the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

ಶಕ್ತಿ ಯೋಜನೆ ಸಹಾಯಧನ ಪಾವತಿ; ಕೇಳಿದ್ದು 250 ಕೋಟಿ, ಕೊಟ್ಟಿದ್ದು 125 ಕೋಟಿ, ನೌಕರರ ವೇತನದಲ್ಲಿ ಅಡಚಣೆ?

thefilestack by thefilestack
August 1, 2023
in GOVERNANCE
0
0
SHARES
0
VIEWS
Share on FacebookShare on Twitter

ಬೆಂಗಳೂರು:  ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಒದಗಿಸುವ ಶಕ್ತಿ ಯೋಜನೆಗೆ ಸಂಬಂಧಿಸಿದಂತೆ ಮೊದಲ ಕಂತಿನ ಮೊತ್ತವಾದ 250.96 ಕೋಟಿ ರು ಪೈಕಿ 125.48 ಕೋಟಿ ರು.ಗಳನ್ನಷ್ಟೇ ಬಿಡುಗಡೆ ಮಾಡಿದೆ. ಬಿಡುಗಡೆಗೆ ಇನ್ನೂ 125 ಕೋಟಿ ರು.ಗಳನ್ನು ಬಾಕಿ ಇರಿಸಿಕೊಂಡಿದೆ.

 

ಶಕ್ತಿ ಯೋಜನೆ  ಆರಂಭವಾದ ದಿನದಿಂದ ಜುಲೈ 30ರವರೆಗೆ  687,49,57,753 ಕೋಟಿ ರು. ಆರ್ಥಿಕ ವೆಚ್ಚವಾಗಿದ್ದರೂ ಯೋಜನೆಯ ಸಹಾಯಾನುದಾನದ ಪೈಕಿ ಮೊದಲ ಕಂತಿನ ಪೂರ್ಣ ಮೊತ್ತವಾದ  250.96 ಕೋಟಿ ರು.ಗಳನ್ನೂ ಬಿಡುಗಡೆ ಮಾಡದಿರುವುದು ಸಾರಿಗೆ ನಿಗಮದ ಚಾಲಕ, ನಿರ್ವಾಹಕರು ಸೇರಿದಂತೆ ಇನ್ನಿತರೆ ಸಿಬ್ಬಂದಿಗಳ ವೇತನದಲ್ಲಿ ಅಡಚಣೆಯಾಗಲಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಶಕ್ತಿ ಯೋಜನೆಯಡಿ ರಾಜ್ಯದ ಎಲ್ಲಾ ಮಹಿಳೆಯರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಜೂನ್‌ ನಲ್ಲಿ ಉಚಿತವಾಗಿ ಪ್ರಯಾಣಿಸಿದ್ದರು. ಪ್ರಯಾಣ ವೆಚ್ಚದ ಮರು ಪಾವತಿಗಾಗಿ ನಾಲ್ಕು ಸಾರಿಗೆ ಸಂಸ್ಥೆಗಳಿಗೆ 250.96 ಕೋಟಿ ರು.ಗಳನ್ನು ಬಿಡುಗಡೆಗೊಳಿಸಬೇಕು ಎಂದು ಸಾರಿಗೆ ಇಲಾಖೆಯು ಸಾರಿಗೆ ನಿಗಮಗಳು ಸರ್ಕಾರವನ್ನು ಕೋರಿದ್ದವು.

 

ಈ ಸಂಬಂಧ ಸಾರಿಗೆ ಇಲಾಖೆಯು 250.96 ಕೋಟಿ ರು.ಗಳನ್ನು ಬಿಡುಗಡೆ ಮಾಡದೇ 125.48 ಕೋಟಿ ರು.ಗಳನ್ನಷ್ಟೇ ಬಿಡುಗಡೆ ಮಾಡಿ 2023ರ ಆಗಸ್ಟ್‌ 1ರಂದು ಆದೇಶ ಹೊರಡಿಸಿದೆ.

 

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ 4715.12 ಲಕ್ಷ ರು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 2185.10 ಲಕ್ಷ ರು., ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ 3257.59 ಲಕ್ಷ ರು., ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ 2390.40 ಲಕ್ಷ ರು. ಸೇರಿ ಒಟ್ಟಾರೆ 12548.21 ಲಕ್ಷ ರು.ಗಳನ್ನು ಬಿಡುಗಡೆ ಮಾಡಿರುವುದು ಆದೇಶದಿಂದ ಗೊತ್ತಾಗಿದೆ.

 

ಕರ್ನಾಟಕ ರಾಜ್ಯ ಸಾರಿಗೆ, ವಾಯುವ್ಯ ಕರ್ನಾಟಕ, ಬಿಎಂಟಿಸಿ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳಿಗೆ ಮೊದಲ ಕಂತಿನ ರೂಪದಲ್ಲಿ 250.96 ಕೋಟಿ ರು. ಬಿಡುಗಡೆ ಮಾಡಬೇಕು ಎಂದು ಸಾರಿಗೆ ಇಲಾಖೆಯು ವಾರದ ಹಿಂದೆಯೇ ಆರ್ಥಿಕ ಇಲಾಖೆಗೆ  ಕಳಿಸಿದೆ. ಸದ್ಯ ಈ  ಕಡತವು ಸರ್ಕಾರದ ಕಾರ್ಯದರ್ಶಿ ಡಾ ಏಕರೂಪ್‌ ಕೌರ್‍‌ ಅವರ ಬಳಿ ಇದೆ ಎಂದು ಗೊತ್ತಾಗಿದೆ.

 

https://stack.thefile.in/2023/07/governance/17854/

 

ಜೂನ್‌ 11ರಿಂದ ಜುಲೈ 30ರವರೆಗೆ ಮಹಿಳೆಯರು ಪ್ರಯಾಣಿಸಿರುವ ಸಂಬಂಧ ಟಿಕೆಟ್‌ ಮೌಲ್ಯದ ಮೊತ್ತ  ಒಟ್ಟಾರೆ 687,49,57,753 ರು.ಗಳಾಗಿದೆ. ಇದರಲ್ಲಿ ಕೆಎಸ್‌ಆರ್‍‌ಟಿಸಿಯಲ್ಲಿ 260,26,75,205 ರು.ಗಳಾಗಿದ್ದು, ಒಟ್ಟಾರೆ ಟಿಕೆಟ್‌ ಮೌಲ್ಯದಲ್ಲಿ ಕೆಎಸ್‌ಆರ್‍‌ಟಿಸಿಯದ್ದೇ ಸಿಂಹಪಾಲಿದೆ. ಉಳಿದಂತೆ ಬಿಎಂಟಿಸಿಯಲ್ಲಿ 122,85,47,461 ಕೋಟಿ, ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ 172,98,75,910 ಕೋಟಿ ರು., ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಲ್ಲಿ 131,38,59,177 ಕೋಟಿ ರು. ಒಳಗೊಂಡಿದೆ.

 

 

ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ 'ಶಕ್ತಿ' ಯೋಜನೆ ಅನುಷ್ಠಾನಗೊಂಡ ಒಂದು ವಾರದಲ್ಲಿ  ರಾಜ್ಯದ ವಿವಿಧ ಸಾರಿಗೆ ನಿಗಮಗಳ ಮೂಲಕ 3,12,21,241 ಮಹಿಳೆಯರು ಪ್ರಯಾಣಿಸಿದ್ದಾರೆ. 3.12 ಕೋಟಿ ಮಹಿಳೆಯರು ಪ್ರಯಾಣಿಸಿರುವ ಪ್ರಯಾಣ ಮೌಲ್ಯ ಒಟ್ಟಾರೆ  70.28 ಕೋಟಿ ರು. ನಷ್ಟು ಎಂದು ಸಾರಿಗೆ ನಿಗಮಗಳು ಲೆಕ್ಕ ಹಾಕಿದ್ದವು.

 

ಯೋಜನೆ ಆರಂಭಗೊಂಡ ದಿನದಂದೇ (ಜೂನ್‌ 11) 5,71,023 ಮಹಿಳಾ ಪ್ರಯಾಣಿಕರು ಉಚಿತ ಯೋಜನೆಯಡಿಯಲ್ಲಿ ಪ್ರಯಾಣಿಸಿದ್ದರು. ಪ್ರಯಾಣ ಮೌಲ್ಯವು 1,40,22,878 ರು. ನಷ್ಟಾಗಿತ್ತು. ಕ್ರಮೇಣ ಮಹಿಳಾ ಪ್ರಯಾಣಿಕರ ಸಂಖ್ಯೆ ದಿನದಿಂದ ಹೆಚ್ಚಳಗೊಳ್ಳುತ್ತಿದೆ. ಜೂನ್‌ 12ರಂದು 41,34,726  ಪ್ರಯಾಣಿಕರ ಪ್ರಯಾಣದ ಮೌಲ್ಯ 8,83,53,434 ರು., ಜೂನ್‌ 13ರಂದು 511,52,769 ಪ್ರಯಾಣಿಕರ ಪ್ರಯಾಣ ಮೌಲ್ಯ 10,82,02,191 ರು., ಜೂನ್‌ 14ರಂದು 50,17,174 ಪ್ರಯಾಣಿಕರ ಪ್ರಯಾಣ ಮೌಲ್ಯ 11,51,08,324 ರು., ಜೂನ್‌ 15ರಂದು 54,05,629 ಪ್ರಯಾಣಿಕರ ಪ್ರಯಾಣ ಮೌಲ್ಯ 12,37,89,585 ರು., ಜೂನ್‌ 16ರಂದು 55,09,770 ಪ್ರಯಾಣಿಕರ ಪ್ರಯಾಣ ಮೌಲ್ಯ 12,45,19,262 ರು., ಜೂನ್‌ 17ರಂದು 54,30,150 ಪ್ರಯಾಣಿಕರ ಪ್ರಯಾಣ ಮೌಲ್ಯ 12,88,81,618 ರು ಎಂದು ಸಾರಿಗೆ ನಿಗಮಗಳು ಲೆಕ್ಕ ಹಾಕಿತ್ತು.

https://stack.thefile.in/2023/06/governance/16820/

 

ಶಕ್ತಿ ಯೋಜನೆ ಜಾರಿಯಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸಾರಿಗೆ ಬಸ್‌ಗಳಿಗೆ ಆದ್ಯತೆ ನೀಡಲಿದ್ದಾರೆ. ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುವುದರಿಂದ ಹೆಚ್ಚುವರಿ ಸೇವೆಗಳಲ್ಲಿ ಕಾರ್ಯಾಚರಿಸಬೇಕು. ಅಲ್ಲದೇ ನೆರೆ ರಾಜ್ಯದ ಗಡಿಭಾಗಗಳಲ್ಲಿ ವಾಸವಿದ್ದು ಕರ್ನಾಟಕದಲ್ಲಿ ಹೆಚ್ಚಿನ ಸಮಯ ಪ್ರಯಾಣಿಸುವ ಮಹಿಳೆಯರು ಈ ಯೋಜನೆಯ ಸೌಲಭ್ಯವನ್ನು ವಿಸ್ತರಿಸುವ ಬೇಡಿಕೆ ಇಡುವ ಸಾಧ್ಯತೆಗಳೂ ಇವೆ  ಎಂದೂ ಪ್ರಸ್ತಾವನೆಯಲ್ಲಿ ತಿಳಿಸಿತ್ತು. ಅಲ್ಲದೇ ಸಾರಿಗೆ ವರ್ಗ, ಪ್ರಯಾಣ ದೂರ ಮಿತಿಯನ್ನು ಆರ್ಥಿಕ ಇಲಾಖೆಯು ವಿಧಿಸಿತ್ತಾದರೂ ಅನುಷ್ಠಾನದ ಹಂತದಲ್ಲಿ ಈ ನಿರ್ಬಂಧವನ್ನು ತೆಗೆದು ಹಾಕಿತ್ತು. ಹೀಗಾಗಿ 53.82 ಕೋಟಿ ರು.ನಷ್ಟು ಅಧಿಕ ವೆಚ್ಚವಾಗಿತ್ತು.

 

https://stack.thefile.in/2023/07/rti/17305/

 

ಇದರಿಂದಾಗಿ  ನಗದು ಹರಿವಿನಲ್ಲಿ ಕೋಟ್ಯಂತರ ರುಪಾಯಿ ಕೊರತೆ, ಸಾರಿಗೆ ನಿಗಮಗಳಿಗೆ ಚಾಲ್ತಿಯಲ್ಲಿರುವ ಆದಾಯ ಖೋತಾದಂತಹ ವ್ಯತಿರಿಕ್ತ ಪರಿಣಾಮ ಬೀರುವುದಲ್ಲದೇ ಸಾರಿಗೆ ನಿಗಮಗಳ ಸಿಬ್ಬಂದಿಯ ವೇತನ ಪಾವತಿಗೂ ಅಡಚಣೆಯಾಗಲಿದೆ. ಅದೇ ರೀತಿ ಡೀಸೆಲ್‌ ದರ, ಸಿಬ್ಬಂದಿಗೆ ಪಾವತಿಸುವ ತುಟ್ಟಿಭತ್ಯೆ ಹೆಚ್ಚಳ, ವೇತನ ಪರಿಷ್ಕರಣೆಯಿಂದಾಗಿ ವೆಚ್ಚದಲ್ಲಿ ತೀವ್ರ ಏರಿಕೆಯಾಗುವುದಲ್ಲದೇ ಪ್ರಯಾಣ ದರವನ್ನು ಪರಿಷ್ಕರಣೆ ಮಾಡುವ ಅನಿವಾರ್ಯತೆಗೂ ಸರ್ಕಾರವು ಸಿಲುಕಲಿದೆ  ಎಂದು ಸರ್ಕಾರಕ್ಕೆ ವಿವರಿಸಿತ್ತು.

 

ಇದಕ್ಕಾಗಿ 4,028 ಹೊಸ ವಾಹನಗಳು ಮತ್ತು 13,793 ಸಿಬ್ಬಂದಿಯನ್ನು ಹೊಸದಾಗಿ ನೇಮಕ ಮಾಡಿಕೊಳ್ಳಬೇಕಿದೆ. ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸಿದಲ್ಲಿ ಸಾರಿಗೆ ಸೇವಾ ವರ್ಗವಾರು, ನಿಗಮವಾರು ಉಂಟಾಗುವ ಆರ್ಥಿಕ ವೆಚ್ಚವನ್ನು ಪ್ರಸ್ತಕ ಆದಾಯದ ಶೇ.50ರಂತೆ ಅಂದಾಜಿಸಿರುವ (ಏಪ್ರಿಲ್‌ 2023ರಲ್ಲಿದ್ದಂತೆ) ನಿಗಮವು ವಾರ್ಷಿಕವಾಗಿ ಒಟ್ಟಾರೆ 4,220.88 ಕೋಟಿ ರು. ಆರ್ಥಿಕ ವೆಚ್ಚವಾಗಲಿದೆ ಎಂದು ಎಂದು ಸಾರಿಗೆ ಇಲಾಖೆಯು ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ವಿವರಿಸಲಾಗಿದೆ.

 

ಪ್ರಸ್ತಾವನೆ ಪ್ರಕಾರ ಕೆಎಸ್‌ಆರ್‍‌ಟಿಸಿಗೆ ವಾರ್ಷಿಕವಾಗಿ 1,608.24 ಕೋಟಿ ರು., ಬಿಎಂಟಿಸಿಗೆ 770.16 ಕೋಟಿ ರು., ವಾಯುವ್ಯ ಕರ್ನಾಟಕಕ್ಕೆ 954.12 ಕೋಟಿ ರು., ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 888.36 ಕೋಟಿ ರು. ಆರ್ಥಿಕ ವೆಚ್ಚವಾಗಲಿದೆ. ಈ ಕುರಿತು 'ದಿ ಫೈಲ್‌' 2023ರ ಮೇ 31ರಂದೇ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.

 

https://stack.thefile.in/2023/05/governance/16504/

 

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 1,823, ವಾಯುವ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ 1,445, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 760 ಸೇರಿದಂತೆ ಒಟ್ಟು 4,028 ಹೊಸ ವಾಹನಗಳನ್ನು ಖರೀದಿಸಬೇಕು. ಅದೇ ರೀತಿ ಕರ್ನಾಟಕ ಸಾರಿಗೆ ನಿಗಮಕ್ಕೆ 5,178, ವಾಯುವ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ 2,415, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 2,425, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 3,775 ಸೇರಿ ಒಟ್ಟಾರೆ 13,793 ಸಿಬ್ಬಂದಿ ನೇಮಕಕ್ಕೆ ಸರ್ಕಾರವು ಸಹಾಯ ಹಸ್ತ ಚಾಚಬೇಕಿದೆ ಎಂಬ ಮಾಹಿತಿಯು ಪ್ರಸ್ತಾವನೆಯಿಂದ ತಿಳಿದು ಬಂದಿದೆ.

 

 

ಅದೇ ರೀತಿ ವಾಹನಗಳ ಕಾರ್ಯಾಚರಣೆಗೆ ಅಗತ್ಯವಿರುವ ಚಾಲನಾ ಸಿಬ್ಬಂದಿಗಳ ನೇಮಕಾತಿಗೆ ಅನುಮೋದನೆ ಮತ್ತು ಮುಂಬರುವ ದಿನಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ವಿತರಿಸಲಿರುವ ಸ್ಮಾರ್ಟ್‌ ಕಾರ್ಡ್‌ಗಳಿಗೆ ತಗಲುವ ವೆಚ್ಚವನ್ನು ಸರ್ಕಾರವೇ ಒದಗಿಸಬೇಕು ಎಂದು ನಿಗಮಗಳು ಪ್ರಸ್ತಾವನೆಯಲ್ಲಿ ವಿವರಿಸಿತ್ತು.

Tags: bjpcongressD K ShivakumarFinanceh d kumarswamyKSRTCRamlinagareddyReleaseShakti SchemeSiddaramaiahaಕೆಎಸ್‌ಆರ್‌ಟಿಸಿಡಿ ಕೆ ಶಿವಕುಮಾರ್ಬಿಎಂಟಿಸಿರಾಮಲಿಂಗಾರೆಡ್ಡಿಶಕ್ತಿಸಾರಿಗೆ ಇಲಾಖೆಸಿದ್ದರಾಮಯ್ಯಹಣ ಬಿಡುಗಡೆಹೆಚ್‌ ಡಿ ಕುಮಾರಸ್ವಾಮಿ
Advertisement Banner
Previous Post

2,218 ಎಕರೆ ಜಮೀನು ವಾಪಸ್‌ ವಿಚಾರ; ಮಾತಿನಿಂದ ಹಿಂದೆ ಸರಿದು ವಚನ ಭ್ರಷ್ಟವಾಯಿತೇ ಕಾಂಗ್ರೆಸ್‌ ಸರ್ಕಾರ?

Next Post

ದಿ ಕಾಶ್ಮೀರ್‍‌ ಫೈಲ್ಸ್‌, 777 ಚಾರ್ಲಿ ಸೇರಿ 4 ಸಿನಿಮಾಗಳ ಪ್ರದರ್ಶಕರಿಗೆ ಜಿಎಸ್‌ಟಿ ಹಿಂಪಾವತಿ; ಹೊರಬಿದ್ದ ಆದೇಶ

thefilestack

thefilestack

Next Post

ದಿ ಕಾಶ್ಮೀರ್‍‌ ಫೈಲ್ಸ್‌, 777 ಚಾರ್ಲಿ ಸೇರಿ 4 ಸಿನಿಮಾಗಳ ಪ್ರದರ್ಶಕರಿಗೆ ಜಿಎಸ್‌ಟಿ ಹಿಂಪಾವತಿ; ಹೊರಬಿದ್ದ ಆದೇಶ

Recommended

ಬಿಟ್‌ ಕಾಯಿನ್‌ ಹಗರಣ; ಆಪ್ತ ಐಪಿಎಸ್‌ ಅಧಿಕಾರಿಗಳಿಗೆ ಮಾಹಿತಿ ಸೋರಿಕೆಯ ಆಡಿಯೋ ಬಹಿರಂಗ

4 years ago

ದಿನೇಶ್‌ ಕಲ್ಲಹಳ್ಳಿ ದೂರನ್ನಾಧರಿಸಿ ಎಫ್‌ಐಆರ್‌ ದಾಖಲಿಸದ ಪಂತ್‌ ವಿರುದ್ಧ ಖಾಸಗಿ ದೂರು?

5 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd