the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home LEGISLATURE

ಲೆಕ್ಕಪರಿಶೋಧನೆಗೆ ಕುಲಪತಿಗಳಿಂದಲೇ ಅಸಹಕಾರ, ಬೇಜವಾಬ್ದಾರಿ; ಕಾಗದಪತ್ರಗಳ ಸಮಿತಿ ವರದಿ

thefilestack by thefilestack
March 27, 2022
in LEGISLATURE
0
0
SHARES
0
VIEWS
Share on FacebookShare on Twitter

ಬೆಂಗಳೂರು; ವಿಶ್ವವಿದ್ಯಾಲಯಗಳಿಗೆ ನೀಡಿರುವ ಕೋಟ್ಯಂತರ ರು ಮೊತ್ತದ ಅನುದಾನವು ಸದ್ಬಳಕೆಯಾಗಿದೆಯೇ ಇಲ್ಲವೇ ಎಂಬ ಕುರಿತು ಲೆಕ್ಕ ಪರಿಶೋಧನೆ ಮಾಡಲು ತೆರಳುವ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಅಧಿಕಾರಿಗಳಿಗೆ ರಾಜ್ಯದ ಹಲವು ವಿಶ್ವವಿದ್ಯಾಲಯಗಳ ಉಪ ಕುಲಪತಿಗಳು ಅಸಹಕಾರ ತೋರುತ್ತಿದ್ದಾರೆ. ಮತ್ತು ಕೆಲ ವಿಶ್ವವಿದ್ಯಾಲಯಗಳು ಲೆಕ್ಕಪತ್ರಗಳನ್ನು ತಪಾಸಣೆಗೆ ನೀಡದೇ ಬೇಜವಾಬ್ದಾರಿಯಿಂದ ವರ್ತಿಸಿರುವುದು ಇದೀಗ ಬಹಿರಂಗವಾಗಿದೆ.

 

ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿರುವ ಬೆಂಗಳೂರು, ತುಮಕೂರು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮತ್ತು ಮಂಗಳೂರು ವಿಶ್ವವಿದ್ಯಾಲಯವು ತನ್ನ ವಾರ್ಷಿಕ ವರದಿ ಮತ್ತು ಲೆಕ್ಕ ಪರಿಶೋಧನಾ ವರದಿಗಳನ್ನು ವಿಧಾನಮಂಡಲಕ್ಕೆ ಸಕಾಲದಲ್ಲಿ ಸಲ್ಲಿಸದೆಯೇ ವಿಳಂಬ ಧೋರಣೆ ಪ್ರದರ್ಶಿಸಿವೆ.

 

ಈ ಕುರಿತು ಕರ್ನಾಟಕ ವಿಧಾನಸಭೆಯ ವಿಧಾನಮಂಡಲದ ಸಭೆಯ ಮುಂದಿಡಲಾದ ಕಾಗದಪತ್ರಗಳ ಸಮಿತಿಯು 2020-21ನೇ ಸಾಲಿಗೆ ಸಂಬಂಧಿಸಿದ ಸಲ್ಲಿಸಿರುವ 37ನೇ ವರದಿಯಲ್ಲಿ ವಿಶ್ವವಿದ್ಯಾಲಯಗಳ ವಿಳಂಬದ ಕುರಿತು ಅಸಮಾಧಾನ ವ್ಯಕ್ತಪಡಿಸಿದೆ. ಈ ವರದಿಯ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಕಾಗದಪತ್ರಗಳ ಸಮಿತಿ ವರದಿ

 

ತುಮಕೂರು ವಿ ವಿ ಕುಲಪತಿ ಅಸಹಕಾರ

 

2016-17ರಿಂದ 2019-20ರವರೆಗಿನ ಲೆಕ್ಕ ಪರಿಶೋಧನೆ ನಡೆಸಲು ರಾಜ್ಯ ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ತುಮಕೂರು ವಿಶ್ವವಿದ್ಯಾಲಯದ ಕುಲಪತಿಗಳು ಅಸಹಕಾರ ತೋರಿಸಿದ್ದರು ಎಂಬ ಅಂಶ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. 2017-18ನೇ ಸಾಲಿನ ಲೆಕ್ಕ ಪರಿಶೋಧನೆಯನ್ನು ಅಂತಿಮಗೊಳಿಸಲು ಕೆಲವೊಂದು ಆಂತರಿಕ ಸಮಸ್ಯೆಗಳು ಉಂಟಾಗಿವೆ ಎಂದು ಹೇಳಿದ್ದ ಲೆಕ್ಕಕಪತ್ರ ಇಲಾಖೆಯ ಹೆಚ್ಚುವರಿ ನಿರ್ದೇಶಕರು 2019ರ ಜುಲೈ 19ರಂದು ತೆರಳಿದ್ದ ವೇಳೆಯಲ್ಲಿ ಉಪ ಕುಲಪತಿಗಳು ಸಹಕಾರ ನೀಡಲಿಲ್ಲ. ಅವರು ಯಾವುದೇ ಕಾರಣ ನೀಡದೇ ಸಭೆಯಿಂದ ನಿರ್ಗಮಿಸಿದರು ಎಂಬ ಅಂಶವು ವರದಿಯಲ್ಲಿ ವಿವರಿಸಲಾಗಿದೆ.

 

‘2017-18ನೇ ಸಾಲಿನ ಲೆಕ್ಕ ಪರಿಶೋಧನಾ ಕಾರ್ಯ ಕೈಗೊಂಡಿರುವ ಸಂದರ್ಭದಲ್ಲಿ ತುಮಕೂರು ವಿಶ್ವವಿದ್ಯಾಲಯಕ್ಕೆ ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳು ವಿಶ್ವವಿದ್ಯಾಲಯ ಅಧಿಕಾರಿಗಳಿಗೆ ತಿಳಿಸಿ ಹೋಗಿದ್ದರು. ಆದರೂ ವಿಶ್ವವಿದ್ಯಾಲಯ ಉಪ ಕುಲಪತಿಗಳು ಅಸಹಕಾರ ಮಾಡಿರುತ್ತಾರೆ. ಈ ಕುರಿತು ರಾಜ್ಯ ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳು 2017-18ನೇ ಸಾಲಿನ ಲೆಕ್ಕ ಪರಿಶೋಧನಾ ಕಾರ್ಯ ಮಾಡಲು ಹೋಗಿದ್ದಾಗ ಎದುರಾಗಿದ್ದ ತೊಡಕನ್ನು ಸಮಿತಿ ಮುಂದೆ ತೋಡಿಕೊಂಡಿದ್ದಾರೆ,’ ಎಂದು ವರದಿಯಲ್ಲಿ ಹೇಳಲಾಗಿದೆ.

 

ವಿಶ್ವವಿದ್ಯಾಲಯ ಉಪ ಕುಲಪತಿಗಳು ಅಸಹಕಾರ ನಡವಳಿ ಕುರಿತು ಗಂಭೀರವಾಗಿ ಪರಿಗಣಿಸಿರುವ ಸಮಿತಿಯು ರಾಜ್ಯಪತ್ರ ಲೆಕ್ಕಪತ್ರ ಇಲಾಖೆಯವರು ಲೆಕ್ಕ ಪರಿಶೋಧನೆ ಮಾಡಲು ತೆರಳಿದಾಗ ಅಸಹಕಾರ ನೀಡುವುದು ವಿಶ್ವವಿದ್ಯಾಲಯಕ್ಕೆ ಶೋಭೆ ತರುವಂತಹದ್ದಲ್ಲ. ಈ ರೀತಿಯ ನಡವಳಿಕೆ ಸೂಕ್ತ ಹಾಗೂ ಸಮಂಜಸವಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿರುವುದು ವರದಿಯಿಂದ ತಿಳಿದು ಬಂದಿದೆ.

 

ಲೆಕ್ಕಪತ್ರಗಳ ತಪಾಸಣೆಗೆ ನೀಡದ ಮಂಗಳೂರು ವಿವಿ

 

ಮಂಗಳೂರು ವಿಶ್ವವಿದ್ಯಾಲಯವು 2020-21ನೇ ಸಾಲಿನ ವಾರ್ಷಿಕ ವರದಿ ಮತ್ತು 2017-18ರಿಂದ 2020-21ನೇ ಸಾಲಿನವರೆಗಿನ ಲೆಕ್ಕಪರಿಶೋಧನಾ ವರದಿಗಳನ್ನು ವಿಧಾನಮಂಡಲಕ್ಕೆ ಸಲ್ಲಿಸದಿರುವ ಕುರಿತು ಸಮಿತಿಯು ಇಲಾಖಾಧಿಕಾರಿಗಳಿಂದ ಚರ್ಚಿಸಿದೆ. ‘2018-19ನೇ ಸಾಲಿನ ಲೆಕ್ಕಪತ್ರಗಳನ್ನು ಪುನರ್‌ ಪರಿಶೀಲನೆ ಮಾಡಲಾಗುತ್ತಿದೆ. 2019-20ನೇ ಸಾಲಲಿನ ಲೆಕ್ಕಪತ್ರಗಳನ್ನು ಮಂಗಳೂರು ವಿಶ್ವವಿದ್ಯಾಲಯದವರು ನೀಡಿರುತ್ತಾರೆ. ಆದರೆ 2020-21ನೇ ಸಾಲಿನ ಲೆಕ್ಕಪತ್ರಗಳನ್ನು ತಪಾಸಣೆತೆ ನೀಡಿರುವುದಿಲ್ಲ,’ ಎಂದು ಸಭೆಯಲ್ಲಿ ರಾಜ್ಯ ಲೆಕ್ಕಪತ್ರ ಇಲಾಖೆಯವರು ಸಮಿತಿಗೆ ವಿವರಿಸಿರುವುದು ವರದಿಯಿಂದ ಗೊತ್ತಾಗಿದೆ.

 

ಅಲ್ಲದೆ ಮಂಗಳೂರು ವಿಶ್ವವಿದ್ಯಾಲಯವು ಕಳೆದ 4 ವರ್ಷಗಳ ವಾರ್ಷಿಕ ಲೆಕ್ಕ ಪರಿಶೋಧನೆಯನ್ನೇ ನಡೆಸಿಲ್ಲ. ಇದು ವಿಶ್ವವಿದ್ಯಾಲಯದ ಅಧಿಕಾರಿಗಳ ಬೇಜವಾಬ್ದಾರಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಸಮಿತಿಯು ವಾರ್ಷಿಕ ವರದಿ ಮತ್ತು ಲೆಕ್ಕ ಪರಿಶೋಧನಾ ವರದಿಗಳನ್ನು ಸಕಾಲದಲ್ಲಿ ವಿಧಾನಮಂಡಲಕ್ಕೆ ಸಲ್ಲಿಸುವುದು ಇಲಾಖಾಧಿಕಾರಿಗಳ ಜವಾಬ್ದಾರಿ ಮತ್ತು ಹೊಣೆಗಾರಿಕೆಯಾಗಿದೆ. ಬಾಕಿ ಇರುವ ವಾರ್ಷಿಕ ವರದಿ ಮತ್ತು ಲೆಕ್ಕ ಪರಿಶೋಧನಾ ವರದಿಗಳನ್ನು ಇಲಾಖಾಧಿಕಾರಿಗಳು ಸಮಿತಿಯಲ್ಲಿ ಒಪ್ಪಿಕೊಂಡಂತೆ 3 ತಿಂಗಳೊಳಗಾಗಿ ವಿಧಾನಮಂಡಲಕ್ಕೆ ಸಲ್ಲಿಸಬೇಕು ಎಂದು ಸಮಿತಿಯು ಸೂಚಿಸಿದೆ.

Tags: Annual Audit ReportauditBasavaraj BommaiD K ShivakumarDR C N Ashwath Narayayanh d kumarswamyHigher EducationMangalore UniersityNon Co OperationS R MaheshSiddaramaiahState AccountsTumkuru UniversityUniversitiesvice chancellorY N Siddegowdaಉನ್ನತ ಶಿಕ್ಷಣಎಚ್‌ ಡಿ ಕುಮಾರಸ್ವಾಮಿಕಾಗದ ಪತ್ರಗಳ ಸಮಿತಿಕುಲಪತಿಗಳ ಅಸಹಕಾರಕುಲಪತಿಗಳುಕುಲಸಚಿವರುಡಾ ಸಿ ಎನ್‌ ಅಶ್ವಥ್‌ ನಾರಾಯಣ್‌ಡಿ ಕೆ ಶಿವಕುಮಾರ್ತುಮಕೂರು ವಿಶ್ವವಿದ್ಯಾಲಯಬಸವರಾಜ ಬೊಮ್ಮಾಯಿಮಂಗಳೂರು ವಿಶ್ವವಿದ್ಯಾಲಯಲೆಕ್ಕ ಪರಿಶೋಧನೆವಾರ್ಷಿಕ ವರದಿವಿಶ್ವವಿದ್ಯಾಲಗಳುವೈ ಎನ್‌ ಸಿದ್ದೇಗೌಡಸಾ ರಾ ಮಹೇಶ್‌ಸಿದ್ದರಾಮಯ್ಯ
Advertisement Banner
Previous Post

ಎರಡು ವರ್ಷದಲ್ಲಿ 3.40 ಲಕ್ಷ ಕ್ರಿಮಿನಲ್‌ ಪ್ರಕರಣ ದಾಖಲು; ಕಾನೂನು ಸುವ್ಯವಸ್ಥೆ ಕುಸಿತವಲ್ಲವೇ?

Next Post

ಸಚಿವ ಮಾಧುಸ್ವಾಮಿ ಬೆಂಗಾವಲಿಗೆ ಸಂದೇಹಾಸ್ಪದ ನಡವಳಿಕೆ ಹೊಂದಿರುವ ಇನ್ಸ್‌ಪೆಕ್ಟರ್‌ ನಿಯೋಜನೆ

thefilestack

thefilestack

Next Post

ಸಚಿವ ಮಾಧುಸ್ವಾಮಿ ಬೆಂಗಾವಲಿಗೆ ಸಂದೇಹಾಸ್ಪದ ನಡವಳಿಕೆ ಹೊಂದಿರುವ ಇನ್ಸ್‌ಪೆಕ್ಟರ್‌ ನಿಯೋಜನೆ

Recommended

ಕೆಪಿಎಸ್ಸಿಗೆ ಶಿಕ್ಷಣ ಇಲಾಖೆ ಅಸಹಕಾರ; ಶಿಕ್ಷಣ ಸಂಸ್ಥೆಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ಸಿಗದ ಒಪ್ಪಿಗೆ ಪತ್ರ

2 years ago

ಕಚೇರಿ ನಿರ್ಮಾಣಕ್ಕೆ ಪಾಲಿಕೆ ಆಸ್ತಿ ಮೇಲೆ ಕಣ್ಣು ಹಾಕಿದ ಕೆಪಿಸಿಸಿ; ಕಡಿಮೆ ಬೆಲೆಯಲ್ಲಿ ಮಂಜೂರಾತಿಗೆ ಒತ್ತಡ

1 year ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd