the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

ಲೈಂಗಿಕ ಕಿರುಕುಳ ಆರೋಪ; ಡಿಐಜಿ ವಿರುದ್ಧ ಲಾಜಿಸ್ಟಿಕ್ಸ್‌ ಕಂಪನಿ ಮಹಿಳಾ ಉದ್ಯೋಗಿ ದೂರು

thefilestack by thefilestack
February 9, 2021
in GOVERNANCE
0
0
SHARES
0
VIEWS
Share on FacebookShare on Twitter

ಬೆಂಗಳೂರು: ವಿಧಾನ ಪರಿಷತ್‌ನ ಮಾಜಿ ಸದಸ್ಯ ಹಾಗೂ ಬಿಜೆಪಿ ಪ್ರಭಾವಿ ಮುಖಂಡರೊಬ್ಬರಿಗೆ ಸೇರಿರುವ ಪ್ರತಿಷ್ಠಿತ ಸಾರಿಗೆ ಮತ್ತು ಲಾಜಿಸ್ಟಿಕ್ಸ್‌ ಕಂಪನಿಯ ಮಹಿಳಾ ಉದ್ಯೋಗಿಯೊಬ್ಬರಿಗೆ ಅಶ್ಲೀಲ ಸಂದೇಶಗಳನ್ನು ಕಳಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಗುರುತರ ಆರೋಪಕ್ಕೆ ಸಿಐಡಿ ಡಿಐಜಿ ದಿಲೀಪ್‌ ಎಂಬುವರು ಗುರಿಯಾಗಿದ್ದಾರೆ. ಈ ಸಂಬಂಧ ಗೃಹ ಇಲಾಖೆಗೆ ಮಹಿಳಾ ಉದ್ಯೋಗಿ ಲಿಖಿತ ದೂರನ್ನೂ ಸಲ್ಲಿಸಿದ್ದಾರೆ.

ಬಡ ಕುಟುಂಬಗಳಿಗೆ ನೆರವು ನೀಡುವ ಸರ್ಕಾರೇತರ ಸಂಸ್ಥೆಯಲ್ಲೂ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಉದ್ಯೋಗಿ ಸಲ್ಲಿಸಿರುವ ದೂರಿನ ಆಧಾರದ ಮೇಲೆ ಗೃಹ ಇಲಾಖೆ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ. ದೂರಿನ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ. ದೂರು ಸಲ್ಲಿಕೆಯಾಗಿದೆ ಎಂಬುದನ್ನು ‘ದಿ ಫೈಲ್‌’ ಖಚಿತಪಡಿಸಿಕೊಂಡಿದೆ. ಗೌಪ್ಯತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ದೂರಿನ ಪ್ರತಿಯನ್ನು ಇಲ್ಲಿ ಪ್ರಕಟಿಸುತ್ತಿಲ್ಲ.

ಕೇಂದ್ರ ಸಚಿವರೊಬ್ಬರೊಂದಿಗೆ ನಿಕಟವಾಗಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಲಾಗಿರುವ ಸಿಐಡಿ ಡಿಐಜಿ ದಿಲೀಪ್‌ ಅವರು ಹುಬ್ಬಳ್ಳಿ ಧಾರವಾಡ ಪೊಲೀಸ್‌ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ದೂರಿನಿಂದ ಗೊತ್ತಾಗಿದೆ.

ದೂರಿನಲ್ಲೇನಿದೆ?

ಪ್ರತಿಷ್ಠಿತ ಸಾರಿಗೆ ಮತ್ತು ಲಾಜಿಸ್ಟಿಕ್ಸ್‌ ಸಮೂಹ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಉದ್ಯೋಗಿ, ವಿವಿಧ ಸಂಸ್ಥೆಗಳ ಐ ಟಿ ವಿಭಾಗಗಳನ್ನು ಮುನ್ನೆಡೆಸುತ್ತಿರುವ ಮತ್ತೊಬ್ಬ ಸ್ನೇಹಿತೆಯೊಂದಿಗೆ ಕಳೆದ ನವೆಂಬರ್‌ ಮತ್ತು ಡಿಸೆಂಬರ್‌ನಲ್ಲಿ ಹುಬ್ಬಳ್ಳಿಯಲ್ಲಿ ದಿಲೀಪ್‌ ಅವರನ್ನು ಭೇಟಿ ಆಗಿದ್ದರು. ಈ ವೇಳೆ ಮೊಬೈಲ್‌ ನಂಬರ್‌ನ್ನು ಪಡೆದಿದ್ದ ದಿಲೀಪ್‌ ಅವರು ಮಹಿಳಾ ನೌಕರರೊಬ್ಬರಿಗೆ ರಾತ್ರಿ 11 ರ ಹೊತ್ತಿನಲ್ಲಿ ಕರೆ ಮಾಡಿ ತಮ್ಮನ್ನು ಅವರ ನಿವಾಸದಲ್ಲಿ ಸಂಪರ್ಕಿಸಲು ಹೇಳಿದ್ದರು ಎಂಬ ಸಂಗತಿ ದೂರಿನಿಂದ ತಿಳಿದು ಬಂದಿದೆ.

ದಿಲೀಪ್‌ ಅವರ ಸೂಚನೆಯಂತೆ ಅವರ ನಿವಾಸದಲ್ಲಿ ಮಹಿಳಾ ಉದ್ಯೋಗಿ ಅವರನ್ನು ಭೇಟಿಯಾಗಿದ್ದರು. ಆದರೆ ಮನೆಯಲ್ಲಿ ಅವರ ಕುಟುಂಬ ಸದಸ್ಯರು ಇರಲಿಲ್ಲ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ತಾವೊಬ್ಬರೇ ಮನೆಯಲ್ಲಿ ಇರುವುದು ಎಂದು ತಿಳಿಸಿದ್ದರು. ಜ್ಯೂಸ್‌ ಕುಡಿಯಲು ಹೇಳಿದ್ದ ದಿಲೀಪ್‌ ಅವರು ತಮ್ಮ ಸೌಂದರ್ಯದ ಬಗ್ಗೆ ವರ್ಣಿಸಿದ್ದರು. ಅಲ್ಲದೆ ಮಾತನಾಡುತ್ತಲೇ ತಮ್ಮ ಸನಿಹಕ್ಕೆ ಬಂದಿದ್ದರಲ್ಲದೆ ತಮ್ಮನ್ನು ತುಂಬಾ ಇಷ್ಟಪಡುತ್ತಿದ್ದೇನೆ ಎಂದು ಹೇಳಿದ್ದರು. ಹಾಗೆಯೇ ಸಂಬಂಧವಿರಿಸಿಕೊಳ್ಳಲು ಇಚ್ಛಿಸಿರುವುದಾಗಿಯೂ ತಿಳಿಸಿದ್ದರು. ಈಗಾಗಲೇ ತಮಗೆ ಮದುವೆಯಾಗಿದೆ ಎಂದು ಹೇಳಿ ಅ ಸ್ಥಳದಿಂದ ಹೊರಟಿದ್ದರು ಎಂಬ ಸಂಗತಿ ದೂರಿನಲ್ಲಿ ವಿವರಿಸಲಾಗಿದೆ.

ಅದೇ ದಿನ ತಮಗೆ ಒಟ್ಟು 12 ಅಶ್ಲೀಲ ಸಂದೇಶಗಳನ್ನು ಮೊಬೈಲ್‌ಗೆ ಕಳಿಸಿದ್ದರಲ್ಲದೆ ಅವರ ಮಾತಿಗೆ ಒಪ್ಪದಿದ್ದರೆ ತಮ್ಮ ಮೇಲೆ ಮೊಕದ್ದಮೆ ದಾಖಲಿಸಲಾಗುವುದು ಎಂಬ ಬೆದರಿಕೆಯನ್ನೂ ಒಡ್ಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಘಟನೆಯ ನಂತರ ಹುಬ್ಬಳ್ಳಿಯನ್ನು ತೊರೆದಿದ್ದ ಮಹಿಳಾ ಉದ್ಯೋಗಿ ಈಗ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಸಂಗತಿ ದೂರಿನಿಂದ ಗೊತ್ತಾಗಿದೆ.

ಬೆಂಗಳೂರಿಗೆ ಬಂದ ನಂತರ ದಿಲೀಪ್‌ ಅವರ ಬಗ್ಗೆ ಮಾಹಿತಿಯನ್ನು ಕಲೆ ಹಾಕಿರುವ ಬಗ್ಗೆಯೂ ದೂರಿನಲ್ಲಿ ವಿವರಿಸಿರುವ ಮಹಿಳಾ ಉದ್ಯೋಗಿ, ಧಾರವಾಡದಲ್ಲಿ ಮಹಿಳಾ ಉಪ ಪೊಲೀಸ್‌ ಆಯುಕ್ತರೊಂದಿಗೂ ಅದೇ ವರ್ತನೆ ತೋರಿದ್ದರು ಎಂದು ತಿಳಿಸಿದ್ದಾರೆ. ಆ ಮಹಿಳಾ ಉಪ ಪೊಲೀಸ್‌ ಆಯುಕ್ತರನ್ನು ತಮ್ಮ ಜೊತೆ ಮಲಗಲು ಬಲವಂತ ಮಾಡಿದ್ದರು. ಆದರೆ ಆ ಮಹಿಳಾ ಉಪ ಪೊಲೀಸ್‌ ಆಯುಕ್ತರು ಇದನ್ನು ನಿರಾಕರಿಸಿದ್ದರು. ಹೀಗಾಗಿ ದಿಲೀಪ್‌ ಅವರು ಅವರ ಬಗ್ಗೆ ಸಲ್ಲದ ಸುದ್ದಿಯನ್ನು ಹರಡಿದ್ದರು. ಅಲ್ಲದೆ ಆ ಮಹಿಳಾ ಉಪ ಪೊಲೀಸ್‌ ಆಯುಕ್ತರು ಮತ್ತೊಬ್ಬ ಎಸಿಪಿಯೊಂದಿಗೆ ಮಲಗುತ್ತಾರೆ ಎಂದು ಪ್ರಚುರಪಡಿಸಿದ್ದರು ಎಂಬ ಸಂಗತಿ ದೂರಿನಿಂದ ತಿಳಿದು ಬಂದಿದೆ.

ಇನ್ನು, ಐ ಟಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ನೇಹಿತೆಯೊಂದಿಗೂ ಇದೇ ವರ್ತನೆಯನ್ನು ತೋರಿದ್ದಾರೆ ಎಂಬ ಸಂಗತಿಯೂ ದೂರಿನಲ್ಲಿ ಪ್ರಸ್ತಾಪವಾಗಿದೆ. ಅವರಿಗೂ ಅಶ್ಲೀಲ ಸಂದೇಶಗಳನ್ನು ಕಳಿಸಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆಯಲ್ಲದೆ ಇದಕ್ಕೆ ಸಹಕರಿಸದಿದ್ದಕ್ಕೆ ಇಲಾಖೆಯಿಂದ ಬರಬೇಕಿದ್ದ ಬಿಲ್‌ಗಳನ್ನು ಅನುಮೋದಿಸಿರಲಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಮಹಿಳಾ ಉದ್ಯೋಗಿ ಇಷ್ಟಕ್ಕೇ ಸುಮ್ಮನಾಗಿಲ್ಲ. ಐಪಿಎಸ್‌ ಅಧಿಕಾರಿ ದಿಲೀಪ್‌ ಬಗ್ಗೆ ಇಲಾಖೆಯ ಹಿರಿಯ ನಾಲ್ವರು ಅಧಿಕಾರಿಗಳನ್ನು ವಿಚಾರಿಸಿ ಹಲವು ಸಂಗತಿಗಳನ್ನು ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ. ಮಂಗಳೂರಿನಲ್ಲಿ ಎಸ್ಪಿಯಾಗಿದ್ದ ವೇಳೆಯಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದರು ಎಂಬ ಆರೋಪವನ್ನು ದೂರಿನಲ್ಲಿ ತಿಳಿಸಿರುವ ಅವರು ಕಾರವಾರದಲ್ಲಿ ಮಹಿಳೆಯೊಂದಿಗೆ ಸಿಕ್ಕಿಬಿದ್ದಿದ್ದರು ಎಂದು ದೂರಿನಲ್ಲಿ ದೂರು ನೀಡಿರುವ ಮಹಿಳಾ ಉದ್ಯೋಗಿಯು ತಿಳಿಸಿದ್ದಾರೆ.

Tags: ACPB S YediyurappaBasavaraj BommaibjpCentral MinisterChief SecretaryCIDD K ShivakumarD Roopa Moudgil IPSDIGDR Rajanish Goelh d kumarswamyHome SecretaryHubbali DharwadIT DepartmentKamal PantMalini KrishnamurthyPolice CommissionerPraveen SoodPrhahalad JoshiR DilipSexual HarrasementSexual MessagesSiddaramaiahVijaya SankeshwarVRL Groupsಆರ್‌ ದಿಲೀಪ್‌ಎಚ್‌ ಡಿ ಕುಮಾರಸ್ವಾಮಿಎಸಿಪಿಐಟಿಕಮಲ್‌ ಪಂತ್‌ಕೇಂದ್ರ ಸಚಿವಗೃಹ ಕಾರ್ಯದರ್ಶಿಡಾ ರಜನೀಶ್‌ ಗೋಯಲ್‌ಡಿ ಕೆ ಶಿವಕುಮಾರ್ಡಿಐಜಿಪೊಲೀಸ್‌ ಆಯುಕ್ತರುಪ್ರವೀಣ್‌ ಸೂದ್‌ಪ್ರಹ್ಲಾದ್‌ ಜೋಷಿಬಸವರಾಜ ಬೊಮ್ಮಾಯಿಬಿ ಎಲ್‌ ಸಂತೋಷ್‌ಬಿ ಎಸ್‌ ಯಡಿಯೂರಪ್ಪಬಿಜೆಪಿಮಾಲಿನಿ ಕೃಷ್ಣಮೂರ್ತಿಮುಖ್ಯ ಕಾರ್ಯದರ್ಶಿರೂಪ ಮೌದ್ಗಿಲ್‌ಲೈಂಗಿಕ ಕಿರುಕುಳವಿಜಯ ಸಂಕೇಶ್ವರಸಿಐಡಿಸಿದ್ದರಾಮಯ್ಯಹುಬ್ಬಳ್ಳಿ ಧಾರವಾಡ
Advertisement Banner
Previous Post

ಹಣಕ್ಕೆ ಬೇಡಿಕೆ; ಎಸಿಬಿ ಮೆಟ್ಟಿಲೇರಿದ ಸಚಿವ ಅಶೋಕ್‌ ಆಪ್ತ ಸಹಾಯಕ ಗಂಗಾಧರ್‌ ಪ್ರಕರಣ

Next Post

ಸಿಎಂ ಕಾರ್ಯದರ್ಶಿ ಕಚೇರಿ ದುರ್ಬಳಕೆ;ವಿಧಾನಸಭೆ ಸಚಿವಾಲಯ ಅಧಿಕಾರಿಯ ಅನಧಿಕೃತ ಕಾರ್ಯನಿರ್ವಹಣೆ

thefilestack

thefilestack

Next Post

ಸಿಎಂ ಕಾರ್ಯದರ್ಶಿ ಕಚೇರಿ ದುರ್ಬಳಕೆ;ವಿಧಾನಸಭೆ ಸಚಿವಾಲಯ ಅಧಿಕಾರಿಯ ಅನಧಿಕೃತ ಕಾರ್ಯನಿರ್ವಹಣೆ

Discussion about this post

Recommended

ಸಿಜಿಡಿ ನೀತಿ; ‘ದಿ ಫೈಲ್‌’ ವರದಿಗೆ ಸ್ಪಷ್ಟೀಕರಣ ನೀಡಿದ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ

2 years ago

ಶಂಕಿತ ಮಾವೋವಾದಿ ಅನಿರುದ್ಧ ರಾಜನ್‌ ಬಂಧನ ಪ್ರಕರಣ; ಎನ್‌ಐಎಗೆ ವಹಿಸಲು ಕ್ರಮಕ್ಕೆ ಡಿಜಿಪಿಗೆ ಸೂಚನೆ

1 year ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd