the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

ವಿಪತ್ತು ನಿರ್ವಹಣೆಯಲ್ಲಿರುವುದು ಕೇವಲ 930.14 ಕೋಟಿ; ಬೆಳೆಹಾನಿ ಸಬ್ಸಿಡಿ ಪಾವತಿಗೆ ಅನುದಾನ ಕೊರತೆ?

thefilestack by thefilestack
September 21, 2023
in GOVERNANCE
0
0
SHARES
1
VIEWS
Share on FacebookShare on Twitter

ಬೆಂಗಳೂರು; ಬರ ಪರಿಹಾರಕ್ಕೆ 5,283.32  ಕೋಟಿ ರು ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿರುವ ರಾಜ್ಯದಲ್ಲೀಗ ಬೆಳೆ ಹಾನಿ ಇನ್‌ಪುಟ್‌ ಸಬ್ಸಿಡಿ ಪಾವತಿಸಲು ಅನುದಾನ ಕಡಿಮೆ ಇರುವುದು ಇದೀಗ ಬಹಿರಂಗವಾಗಿದೆ.

 

ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ 40 ಲಕ್ಷ ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದ್ದು ಬೆಳೆ ಹಾನಿ ಪರಿಹಾರಕ್ಕೆ ಎಲ್ಲ ರೀತಿಯಿಂದಲೂ ಸ್ಪಂದಿಸಲಾಗುವುದು ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ಅವರು ಹೇಳಿಕೆ ನೀಡಿರುವ ಬೆನ್ನಲ್ಲೇ ಬೆಳೆ ಹಾನಿ ಇನ್‌ಪುಟ್‌ ಸಬ್ಸಿಡಿ ಪಾವತಿಸಲು ಅನುದಾನ ಕಡಿಮೆ ಇದೆ ಎಂಬ ಸಂಗತಿಯು ಮುನ್ನೆಲೆಗೆ ಬಂದಿದೆ.

 

ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ ಕೋಶದ ಅಧಿಕಾರಿಗಳು ಬೆಳೆ ಹಾನಿ ಇನ್‌ಪುಟ್‌ ಸಬ್ಸಿಡಿ ಪಾವತಿಸಲು ಅನುದಾನ ಕಡಿಮೆ ಇದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರ ಗಮನಕ್ಕೆ ತಂದಿದ್ದಾರೆ. ನೈರುತ್ಯ ಮುಂಗಾರು 2023ರಲ್ಲಿ ಮಳೆಯ ಕೊರತೆಯಿಂದಾಗಿ ತುತ್ತಾಗಿರುವ ತಾಲೂಕುಗಳನ್ನು ಬರ ಘೋಷಣೆ ಮಾಡುವ ಸಂಬಂಧ 2023ರ ಸೆಪ್ಟಂಬರ್‍‌ 22ರಂದು  ನಡೆಯಲಿರುವ  ಸಚಿವ ಸಂಪುಟಕ್ಕೆ ಮಂಡಿಸಿರುವ ಟಿಪ್ಪಣಿಯಲ್ಲಿಯೂ (ಸಂಖ್ಯೆ; ಕಂಇ 449 ಟಿಎನ್‌ಆರ್‍‌ 2023) ಈ ಅಂಶವನ್ನೂ ಪ್ರಸ್ತಾವಿಸಲಾಗಿದೆ. ಈ ಸಂಬಂಧ ಕೆಲ ದಾಖಲೆಗಳು 'ದಿ ಫೈಲ್‌'ಗೆ ಲಭ್ಯವಾಗಿವೆ.

 

'ಬೆಳೆಹಾನಿ ಇನ್‌ಪುಟ್‌ ಸಬ್ಸಿಡಿ ಪಾವತಿಸಲು ಎಸ್‌ಡಿಆರ್‍‌ಎಫ್‌ ಅಡಿ 930.14 ಕೋಟಿ ಲಭ್ಯವಿದ್ದು ಅನುದಾನ ಕಡಿಮೆ ಇರುವುದರಿಂದ ಬರ ಘೋಷಣೆ ನಂತರ ಬರ ಕೈಪಿಡಿ 2020ರ ಪ್ರಕಾರ ಸಮಗ್ರ ಜ್ಞಾಪಕ ಪತ್ರವನ್ನು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ (ಎನ್‌ಡಿಆರ್‍ಎಫ್‌) ಹಂಚಿಕೆಗಾಗಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯಕ್ಕೆ ಸಲ್ಲಿಸಲಾಗುವುದು. ಎನ್‌ಡಿಆರ್‍‌ಎಫ್‌ ಹಂಚಿಕೆಯನ್ನು ರೈತರಿಗೆ ಇನ್ಫುಟ್‌ ಸಬ್ಸಿಡಿ/ ಬೆಳೆ ನಷ್ಟ ಪರಿಹಾರವನ್ನು ವಿತರಿಸಲು ಬಳಸಲಾಗುತ್ತದೆ,' ಎಂದು ವಿಪತ್ತು ನಿರ್ವಹಣೆ ಅಧಿಕಾರಿಗಳು ಸಚಿವ ಸಂಪುಟ ಟಿಪ್ಪಣಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಟ್ಯಾಂಕರ್‍‌ ಮತ್ತು ಕೊಳವೆ ಬಾವಿಗಳ ಮೂಲಕ ಕುಡಿಯುವ ನೀರು ಸರಬರಾಜು ಮುಂತಾದ ತಕ್ಷಣದ ಬರ ಪರಿಹಾರದ ವೆಚ್ಚವನ್ನು ಪ್ರಾಥಮಿಕವಾಗಿ ರಾಜ್ಯ ಸರ್ಕಾರದ ಬಳಿ ಲಭ್ಯವಿರುವ ಎಸ್‌ಡಿಆರ್‍‌ಎಫ್‌ ನಿಧಿಯಿಂದ ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ ಮಾನದಂಡಗಳ ಪ್ರಕಾರ ಮಾಡಲಾಗುತ್ತದೆ ಎಂದು ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.

 

ಹೆಚ್ಚುವರಿಯಾಗಿ 134 ತಾಲೂಕುಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಿಂದ ಬೆಳೆ ಹಾನಿ ಸಮೀಕ್ಷೆ ವರದಿ ಪಡೆದಿದೆ. ಒಟ್ಟು 134 ತಾಲೂಕುಗಳಲ್ಲಿ 2,625 ಗ್ರಾಮಗಳನ್ನು ರ್‍ಯಾಂಡಮ್‌ ಆಗಿ ಗುರುತಿಸಿ ಇವುಗಳಲ್ಲಿ ಒಟ್ಟು 19,075 ಪ್ಲಾಟ್‌ಗಳಲ್ಲಿ ಆಪ್‌ ಮೂಲಕ ಬೆಳೆ ದೃಢೀಕರಣ ಮಾಡಲಾಗಿದೆ. ಮೊದಲು ಸಾಧಾರಣವೆಂದು ಗುರುತಿಸಲಾಗಿದ್ದ 51 ತಾಲೂಕುಗಳಲ್ಲಿ ಮತ್ತೊಮ್ಮೆ ಬೆಳೆ ಹಾನಿ ದೃಢೀಕರಣ ಕೈಗೊಳ್ಳಲಾಗಿತ್ತು. ನಂತರ 41 ತಾಲೂಕುಗಳು ತೀವ್ರ ಬರ ವರ್ಗದಲ್ಲಿ ಹಾಗೂ ಉಳಿದ 10 ತಾಲೂಕುಗಳನ್ನು ಸಾಧಾರಣ ಬರ ವರ್ಗದಲ್ಲಿ ಗುರುತಿಸಲಾಗಿತ್ತು.

 

ಹೊಸದಾಗಿ ಬರ ಪರಿಸ್ಥಿತಿ ಕಂಡು ಬಂದ 83 ತಾಲೂಕುಗಳಲ್ಲಿ ಯಳಂದೂರು ತಾಲೂಕು ಶೇ.33ಕ್ಕಿಂತ ಕಡಿಮೆ ಬೆಳೆ ಹಾನಿಯಾಗಿರುವುದರಿಂದ ಬರ ಎಂದು ಘೋಷಿಸಲು ಅರ್ಹತೆ ಪಡೆದಿರಲಿಲ್ಲ. ಆದ್ದರಿಂದ ಈ ತಾಲೂಕನ್ನು ಹೊರತುಪಡಿಸಿ 82 ತಾಲೂಕುಗಳ ಪೈಕಿ 58 ತಾಲೂಕುಗಳು ತೀವ್ರ ಬರ ಹಾಗೂ 24 ತಾಲೂಕುಗಳು ಸಾಧಾರಣ ಬರ ಎಂದು ನಿರ್ಣಯಿಸಿದೆ ಎಂಬ ಅಂಶವನ್ನು ಸಚಿವ ಸಂಪುಟ ಟಿಪ್ಪಣಿ ಹಾಳೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

https://stack.thefile.in/2023/09/governance/18849/

 

ಬರ ಕೈಪಿಡಿ 2020ರ ಪ್ರಕಾರ ಕಡ್ಡಾಯ ಮತ್ತು ಪರಿಣಾಮ ಸೂಚಕಗಳಲ್ಲಿ ಒಟ್ಟು 236 ತಾಲೂಕುಗಳಲ್ಲಿ ಬೆಳೆ ಹಾನಿ ದೃಢೀಕರಣ ನಂತರ ಅರ್ಹತೆ ಪಡೆದ 195 ತಾಲೂಕುಗಳ ಪೈಕಿ 161 ತೀವ್ರ ಬರ ಹಾಗೂ 34 ಸಾಧಾರಣ ಬರ ತಾಲೂಕುಗಳಲ್ಲಿ ಕಾಲ ಕಾಲಕ್ಕೆ ಅರ್ಹತೆ ಪಡೆಯುವ ಆಧಾರದ ಮೇಲೆ ಬರ ಘೋಷಿಸಿರುವ ಸರ್ಕಾರದ ಆದೇಶಕ್ಕೆ ಸಚಿವ ಸಂಪುಟದ ಘಟನೋತ್ತರ ಅನುಮೋದನೆ ಕೋರಿದೆ.

 

' ಕೇಂದ್ರ ಸರ್ಕಾರಕ್ಕೆ ಬರ ಕೈಪಿಡಿ 2020ರಂತೆ ಸಂಬಂಧ ಪಟ್ಟ ಎಲ್ಲಾ ಇಲಾಖೆಗಳಿಂದ ನಿಗದಿತ ನಮೂನೆಯಲ್ಲಿ ಮಾಹಿತಿ ಪಡೆದಿದೆ. ತುರ್ತು ನಿರ್ವಹಣೆಗಾಗಿ ಅಗತ್ಯವಿರುವ ಅನುದಾನದ ವಿವರವನ್ನು ಪಡೆದು ರಾಜ್ಯ ಸರ್ಕಾರಾದಿಂದ ಬರ ನಿರ್ವಹಣೆಗಾಗಿ ಕೇಂದ್ರ ಸರ್ಕಾರದಿಂದ ಎನ್‌ಡಿಆರ್‍‌ಎಫ್‌ ಅಡಿ ಆರ್ಥಿಕ ನೆರವು ಕೋರಲು ಮೆಮೊರಂಡಮ್‌ ತಯಾರಿಸಲಾಗಿದೆ. ಕೇಂದ್ರ ಸರ್ಕಾರದ ಎಸ್‌ಡಿಆರ್‍‌ಎಫ್ ಮತ್ತು ಎನ್‌ಡಿಆರ್‍‌ಎಫ್‌ ಮಾರ್ಗಸೂಚಿ ಪ್ರಕಾರ 5,283.32 ಕೋಟಿ ರು.ಗಳನ್ನು ಕೋರಲಾಗಿದೆ,' ಎಂದು ಸಚಿವ ಸಂಪುಟ ಟಿಪ್ಪಣಿಯ ಪ್ರಸ್ತಾವನೆಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

Tags: CabinetCrop LossD K ShivakumarDroughth d kumarswamykarnatakaKrishna ByregowdaRainRain ShortfallRashmi Mahesh IASrevenueSiddaramaiahaSubsidyಅನುದಾನ ಕೊರತೆಅರ್ಹ ತಾಲೂಕುಉತ್ತರ ಕರ್ನಾಟಕಎನ್‌ಡಿಆರ್‍ಎಫ್‌ಎಸ್‌ಡಿಆರ್‌ಎಫ್‌ಕಡಿಮೆ ಅನುದಾನಕಡಿಮೆ ಬೆಳೆ ಹಾನಿಕೃಷ್ಣಬೈರೇಗೌಡಘೋಷಣೆಡಿ ಕೆ ಶಿವಕುಮಾರ್ತಾಲೂಕುತೀವ್ರ ಬರಪ್ರಸ್ತಾವನೆಬರಬೆಳೆ ನಷ್ಟಬೆಳೆ ಹಾನಿಯಳಂದೂರುರಾಜ್ಯ ವಿಪತ್ತು ನಿರ್ವಹಣೆರೈತರ ಕಲ್ಯಾಣ ಸಚಿವಾಲಯವಿಪತ್ತುಸಚಿವ ಸಂಪುಟಸಾಧಾರಣ ಬರಸಿದ್ದರಾಮಯ್ಯಹೆಚ್‌ ಡಿ ಕುಮಾರಸ್ವಾಮಿಹೈದರಾಬಾದ್‌ ಕರ್ನಾಟಕ
Advertisement Banner
Previous Post

37 ಸಾವಿರ ಮಂದಿಗೂ ಉದ್ಯೋಗ ಕಲ್ಪಿಸಿದೆಯೆಂದು ದಾರಿ ತಪ್ಪಿಸಿತೇ ಸರ್ಕಾರ?; ತಾಳೆಯಾಗದ ದತ್ತಾಂಶ

Next Post

ಒಂದೇ ಒಂದು ಸಭೆ ನಡೆಸದ ಸಿಎಂ ಮುಖ್ಯ ಸಲಹೆಗಾರ, ನೀಡಿದ್ದು ಮೌಖಿಕ ಸಲಹೆಯಷ್ಟೇ

thefilestack

thefilestack

Next Post

ಒಂದೇ ಒಂದು ಸಭೆ ನಡೆಸದ ಸಿಎಂ ಮುಖ್ಯ ಸಲಹೆಗಾರ, ನೀಡಿದ್ದು ಮೌಖಿಕ ಸಲಹೆಯಷ್ಟೇ

Recommended

ಇ-ವಿಧಾನ ಅನುಷ್ಠಾನದಲ್ಲಿ ಅನ್ಯ ರಾಜ್ಯಗಳು ಮುಂದು; ವೆಚ್ಚದಲ್ಲಿನ ಏರಿಕೆಯಿಂದ ಹಿಂದೆಬಿದ್ದ ಕರ್ನಾಟಕ

5 years ago

ದಲಿತ ವಿದ್ಯಾರ್ಥಿಗಳಿಗೆ ‘ವಿಶ್ವಾಸ ಕಿರಣ’ವಿಲ್ಲ!; ಬಜೆಟ್‌ನಲ್ಲಿ ಲ್ಯಾಪ್‌ಟಾಪ್‌ ಯೋಜನೆ ಪ್ರಸ್ತಾವವಿಲ್ಲ

2 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd