the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

ರೆಡ್ಡೀಸ್‌ ಲ್ಯಾಬ್‌ ಉದ್ಧಟತನ!; ಮಾರುಕಟ್ಟೆಗೆ 25,117 ರೆಮ್‌ಡಿಸಿವಿರ್‌ ವಯಲ್‌, ಸರ್ಕಾರಕ್ಕೆ ಒಂದೂ ಇಲ್ಲ

thefilestack by thefilestack
May 18, 2021
in GOVERNANCE
0
0
SHARES
1
VIEWS
Share on FacebookShare on Twitter

ಬೆಂಗಳೂರು; ಡಿ2ಜಿ ತಯಾರಿಸುತ್ತಿರುವ ಡಾ ರೆಡ್ಡೀಸ್‌ ಲ್ಯಾಬೋರೇಟರಿ ಕಂಪನಿ ಸೇರಿ ಮೂರು ಕಂಪನಿಗಳು ಏಪ್ರಿಲ್‌ 21ರಿಂದ ಮೇ 16ರವರೆಗೂ ಒಂದೇ ಒಂದು ರೆಮ್‌ಡಿಸಿವಿರ್‌ ವಯಲ್‌ನ್ನೂ ಸರ್ಕಾರಕ್ಕೆ ಪೂರೈಕೆ ಮಾಡಿಲ್ಲ. ರೆಮ್‌ಡಿಸಿವಿರ್‌ ಹಂಚಿಕೆ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರವು ನೀಡಿದ್ದ ಗುರಿಯನ್ನು ತಲುಪಬೇಕಿದ್ದ ಈ ಮೂರು ಕಂಪನಿಗಳು ರಾಜ್ಯ ಸರ್ಕಾರಕ್ಕೆ ಒಂದೇ ಒಂದು ವಯಲ್‌ ನೀಡದೇ ಸರ್ಕಾರದ ಸೂಚನೆಯನ್ನೂ ಗಾಳಿಗೆ ತೂರಿವೆ.

ಕೇಂದ್ರ ಸರ್ಕಾರವು ಮೇ 17ರಿಂದ ಮೇ 23ರವರೆಗೆ ವಿವಿಧ ರಾಜ್ಯಗಳ ಬಳಕೆಗಾಗಿ ಹಂಚಿಕೆ ಮಾಡಿರುವ 23 ಲಕ್ಷ ವಯಲ್ಸ್‌ನಲ್ಲಿ ರಾಜ್ಯಕ್ಕೆ 10 ಲಕ್ಷ ವಯಲ್‌ ಲಭ್ಯವಿದೆ ಎಂದು ಕೇಂದ್ರ ಸಚಿವ ಡಿ ವಿ ಸದಾನಂದಗೌಡ ಅವರು ಹೇಳಿಕೆ ಬಿಡುಗಡೆ ಮಾಡಿರುವ ಬೆನ್ನಲ್ಲೇ ಡಾ ರೆಡ್ಡೀಸ್‌ ಲ್ಯಾಬೋರೇಟರಿ ಸೇರಿದಂತೆ ಮೂರು ಕಂಪನಿಗಳು ಈವರೆವಿಗೂ ಒಂದೇ ಒಂದು ವಯಲ್‌ ಬಿಡುಗಡೆ ಮಾಡದಿರುವುದು ಮುನ್ನೆಲೆಗೆ ಬಂದಿದೆ.

2021ರ ಏಪ್ರಿಲ್‌ 21ರಿಂದ ಮೇ 16ವರೆಗೆ ರಾಜ್ಯ ಸರ್ಕಾರಕ್ಕೆ 1,83,625 ವಯಲ್‌ಗಳು ಬಿಡುಗಡೆಯಾಗಿವೆ. ಇದೇ ಅವಧಿಯಲ್ಲಿ ಮುಕ್ತ ಮಾರುಕಟ್ಟೆಗೆ 3,31,927 ವಯಲ್‌ ಸೇರಿದಂತೆ ಒಟ್ಟು 5,15,552 ವಯಲ್‌ಗಳು ಸರಬರಾಜು ಆಗಿವೆ.

ಡಾ ರೆಡ್ಡೀಸ್‌ ಲ್ಯಾಬೋರೇಟರಿಗೆ ಒಟ್ಟು 43,700 ವಯಲ್‌ಗಳ ಹಂಚಿಕೆಗೆ ಗುರಿ ನಿಗದಿಪಡಿಸಲಾಗಿತ್ತು. ಆದರೆ ಡಾ ರೆಡ್ಡೀಸ್‌ ಲ್ಯಾಬೋರೇಟರಿ ಮೇ 16ರ ಅಂತ್ಯಕ್ಕೆ ಮುಕ್ತ ಮಾರುಕಟ್ಟೆಗೆ 25,117 ವಯಲ್‌ಗಳನ್ನು ಬಿಡುಗಡೆ ಮಾಡಿದೆಯೇ ವಿನಃ ರಾಜ್ಯ ಸರ್ಕಾರಕ್ಕೆ ಒಂದೇ ಒಂದು ವಯಲ್‌ ಸರಬರಾಜು ಮಾಡದಿರುವುದು ಔಷಧ ನಿಯಂತ್ರಕರ ಕಚೇರಿ ದಾಖಲೆಗಳಿಂದ ತಿಳಿದು ಬಂದಿದೆ.

ಅದೇ ರೀತಿ ಹಿಟಾರಿಯೋ, ಸಿಪ್ಲಾ ಮತ್ತು ಕ್ಯಾಡಿಲಾ ಕಂಪನಿಯೂ ಸಹ ರಾಜ್ಯ ಸರ್ಕಾರಕ್ಕೆಒಂದೇ ಒಂದು ವಯಲ್‌ ಬಿಡುಗಡೆ ಮಾಡಿಲ್ಲ. ಆದರೆ ಹಿಟಾರಿಯೋ ಕಂಪನಿಯು 1,43,250 ಮತ್ತು ಕ್ಯಾಡಿಲಾ ಕಂಪನಿಯು 400, ಸಿಪ್ಲಾ ಕಂಪನಿಯು 53,860 ವಯಲ್‌ಗಳನ್ನು ಮುಕ್ತ ಮಾರುಕಟ್ಟೆಗೆ ಪೂರೈಕೆ ಮಾಡಿರುವುದು ದಾಖಲೆಯಿಂದ ಗೊತ್ತಾಗಿದೆ.

ಏಪ್ರಿಲ್‌ 21ರಿಂದ ಮೇ 9ರವರೆಗೆ ಒಟ್ಟು 7 ಕಂಪನಿಗಳು ಒಟ್ಟು 3,01,300 ವಯಲ್‌ಗಳನ್ನು ಸರಬರಾಜು ಮಾಡಬೇಕಿತ್ತು. ಹಿಟಾರಿಯೋ ಕಂಪನಿಯು 83,000, ಮೈಲಾನ್‌ 1,27,300, ಸಿಪ್ಲಾ 30,000, ಸಿನ್‌ಜಿನ್‌ 27,000, ಜ್ಯುಬಿಲಿಯೆಂಟ್‌ 32,000, ಡಾ ರೆಡ್ಡೀಸ್‌ 2,000 ವಯಲ್‌ಗಳನ್ನು ಹಂಚಿಕೆ ಮಾಡಲು ಗುರಿ ನಿಗದಿಪಡಿಸಲಾಗಿತ್ತು.

ನಿಗದಿತ ಗುರಿ ಪ್ರಕಾರ ರೆಮ್‌ಡಿಸಿವಿರ್‌ಗಳನ್ನು ಪೂರೈಕೆ ಮಾಡದ ಕಾರಣಕ್ಕೆ ನೋಟೀಸ್‌ ನೀಡಿದ ನಂತರವೂ ಡಾ ರೆಡ್ಡೀಸ್‌, ಹಿಟಾರಿಯೋ ಕಂಪನಿ ರಾಜ್ಯ ಸರ್ಕಾರಕ್ಕೆ ಒಂದೇ ಒಂದು ವಯಲ್‌ ಬಿಡುಗಡೆ ಮಾಡದೇ ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವುದು ಲಾಭಕೋರತಕ್ಕೆ ಹಿಡಿದ ಕೈಗನ್ನಡಿಯಾಗಿದೆ.

Tags: B S YediyurappaCadilaChief SecretaryCiplaCovid 19D K ShivakumarD V Sadananda GowdaDR C N Ashwath Narayandr k sudhakarDr Reddy's Laboratoriesh d kumarswamyHETERO DrugsJawaid AktharJubilant GenericsMylanRemdesivir VialsSiddaramaiahSyngenಎಚ್‌ ಡಿ ಕುಮಾರಸ್ವಾಮಿಕೋವಿಡ್‌ 19ಕ್ಯಾಡಿಲಾಜಾವೇದ್‌ ಅಖ್ತರ್‌ಜ್ಯುಬಿಲಿಯೆಂಟ್‌ಡಾ ಕೆ ಸುಧಾಕರ್‌ಡಾ ರೆಡ್ಡೀಸ್‌ ಲ್ಯಾಬೋರೇಟರಿಡಾ ಸಿ ಎನ್‌ ಅಶ್ವಥ್‌ ನಾರಾಯಣ್‌ಡಿ ಕೆ ಶಿವಕುಮಾರ್ಡಿ ವಿ ಸದಾನಂದಗೌಡಬಿ ಎಸ್‌ ಯಡಿಯೂರಪ್ಪಮುಖ್ಯ ಕಾರ್ಯದರ್ಶಿಮೈಲಾನ್‌ರೆಮ್‌ಡಿಸಿವಿರ್‌ಸಿದ್ದರಾಮಯ್ಯಸಿನ್‌ಜಿನ್‌ಸಿಪ್ಲಾಹಿಟಾರಿಯೋ
Advertisement Banner
Previous Post

ಕೋವಿಡ್‌; ಡಬ್ಲ್ಯೂಎಚ್‌ಒ ಎಚ್ಚರಿಕೆ ಮಧ್ಯೆಯೂ 1 ಕೋಟಿ ಮೌಲ್ಯದ ಐವರ್‌ಮೆಕ್ಟಿನ್‌ ಖರೀದಿ

Next Post

80.43 ಕೋಟಿ ರು.ಗೆ ಅನುಮೋದನೆ; ನಿಗಮದ ತೆವಳಿಕೆಯಿಂದಾಗಿ ಕೋವಿಡ್‌ ಔಷಧಕ್ಕೂ ಕೊರತೆ?

thefilestack

thefilestack

Next Post

80.43 ಕೋಟಿ ರು.ಗೆ ಅನುಮೋದನೆ; ನಿಗಮದ ತೆವಳಿಕೆಯಿಂದಾಗಿ ಕೋವಿಡ್‌ ಔಷಧಕ್ಕೂ ಕೊರತೆ?

Discussion about this post

Recommended

ಒಂದೇ ಒಂದು ಅಗಳು ಅಕ್ಕಿಯೂ ಇಲ್ಲ; ವಲಸಿಗರ ತಾರತಮ್ಯವೂ ನಿಂತಿಲ್ಲ

6 years ago

ಹಣದ ಥೈಲಿ ಸಮೇತ ಸಿಕ್ಕಿಬಿದ್ದ ಸರ್ಕಾರಿ ನೌಕರ; ಎಸಿಬಿ ತನಿಖೆ ಮೇಲೆ ಪ್ರಭಾವ ಬೀರಿದ ಬಿಜೆಪಿ ಶಾಸಕಿ?

6 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd