the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home LEGISLATURE

ವಾಷಿಂಗ್‌ ಮೆಷಿನ್‌, ಚಪಾತಿ ಯಂತ್ರ ಖರೀದಿಯಲ್ಲಿ ಅಕ್ರಮ; ಅನಧಿಕೃತ ಏಜೆನ್ಸಿಗೆ 10.59 ಕೋಟಿ ಹೆಚ್ಚುವರಿ ಪಾವತಿ

thefilestack by thefilestack
February 27, 2023
in LEGISLATURE
0
0
SHARES
1
VIEWS
Share on FacebookShare on Twitter

ಬೆಂಗಳೂರು; ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ 270 ವಿದ್ಯಾರ್ಥಿ ನಿಲಯಗಳಿಗೆ ವಾಷಿಂಗ್‌ ಮೆಷಿನ್‌ ಮತ್ತು ಚಪಾತಿ ಮಾಡುವ ಯಂತ್ರಗಳನ್ನು ಮಾರುಕಟ್ಟೆಯಲ್ಲಿರುವ ದರಕ್ಕಿಂತಲೂ ದುಪ್ಪಟ್ಟು ದರದಲ್ಲಿ ಮತ್ತು ಮೂಲತಃ ತಯಾರಕರಲ್ಲದ ಹಾಗೂ ಅನಧಿಕೃತ ಏಜೆನ್ಸಿಗಳಿಂದ ಖರೀದಿಸಿದ್ದ ಕಿಯೋನಿಕ್ಸ್‌ ಸಂಸ್ಥೆಯು ಸರ್ಕಾರಕ್ಕೆ 11.13 ಕೊಟಿ ರು. ಮೊತ್ತಕ್ಕೆ ಮಾರಾಟ ಮಾಡಿತ್ತು. ಉಪಕರಣಗಳನ್ನು ಸರಬರಾಜು ಮಾಡಿದ್ದ ಅನಧಿಕೃತ ಏಜೆನ್ಸಿಗಳಿಗೆ 10.59 ಕೋಟಿ ರು.ಗಳನ್ನು ಹೆಚ್ಚುವರಿಯಾಗಿ ಪಾವತಿಸಿರುವ ಎಂಬ ಪ್ರಕರಣವನ್ನು ಸಿಎಜಿ ವರದಿಯು ಹೊರಗೆಡವಿದೆ.

 

ಹಿಂದಿನ ಸರ್ಕಾರದ ಅವಧಿಯಲ್ಲಿನ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಿಗೆ ಹಾಸಿಗೆ ದಿಂಬು ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು  ಬಿಜೆಪಿ ಪಕ್ಷವು, ಇದೀಗ ತನ್ನದೇ ಪಕ್ಷದ ಸರ್ಕಾರದ ಆಡಳಿತದಲ್ಲಿ ವಾಷಿಂಗ್‌ ಮೆಷಿನ್‌ ಮತ್ತು ಚಪಾತಿ ಮಾಡುವ ಯಂತ್ರಗಳ ಖರೀದಿಯಲ್ಲೂ ಅಕ್ರಮ ಎಸಗಿರುವುದು ಮುನ್ನೆಲೆಗೆ ಬಂದಿದೆ.

 

ಸಿಎಜಿ ನೀಡಿರುವ ವರದಿ ಪ್ರತಿ

 

ಈ ಪ್ರಕರಣ ಕುರಿತು ಇಲಾಖೆಯು ಸ್ಟಾರ್‌ ಫಿಶ್‌ ವಾಷಿಂಗ್‌ ಮೆಷಿನ್‌ಗೆ ಸಮನಾಗಿ ಯಂತ್ರವೊಂದಕ್ಕೆ 4,55,900 ರು.ನಂತೆ ಬಿಲ್‌ ಮಾಡುವ ಮೂಲಕ ವಿಶ್ವಾಸ ಉಲ್ಲಂಘನೆ ಮಾಡಿದೆ ಮತ್ತು ಟೆಂಡರ್‌ ಷರತ್ತುಗಳನ್ನು ಉಲ್ಲಂಘನೆ ಮಾಡಿದೆ. ಹೆಚ್ಚುವರಿಯಾದ 7.77 ಕೋಟಿ ಮೊತ್ತ ವಸೂಲಾತಿಗಾಗಿ ವರ್ತಕರಿಗೆ ನೋಟೀಸ್‌ ನೀಡಲಾಗಿದೆ. ಚಪಾತಿ ತಯಾರಿಸುವ ಸಾಧನಕ್ಕೆ ಯೂನಿಟ್‌ ಒಂದಕ್ಕೆ 2.20 ಲಕ್ಷ ಹಾಗೂ ಜಿಎಸ್‌ಟಿ ಸೇರಿ ಒಟ್ಟಾರೆ 3,64,325 ರು. ಮಾತ್ರ ಪಾವತಿಸಲಾಗಿದೆಯೇ ವಿನಃ ಹೆಚ್ಚುವರಿ ದರದಲ್ಲಿ ಖರೀದಿಸಿಲ್ಲ ಎಂದು ಉತ್ತರ ಮತ್ತು ಸಮಜಾಯಿಷಿ ನೀಡಿತ್ತು.

 

ಆದರೆ ಇದನ್ನು ಒಪ್ಪದ ಸಿಎಜಿಯು ‘ಈ ಪ್ರಕರಣದಲ್ಲಿ ಖರೀದಿಸಲಾಗಿರುವ ಸರಕುಗಳು ಮಾಹಿತಿ ತಂತ್ರಜ್ಞಾನೇತರ ಉತ್ಪನ್ನಗಳು ಆಗಿರುವುದರಿಂದ ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಸಂಬಂಧಿತ ಉತ್ಪನ್ನಗಳಿಗೆ ಮಾತ್ರ ಅನ್ವಯಗೊಳ್ಳುತ್ತಿದ್ದ 4(ಜಿ) ವಿನಾಯಿತಿಯನ್ನು ಕಿಯೋನಿಕ್ಸ್‌ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ದುರುಪಯೋಗಪಡಿಸಿಕೊಂಡಿದೆ. ಉತ್ತರದಾಯಿತ್ವ/ಜವಾಬ್ದಾರಿಯನ್ನು ನಿಗದಿಪಡಿಸುವ ಸಲುವಾಗಿ ಹಾಗೂ ಸರ್ಕಾರಕ್ಕೆ ಆಗಿರುವ ನಷ್ಟವನ್ನು ಸಂಬಂಧಿಸಿದವರಿಂದ ವಸೂಲಾತಿ ಮಾಡಬೇಕು. ಇದಕ್ಕಾಗಿ ಸರ್ಕಾರವು ಸವಿವರವಾದ ತನಿಖೆ ನಡೆಸುವ ಅಗತ್ಯವಿದೆ,’ ಎಂದು ಸಿಎಜಿ ತನ್ನ ವರದಿಯಲ್ಲಿ ಶಿಫಾರಸ್ಸು ಮಾಡಿದೆ.

 

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಕಿಯೋನಿಕ್ಸ್‌ ಮೂಲಕ 4(ಜಿ) ವಿನಾಯಿತಿ ಉಲ್ಲೇಖಿಸಿ ಉಪಕರಣಗಳನ್ನು ಖರೀದಿ ಮಾಡಿರುವುದು ಸಹ ನಿಯಮಬಾಹಿರತೆಯಿಂದ ಕೂಡಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ದರಗಳಿಗಿಂತ ಮೂರದಿಂದ ನಾಲ್ಕು ಪಟ್ಟು ಅಧಿಕ ದರದಲ್ಲಿ ಖರೀದಿ ಮಾಡಿರುವ ಕಾರಣ ಇದೊಂದೇ ಪ್ರಕರಣದಲ್ಲಿ ಅನಧಿಕೃತ ಏಜೆನ್ಸಿಗಳಿಗೆ 10.59 ಕೋಟಿ ರು. ಹೆಚ್ಚುವರಿಯಾಗಿ ಪಾವತಿಸಿರುವ ಪರಿಣಾಮ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ ಎಂದು ಸಿಎಜಿ ತನ್ನ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ.

 

ವಿದ್ಯಾರ್ಥಿ ನಿಲಯಗಳಿಗೆ 15 ಕೆ ಜಿ ಸಾಮರ್ಥ್ಯದ 270 ವಾಷಿಂಗ್‌ ಮೆಷಿನ್‌ಗಳನ್ನು ಖರೀದಿಸಲು ಕಿಯೋನಿಕ್ಸ್‌ ಮೂಲಕ 15 ಕೋಟಿ ಮೊತ್ತಕ್ಕೆ ದರಪಟ್ಟಿ ಮತ್ತು ಪ್ರಸ್ತಾವನೆ ಸಲ್ಲಿಸಲು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸರ್ಕಾರವು ನಿರ್ದೇಶಿಸಿತ್ತು. ಅಲ್ಲದೇ ಅರೆ-ಸ್ವಯಂ ಚಾಲಿತ ಚಪಾತಿ ಮಾಡುವ ಯಂತ್ರಗಳನ್ನು ವಿದ್ಯಾರ್ಥಿ ನಿಲಯಗಳಿಗೆ ಖರೀದಿ ಮಾಡಲು 2020ರ ಮಾರ್ಚ್‌ನಲ್ಲಿ ಸರ್ಕಾರವು ಇಲಾಖೆಗೆ  ನಿರ್ದೇಶಿಸಿತ್ತು ಎಂಬುದು ಸಿಎಜಿ ವರದಿಯಿಂದ ಗೊತ್ತಾಗಿದೆ.

 

ಆದರೆ ಅರೆ-ಸ್ವಯಂ ಚಾಲಿತ ಚಪಾತಿ ತಯಾರಿಸುವ ಯಂತ್ರಗಳಿಗೆ ಸಂಬಂಧಿಸಿದಂತೆ ಕಿಯೋನಿಕ್ಸ್‌ ಮೂಲಕ ದರ ಪಟ್ಟಿ ಪಡೆದುಕೊಳ್ಳಲು ಸರ್ಕಾರದಿಂದ ನೇರವಾಗಿ ಯಾವುದೇ ಆದೇಶಗಳಿರಲಿಲ್ಲ. ಆಧರೂ ವಾಷಿಂಗ್‌ ಮೆಷಿನ್‌ ಜೊತೆಗೆ ಚಪಾತಿ ಮಾಡುವ ಯಂತ್ರಗಳ ಸರಬರಾಜಿಗೂ ಆದೇಶ ನೀಡಲಾಗಿತ್ತು ಎಂದು ಸಿಎಜಿ ವರದಿಯಲ್ಲಿ  ವಿವರಿಸಲಾಗಿದೆ.

 

ಸಿದ್ದಾರ್ಥ ಏಜೆನ್ಸೀಸ್‌ ಮೂಲಕ ವಾಷಿಂಗ್‌ ಮೆಷಿನ್‌, ನ್ಯೂಜೆನ್‌ ಸೆಕ್ಯುರಿಟಿ ಸಲ್ಯೂಷನ್ಸ್‌ ಮೂಲಕ ಚಪಾತಿ ಮಾಡುವ ಯಂತ್ರಗಳನ್ನು ಖರೀದಿಸಿಲಾಗಿತ್ತು. ಆದರೆ ಈ ಎರಡೂ ಏಜೆನ್ಸಿಗಳೂ ಮೂಲತಃ ಉಪಕರಣಗಳ ತಯಾರಕ ಸಂಸ್ಥೆಗಳಾಗಿರಲಿಲ್ಲ ಮತ್ತು ಅಧಿಕೃತವಾಗಿ ಮನ್ನಣೆ ಪಡೆದಿರುವ ವರ್ತಕರೂ ಆಗಿರಲಿಲ್ಲ. ಹೀಗಾಗಿ ಇಂತಹ ಸಂಸ್ಥೆಗಳನ್ನು ಅನುಮೋದಿತ/ಅಧಿಕೃತ ಪಟ್ಟಿಯಲ್ಲಿ ಸೇರಿಸರಬಾರದಾಗಿತ್ತು. ಆದರೆ ಇಲಾಖೆ ಮತ್ತು ಕಿಯೋನಿಕ್ಸ್‌ ಈ ಎರಡೂ ಸಂಸ್ಥೆಗಳನ್ನು ಅನುಮೋದಿತ ಪಟ್ಟಿಯಲ್ಲಿ ಸೇರಿಸುವ ಮೂಲಕ ಆರ್‌ಎಫ್‌ಪಿ ಮತ್ತು ಮಾರ್ಗಸೂಚಿಗಳನ್ನು ಉಲ್ಲಂಘಿಸಿತ್ತು ಎಂಬುದನ್ನು ಸಿಎಜಿ ವರದಿಯು ಬಹಿರಂಗಗೊಳಿಸಿದೆ.

 

ಸಾಮಗ್ರಿಗಳನ್ನು ನೇರವಾಗಿ ವಿದ್ಯಾರ್ಥಿನಿಲಯಗಳಿಗೆ ಜುಲೈ 2020 ಹಾಗೂ ಜುಲೈ 2021ರ ನಡುವೆ ಸರಬರಾಜು ಮಾಡಲಾಗಿತ್ತು. ಕಿಯೋನಿಕ್ಸ್‌ ಸಂಸ್ಥೆಯು ವಿದ್ಯಾರ್ಥಿ ನಿಲಯಗಳ ಅಧಿಕಾರಿಗಳಿಂದ ಸಾಮಗ್ರಿ ವಿತರಣೆ ಪ್ರಮಾಣ ಪತ್ರಗಳನ್ನು ಪಡೆದುಕೊಂಡ ನಂತರ 15.52 ಕೋಟಿ ರು.ಗಳನ್ನು ತನ್ನ ಸಹಭಾಗಿ ಸಂಸ್ಥೆಗಳಿಗೆ ಬಿಡುಗಡೆ ಮಾಡಿತ್ತು. ಇದನ್ನು ಪರಿಶೋಧನೆಗೆ ಒಳಪಡಿಸಿದ್ದ ಸಿಎಜಿ ನಿಯಮಬಾಹಿರ ಕ್ರಮಗಳನ್ನು ಮತ್ತು ನಷ್ಟವಾಗಿರುವ ಬಗೆಯನ್ನು ವರದಿಯಲ್ಲಿ ತೆರೆದಿಟ್ಟಿದೆ.

 

ವಾಷಿಂಗ್‌ ಮೆಷಿನ್‌ಗಳು ಹಾಗೂ ಚಪಾತಿ ಮಾಡುವ ಸಾಧನಗಳು ಗ್ರಾಹಕರು ಉಪಯೋಗಿಸುವ ಉತ್ಪನ್ನಗಳು. ಅವುಗಳು ಮಾರುಕಟ್ಟೆಯಲ್ಲಿ ಸಿದ್ಧವಾಗಿ ಲಭ್ಯವಿರುತ್ತವೆ. ಅಲ್ಲದೆ ದರಗಳು ತಯಾರಕರು/ಅಧಿಕೃತ ವರ್ತಕರುಗಳ ಜಾಲತಾಣಗಳಲ್ಲಿ (2022ರ ಜನವರಿಯಲ್ಲಿದ್ದಂತೆ) ಲಭ್ಯವಿರುತ್ತವೆ. ಆದರೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 270 ವಾಷಿಂಗ್‌ ಮೆಷಿನ್ ಮತ್ತು 82 ಚಪಾತಿ ಮಾಡುವ ಸಾಧನಗಳನ್ನು ಸರಬರಾಜು ಮಾಡುವ ಸಲುವಾಗಿ 16.30 ಕೋಟಿ ಮೊತ್ತವನ್ನು ಕಿಯೋನಿಕ್ಸ್‌ಗೆ ಬಿಡುಗಡೆ ಮಾಡಿತ್ತು ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.

 

ಆದರೆ ‘ಕಿಯೋನಿಕ್ಸ್‌ ಸಂಸ್ಥೆಯು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ನೀಡಿದ್ದ ದರಗಳು ಮಾರುಕಟ್ಟೆಯಲ್ಲಿನ ದರಕ್ಕಿಂತಲೂ ಮೂರರಿಂದ ನಾಲ್ಕು ಪಟ್ಟು ಅಧಿಕವಾಗಿದ್ದವು. ಅಲ್ಲದೇ ಕಿಯೋನಿಕ್ಸ್‌ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಈ ಉತ್ಪನ್ನಗಳನ್ನು ಯಾವ ದರಗಳಲ್ಲಿ ಖರೀದಿಸಬಹುದು ಎಂಬುದರ ಬಗ್ಗೆ ಖಚಿತಪಡಿಸಿಕೊಳ್ಳಲು ಯಾಔಉದೇ ಪ್ರಯತ್ನಗಳನ್ನೂ ಮಾಡಿರಲಿಲ್ಲ. ಇದು ಒಟ್ಟು 10.59 ಕೋಟಿ ನಷ್ಟಕ್ಕೆ ಕಾರಣವಾಗಿತ್ತು,’ ಎಂಬುದನ್ನು ಸಿಎಜಿ ವರದಿಯು ಪತ್ತೆ ಹಚ್ಚಿದೆ.

 

ಏಜೆನ್ಸಿಗಳಿಗೆ 8.97 ಕೋಟಿ ಹೆಚ್ಚುವರಿ ಲಾಭ

 

ಎಲ್‌ ಜಿ ಕಂಪನಿಯ ವಾಷಿಂಗ್‌ ಮೆಷಿನ್‌ವೊಂದಕ್ಕೆ ಮಾರುಕಟ್ಟೆಯಲ್ಲಿ 1.00 ಲಕ್ಷ ರು. ಇದ್ದರೆ ಕಿಯೋನಿಕ್ಸ್‌ ಸಂಸ್ಥೆಯು 4.56 ಲಕ್ಷ ರು. ದರದಲ್ಲಿ ಖರೀದಿಸಿತ್ತು. ಇದು 3.56 ಲಕ್ಷವನ್ನು ಹೆಚ್ಚುವರಿಯಾಗಿ ಕಂಪನಿಗೆ ಲಾಭ ಮಾಡಿಕೊಟ್ಟಿತ್ತು. ಅದೇ ರೀತಿ ಸ್ಟಾರ್‌ಫಿಶ್‌ ವಾಷಿಂಗ್‌ ಮೆಷಿನ್‌ಗೆ ಮಾರುಕಟ್ಟೆಯಲ್ಲಿ ಮಾರುಕಟ್ಟೆಯಲ್ಲಿ 2.70 ಲಕ್ಷ ರು ಇದ್ದರೆ ಕಿಯೋನಿಕ್ಸ್‌ ಸಂಸ್ಥೆಯು 4.56 ಲಕ್ಷ ರು. ದರದಲ್ಲಿ ಖರೀದಿಸಿತ್ತು. ಇದು ಮಾರುಕಟ್ಟೆಯಲ್ಲಿನ ದರಕ್ಕಿಂತಲೂ 1.86 ಲಕ್ಷ ರು ಹೆಚ್ಚುವರಿಯಾಗಿತ್ತು.

 

ಚಪಾತಿ ಮಾಡುವ ಯಂತ್ರವೊಂದಕ್ಕೆ ಮಾರುಕಟ್ಟೆಯಲ್ಲಿ 1.20 ಲಕ್ಷ ರು ಇದ್ದರೆ ಕಿಯೋನಿಕ್ಸ್‌ ಸಂಸ್ಥೆಯು 3.09 ಲಕ್ಷ ರು.ಗೆ ಖರೀದಿಸಿ ಸರಬರಾಜು ಮಾಡಿತ್ತು. ಇದು ಮಾರುಕಟ್ಟೆಯಲ್ಲಿನ ದರಕ್ಕಿಂತಲೂ 1.89 ಲಕ್ಷ ರು. ಹೆಚ್ಚುವರಿಯಾಗಿತ್ತು. ಜಿಎಸ್‌ಟಿ 1.61 ಕೋಟಿ ರು ಸೇರಿ ಒಟ್ಟಾರೆ 10.59 ಕೋಟಿ ಹೆಚ್ಚುವರಿಯಾಗಿ ಪಾವತಿಸಲಾಗಿತ್ತು ಎಂಬುದು ಸಿಎಜಿ ವರದಿಯಿಂದ ಗೊತ್ತಾಗಿದೆ.

 

ಇದಷ್ಟೇ ಅಲ್ಲ, ವಾಷಿಂಗ್‌ ಮೆಷಿನ್‌ಗಳ ಬ್ರ್ಯಾಂಡ್‌ ಮತ್ತು ಮಾಡಲ್‌ ವಿವರಗಳನ್ನು ತಿಳಿಸಬೇಕಿದ್ದ ಕಿಯೋನಿಕ್ಸ್‌ ಸಂಸ್ಥೆಯು ಇದಾವುದನ್ನೂ ದಾಖಲೆಗಳಲ್ಲಿ ಒದಗಿಸದೆಯೇ ಷರತ್ತುಗಳನ್ನು ಉಲ್ಲಂಘಿಸಿತ್ತು. ಸಿದ್ದಾರ್ಥ ಏಜೆನ್ಸೀಸ್‌ ನೀಡಿದ್ದ ಇನ್‌ವಾಯ್ಸ್‌ಗಳು ಹಾಗೂ ವಿದ್ಯಾರ್ಥಿ ನಿಲಯಗಳಿಂದ ಪಡೆದುಕೊಂಡಿರುವ ದಾಸ್ತಾನು ಪ್ರಮಾಣ ಪತ್ರಗಳು ಬ್ರ್ಯಾಂಡ್‌ ಮತ್ತು ಮಾಡೆಲ್‌ ವಿವರಗಳು ಇರಲಿಲ್ಲ.

 

ಹಾಗೆಯೇ 4(ಜಿ) ವಿನಾಯಿತಿ ಅಡಿಯಲ್ಲಿ ನಿರ್ದಿಷ್ಟಪಡಿಸಿರುವ ಷರತ್ತುಗಳ ಪ್ರಕಾರ ಕಿಯೋನಿಕ್ಸ್‌ ಸಿಬ್ಬಂದಿ ಸರಬರಾಜಿಗೆ ಮಾತ್ರ ಶೇ.5ರವರೆಗೆ ಸೇವಾ ಶುಲ್ಕ ಪಡೆದುಕೊಳ್ಳಲು ಅನುಮತಿ ಇದೆ. ಆದರೂ ಕಿಯೋನಿಕ್ಸ್‌ ಸಂಸ್ಥೆಯು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸರಕುಗಳನ್ನು ಸರಬರಾಜು ಮಾಡಿದ್ದಕ್ಕಾಗಿ ಷರತ್ತುಗಳನ್ನು ಉಲ್ಲಂಘಿಸಿ ಶೇ. 3 ಅಥವಾ ಶೇ. 5ರಂತೆ ಒಟ್ಟು 54.49 ಲಕ್ಷ ರು.ಗಳನ್ನು (ವಾಷಿಂಗ್‌ ಮೆಷಿನ್‌ಗಳಿಗೆ 38.77 ಲಕ್ಷ, ಚಪಾತಿ ಮಾಡುವ ಸಾಧನಗಳಿಗೆ 15.72 ಲಕ್ಷ) ಸೇವಾ ಶುಲ್ಕ ವಸೂಲು ಮಾಡಿತ್ತು.

Tags: 4 GBasavaraj BommaiCAG ObseravationChapatiD K ShivakumarExcess Paymenth d kumarswamyHostelsKEONCISL G Washing MachineLossMarket RateMinorotiesNew Gen Security SolutionsSiddaramaiahaSiddarth AgenciesTenderWashing Machineಅಕ್ರಮಅನಧಿಕೃತ ಏಜೆನ್ಸಿಅನುಮೋದಿತ ಪಟ್ಟಿಅಲ್ಪಸಂಖ್ಯಾತರುಕಿಯೋನಿಕ್ಸ್‌ಖರೀದಿಚಪಾತಿಡಿ ಕೆ ಶಿವಕುಮಾರ್ದುಪ್ಪಟ್ಟು ದರನಷ್ಟನ್ಯೂಜೆನ್‌ ಸೆಕ್ಯುರಿಟಿ ಸಲ್ಯೂಷನ್ಸ್‌ಬಸವರಾಜ ಬೊಮ್ಮಾಯಿಬೊಕ್ಕಸಮಹಾಲೆಕ್ಕಪರಿಶೋಧಕರುಮಾರುಕಟ್ಟೆ ದರವಾಷಿಂಗ್‌ ಮೆಷಿನ್‌ವಿದ್ಯಾರ್ಥಿ ನಿಲಯಗಳುವಿನಾಯಿತಿಸಾಮಗ್ರಿಸಿಎಜಿಸಿದ್ದರಾಮಯ್ಯಸಿದ್ಧಾರ್ಥ ಏಜೆನ್ಸಿಹೆಚ್‌ ಡಿ ಕುಮಾರಸ್ವಾಮಿಹೆಚ್ಚುವರಿ ಪಾವತಿ
Advertisement Banner
Previous Post

ಕಲ್ಲಿದ್ದಲು ಹರಾಜು ಹಗರಣ; ಗೋಯೆಂಕಾ ಗೆಲ್ಲಲು ಮೋದಿ ಸರ್ಕಾರ, ಅನುವು ಮಾಡಿಕೊಟ್ಟಿದ್ಹೇಗೆ?

Next Post

87.36 ಕೋಟಿ ರು.ಮೊತ್ತದ ಪವನ ವಿದ್ಯುತ್‌ ಯೋಜನೆ; ನಿಗದಿತ ಗಡುವು ಮೀರಿದರೂ ಕಾರ್ಯಾರಂಭವಿಲ್ಲ

thefilestack

thefilestack

Next Post

87.36 ಕೋಟಿ ರು.ಮೊತ್ತದ ಪವನ ವಿದ್ಯುತ್‌ ಯೋಜನೆ; ನಿಗದಿತ ಗಡುವು ಮೀರಿದರೂ ಕಾರ್ಯಾರಂಭವಿಲ್ಲ

Recommended

ಕೋವಿಡ್‌; ಬೆಳಗಾವಿ ಸುವರ್ಣ ವಿಧಾನಸೌಧವನ್ನೇಕೆ ಶಾಶ್ವತ ಆಸ್ಪತ್ರೆಯನ್ನಾಗಿ ಪರಿವರ್ತಿಸಬಾರದು?

5 years ago

ಪದ್ಮಾವತಿ ಕೊಲೆ ಪ್ರಕರಣ; ಸಿಬಿಐಗೆ ವಹಿಸುವ ಕುರಿತು ಮಾಹಿತಿ ಕೋರಿ ಡಿಜಿಪಿಗೆ ಪತ್ರ ಬರೆದ ಗೃಹ ಇಲಾಖೆ

4 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd