the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home LOKAYUKTA

6 ಕೋಟಿ ಬೇನಾಮಿ ಖಾತೆಗೆ ವರ್ಗಾವಣೆ ಆರೋಪ; ಕುಲಪತಿ ವಿರುದ್ಧ ಪ್ರಕರಣ ಲೋಕಾ ತನಿಖೆಗೆ ಆದೇಶ

thefilestack by thefilestack
April 1, 2023
in LOKAYUKTA
0

photo credit;prajavani

0
SHARES
1
VIEWS
Share on FacebookShare on Twitter

ಬೆಂಗಳೂರು; ಕರ್ನಾಟಕ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಡಾ ಹೆಚ್‌ ಡಿ ನಾರಾಯಣಸ್ವಾಮಿ ಅವರು ಬೇನಾಮಿ ಹೆಸರಿನಲ್ಲಿ ತೆರೆದಿರುವ ಖಾತೆಗಳಿಗೆ ವಿಶ್ವವಿದ್ಯಾಲಯಕ್ಕೆ ಸೇರಿದ 6.00 ಕೋಟಿ ರು. ಮೊತ್ತದ ಹಣವನ್ನು ವರ್ಗಾವಣೆ ಮಾಡಿದ್ದಾರೆ ಎಂಬ ಪ್ರಕರಣವನ್ನು ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯು ಹೆಚ್ಚಿನ ತನಿಖೆಗಾಗಿ ಲೋಕಾಯುಕ್ತಕ್ಕೆ ವಹಿಸಿ ಆದೇಶಿಸಿದೆ.

 

ಕುಲಪತಿ ಡಾ ಹೆಚ್‌ ಡಿ ನಾರಾಯಣಸ್ವಾಮಿ ಅವರು ಕುಲಪತಿ ಹುದ್ದೆ ಅಧಿಕಾರವನ್ನು ವಹಿಸಿಕೊಂಡ ದಿನದಿಂದ ಇವರ ವೈಯಕ್ತಿಕ ಬ್ಯಾಂಕ್‌ ಖಾತೆಗಳಿಗೆ ಕಾನೂನುಬಾಹಿರವಾಗಿ ವಿಶ್ವವಿದ್ಯಾಲಯದ ಹಣವು ಸಂದಾಯವಾಗಿದೆ ಮತ್ತು ವಿಶ್ವವಿದ್ಯಾಲಯದ ಹಣವನ್ನು ಬೇನಾಮಿ ಹೆಸರುಗಳಲ್ಲಿ ತೆರೆದಿರುವ ಖಾತೆಗಳಿಗೆ ಹಣ ವರ್ಗಾವಣೆ ಆಗಿದೆ ಎಂದು ಡಾ ಕೆ ವೆಂಕಟರೆಡ್ಡಿ ಎಂಬುವರು ರಾಜ್ಯಪಾಲರ ಕಚೇರಿಗೆ ದೂರು ಸಲ್ಲಿಸಿದ್ದರು.

 

ಈ ದೂರನ್ನಾಧರಿಸಿ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯು ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಲೋಕಾಯುಕ್ತಕ್ಕೆ ವಹಿಸಿ 2023ರ ಮಾರ್ಚ್‌ 14ರಂದು ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಡಾ ಹೆಚ್‌ ಡಿ ನಾರಾಯಣಸ್ವಾಮಿ ಅವರು ಕುಲಪತಿ ಹುದ್ದೆ ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಇವರ ವೈಯಕ್ತಿಕ ಬ್ಯಾಂಕ್‌ ಖಾತೆಗಳಿಗೆ ಕಾನೂನುಬಾಹಿರವಾಗಿ ವಿಶ್ವವಿದ್ಯಾಲಯದ ಹಣವು ಹಣ ಸಂದಾಯವಾಗಿದೆ. ಹಾಗೂ ವಿಶ್ವವಿದ್ಯಾಲಯದ ಹಣವನ್ನು ಬೇನಾಮಿ ಹೆಸರುಗಳಲ್ಲಿ ತೆರೆದಿರುವ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಮತ್ತು ಗಂಗಾನಗರದಲ್ಲಿ ಬ್ಯಾಂಕ್‌ ಆಫ್‌ ಬರೋಡ ಶಾಖೆಯಲ್ಲಿ ವೈಯಕ್ತಿಕ ಖಾತೆಗೆ 6 ಕೋಟಿಗೂ ಹೆಚ್ಚು ಹಣವನ್ನು ಜಮಾ ಮಾಡಿದ್ದಾರೆ. ಈ ಬಗೆಗಿನ ಆರೋಪಗಳ ಕುರಿತಂತೆ ಇವರ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರ ಕಲಂ 13 ಅನ್ವಯ ತನಿಖೆ ನಡೆಸಲು ಕರ್ನಾಟಕ ಲೋಕಾಯುಕ್ತ ಸಂಸ್ಥೆಗೆ ವಹಿಸಿರುವುದು ಆದೇಶದ ಪ್ರತಿಯಿಂದ ತಿಳಿದು ಬಂದಿದೆ.

 

ಲೋಕಾಯುಕ್ತಕ್ಕೆ ವಹಿಸುವ ಮುನ್ನ ಇಲಾಖೆಯು ಡಾ ಹೆಚ್‌ ಡಿ ನಾರಾಯಣ ಸ್ವಾಮಿ ಅವರಿಗೆ 2022ರ ಜುಲೈ 5ರಂದು ನೋಟೀಸ್‌ ಜಾರಿಗೊಳಿಸಿತ್ತು. ಆದರೆ ಅವರಿಂದ ಯಾವುದೇ ವಿವರಣೆ/ಉತ್ತರ ಬಂದಿಲ್ಲ. ಹೀಗಾಗಿ 2022ರ ಆಗಸ್ಟ್‌ 1ರೊಳಗೆ ವಿವರಣೆ ನೀಡಬೇಕು ಎಂದು 2022ರ ಜುಲೈ 23ರಂದು ಮತ್ತೊಂದು ನೋಟೀಸ್‌ ನೀಡಿತ್ತು. ಆದರೆ ಎರಡನೇ ನೋಟೀಸ್‌ಗೂ ಡಾ ಹೆಚ್‌ ಡಿ ನಾರಾಯಣಸ್ವಾಮಿ ಅವರು ವಿವರಣೆ/ಉತ್ತರವನ್ನು ಇಲಾಖೆಗೆ ನೀಡಿರಲಿಲ್ಲ ಎಂಬ ಅಂಶ ಆದೇಶದಿಂದ ತಿಳಿದು ಬಂದಿದೆ.

 

‘ಮೇಲ್ನೋಟಕ್ಕೆ ಹಣವು ವೈಯಕ್ತಿಕ ಬ್ಯಾಂಕ್‌ ಖಾತೆಗೆ ವರ್ಗಾವಣೆಯಾಗಿರುವುದನ್ನು ವಿಶ್ವವಿದ್ಯಾಲಯವು ಗಮನಿಸಿದೆ. ಕಾಲಾವಕಾಶ ನೀಡಿದ ದಿನಾಂಕದ ನಂತರವೂ ಬರದಿದ್ದಲ್ಲಿ ಅವರಿಂದ ಯಾವುದೇ ಹೇಳಿಕೆ ಇರುವುದಿಲ್ಲವೆಂದು ಈಗಾಗಲೇ ಅವರಿಗೆ ತಿಳಿಸಲಾಗಿದೆ. ವಿಶ್ವವಿದ್ಯಾಲಯದ ಅಭಿಪ್ರಾಯದೊಂದಿಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು,’ ಎಂದು ಕುಲಸಚಿವರು ಸರ್ಕಾರಕ್ಕೆ ತಿಳಿಸಿದ್ದರು.

Tags: BasavarajBommaiD K ShivakumarDr H.D. Narayanaswamyh d kumarswamykarnatakaPrabhu ChauhanSiddaramaiahaUniversityVeterinaryCollegevice chancellorಅಕ್ರಮ ವರ್ಗಾವಣೆಆಯೋಗಉಚ್ಛ ನ್ಯಾಯಾಲಯಏಕಸದಸ್ಯಕರ್ನಾಟಕಕರ್ನಾಟಕ ಪಶು ವೈದ್ಯಕೀಯ ಮೀನುಗಾರಿಕೆ ವಿಶ್ವವಿದ್ಯಾಲಯಕಾನೂನುಬಾಹಿರಕುಲಪತಿಖಾತೆಡಿ ಕೆ ಶಿವಕುಮಾರ್ನಿವೃತ್ತ ನ್ಯಾಯಾಧೀಶರುಪಶುಪ್ರಭು ಚೌಹ್ವಾಣ್‌ಬಸವರಾಜ ಬೊಮ್ಮಾಯಯಿಬಸವರಾಜ ಬೊಮ್ಮಾಯಿಬೇನಾಮಿಭ್ರಷ್ಟಾಚಾರಮೀನುಗಾರಿಕೆರತ್ನಕಲಾರಾಜ್ಯಪಾಲರುಲೋಕಾಯುಕ್ತವಿಚಾರಣೆವಿಶ್ವವಿದ್ಯಾಲಯಸಿದ್ದರಾಮಯ್ಯಹಣ ವರ್ಗಾವಣೆಹಣ ವರ್ಗಾವನೆಹಣ ಸಂದಾಯಹೆಚ್‌ ಡಿ ಕುಮಾರಸ್ವಾಮಿ
Advertisement Banner
Previous Post

17.35 ಎಕರೆ ಸರ್ಕಾರಿ ಜಮೀನು ಖಾಸಗಿ ವ್ಯಕ್ತಿಗಳ ಪಾಲು; ಆರೋಪಿತ ಅಧಿಕಾರಿ, ನೌಕರರ ರಕ್ಷಣೆಗೆ ನಿಂತ ಸರ್ಕಾರ

Next Post

ಲಕ್ಷ್ಮಿ ಮಿನರಲ್ಸ್‌ ಸೇರಿ 5 ಗಣಿ ಗುತ್ತಿಗೆಗಳಿಗೆ 200 ಹೆಕ್ಟೇರ್‌ ಅರಣ್ಯೇತರ ಜಮೀನು; ಸಿಎಂ, ಪ್ರಲ್ಹಾದ ಜೋಷಿ ಒತ್ತಡ

thefilestack

thefilestack

Next Post

ಲಕ್ಷ್ಮಿ ಮಿನರಲ್ಸ್‌ ಸೇರಿ 5 ಗಣಿ ಗುತ್ತಿಗೆಗಳಿಗೆ 200 ಹೆಕ್ಟೇರ್‌ ಅರಣ್ಯೇತರ ಜಮೀನು; ಸಿಎಂ, ಪ್ರಲ್ಹಾದ ಜೋಷಿ ಒತ್ತಡ

Recommended

ಲಾಕ್‌ಡೌನ್‌ನಲ್ಲೇ ನಡೆದಿತ್ತು ಡ್ರಗ್‌ ಪಾರ್ಟಿ; ಎಫ್‌ಐಆರ್‌ನಿಂದ ಪೊಲೀಸರ ವೈಫಲ್ಯ ಬಹಿರಂಗ

5 years ago

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ತಿಂಗಳೊಳಗೇ ಜಾತಿ ದೌರ್ಜನ್ಯ ಆರೋಪ; ಆಯೋಗಕ್ಕೆ ಮೊರೆ ಇಟ್ಟ ದಲಿತ ಅಧಿಕಾರಿ

3 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd