the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

ವರದಿ ವಿಳಂಬ; ಸಿಎಂ ಪ್ರಧಾನ ಕಾರ್ಯದರ್ಶಿ ಸೇರಿ 10 ಅಧಿಕಾರಿಗಳ ಪಟ್ಟಿ ಬಹಿರಂಗ

thefilestack by thefilestack
September 4, 2021
in GOVERNANCE
0
0
SHARES
0
VIEWS
Share on FacebookShare on Twitter

ಬೆಂಗಳೂರು; ಸರ್ಕಾರ ಜಾರಿಗೊಳಿಸಿರುವ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳ ಅನುಷ್ಠಾನ ಕುರಿತು ಆಯಾ ತಿಂಗಳಲ್ಲೇ ವರದಿ ನೀಡಬೇಕಿದ್ದ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಯೂ ಆಗಿರುವ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್‌ ಮಂಜುನಾಥ್‌ ಪ್ರಸಾದ್‌ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆಗಿರುವ ಮುಖ್ಯಮಂತ್ರಿಗಳ ಕಾರ್ಯದರ್ಶಿ ವಿ ಪೊನ್ನುರಾಜ್‌ ಸೇರಿದಂತೆ 10 ಹಿರಿಯ ಐಎಎಸ್‌ ಅಧಿಕಾರಿಗಳು  ಪ್ರವಾಸದ ವರದಿ ಸಲ್ಲಿಸದಿರುವುದು ಇದೀಗ ಬಹಿರಂಗವಾಗಿದೆ.

ಹಿರಿಯ ಐಎಎಸ್‌ ಅಧಿಕಾರಿಗಳು ಜಿಲ್ಲಾ ಪ್ರವಾಸದ ಕುರಿತು ವರದಿಯನ್ನು ಸಲ್ಲಿಸದಿರುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕ ಪ್ರಗತಿ ಕಾರ್ಯಕ್ರಮಗಳ ಕುರಿತು ಆಗಸ್ಟ್‌ 31ರಂದು ನಡೆಸಿದ್ದ ಸಭೆಯ ನಡವಳಿಯಿಂದ ಗೊತ್ತಾಗಿದೆ.

ಕೋವಿಡ್‌ 2ನೇ ಅಲೆ ಮುನ್ನೆಚ್ಚರಿಕೆ ಮತ್ತು ಕೈಗೊಳ್ಳಬಹುದಾದ ಕ್ರಮಗಳು ಹಾಗೂ ಪ್ರವಾಹ ಪರಿಶೀಲನೆ, ಪರಿಹಾರ ಕ್ರಮಗಳು, ಸರ್ಕಾರದ ವಿವಿಧ ಯೋಜನೆಗಳು, ಕಾರ್ಯಕ್ರಮಗಳ ಕುರಿತು ವರದಿಯನ್ನು ಸಲ್ಲಿಸಬೇಕಿತ್ತು. 30 ಐಎಎಸ್‌ ಅಧಿಕಾರಿಗಳ ಪೈಕಿ 20 ಅಧಿಕಾರಿಗಳು ನಿಯೋಜಿಸಿದ್ದ ಜಿಲ್ಲೆಗಳಲ್ಲಿ 2021ರ ಜುಲೈ 4ರಿಂದ 2021ರ ಆಗಸ್ಟ್‌ 26ರವರೆಗೆ ಪ್ರವಾಸ ಕೈಗೊಂಡಿದ್ದರು. ಈ ಸಂಬಂಧ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ್ದರು. ಆದರೆ 10 ಐಎಎಸ್‌ ಅಧಿಕಾರಿಗಳು ವರದಿ ಸಲ್ಲಿಸಿಲ್ಲ.

ವರದಿ ಸಲ್ಲಿಸದ ಐಎಎಸ್‌ ಅಧಿಕಾರಿಗಳ ಪಟ್ಟಿ

‘ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮಹಾಪರಿವೀಕ್ಷಕ ಕೆ ಪಿ ಮೋಹನ್‌ರಾಜ್‌ (ಉತ್ತರ ಕನ್ನಡ), ಗುಂಜನ್‌ ಕೃಷ್ಣ (ಕಲ್ಬುರ್ಗಿ) ರಂದೀಪ್‌ ಡಿ (ವಿಜಯಪುರ), ಡಾ ವಿಶಾಲ್‌ ಆರ್‌ (ರಾಯಚೂರು), ಮನೋಜ್‌ ಜೈನ್‌ (ಹಾವೇರಿ), ಪಿ ಹೇಮಲತ (ಬೆಂಗಳೂರು ಗ್ರಾಮಾಂತರ), ತುಷಾರ್‌ ಗಿರಿನಾಥ್‌ (ರಾಮನಗರ) ಎನ್‌ ಜಯರಾಮ್‌ (ಮೈಸೂರು),’ ಅವರು ಕೈಗೊಂಡಿದ್ದ ಪ್ರವಾಸದ ಕುರಿತು ವರದಿ ಸರ್ಕಾರದಲ್ಲಿ ಸ್ವೀಕೃತವಾಗಿಲ್ಲ ಎಂದು ಸಭೆ ನಡವಳಿಯಿಂದ ತಿಳಿದು ಬಂದಿದೆ.

ವರದಿ ಸಲ್ಲಿಸಿದವರ ಪಟ್ಟಿ

ಡಾ ಎನ್‌ ಮಂಜುಳ, ಕ್ಯಾಪ್ಟನ್‌ ಮಣಿವಣ್ಣನ್‌, ರಾಕೇಶ್‌ಸಿಂಗ್‌, ಡಾ ರವಿಕುಮಾರ್‌ ಸುರ್‌ಪುರ್‌, ಉಮಾ ಮಹದೇವನ್‌, ಎಲ್‌ ಕೆ ಅತೀಕ್‌, ಡಾ ಎಸ್‌ ಸೆಲ್ವಕುಮಾರ್‌, ಎಸ್‌ ಆರ್‌ ಉಮಾಶಂಕರ್‌, ಮೊಹಮ್ಮದ್‌ ಮೊಹಸೀನ್‌, ಡಾ ವಿ ರಾಮ್‌ಪ್ರಸಾತ್‌ ಮನೋಹರ್‌, ಬಿ ಬಿ ಕಾವೇರಿ, ನವೀನ್‌ರಾಜ್‌ಸಿಂಗ್‌, ವಿ ಅನ್ಬುಕುಮಾರ್‌, ಸಿ ಶಿಖಾ, ಶಿವಯೋಗಿ ಕಳಸದ, ಡಾ ರಶ್ಮಿ ವಿ ಮಹೇಶ್‌, ಡಾ ಎಂ ಎನ್‌ ಅಜಯ್‌ನಾಗಭೂಷಣ್‌, ರಿಚರ್ಡ್‌ ವಿನ್ಸೆಂಟ್‌ ಡಿಸೋಜಾ, ಮುನೀಶ್‌ ಮೌದ್ಗಿಲ್‌ ಅವರು ಜಿಲ್ಲಾ ಪ್ರವಾಸದ ವರದಿ ಸಲ್ಲಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ, ಕಂದಾಯ ಇಲಾಖೆ ಸೇರಿದಂತೆ ಹಲವು ಇಲಾಖೆಗಳು ಜಾರಿಗೊಳಿಸಿರುವ ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳ ಅನುಷ್ಠಾನದ ಪ್ರಗತಿ ಕುರಿತು ಅವಲೋಕಿಸಿ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಚುರುಕು ಮುಟ್ಟಿಸುವ ಹೊಣೆಗಾರಿಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳದ್ದು. ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಜಿಲ್ಲಾ ಪ್ರಗತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು.

Tags: B S YediyurappaBasavaraj BommaiC ShikhaChief SecretaryDistrict In Chargeh d kumarswamyIAS OfficersKDP MeetingsM N Ajaya NaghbhushanMunish MoudgilN Manjunath PrasadN Manjunath PrasadP RavikumarSiddaramaiahUma MahadevanV Ponnurajಉಮಾ ಮಹದೇವನ್‌ಎಂ ಎನ್‌ ಅಜಯ್‌ನಾಗಭೂಷಣ್‌ಎಚ್‌ ಡಿ ಕುಮಾರಸ್ವಾಮಿಎನ್‌ ಮಂಜುನಾಥ ಪ್ರಸಾದ್‌ಐಎಎಸ್‌ ಅಧಿಕಾರಿಗಳುಕೆಡಿಪಿ ಸಭೆಕೋವಿಡ್‌ಜಿಲ್ಲಾ ಉಸ್ತುವಾರಿಜಿಲ್ಲಾ ಉಸ್ತುವಾರಿಪಿ ರವಿಕುಮಾರ್‌ಪ್ರವಾಹ ಪರಿಶೀಲನೆಬಸವರಾಜ ಬೊಮ್ಮಾಯಿಬಿ ಎಸ್‌ ಯಡಿಯೂರಪ್ಪಮುಖ್ಯ ಕಾರ್ಯದರ್ಶಿಮುನೀಶ್‌ ಮೌದ್ಗಿಲ್‌ವಿ ಪೊನ್ನುರಾಜ್‌ಸಿ ಶಿಖಾಸಿದ್ದರಾಮಯ್ಯ
Advertisement Banner
Previous Post

ಬಜೆಟ್‌; ಸಿ ಎಂ ಜತೆ ಸಂವಾದಕ್ಕೂ ಸುದ್ದಿವಾಹಿನಿಗಳಿಗೆ 38.97 ಲಕ್ಷ ರು ಪಾವತಿ

Next Post

ಐಎಎಸ್‌ ತಿವಾರಿ ಅಸಹಜ ಸಾವು ಪ್ರಕರಣ; ಸಿಬಿಐಗೆ ಬರೆದಿದ್ದ ಗೌಪ್ಯ ಪತ್ರ ಬಹಿರಂಗ

thefilestack

thefilestack

Next Post

ಐಎಎಸ್‌ ತಿವಾರಿ ಅಸಹಜ ಸಾವು ಪ್ರಕರಣ; ಸಿಬಿಐಗೆ ಬರೆದಿದ್ದ ಗೌಪ್ಯ ಪತ್ರ ಬಹಿರಂಗ

Discussion about this post

Recommended

ಕಾರ್ಯಭಾರ ಒತ್ತಡವಿಲ್ಲದಿದ್ದರೂ ಇಂಜಿನಿಯರ್‌ ಹುದ್ದೆಗಳ ಸೃಷ್ಟಿ; ಜಲಮಂಡಳಿಯಲ್ಲಿ ಮುಂಬಡ್ತಿ ವ್ಯವಹಾರ!

4 years ago

ವಿದ್ಯಾರ್ಥಿ ವೇತನಕ್ಕೆ ಕೇಂದ್ರ ಅಡ್ಡಿ; ನೀತಿ ರೂಪಿಸದ ರಾಜ್ಯ, 4,254 ದಲಿತ ವಿದ್ಯಾರ್ಥಿಗಳಿಗೆ ಆಗಿದೆಯೇ ವಂಚನೆ?

10 months ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd