the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

ವಿಧಾನಸೌಧ ತಳಮಹಡಿಯಲ್ಲೂ ನೆಲ ಕುಸಿತ; ಕಣ್ಣಳತೆಯಲ್ಲಿ ಕುಸಿದಿದ್ದರೂ ಗಮನಿಸದ ಪಿಡಬ್ಲ್ಯೂಡಿ

thefilestack by thefilestack
September 18, 2021
in GOVERNANCE
0
0
SHARES
0
VIEWS
Share on FacebookShare on Twitter

ಬೆಂಗಳೂರು; ವಿಧಾನಸೌಧ ಕೆಂಗಲ್ ದ್ವಾರದ ಎದುರಿನ ರಸ್ತೆಯಲ್ಲಿ ಡಾಂಬರು ಕುಸಿದು ದೊಡ್ಡ ರಂಧ್ರ ಬಿದ್ದು ಆತಂಕ ಸೃಷ್ಟಿಯಾಗಿದ್ದರ ಬೆನ್ನಲ್ಲೇ ಇದೀಗ ವಿಧಾಸೌಧದ ತಳಮಹಡಿಯಲ್ಲಿನ ವರಾಂಡವೂ ಕುಸಿದಿದೆ ಎಂಬ ಆತಂಕಕಾರಿ ಸಂಗತಿ ಹೊರಬಿದ್ದಿದೆ.

ವಿಧಾನಸೌಧದ ನೆಲ ಮಹಡಿಯಲ್ಲಿಯೇ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಕಾರ್ಯನಿರ್ವಹಿಸುತ್ತಿದ್ದರೂ ಕಚೇರಿಯ ಕಣ್ಣಳತೆಯಲ್ಲಿರುವ ತಳಮಹಡಿಯ ಕ್ಯಾಂಟೀನ್‌ನ ವರಾಂಡದಲ್ಲಿ ನೆಲ ಕುಸಿದಿದ್ದರೂ ಗಮನ ಹರಿಸದಿರುವುದು ಇಂಜಿನಿಯರ್‌ ಅವರ ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ವರಾಂಡದಲ್ಲಿ ನೆಲ ಕುಸಿಯುತ್ತಿರುವುದನ್ನು ಕ್ಯಾಂಟೀನ್‌ ಗುತ್ತಿಗೆದಾರರು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಗಮನಕ್ಕೆ ತರುವವರೆಗೂ ಲೋಕೋಪಯೋಗಿ ಇಲಾಖೆಯ ಎಇಇ ಗಮನಕ್ಕೆ ಬರದಿರುವುದು ಅಚ್ಚರಿ ಮೂಡಿಸಿದೆ.

ಈ ಸಂಬಂಧ ಕ್ಯಾಂಟೀನ್‌ ಗುತ್ತಿಗೆದಾರರು ಡಿಪಿಎಆರ್‌ನ ಸರ್ಕಾರದ ಕಾರ್ಯದರ್ಶಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ವಿಧಾನಸೌಧದ ತಳಮಹಡಿಯಲ್ಲಿರುವ ಉಪಾಹಾರ ಮಂದಿರದ ವರಾಂಡ ಕುಸಿಯುತ್ತಿದ್ದು ಓಡಾಡಲು ತೊಂದರೆಯಾಗಿದೆ, ತಕ್ಷಣವೇ ದುರಸ್ತಿಪಡಿಸಲು ಕ್ರಮ ಕೈಗೊಳ್ಳಬೇಕು,’ ಎಂದು ಗುತ್ತಿಗೆದಾರರು ದೂರಿನಲ್ಲಿ ತಿಳಿಸಿದ್ದರು.

ಈ ಸಂಬಂಧ ಕ್ರಮ ಕೈಗೊಂಡಿರುವ ಡಿಪಿಎಆರ್‌ನ ಸರ್ಕಾರದ ಕಾರ್ಯದರ್ಶಿ ಅವರು ತಳಮಹಡಿಯಲ್ಲಿರುವ ಉಪಹಾರ ಮಂದಿರವನ್ನು ದುರಸ್ತಿ ಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಪಿಡಬ್ಲ್ಯೂಡಿ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ 2021ರ ಸೆ.17ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ವಿಧಾನಸೌಧದ ತಳಮಹಡಿಯಲ್ಲಿರುವ ಕ್ಯಾಂಟೀನ್‌ಗೆ ದಿನವೊಂದಕ್ಕೆ ಕನಿಷ್ಠ 500ಕ್ಕೂ ಹೆಚ್ಚು ಮಂದಿ ಉಪಾಹಾರ, ಭೋಜನ ಮತ್ತು ಚಹಾ ಸೇವಿಸಲು ಬರುತ್ತಾರೆ. ಅಧಿಕಾರಿ ನೌಕರರಲ್ಲದೆ ರಾಜ್ಯದ ವಿವಿಧೆಡೆಯಿಂದಲೂ ದಿನನಿತ್ಯ ನೂರಾರು ಸಂಖ್ಯೆಯಲ್ಲಿ ಕ್ಯಾಂಟೀನ್‌ಗೆ ಬರುತ್ತಿದ್ದರೂ ಅಲ್ಲಿನ ನೆಲವೇ ಕುಸಿಯಲಾರಂಭಿಸಿರುವುದು ಆತಂಕವನ್ನು ಹೆಚ್ಚು ಮಾಡಿದೆ.

ವಿಧಾನಸೌಧ ಕೆಂಗಲ್ ಗೇಟ್‌ ಎದುರಿನ ರಸ್ತೆಯಲ್ಲಿ ಡಾಂಬರು ಕುಸಿದು ದೊಡ್ಡ ರಂಧ್ರ ಬಿದ್ದಿದ್ದರಿಂದ ಸ್ಥಳದಲ್ಲಿ ಕೆಲ ಹೊತ್ತು ಆತಂಕ ಸೃಷ್ಟಿಯಾಗಿತ್ತು. ಅಧಿವೇಶನ ನಡೆಯುತ್ತಿದ್ದರಿಂದ ವಿಧಾನಸೌಧ ಸುತ್ತಮುತ್ತ ಬಿಗಿ ಭದ್ರತೆಯಿದ್ದರೂ ನೂರಾರು ಮಂದಿ, ವಿಧಾನಸೌಧ ಅಕ್ಕ–ಪಕ್ಕದಲ್ಲಿ ಓಡಾಡುತ್ತಿದ್ದಾರೆ. ಕೆಂಗಲ್ ಗೇಟ್‌ ಎದುರೇ ಗುರುವಾರ ಸಂಜೆ ಡಾಂಬರು ಕಿತ್ತು ರಸ್ತೆ ಕುಸಿದಿತ್ತು. ರಸ್ತೆಯ ಕೆಳಭಾಗದಲ್ಲಿ ಗುಹೆ ಆಕಾರದ ಜಾಗ ಕಂಡಿದ್ದನ್ನು ಸ್ಮರಿಸಬಹುದು.

ಅಧಿವೇಶನ ನಡೆಯುತ್ತಿರುವ ಹೊತ್ತಿನಲ್ಲೇ ಈ ಸಂಗತಿ ಬೆಳಕಿಗೆ ಬಂದಿದ್ದರೂ ಪಿಡಬ್ಲ್ಯೂಡಿ ಸಚಿವ ಸಿ ಸಿ ಪಾಟೀಲ್‌ ಅವರು ಈ ಎರಡೂ ಪ್ರಕರಣಗಳ ಕುರಿತು ಈವರೆಗೂ ಪ್ರತಿಕ್ರಿಯಿಸಿಲ್ಲ.

Tags: Assistant EngineerB S YediyurappaBasavaraj Bommaic c patilCanteenChief SecretaryD K ShivakumarDPARh d kumarswamyHemalataP RavikumarPWDSiddaramaiahVidhana SoudhaVikasa Soudhaಅಸಿಸ್ಟೆಂಟ್‌ ಎಕ್ಸಿಕ್ಯೂಟಿವ್‌ ಇಂಜಿನಿಯರ್‌ಎಚ್‌ ಡಿ ಕುಮಾರಸ್ವಾಮಿಕ್ಯಾಂಟೀನ್‌ಡಿ ಕೆ ಶಿವಕುಮಾರ್ಡಿಪಿಎಆರ್‌ನೆಲ ಕುಸಿತಪಿ ರವಿಕುಮಾರ್‌ಪಿಡಬ್ಲ್ಯೂಡಿಬಸವರಾಜ ಬೊಮ್ಮಾಯಿಬಿ ಎಸ್‌ ಯಡಿಯೂರಪ್ಪಮುಖ್ಯ ಕಾರ್ಯದರ್ಶಿಲೋಕೋಪಯೋಗಿವಿಕಾಸ ಸೌಧವಿಧಾನಸೌಧಸಹಾಯಕ ಕಾರ್ಯಪಾಲಕ ಅಭಿಯಂತರಸಿ ಸಿ ಪಾಟೀಲ್‌ಸಿದ್ದರಾಮಯ್ಯಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಹೇಮಲತಾ
Advertisement Banner
Previous Post

ಮೋದಿ ಹುಟ್ಟುಹಬ್ಬದ ಪ್ರಾಯೋಜಿತ ಪುರವಣಿಯ 44.85 ಲಕ್ಷ ರು .ವೆಚ್ಚ ಮಾಹಿತಿ ಮುಚ್ಚಿಟ್ಟರೇಕೆ?

Next Post

ಸೇವಾ ತೆರಿಗೆ ಹಂಚಿಕೆ ಮಾಡದ ಕೇಂದ್ರ; ಹಣಕಾಸು ಆಯೋಗದ ಶಿಫಾರಸ್ಸಿನಂತೆ ಸಿಗದ ಅನುದಾನ

thefilestack

thefilestack

Next Post

ಸೇವಾ ತೆರಿಗೆ ಹಂಚಿಕೆ ಮಾಡದ ಕೇಂದ್ರ; ಹಣಕಾಸು ಆಯೋಗದ ಶಿಫಾರಸ್ಸಿನಂತೆ ಸಿಗದ ಅನುದಾನ

Discussion about this post

Recommended

ಹಸುಳೆ ಚಿಕಿತ್ಸೆಗೆ 16 ಕೋಟಿ ಹೊಂದಿಸಲು ಪೋಷಕರ ಪರದಾಟ; 5 ಲಕ್ಷ ನೀಡಿ ಕೈತೊಳೆದುಕೊಂಡ ಸಿಎಂ

4 years ago

ಹಣ ವಸೂಲಿಗೆ ಸಚಿವ ಗೋಪಾಲಯ್ಯ ನಿವಾಸದಲ್ಲಿ ನಡೆದಿತ್ತೇ ಸಭೆ?; ಆಡಿಯೋ ಬಹಿರಂಗ

5 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd