the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

ರಾಷ್ಟ್ರೋತ್ಥಾನ ಪರಿಷತ್‌, ಬಿಜೆಪಿ ಕಚೇರಿಗೆ ಗೋಮಾಳ, ಜಮೀನು ಹಂಚಿಕೆ ಸುತ್ತ ‘ದಿ ಫೈಲ್‌’ನ 13 ವರದಿಗಳು

thefilestack by thefilestack
August 6, 2022
in GOVERNANCE
0
0
SHARES
0
VIEWS
Share on FacebookShare on Twitter

ಬೆಂಗಳೂರು; ರಾಜ್ಯದಲ್ಲಿ ಬಿಜೆಪಿ ಪಕ್ಷವು ಅಧಿಕಾರಕ್ಕೆ ಬಂದಾಗಲೆಲ್ಲಾ ರಾಷ್ಟ್ರೋತ್ಥಾನ ಪರಿಷತ್‌ ಸೇರಿದಂತೆ ಸಂಘ ಪರಿವಾರದ ಹಲವು ಸಂಘ ಸಂಸ್ಥೆಗಳಿಗೆ ರಿಯಾಯಿತಿ ದರದಲ್ಲಿ ಗೋಮಾಳ, ಸರ್ಕಾರಿ ಜಮೀನು ಮಂಜೂರಾಗುತ್ತಿದೆ. ಜಿಲ್ಲೆ, ತಾಲೂಕು, ಹೋಬಳಿ ಪ್ರದೇಶಗಳಲ್ಲಿ ಲಭ್ಯವಿರುವ ಗೋಮಾಳ ಮತ್ತು ಸರ್ಕಾರಿ ಜಮೀನುಗಳನ್ನು ಮಾರುಕಟ್ಟೆ ದರದ ಶೇ.25ದರದಲ್ಲಿ ಮಂಜೂರು ಮಾಡುವ ಮೂಲಕ ಸರ್ಕಾರದ ಬೊಕ್ಕಸಕ್ಕೂ ಕೋಟ್ಯಂತರ ರುಪಾಯಿ ನಷ್ಟ ಸಂಭವಕ್ಕೂ ಕಾರಣವಾಗುತ್ತಿದೆ.

 

ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ರಾಷ್ಟ್ರೋತ್ಥಾನ ಪರಿಷತ್‌ಗೆ ಒಂದು ವರ್ಷದಲ್ಲಿ ಬೆಂಗಳೂರು, ಕಲ್ಬುರ್ಗಿ ಗೋಮಾಳವನ್ನು ಮಂಜೂರು ಮಾಡಿರುವ ಸರ್ಕಾರವು ಹೊಸಪೇಟೆಯಲ್ಲಿಯೂ ಜಮೀನು ಮಂಜೂರು ಮಾಡಲು ಹೊರಟಿದೆ. ಕಾನೂನು ಇಲಾಖೆಯು ವಿರೋಧ ವ್ಯಕ್ತಪಡಿಸಿದ್ದರೂ ಲೆಕ್ಕಿಸದೇ ಜಮೀನು ಮಂಜೂರು ಮಾಡುತ್ತಿರುವುದನ್ನು 'ದಿ ಫೈಲ್‌' ಆರ್‌ಟಿಐ ಅಡಿಯಲ್ಲಿ ದಾಖಲೆ ಪಡೆದು ಬಹಿರಂಗಗೊಳಿಸಿತ್ತು.

 

ಮುಖ್ಯವಾಹಿನಿಯ ಬಹುತೇಕ ಮಾಧ್ಯಮಗಳಿಗೂ ಮೊದಲೇ 'ದಿ ಫೈಲ್‌' ಈ ಕುರಿತಾದ ಸರಣಿ ವರದಿಗಳನ್ನು ಪ್ರಕಟಿಸಿತ್ತು. ಹೊಸಪೇಟೆಯಲ್ಲಿಯೂ ಜಮೀನು ಮಂಜೂರು ಮಾಡಲು ತರಾತುರಿಯಲ್ಲಿ ಸರ್ಕಾರ ಹೊರಟಿರುವುದರ ಬೆನ್ನಲ್ಲೇ ಮತ್ತೊಮ್ಮೆ ಈ ಎಲ್ಲಾ ವರದಿಗಳನ್ನು ಇಲ್ಲಿ ಕ್ರೋಢೀಕರಿಸಿ ಇಲ್ಲಿ ಕೊಡಲಾಗಿದೆ.

 

ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ಹೆಸರಘಟ್ಟ ಹೋಬಳಿಯ ಹುರುಳಿಚಿಕ್ಕನಹಳ್ಳಿ ಗ್ರಾಮದಲ್ಲಿ 24.8 ಎಕರೆ ಗೋಮಾಳ ಪೈಕಿ 9.32 ಎಕರೆ ವಿಸ್ತೀರ್ಣದ ಜಾಗವನ್ನು ಮಂಜೂರು ಮಾಡಲು ಸಿದ್ಧತೆ ನಡೆಸಿದೆ ಎಂಬುದನ್ನು 2021ರ ಡಿಸೆಂಬರ್‌ 3ರಂದು ವರದಿ ಪ್ರಕಟಿಸಿತ್ತು.

https://stack.thefile.in/2021/12/governance/9820/

ರಾಷ್ಟ್ರೋತ್ಥಾನ ಪರಿಷತ್‌ ಈಗಾಗಲೇ 74 ಎಕರೆ ಜಮೀನು ಹೊಂದಿದ್ದರೂ ಹೆಸರಘಟ್ಟ ಬಳಿ 9.32 ಎಕರೆ ಜಮೀನನ್ನು 2022ರ ಫೆ.22ರಂದು ಮಂಜೂರು ಮಾಡಿ ಆದೇಶ ಹೊರಡಿಸಿತ್ತು. ಪ್ರಚಲಿತ ಮಾರುಕಟ್ಟೆಯಲ್ಲಿ 7.45 ಕೋಟಿ ರು. ಬೆಲೆಬಾಳುವ ಜಮೀನನ್ನು ಕೇವಲ1.86 ಕೋಟಿ ರು.ಗೆ ಮಂಜೂರು ಮಾಡಿ ಆದೇಶ ಹೊರಡಿಸಿದ್ದನ್ನು 2022ರ ಏಪ್ರಿಲ್‌ 22ರಂದು ವರದಿ ಪ್ರಕಟಿಸಿತ್ತು.

https://stack.thefile.in/2022/04/governance/11607/

 

ರಾಷ್ಟ್ರೋತ್ಥಾನ ಪರಿಷತ್‌ಗೆ ಗೋಮಾಳ ಮಂಜೂರು ಮಾಡುವ ಸಂಬಂಧ ಕಂದಾಯ ಇಲಾಖೆಯು ಕಾನೂನು ಇಲಾಖೆಯ ಅಭಿಪ್ರಾಯ ಕೋರಿತ್ತು. ಕಂದಾಯ ಇಲಾಖೆಯ ಪ್ರಸ್ತಾವನೆಯನ್ನು ಕಾನೂನು ಇಲಾಖೆ ಮತ್ತು ಆರ್ಥಿಕ ಇಲಾಖೆಯು ಒಪ್ಪಿರಲಿಲ್ಲ. ಈ ಕುರಿತು 'ದಿ ಫೈಲ್‌' ಆರ್‌ಟಿಐ ಅಡಿಯಲ್ಲಿ ಸಮಗ್ರ ಕಡತವನ್ನು ಪಡೆದು ಇಡೀ ಪ್ರಕ್ರಿಯೆಯನ್ನು ಎಲ್ಲಾ ಮಗ್ಗುಲುಗಳಿಂದ 2022ರ ಮೇ 6ರಂದು ವರದಿ ಪ್ರಕಟಿಸಿತ್ತು.

https://stack.thefile.in/2022/05/rti/11788/

ರಾಷ್ಟ್ರೋತ್ಥಾನ ಪರಿಷತ್‌ ಖಾಸಗಿ ಸಂಸ್ಥೆಯೇ ಹೊರತು ನೋಂದಾಯಿತ ಸಂಸ್ಥೆಯಲ್ಲವೆಂದು ಕಾನೂನು ಇಲಾಖೆಯು ಅಭಿಪ್ರಾಯಿಸಿತ್ತು. ಈ ಕುರಿತು 2022ರ ಮೇ 7ರಂದು ವರದಿ ಪ್ರಕಟಿಸಿತ್ತು.

https://stack.thefile.in/2022/05/rti/11804/

ಶಾಲಾ ಶುಲ್ಕ ಸಂಗ್ರಹವಾದ ಆದಾಯವೂ ಸೇರಿದಂತೆ ಇನ್ನಿತರೆ ಮೂಲಗಳಿಂದ ಕಳೆದ 5 ವರ್ಷಗಳಲ್ಲಿ401.86 ಕೋಟಿ ರು ಮತ್ತು 2021ರಲ್ಲಿ 63.64 ಕೋಟಿ ರು. ಲಾಭಾಂಶ ಹೊಂದಿತ್ತು. ಆದರೂ ಶೇ.25ರಷ್ಟು ರಿಯಾಯಿತಿ ದರದಲ್ಲಿ ರಾಷ್ಟ್ರೋತ್ಥಾನ ಪರಿಷತ್‌ಗೆ ಜಮೀನು ಮಂಜೂರಾಗಿತ್ತು. ಈ ಕುರಿತು 2022ರ ಮೇ 9ರಂದು ವರದಿ ಪ್ರಕಟಿಸಿತ್ತು.

https://stack.thefile.in/2022/05/governance/11833/

ಶೈಕ್ಷಣಿಕ ಉದ್ದೇಶಕ್ಕೆ ಗೋಮಾಳ ಮಂಜೂರು ಮಾಡಿಸಿಕೊಂಡಿದ್ದ ರಾಷ್ಟ್ರೋತ್ಥಾನ ಪರಿಷತ್‌, ಶಿಕ್ಷಣ ಇಲಾಖೆಯಿಂದ ಅನುಮತಿಯನ್ನೇ ಪಡೆದಿರಲಿಲ್ಲ. ಈ ಕುರಿತು 2022ರ ಮೇ 10ರಂದು ವರದಿ ಪ್ರಕಟಿಸಿತ್ತು.

https://stack.thefile.in/2022/05/rti/11851/

ಗೋಮಾಳವನ್ನು ಸಂರಕ್ಷಿಸಬೇಕಿದ್ದ ಪಶು ಸಂಗೋಪನೆ ಇಲಾಖೆಯು ಗೋಮಾಳ ಅವಶ್ಯಕತೆಯೇ ಇಲ್ಲವೆಂದು ದೃಢೀಕೃತ ಪ್ರಮಾಣ ಪತ್ರವನ್ನು ನೀಡುವ ಮೂಲಕ ರಾಷ್ಟ್ರೋತ್ಥಾನ ಪರಿಷತ್‌ಗೆ ಗೋಮಾಳ ಮಂಜೂರು ಮಾಡುವ ಸಂಬಂಧ ವರದಿ ನೀಡಿತ್ತು. ಈ ಕುರಿತು 2022ರ ಮೇ 11ರಂದು ವರದಿ ಪ್ರಕಟಿಸಿತ್ತು.

https://stack.thefile.in/2022/05/rti/11865/

ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ಜಾಲ ಹೋಬಳಿಯ ಬೈಯಪ್ಪನಹಳ್ಳಿ ಬಳಿ 10.00 ಎಕರೆ ಮತ್ತು ಗುಲ್ಬರ್ಗಾ ಜಿಲ್ಲೆಯ ಶರಣಸಿರಸಿ ಪಟ್ಟಣದಲ್ಲಿ 7.00 ಎಕರೆ ಜಮೀನು ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದೆ. ಈ ಕುರಿತು ಮೇ 12ರಂದು ವರದಿ ಪ್ರಕಟಿಸಿತ್ತು.

https://stack.thefile.in/2022/05/rti/11883/

 

ಇದಲ್ಲದೇ ಆರ್‌ಎಸ್‌ಎಸ್‌ ಬೆಂಬಲದ ವನವಾಸಿ ಕಲ್ಯಾಣ ಸಂಸ್ಥೆಗೂ ಜಮೀನು ಮಂಜೂರು ಮಾಡಲು ಕಂದಾಯ ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಆರ್ಥಿಕ ಇಲಾಖೆಯು ಈ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು. ಈ ಕುರಿತು 2022ರ ಜೂನ್ 2ರಂದು ವರದಿ ಪ್ರಕಟಿಸಿತ್ತು.

https://stack.thefile.in/2022/06/governance/12111/

ಸಾವಿರಾರು ಕೋಟಿ ರುಪಾಯಿ ದೇಣಿಗೆ ಪಡೆಯುತ್ತಿರುವ ಬಿಜೆಪಿ ಪಕ್ಷವು ತಾಲೂಕು ಮಟ್ಟದಲ್ಲಿ ಬಿಜೆಪಿ ಕಚೇರಿಗಳಿಗಾಗಿ ಕಟ್ಟಡ ನಿರ್ಮಾಣ ಮಾಡುವ ಸಲುವಾಗಿ ಸಾರ್ವಜನಿಕ ಉದ್ದೇಶಗಳಿಗಾಗಿ ಕಾಯ್ದಿರಿಸಿದ್ದ ಜಮೀನುಗಳ ಮೇಲೆ ಕಣ್ಣು ಹಾಕಿತ್ತು. ಮುಧೋಳದಲ್ಲಿ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ವಸತಿ ನಿಲಯ ಕಟ್ಟಡ ನಿರ್ಮಾಣ ಮಾಡಲು ಕಾಯ್ದಿರಿಸಿದ್ದ ನಿವೇಶನವನ್ನು ಬಿಜೆಪಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಮಂಜೂರು ಮಾಡುವ ಸಂಬಂಧ ಕಂದಾಯ ಇಲಾಖೆಯು ಜಿಲ್ಲಾಧಿಕಾರಿಗಳ ವರದಿ ಕೇಳಿತ್ತು. ಈ ಕುರಿತು 2022ರ ಜುಲೈ 18ರಂದು ವರದಿ ಪ್ರಕಟಿಸಿತ್ತು.

https://stack.thefile.in/2022/07/governance/12592/

ಇದಲ್ಲದೇ ಕರ್ನಾಟಕ ನೀರಾವರಿ ನಿಗಮದ ಸ್ವಾಧೀನದಲ್ಲಿದ್ದ ಜಮೀನಿನ ಪೈಕಿ 2 ಎಕರೆ ಜಮೀನನ್ನು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರ ಹೆಸರಿಗೆ ನೋಂದಣಿ ಮಾಡಿಕೊಡಬೇಕು ಎಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ ಡಿ ಮೇಘರಾಜ್‌ ಅವರು ಪತ್ರ ಬರೆದಿದ್ದರು. ಇದನ್ನು 'ದಿ ಫೈಲ್‌' 2022ರ ಜುಲೈ 26ರಂದು ಬಹಿರಂಗಗೊಳಿಸಿತ್ತು.

https://stack.thefile.in/2022/07/governance/12709/

ಹೊಸಪೇಟೆಯಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಾಗಿ ಕಾಯ್ದಿರಿಸಿದ್ದ ಜಮೀನಿನ ಪೈಕಿ 5 ಎಕರೆಯನ್ನು ರಾಷ್ಟ್ರೋತ್ಥಾನ ಪರಿಷತ್‌ಗೆ ಜಮೀನು ಮಂಜೂರು ಮಾಡಲು ಸರ್ಕಾರವು ಪ್ರಕ್ರಿಯೆ ಆರಂಭಿಸಿದೆ. ಕಾನೂನು ಇಲಾಖೆಯು ಈಗಾಗಲೇ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ಈ ಕುರಿತು 2022ರ ಜುಲೈ 29ರಂದು ವರದಿ ಪ್ರಕಟಿಸಿತ್ತು.

https://stack.thefile.in/2022/07/governance/12762/

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಹೆಸರಿಗೆ ಕರ್ನಾಟಕ ನೀರಾವರಿ ನಿಗಮದ 2 ಎಕರೆ ಜಮೀನನ್ನು ನೋಂದಣಿ ಮಾಡಿಕೊಡಬೇಕು ಎಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷರು ಬರೆದಿದ್ದ ಪತ್ರವು ಬಹಿರಂಗಗೊಳಿಸಿದ ನಂತರ ಕರ್ನಾಟಕ ವಿಧಾನಪರಿಷತ್‌ನ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್‌ ಅವರು ವಿರೋಧ ವ್ಯಕ್ತಪಡಿಸಿದ್ದರು. ಇದಾದ ನಂತರವೂ ಜಲಸಂಪನ್ಮೂಲ ಇಲಾಖೆಯು ಕಂದಾಯ ಇಲಾಖೆಯ ಅಭಿಪ್ರಾಯ ಕೋರಿತ್ತು. ಈ ಕುರಿತು 2022ರ ಆಗಸ್ಟ್‌ 1ರಂದು ವರದಿ ಪ್ರಕಟಿಸಿತ್ತು.

https://stack.thefile.in/2022/08/governance/12793/

 

ರಾಷ್ಟ್ರೋತ್ಥಾನ ಪರಿಷತ್‌ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈ ಹಿಂದೆ 76 ಎಕರೆ ಜಮೀನು ಮಂಜೂರು ಮಾಡಿದ್ದನ್ನು ಸಿಎಜಿ ವರದಿಯಲ್ಲಿ ಆಕ್ಷೇಪಿಸಲಾಗಿತ್ತು. ಈ ವರದಿಯನ್ನು ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಚರ್ಚೆಗೆ ಕೈಗೆತ್ತಿಕೊಂಡಿತ್ತು. ಈ ಸಮಿತಿಗೆ ಕಂದಾಯ ಇಲಾಖೆಯು ಯಾವುದೇ ವರದಿಯನ್ನೂ ಸಲ್ಲಿಸಿರಲಿಲ್ಲ.

Tags: B S YediyurappaBasavaraj BommaiD K ShivakkumarGomala LandGovernment LandGovind karjolah d kumarswamyKarnataka Land Grants RulesKNNLPrabhu Chauhanr ashokRastrothana ParishadRevenue DepartmentSiddaramaiahಆನಂದ್‌ಸಿಂಗ್‌ಆರ್‌ ಅಶೋಕ್‌ಎಚ್‌ ಡಿ ಕುಮಾರಸ್ವಾಮಿಕರ್ನಾಟಕ ಭೂ ಮಂಜೂರಾತಿ ನಿಯಮಗಳುಕಾನೂನು ಇಲಾಖೆ ಅಸಮ್ಮತಿಗೋಮಾಳಗೋವಿಂದ ಕಾರಜೋಳಡಿ ಕೆ ಶಿವಕುಮಾರ್ಪರಿಶಿಷ್ಟ ವರ್ಗದ ವಿದ್ಯಾರ್ಥಿ ನಿಲಯಬಸವರಾಜ ಬೊಮ್ಮಾಯಿಬಹುಕೋಟಿ ಮೌಲ್ಯಬಿ ಎಸ್‌ ಯಡಿಯೂರಪ್ಪಮೊರಾರ್ಜಿ ದೇಸಾಯಿ ವಸತಿ ಶಾಲೆಯಲಹಂಕರಾಷ್ಟ್ರೋತ್ಥಾನ ಪರಿಷತ್‌ರಾಷ್ಟ್ರೋತ್ಥಾನ ಪರಿಷತ್‌ ಆದಾಯಸಂಘ ಪರಿವಾರಸಂಘ ಪರಿವಾರ ಮೆಚ್ಚಿಸಿದ ಅಶೋಕ್‌ಸರ್ಕಾರಿ ಜಮೀನುಸಿಎಜಿಸಿದ್ದರಾಮಯ್ಯಹುರುಳಿಚಿಕ್ಕನಹಳ್ಳಿಹೆಸರಘಟ್ಟಹೊಸಪೇಟೆ
Advertisement Banner
Previous Post

ಜಿಐಎಸ್‌ ಪರವಾನಿಗೆ; ಸರ್ಕಾರಿ ಸಂಸ್ಥೆ ಬದಿಗಿರಿಸಿ ಖಾಸಗಿ ಕಂಪನಿಗೆ 65 ಕೋಟಿ ಪಾವತಿ

Next Post

ರಾಜಕೀಯ ಮೀಸಲಾತಿ; ನಿ.ನ್ಯಾಯಮೂರ್ತಿ ಭಕ್ತವತ್ಸಲ ವರದಿಯಲ್ಲಿ ಮೋದಿ ರಾಜಕೀಯ ವೃತ್ತಿ ಜೀವನ ಉಲ್ಲೇಖ

thefilestack

thefilestack

Next Post

ರಾಜಕೀಯ ಮೀಸಲಾತಿ; ನಿ.ನ್ಯಾಯಮೂರ್ತಿ ಭಕ್ತವತ್ಸಲ ವರದಿಯಲ್ಲಿ ಮೋದಿ ರಾಜಕೀಯ ವೃತ್ತಿ ಜೀವನ ಉಲ್ಲೇಖ

Recommended

ಪ್ರಗತಿ ಕಾಣದ ‘ಪ್ರಗತಿ ಕಾಲೋನಿ’ ಯೋಜನೆ; ಮಂಜೂರಾದ ಶೇ.50 ರಷ್ಟೂ ಹಣ ನೀಡದ ಸರ್ಕಾರ

7 months ago

ಕೇತಗಾನಹಳ್ಳಿ ಭೂ ಅಕ್ರಮ; ಎಸ್‌ಐಟಿ ಕೈ ಸೇರಿದ ಹೊಸ ಸರ್ವೆ ವರದಿ, 5.25 ಎಕರೆ ಒತ್ತುವರಿಯಾಗಿದೆಯೇ?

12 months ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd