the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

ಶಿಕ್ಷಣ, ಆರೋಗ್ಯ, ವೈದ್ಯಕೀಯ, ಪೌಷ್ಠಿಕಾಂಶ, ವಸತಿ ವಲಯಕ್ಕೆ ಕಡಿಮೆಯಾದ ಹಣದ ಪಾಲು

thefilestack by thefilestack
March 6, 2022
in GOVERNANCE
0

ಚಿತ್ರ; ಪ್ರಾತಿನಿಧಿಕ

0
SHARES
1
VIEWS
Share on FacebookShare on Twitter

ಬೆಂಗಳೂರು; ಶಿಕ್ಷಣ, ಆರೋಗ್ಯ, ವೈದ್ಯಕೀಯ ಸೌಕರ್ಯ, ಪೌಷ್ಠಿಕಾಂಶ, ನೀರು ಸರಬರಾಜು ಮತ್ತು ವಸತಿ ವಲಯಗಳಿಗೆ ರಾಜ್ಯ ನೀಡುತ್ತಿರುವ ಹಣದ ಪಾಲು ಕಡಿಮೆಯಾಗುತ್ತ ಬಂದಿದೆ ಎಂಬ ಸಂಗತಿಯನ್ನು ಕರ್ನಾಟಕ ಆರ್ಥಿಕ ಸಮೀಕ್ಷೆಯು ಬಹಿರಂಗಪಡಿಸಿದೆ.

 

ವೆಚ್ಚ ಮತ್ತು ಬಜೆಟ್‌ ಹಂಚಿಕೆಗೆ ಸಂಬಂಧಿಸಿದಂತೆ ವಿಸ್ತೃತವಾಗಿ ವಿಶ್ಲೇಷಿಸಿರುವ ಕರ್ನಾಟಕ ಆರ್ಥಿಕ ಸಮೀಕ್ಷೆಯು ಕೃಷಿ, ಗ್ರಾಮೀಣಾಭಿವೃದ್ಧಿ ವಲಯಕ್ಕೆ ಮಾಡಿರುವ ವೆಚ್ಚ ಮತ್ತು ಸಾಮಾಜಿಕ ವಲಯಗಳಿಗೆ ಮಾಡಿರುವ ವೆಚ್ಚದೊಂದಿಗೆ ತುಲನೆ ಮಾಡಿದೆ.

 

‘ರಾಜ್ಯವು ಶಿಕ್ಷಣ ಮತ್ತು ಆರೋಗ್ಯದ ವಲಯದಲ್ಲಿ ಇನ್ನೂ ಹೆಚ್ಚಿನ ಬಂಡವಾಳವನ್ನು ಹೂಡುವ ಅಗತ್ಯವಿದೆ. ರಾಜ್ಯದ ಎಲ್ಲಾ ಜನರಿಗೆ ಆರೋಗ್ಯ ಸೇವೆಗಳನ್ನು ಪೂರೈಸಲು, ವೃದ್ಧಾಪ್ಯವನ್ನು ತಲುಪಿರುವವರಿಗೆ ಆರೈಕೆ ಮತ್ತು ಅವರ ಆರೋಗ್ಯವನ್ನು ಜೋಪಾನಿಸಬೇಕೆಂದರೆ ಆರೋಗ್ಯ ವಲಯದ ಮೇಲೆ ಹೆಚ್ಚಿನ ಬಂಡವಾಳವನ್ನು ತೊಡಗಿಸಬೇಕಾಗಿದೆ,’ ಎಂದು ಸಮೀಕ್ಷೆ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

 

2012ರಲ್ಲಿ ಆರೋಗ್ಯ ವಲಯಕ್ಕೆ ರಾಜ್ಯಗಳ ವೆಚ್ಚ ಶೇ.4.2ರಷ್ಟಿತ್ತು. 2022ರ ಬಜೆಟ್‌ನಲ್ಲಿ ಶೇ. 5.5ಕ್ಕೆ ಏರಿಕೆಯಾಗಿದೆ. ಆದರೆ ಕರ್ನಾಟಕದ ವೆಚ್ಚವು 2012ರಲ್ಲಿ ಶೇ. 3.9ರಷ್ಟಿದ್ದರೆ 2022ರಲ್ಲಿ ಶೇ.5 ಮಾತ್ರ ಇದೆ. ಅದೇ ಸಮಯದಲ್ಲಿ ಶಿಕ್ಷಣದ ಮೇಲಿನ ವೆಚ್ಚವೂ ಪ್ರತೀ ವರ್ಷ ಕುಗ್ಗುತ್ತಲೇ ಬಂದಿದೆ. ಶಿಕ್ಷಣ ಮತ್ತು ಆರೋಗ್ಯ ವಲಯದಲ್ಲಿ ರಾಜ್ಯಗಳ ಸರಾಸರಿ 2012ರಲ್ಲಿ ಶೇ.16.3ರಷ್ಟಿ ದ್ದರೆ 2022ರಲ್ಲಿ ಶೆ.13.9ಕ್ಕೆ ಇಳಿಯುತ್ತದೆ. ಆದರೆ ಕರ್ನಾಟಕ ಇದೇ ಅವಧಿಯಲ್ಲಿ ಇನ್ನೂ ಕಡಿಮೆ ಮೊತ್ತವನ್ನು ಹಂಚಿಕೆ ಮಾಡಿರುತ್ತದೆ ಎಂದು ಸಮೀಕ್ಷೆ ವರದಿಯು ಬಹಿರಂಗಗೊಳಿಸಿದೆ.

 

‘2012ರಲ್ಲಿ ಶೇ.14.7ರಷ್ಟು ಮತ್ತು 2022ರಲ್ಲಿ ಶೇ.11.8ರಷ್ಟಾಗಿದೆ. ಶಾಲೆಯಲ್ಲಿ ಮಕ್ಕಳ ಸಂಖ್ಯೆ ಸ್ಥಿರವಾಗಿ ಉಳಿದಿದೆ. ಅದರಲ್ಲೂ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆಯಾಗಿದೆ ಎನ್ನುವುದು ಸತ್ಯವಾದರೂ ಉತ್ತಮ ಗುಣಮಟ್ಟದ ದುಡಿಯುವ ವರ್ಗವನ್ನು ಸೃಷ್ಟಿಸುವ ಉದ್ದೇಶದಿಂದ ಉನ್ನತ ಶಿಕ್ಷಣದಲ್ಲಿ ಇನ್ನು ಹೆಚ್ಚಿನ ಬಂಡವಾಳವನ್ನು ಹೂಡುವ ಅಗತ್ಯವಿದೆ, ‘ ಎಂದು ಸಮಿಕ್ಷೆ ವರದಿಯು ಒತ್ತಿ ಹೇಳಿದೆ.

 

ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ವಲಯಗಳನ್ನು ಅವಲಂಬಿಸಿರುವರ ಮೇಲಿನ ತಲಾ ವೆಚ್ಚಕ್ಕೂ ಇತರೆ ವಲಯಗಳನ್ನು ಅವಲಂಬಿಸಿರುವರ ಮೇಲಿನ ತಲಾ ವೆಚ್ಚಕ್ಕೂ ಸಾಕಷ್ಟು ವ್ಯತ್ಯಾಸದ ಮೇಲೆ ಸಮೀಕ್ಷೆ ವರದಿಯು ಬೆಳಕು ಚೆಲ್ಲಿದೆ.

 

ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ವಲಯಕ್ಕೆ (ತಲಾ ವೆಚ್ಚ) 2017-18ರಿಂದ 2021-22ರವರೆಗೆ 1,46,786 ರು. ವೆಚ್ಚ ಮಾಡಿದೆ. ಅದೇ ರೀತಿ ಇತರೆ ವಲಯಗಳ ಮೇಲೆ ಇದೇ ಅವಧಿಯಲ್ಲಿ 86, 003 ರು. ವೆಚ್ಚ ಮಾಡಿದೆ. ಅಂದರೆ 60,783 ರು. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ವಲಯಕ್ಕೆ ವೆಚ್ಚ ಮಾಡಿದಂತಾಗಿದೆ.

 

2017-18ರಲ್ಲಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ವಲಯಕ್ಕೆ ತಲಾ ವೆಚ್ಚದ ರೂಪದಲ್ಲಿ 25,472 ರು. ಖರ್ಚಾದರೆ ಇತರೆ ವಲಯಗಳ ಮೇಲಿನ ತಲಾ ವೆಚ್ಚವು 16,093 ರು. ಆಗಿದೆ. 2022ರ ವರ್ಷಕ್ಕೆ ಇದು 29,772 ಕೋಟಿ ಮತ್ತು 18,371 ಕೋಟಿ ರು. ಆಗುತ್ತದೆ. ‘ಕೈಗಾರಿಕೆ, ಸೇವೆ ಮತ್ತು ನಗರಾಭಿವೃದ್ಧಿ ವಲಯಗಳಿಗೆ ಅಸಮರ್ಪಕವಾಗಿ ಹಂಚಿಕೆಯಾಗುತ್ತಿದೆ,’ ಎಂದೂ ಸಮೀಕ್ಷೆ ವರದಿಯಲ್ಲಿ ಹೇಳಲಾಗಿದೆ.

 

ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ವಲಯಗಳು ನಿರೀಕ್ಷಿತ ಬೆಳವಣಿಗೆ ಸಾಧಿಸಲು ಇಷ್ಟು ಬೃಹತ್‌ ಪ್ರಮಾಣದಲ್ಲಿ ಹೂಡಿಕೆ ನಿರೀಕ್ಷಿಸಬೇಕು. ಆದರೆ ಇಂತಹುದೇ ಹೂಡಿಕೆಯು ಇತರೆ ವಲಯಗಳ ಅಭಿವೃದ್ಧಿ ದೃಷ್ಟಿಯಿಂದಲೂ ಬೇಕಾಗುತ್ತದೆ. ಶೇ.41ರಷ್ಟು ಜನರು ಕೃಷಿ ಮತ್ತು ಗ್ರಾಮೀಣ ಆರ್ಥಿಕತೆ ಅವಲಂಬಿಸಿದ್ದು ಶೇ. 59ರಷ್ಟು ಜನಸಂಖ್ಯೆ ಇತರೆ ವಲಯಗಳನ್ನು ಅವಲಂಬಿಸಿದೆ. ಕರ್ನಾಟಕವು ತುರ್ತಾಗಿ ಲಭ್ಯವಿರುವ ಕಾರ್ಮಿಕರನ್ನು ಹೆಚ್ಚಿನ ಮೌಲ್ಯವನ್ನು ಒದಗಿಸುವ ಕೈಗಾರಿಕೆ ಮತ್ತು ಸೇವಾ ವಲಯಗಳಲ್ಲಿ ಉದ್ಯೋಗ ಪಡೆಯುವಂತೆ ಮಾಡಬೇಕಿದೆ ಎಂದು ಸಮೀಕ್ಷೆ ವರದಿಯಲ್ಲಿ ವಿವರಿಸಲಾಗಿದೆ.

 

‘ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ಹಾಲಿ ನೀಡುತ್ತಿರುವ ಹಣದ ಹಂಚಿಕೆಯನ್ನು ಕಾಪಾಡಿಕೊಳ್ಳುತ್ತಲೇ ಕೈಗಾರಿಕೆ ಮತ್ತು ಸೇವಾ ವಲಯಕ್ಕೆ ಹಣದ ಹಂಚಿಕೆಯನ್ನು ಹೆಚ್ಚಿಸುವ ಅವಶ್ಯಕತೆ ಇದೆ. ಏಕೆಂದರೆ ಈ ವಲಯಗಳಲ್ಲಿ ಉದ್ಯೋಗದ ಅವಕಾಶಗಳನ್ನು ಹೆಚ್ಚಿಸುವ ಅಗತ್ಯವಿದೆ,’ ಎಂದು ಸಮೀಕ್ಷೆ ವರದಿಯು ಅಭಿಪ್ರಾಯಪಟ್ಟಿದೆ.

Tags: agricultureBasavaraj BommaiBudgetBudget 2022D K ShivakumarEmploymentFinance Ministerh d kumarswamyHealthHigher EducationIndustriesInvestmentsmedicalRural Development and Panchayat RajRural Drinking WaterService SectorSiddaramaiahಅಸಮರ್ಪಕ ಹಂಚಿಕೆಆಯವ್ಯಯ 2022ಆರೋಗ್ಯಎಚ್‌ ಡಿ ಕುಮಾರಸ್ವಾಮಿಕುಡಿಯುವ ನೀರುಕೃಷಿಕೇಂದ್ರದ ವೆಚ್ಚಕೈಗಾರಿಕೆಗ್ರಾಮೀಣಾಭಿವೃದ್ಧಿಡಿ ಕೆ ಶಿವಕುಮಾರ್ತಲಾ ವೆಚ್ಚನಗರಾಭಿವೃದ್ಧಿ ವಲಯಪೌಷ್ಠಿಕಾಂಶಬಜೆಟ್‌ಬಸವರಾಜ ಬೊಮ್ಮಾಯಿರಾಜ್ಯಗಳ ವೆಚ್ಚವಸತಿ ವಲಯವೈದ್ಯಕೀಯಶಿಕ್ಷಣಸಿದ್ದರಾಮಯ್ಯಸೇವಾ ವಲಯ
Advertisement Banner
Previous Post

ಕೇಂದ್ರದ ವೆಚ್ಚ ದಿನೇ ದಿನೇ ಕಡಿತ, ರಾಜ್ಯದ ವೆಚ್ಚದಲ್ಲಿ ಹೆಚ್ಚಳ; ಆರ್ಥಿಕ ಸಮೀಕ್ಷೆಯಲ್ಲಿ ಬಹಿರಂಗ

Next Post

ನಿವೃತ್ತ ಡಿಜಿಪಿ ನೀಲಮಣಿ, ಐಪಿಎಸ್‌ ಕಿಶೋರ್‌ ಚಂದ್ರ ವಿರುದ್ಧ ಲಂಚದ ಆರೋಪ;ರೇರಾದಲ್ಲೂ ಭ್ರಷ್ಟಾಚಾರ?

thefilestack

thefilestack

Next Post

ನಿವೃತ್ತ ಡಿಜಿಪಿ ನೀಲಮಣಿ, ಐಪಿಎಸ್‌ ಕಿಶೋರ್‌ ಚಂದ್ರ ವಿರುದ್ಧ ಲಂಚದ ಆರೋಪ;ರೇರಾದಲ್ಲೂ ಭ್ರಷ್ಟಾಚಾರ?

Recommended

ಆತ್ಮನಿರ್ಭರ; ಸೂಕ್ಷ್ಮ, ಸಣ್ಣ ಮಧ್ಯಮ ಕೈಗಾರಿಕೆಗಳಿಗೆ ಸಾಲ ನೀಡುವಲ್ಲಿ ಬ್ಯಾಂಕ್‌ಗಳ ಕಳಪೆ ಪ್ರದರ್ಶನ

4 years ago

ಸರ್ಕಾರಕ್ಕೆ ಮೋಸ; 199 ಎಕರೆ, ಕೋಟ್ಯಂತರ ರುಪಾಯಿ ಮೌಲ್ಯದ ಕಟ್ಟಡ, ಕಡಿಮೆ ಬೆಲೆಗೆ ಮಾರಾಟ ಆರೋಪ

3 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd