ್ಷ ನೆರವು

Next Post

ಅದಾನಿ ಕಂಪನಿಯಿಂದ ಅಕ್ರಮ ಹಣ ಸ್ವೀಕಾರ; ಬೇಲೇಕೇರಿಯ 24 ಅಧಿಕಾರಿಗಳು ದೋಷಮುಕ್ತ

thefilestack

thefilestack

Next Post

ಅದಾನಿ ಕಂಪನಿಯಿಂದ ಅಕ್ರಮ ಹಣ ಸ್ವೀಕಾರ; ಬೇಲೇಕೇರಿಯ 24 ಅಧಿಕಾರಿಗಳು ದೋಷಮುಕ್ತ

Discussion about this post

Recommended

ಸರ್ಕಾರಿ ಕೆರೆ ಒತ್ತುವರಿ ಜಾಗದಲ್ಲಿದ್ದ ಕಟ್ಟಡ ದಾನಪತ್ರ; ಸಚಿವ ಚಲುವರಾಯಸ್ವಾಮಿ ವಿರುದ್ಧ ಲೋಕಾಯುಕ್ತಕ್ಕೆ ದೂರು

2 years ago

ಯುವನಿಧಿಗೆ ಪರಿಶಿಷ್ಟ ಉಪ ಯೋಜನೆ ಅನುದಾನ; 175.50 ಕೋಟಿಯಲ್ಲಿ ಕೇವಲ 43.88 ಕೋಟಿಯಷ್ಟೇ ಬಿಡುಗಡೆ

1 year ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd