the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

ವಿದ್ಯುತ್‌ ಖರೀದಿಯ 16,323 ಕೋಟಿ ಬಾಕಿ, 14,413 ಕೋಟಿ ಸಂಚಿತ ನಷ್ಟ; ಎಸ್ಕಾಂಗಳಿಂದ ರಾಜ್ಯ ಹಣಕಾಸಿಗೆ ಅಪಾಯ

thefilestack by thefilestack
February 18, 2023
in GOVERNANCE
0

photo credit;deccanhearlad

0
SHARES
0
VIEWS
Share on FacebookShare on Twitter

ಬೆಂಗಳೂರು; ನಿಗದಿತ ವೆಚ್ಚಗಳನ್ನು ವಸೂಲು ಮಾಡಲು ಸಾಧ್ಯವಾಗದಿರುವುದು ಮತ್ತು ಕೆಪಿಸಿಎಲ್‌ನ ಬಾಕಿಗಳನ್ನು ಪಾವತಿಸುವಲ್ಲಿನ ವಿಫಲವಾಗಿರುವುದು ಸೇರಿದಂತೆ ಇನ್ನಿತರೆ ಕಾರಣಗಳಿಂದಾಗಿ ದುರ್ಬಲ ಹಣಕಾಸಿ ಪರಿಸ್ಥಿತಿ ಎದುರಿಸುತ್ತಿರುವ ರಾಜ್ಯದ ವಿದ್ಯುತ್‌ ಕಂಪನಿಗಳು (ಎಸ್ಕಾಂಗಳು) ರಾಜ್ಯದ ಹಣಕಾಸಿನ ಮೇಲೆ ಅಪಾಯಗಳನ್ನು ತರುವ ಸಾಧ್ಯತೆ ಇದೆ ಎಂದು ವಿತ್ತೀಯ ನಿರ್ವಹಣೆ ಪರಿಶೀಲನಾ ಸಮಿತಿಯು ಮುನ್ಸೂಚನೆ ನೀಡಿದೆ.

 

ಆಯವ್ಯಯದ ಜತೆಯಲ್ಲಿ ಮಂಡನೆಯಾಗಿರುವ 2023-27ರ ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿ ಎಸ್ಕಾಂಗಳ ಹಣಕಾಸಿನ ಪರಿಸ್ಥಿತಿ ಮೇಲೆ ಬೆಳಕು ಚೆಲ್ಲಲಾಗಿದೆ. ಎಸ್ಕಾಂಗಳ ಸುಧಾರಣೆ ಕುರಿತು ಇಂಧನ ಸಚಿವ ವಿ ಸುನಿಲ್‌ಕುಮಾರ್‌ ಅವರು ಇತ್ತೀಚೆಗಷ್ಟೇ  ಹೇಳಿಕೆ ನೀಡಿದ್ದರ ಬೆನ್ನಲ್ಲೇ  ಮಧ್ಯಮಾವಧಿ ವಿತ್ತೀಯ ಯೋಜನೆಯು ನೀಡಿರುವ ವರದಿಯಲ್ಲಿ  ಎಸ್ಕಾಂಗಳ ಕಾರ್ಯನಿರ್ವಹಣೆ ಕುರಿತು ಬೆಳಕು ಚೆಲ್ಲಿರುವುದು ಮುನ್ನೆಲೆಗೆ ಬಂದಿದೆ.

 

‘ರಾಜ್ಯ ವಿದ್ಯುತ್‌ ಕಂಪನಿಗಳ ದುರ್ಬಲ ಹಣಕಾಸು ಪರಿಸ್ಥಿತಿಯು ರಾಜ್ಯದ ಹಣಕಾಸಿನ ಮೇಲೆ ಅಪಾಯಗಳನ್ನು ತರುವ ಸಾಧ್ಯತೆ ಇರುತ್ತದೆ. ರಾಜ್ಯ ಸರ್ಕಾರವು ವಿದ್ಯುತ್‌ ಕಂಪನಿಗಳ ಮತ್ತು ಕೆಪಿಸಿಎಲ್‌ನ ಸಾಲಗಳಿಗೆ 30,895 ಕೋಟಿ ರು.ಗಳ ಖಾತರಿ ನಿಡಿದೆ. ಈ ಕಂಪನಿಗಳು ಸಾಲವನ್ನು ಮರು ಪಾವತಿಸಲು ವಿಫಲವಾದರೆ ಇಂತಹ ಖಾತರಿಗಳ ಕಾರಣದಿಂದ ಒಟ್ಟು ಸಾಲದ ಹೊಣೆಗಾರಿಕೆಯು ರಾಜ್ಯ ಸರ್ಕಾರದ ಮೇಲೆ ಬೀಳುತ್ತದೆ,’ ಎಂದು ವಿವರಿಸಿದೆ.

 

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಡಿಸೆಂಬರ್‌ 2022ರವರೆಗೆ ವಿದ್ಯುತ್‌ ಸರಬರಾಜು ಕಂಪನಿಗಳ ಎಲ್‌ಪಿಎಸ್‌ ಬಾಕಿಗಳಿಗಾಗಿ 13,709 ಕೋಟಿ ರುಗಳೂ ಸೇರಿದಂತೆ 17,465 ಕೋಟಿ ರು.ಗಳ ಖಾತರಿ ನೀಡಿದೆ. ಈ ಖಾತರಿಗಳು ಸಾದಿಲ್ವಾರು ಹೊಣೆಗಾರಿಕೆಗಳಾಗಿದ್ದು ಖಾತರಿ ಪಡೆದ ವಿದ್ಯುತ್‌ ಕಂಪನಿಗಳು ಮರುಪಾವತಿ ಮಾಡದಿದ್ದಲ್ಲಿ ಸಂಪೂರ್ಣ ಸಾಲ ಮರುಪಾವತಿ ಹೊಣೆಗಾರಿಕೆಯು ರಾಜ್ಯ ಸರ್ಕಾರದ ಮೇಲೆ ಬೀಳುತ್ತದೆ ಎಂದು ವಿತ್ತೀಯ ನಿರ್ವಹಣೆ ಪರಿಶೀಲನಾ ಸಮಿತಿಯು ಎಚ್ಚರಿಸಿರುವುದು ವರದಿಯಿಂದ ಗೊತ್ತಾಗಿದೆ.

 

 

‘ರಾಜ್ಯವು ರಾಜ್ಯ ಉದ್ದಿಮೆಗಳಿಗೆ ವಿತರಿಸಿದ ಖಾತರಿಗಳಿಂದ ಉದ್ಭವಿಸುವ ಹೊಣೆಗಾರಿಕೆಗಳನ್ನು ಪೂರೈಸುವುದಕ್ಕಾಗಿ ಖಾತರಿ ನಿಧಿಯನ್ನು ರೂಪಿಸಿದೆ. ರಾಜ್ಯ ಸರ್ಕಾರವು ಡಿಸೆಂಬರ್‌ 2022ರವರೆಗೆ ವಿತರಿಸಿದ ಖಾತರಿಗಳ ಬಾಕಿ ಮೊತ್ತವು (ಬಡ್ಡಿ ಸೇರಿದಂತೆ) 36,657 ಕೋಟಿ ರು>ಗಾಇದೆ. ಇದು ಹಿಂದಿನ ಎರಡನೇ ವರ್ಷದ ರಾಜಸ್ವ ಸ್ವೀಕೃತಿಗಳ ಶೇ.21.7ರಷ್ಟಿದೆ,’ ಎಂದು ವರದಿಯಲ್ಲಿ ವಿವರಿಸಲಾಗಿದೆ.

 

ವಿದ್ಯುತ್‌ ಉತ್ಪಾದಕ, ಪ್ರಸರಣ ಕಂಪನಿಗಳಿಗೆ ಎಸ್ಕಾಂಗಳು ವಿದ್ಯುತ್‌ ಖರೀದಿ ಬಾಕಿ ರೂಪದಲ್ಲಿ 16,323 ಕೋಟಿ ರು.ಗಳಷ್ಟಿದೆ.  2022ರ ಡಿಸೆಂಬರ್‌ ಅಂತ್ಯಕ್ಕೆ 30,554 ಕೋಟಿ ರು. ಎಸ್ಕಾಂಗಳ ಬಾಕಿ ಸಾಲ ಇದೆ. ಅಲ್ಲದೇ ಎಸ್ಕಾಂಗಳ ಸಂಚಿತ ನಷ್ಟವು 2022ರ ಮಾರ್ಚ್‌ ಅಂತ್ಯಕ್ಕೆ 14,413 ಕೋಟಿ ರು.ಗಳಷ್ಟಿದೆ.

 

‘ಕೆಪಿಸಿಎಲ್‌ನ ಬಾಕಿಗಳನ್ನು ಪಾವತಿಸುವಲ್ಲಿನ ಎಸ್ಕಾಂಗಳ ವೈಫಲ್ಯದಿಂದಾಗಿ ಕೆಪಿಸಿಎಲ್‌ನ ಕಾರ್ಯಾಚರಣೆಗಳಿಗೆ ತೊಡಕು ಉಂಟಾಗಿದೆ. ಮತ್ತು ಕೆಪಿಸಿಎಲ್‌ನ ಬಾಕಿ ಸಾಲಗಳು 31,258 ಕೋಟಿ ರುಗಳಿಗೆ ಏರಲು ಕಾರಣವಾಗಿದೆ,’ ಎಂದು ಸಮಿತಿಯು ವರದಿಯಲ್ಲಿ ವಿಶ್ಲೇಷಿಸಿದೆ.

 

ಮಧ್ಯಮಾವಧಿ ವಿತ್ತೀಯ ಯೋಜನೆ ವರದಿ ಪ್ರಕಾರ ಎಸ್ಕಾಂಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ನಿಗದಿತ ವೆಚ್ಚಗಳನ್ನು ವಸೂಲು ಮಾಡಲು ಸಾಧ್ಯವಾಗದೇ ಇರುವುದು, ಕ್ರಾಸ್‌ ಸಬ್ಸಿಡೈಸೇಷನ್‌ ಮಟ್ಟ ಹೆಚ್ಚಿರುವುದು, ಹೆಚ್ಚಿನ ವಿದ್ಯುತ್‌ ದರದ ವಿದ್ಯುತ್‌ ಖರೀದಿಗೆ ಮತ್ತು ಹೆಚ್ಚು ಪಾವತಿಸುವಂತಹ ಗ್ರಾಹಕರು ಮುಕ್ತ ಬಳಕೆ/ಬಂಧಿತ ಉತ್ಪಾದನೆಯ ಕಡೆ ಹೊರಳುತ್ತಿರುವುದು ಎಸ್ಕಾಂಗಳನ್ನು ನಷ್ಟ ಮತ್ತು ಸಮಸ್ಯೆಗಳಿಗೆ ದೂಡಿವೆ.

Tags: Basavaraj BommaiD K ShivakumarenergyESCOMSEscoms LoansFailure Of EscomsGuranteeh d kumarswamykpclPending BillsPower CorporationPower CustomerSiddaramaiahaV Sunilkumarಎಸ್ಕಾಂಗಳ ಬಾಕಿಎಸ್ಕಾಂಗಳುಕೆಪಿಸಿಎಲ್‌ಕೇಂದ್ರದ ಅನುದಾನಖಾತರಿಖಾತರಿ ಸಾಲಡಿ ಕೆ ಶಿವಕುಮಾರ್ನಿಗದಿತ ವೆಚ್ಚಬಸವರಾಜ ಬೊಮ್ಮಾಯಿಮಧ್ಯಮಾವಧಿ ವಿತ್ತೀಯ ಯೋಜನೆರಾಜ್ಯ ಸರ್ಕಾರದ ಅನುದಾನವಸೂಲುವಿ ಸುನೀಲ್‌ ಕುಮಾರ್‌ವಿದ್ಯುತ್‌ ಉತ್ಪಾದನೆವಿದ್ಯುತ್‌ ಗ್ರಾಹಕರುವಿದ್ಯುತ್‌ ನಿಗಮವೈಫಲ್ಯಸಾಲ ತೀರಿಸುವಿಕೆಸಾಲಗಳುಸಿದ್ದರಾಮಯ್ಯಹಣಕಾಸು ಪರಿಸ್ಥಿತಿಹಣಕಾಸು ಸ್ಥಿತಿಹೆಚ್‌ ಡಿ ಕುಮಾರಸ್ವಾಮಿ
Advertisement Banner
Previous Post

ಆರ್ಥಿಕ ಸ್ವಾಯತ್ತೆಗೆ ನಿರಾಕರಣೆ;ಸರ್ಕಾರದೊಂದಿಗೆ ಸಂಘರ್ಷಕ್ಕಿಳಿಯಲಿದೆಯೇ?

Next Post

ಕೇಂದ್ರ ತೆರಿಗೆ ವರ್ಗಾವಣೆ ಕುಸಿತ, ಸಹಾಯಧನ ಹೆಚ್ಚಳ, ಬಡ್ಡಿ ಪಾವತಿ ಹೊರೆ; ರಾಜ್ಯ ಹಣಕಾಸು ದುರ್ಬಲ

thefilestack

thefilestack

Next Post

ಕೇಂದ್ರ ತೆರಿಗೆ ವರ್ಗಾವಣೆ ಕುಸಿತ, ಸಹಾಯಧನ ಹೆಚ್ಚಳ, ಬಡ್ಡಿ ಪಾವತಿ ಹೊರೆ; ರಾಜ್ಯ ಹಣಕಾಸು ದುರ್ಬಲ

Recommended

ಕೋವಿಡ್‌ ಭ್ರಷ್ಟಾಚಾರ; ವರದಿ ಸಲ್ಲಿಸಲು ಮುಖ್ಯ ಕಾರ್ಯದರ್ಶಿಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ನಿರ್ದೇಶನ

6 years ago

ಪೋಷಕರನ್ನು ಅವಮಾನಿಸಿದ್ದ ಡಿ ಸಿ; ‘ದಿ ಫೈಲ್‌’ ವರದಿ ವಿಸ್ತರಿಸಿದ ವಿಜಯವಾಣಿ, ಪ್ರಜಾವಾಣಿ

4 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd