the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

ಶೃಂಗೇರಿ ಮಠದಿಂದ ಅನಧಿಕೃತ ಕಟ್ಟಡ ನಿರ್ಮಾಣ; ತೆರವಿಗೆ ಮುಂದಾದ ಬಿಬಿಎಂಪಿ, ಬಂದೋಬಸ್ತ್‌ಗೆ ಪತ್ರ

thefilestack by thefilestack
November 7, 2024
in GOVERNANCE
0
0
SHARES
0
VIEWS
Share on FacebookShare on Twitter

ಬೆಂಗಳೂರು; ಶೃಂಗೇರಿ ಮಠವು ಬೆಂಗಳೂರಿನಲ್ಲಿ ನಡೆಸುತ್ತಿರುವ ಜ್ಞಾನೋದಯ ಶಾಲೆ ಮತ್ತು ಪಿಯು ಕಾಲೇಜಿನ ಆಡಳಿತ ಮಂಡಳಿಯು ಬಿಬಿಎಂಪಿಯಿಂದ ಯಾವುದೇ ಮಂಜೂರಾತಿ ನಕ್ಷೆಯನ್ನು ಪಡೆಯದೇ ವಸತಿ ಕಟ್ಟಡ ನಿರ್ಮಾಣ ಮಾಡಿರುವುದು ಇದೀಗ  ಬಹಿರಂಗವಾಗಿದೆ.

 

ಹೀಗಾಗಿ ಈ ಕಟ್ಟಡವನ್ನು ಇದೇ ನವೆಂಬರ್‍‌ 11ರಂದು ತೆರವುಗೊಳಿಸಲು ಬಿಬಿಎಂಪಿಯು ಮುಂದಾಗಿದೆ. ಈ ಸಂಬಂಧ ಸೂಕ್ತ ಪೊಲೀಸ್‌ ಬಂದೋಬಸ್ತ್‌ ಒದಗಿಸಬೇಕು ಎಂದು ಬಿಬಿಎಂಪಿಯು ಧರ್ಮರಾಯಸ್ವಾಮಿ ದೇವಸ್ಥಾನ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‍‌ ಅವರು 2024ರ ನವೆಂಬರ್‍‌ 4ರಂದು ಪತ್ರ ಬರೆದಿದ್ದಾರೆ.

 

ಬಿಬಿಎಂಪಿ ಅನುಮೋದನೆ ಇಲ್ಲದೆಯೇ ಅನಧಿಕೃತವಾಗಿ ನಿರ್ಮಾಣವಾಗುತ್ತಿರುವ ಕಟ್ಟಡಗಳ ವಿರುದ್ಧ ಸೂಕ್ತ ಮತ್ತು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್‍‌ ಅವರು ಸೂಚನೆ ನೀಡಿದ್ದರ ಬೆನ್ನಲ್ಲೇ ಶೃಂಗೇರಿ ಮಠದ ಜ್ಞಾನೋದಯ ಶಾಲೆ ಆಡಳಿತ ಮಂಡಳಿಯು ನಿರ್ಮಾಣ ಮಾಡುತ್ತಿರುವ ವಸತಿ ಕಟ್ಟಡದ ಪ್ರಕರಣವೂ ಮುನ್ನೆಲೆಗೆ ಬಂದಿದೆ.

 

ಬಿಬಿಎಂಪಿ ಪತ್ರದಲ್ಲೇನಿದೆ?

 

ವಾರ್ಡ್ ಸಂಖ್ಯೆ 162 ಸುಂಕೇನಹಳ್ಳಿ ವ್ಯಾಪ್ತಿಯಲ್ಲಿ ಬರುವ (ಸ್ವತ್ತಿನ ಸಂಖ್ಯೆ 160/24)  ಬುಲ್‌ ಟೆಂಪಲ್‌ ರೋಡ್‌ ಶಂಕರಪುರಂ ಪಾರ್ಕ್ ಬಳಿಯ ಕಟ್ಟಡ ಮಾಲೀಕರಾದ ಶೃಂಗೇರಿ ಮಠದ ಆಡಳಿತಗಾರರು   ಶ್ರೀ ಶೃಂಗೇರಿ ಮಠದ ಆಸ್ತಿಯ ಜ್ಞಾನೋದಯ ಶಾಲೆ ಮತ್ತು ಪಿ ಯು ಕಾಲೇಜಿನವರು ವಸತಿ ಕಟ್ಟಡವನ್ನು ನಿರ್ಮಿಸಲು ಬಿಬಿಎಂಪಿಯಿಂದ ಯಾವುದೇ ಮಂಜೂರಾತಿ ನಕ್ಷೆಯನ್ನು ಪಡೆಯದೇ ಅನಧಿಕೃತವಾಗಿ ಕಟ್ಟಡ ನಿರ್ಮಿಸಿದ್ದಾರೆ.

 

ಈ ಸಂಬಂಧ  ಬಿಬಿಎಂಪಿ ಬಿಬಿಎಂಪಿ ಕಾಯ್ದೆ 2020ರ ಕಲಂ 248 (1), 248 (2) ಮತ್ತು 248(3) ತಾತ್ಕಾಲಿಕ ಅದೇಶ ಹಾಗೂ ಸ್ಥಿರೀಕರಣ ನೋಟೀಸ್‌ಗಳನ್ನು ಜಾರಿ ಮಾಡಿರುತ್ತದೆ. ಹಾಗೂ ಬಿಬಿಎಂಪಿ ಕಾಯ್ದೆ ಕಲಂ 356ರ ಪ್ರಕಾರ ಕಟ್ಟಡವನ್ನು ಒಡೆದು ಹಾಕುವ ಸಂಬಂಧ   ಚಿಕ್ಕಪೇಟೆ ಕಾರ್ಯಪಾಲಕ ಅಭಿಯಂತರರು  ಆದೇಶ  ಹೊರಡಿಸಿರುವುದು ಪತ್ರದಿಂದ ತಿಳಿದು ಬಂದಿದೆ.

 

 

ಅನಧಿಕೃತವಾಗಿ ನಿರ್ಮಿಸುತ್ತಿರುವ,  ನಿರ್ಮಿಸಿರುವ ಕಟ್ಟಡದ ಭಾಗಗಳನ್ನು 2024ರ ನವೆಂಬರ್‍‌ 11ರಂದು ತೆರವುಗೊಳಿಸಲು ನಿಗದಿಪಡಿಸಿದೆ. ಈ ಸಂದರ್ಭದಲ್ಲಿ ಯಾವುದೇ ಅಹಿತರಕ ಘಟನೆಗಳು ಸಂಭವಿಸದ ರೀತಿಯಲ್ಲಿ ಪೊಲೀಸ್‌ ಸಿಬ್ಬಂದಿ ಒದಗಿಸಬೇಕು.  ಪಾಲಿಕೆ ಸಿಬ್ಬಂದಿ  ವರ್ಗಕ್ಕೆ ಸೂಕ್ತ ರಕ್ಷಣೆ ಒದಗಿಸಲು ಪೊಲೀಸ್‌ ಬಂದೋಬಸ್ತ್‌ ಮಾಡಬೇಕು. ಅಲ್ಲದೆ ಈ  ಕಾರ್ಯಾಚರಣೆ ಯಶಸ್ವಿಗೊಳಿಸಬೇಕು ಎಂದು ಶಂಕರಪುರಂ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‍‌ಗೆ ಬರೆದ ಪತ್ರದಲ್ಲಿ ಕೋರಿರುವುದು ಗೊತ್ತಾಗಿದೆ.

 

ಈ ಸಂಬಂಧ ಮುಖ್ಯ ಆಯುಕ್ತ ತುಷಾರ್‍‌ ಗಿರಿನಾಥ್‌ ಅವರು ಸಚಿವ ಡಿ ಕೆ ಶಿವಕುಮಾರ್‍‌ ಅವರೊಂದಿಗೆ ಸಮಾಲೋಚಿಸಿದ್ದಾರೆ ಎಂದು ತಿಳಿದು ಬಂದಿದೆ.

 

ಹೆಣ್ಣೂರು ಸಮೀಪದ ಬಾಬುಸಾಪಾಳ್ಯದಲ್ಲಿ 6 ಅಂತಸ್ತಿನ ಕಟ್ಟಡ ಕುಸಿದು ಬಿದ್ದ ದುರ್ಘಟನೆಯಿಂದ ಬಿಬಿಎಂಪಿ ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ. ಈ ಮಧ್ಯೆ ಯಲಹಂಕ ವಲಯ ಆಯುಕ್ತ ಐಎಎಸ್‌ ಅಧಿಕಾರಿ ಕರಿಗೌಡ ಅವರ ವಿರುದ್ಧವೂ ದೂರು ಸಲ್ಲಿಕೆಯಾಗಿತ್ತು.

 

ಯಲಹಂಕದಲ್ಲಿರುವ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌ನಲ್ಲಿ ನಿರ್ಮಾಣವಾಗಿದೆ ಎನ್ನಲಾಗಿರುವ ಅನಧಿಕೃತವಾಗಿ ಮಳಿಗೆಗಳನ್ನು ತೆರವುಗೊಳಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಅಪಾರ್ಟ್‌ಮೆಂಟ್‌ ಅಸೋಸಿಯೇಷನ್‌ನ ಡಾ ಸುನೀಲಕುಮಾರ ಹೆಬ್ಬಿ ಅವರು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ದೂರು ಸಲ್ಲಿಸಿದ್ದರು.

 

https://stack.thefile.in/2024/11/governance/27329/

 

ಅನಧಿಕೃತ ಮಳಿಗೆ, ಕಟ್ಟಡಗಳನ್ನು ತಕ್ಷಣವೇ ನೆಲಸಮಗೊಳಿಸಬೇಕು ಎಂದು ಬಿಬಿಎಂಪಿ ಆದೇಶ ಹೊರಡಿಸಿತ್ತು. ಆದರೆ ಯಲಹಂಕದ ಕೇಂದ್ರೀಯ ಅಪಾರ್ಟ್‌ಮೆಂಟ್‌ನಲ್ಲಿ ನಿರ್ಮಾಣವಾಗಿರುವ ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸಿಲ್ಲ. ಮಳಿಗೆಗಳಿಗೆ ನೀಡಲಾಗಿದ್ದ ವಿದ್ಯುತ್‌ ಸಂಪರ್ಕವನ್ನು ಬೆಸ್ಕಾಂ ಕಡಿತಗೊಳಿಸಿದೆ. ಆದರೂ ಬಿಬಿಎಂಪಿ ವಲಯ ಆಯುಕ್ತರು ಅನಧಿಕೃತವಾಗಿ ನಿರ್ಮಾಣವಾಗಿರುವ ಮಳಿಗೆಗಳನ್ನು ತೆರವುಗೊಳಿಸುತ್ತಿಲ್ಲ ಎಂದು ಸುನೀಲ್‌ ಕುಮಾರ್‍‌ ಹೆಬ್ಬಿ ಅವರು ದೂರಿನಲ್ಲಿ ವಿವರಿಸಿದ್ದರು.

 

 

 

ಅಲ್ಲದೇ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌ನ ನಿವೇಶನದಲ್ಲಿ ಅನಧಿಕೃತವಾಗಿ ಮಳಿಗೆಗಳನ್ನು ನಿರ್ಮಿಸಿರುವುದು ಕಂಡು ಬಂದಿದೆ ಎಂದು ಖುದ್ದು ಬಿಬಿಎಂಪಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಸಹ 2024ರ ಆಗಸ್ಟ್‌ 29ರಂದೇ ಸ್ಥಿರೀಕರಣ ಆದೇಶವನ್ನೂ ಹೊರಡಿಸಿದ್ದರು.

 

 

‘ಬಿಬಿಎಂಪಿ ಕಾಯ್ದೆ 2020 ಚಾಲ್ತಿಯಲ್ಲಿರುವ ಕಟ್ಟಡ ಉಪ ವಿಧಿಗಳು ಹಾಗೂ ಬಿಬಿಎಂಪಿ ವಲಯ ನಿಯಮಾವಳಿಗಳು 2015ನ್ನು ಉಲ್ಲಂಘಿಸಿರುವುದು ನನಗೆ ಮನಃಪೂರ್ತಿಯಾಗಿ ದೃಢಪಟ್ಟಿದೆ. ಆದ ಕಾರಣ ಅನಧಿಕೃತವಾಗಿ ನಿರ್ಮಾಣವಾಗಿರುವ ಕಟ್ಟಡವನ್ನು ಕೆಡವಿ ಹಾಕಲು/ ತೆರವುಗೊಳಿಸಬೇಕು,’ ಎಂದು ಆದೇಶಿಸಿರುವುದು ಗೊತ್ತಾಗಿದೆ.

 

 

 

ಇದೇ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌ನ ಮಾಲೀಕರು ಕಟ್ಟಡ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು ಸಹ ಬೆಸ್ಕಾಂಗೆ 2024ರಲ್ಲಿ ಪತ್ರ ಬರೆದಿತ್ತು.

 

Tags: AdministratorB S YediyurappaBasanagoudaBBMPbjpChief CommissionerCollegeConstructionD K ShivakumarIllegalJnanodayaMutPatilpolicePropertySchoolSecurityShankarapuraSiddaramaiahaSringereiSringeri MathYatnalಅನಧಿಕೃತಇಂಜಿನಿಯರ್‌ಕಟ್ಟಡಕಟ್ಟಡ ಮಾಲೀಕರುಕಾಯ್ದೆಕಾಲೇಜುಚಿಕ್ಕಪೇಟೆಜ್ಞಾನೋದಯಡಿ ಕೆ ಶಿವಕುಮಾರ್ತುಷಾರ್‌ ಗಿರಿನಾಥ್ತೆರವುನಿರ್ಮಾಣನೋಟೀಸ್‌ಪೊಲೀಸ್‌ಬಂದೋಬಸ್ತ್‌ಬಿಜೆಪಿಬಿಬಿಎಂಪಿಬುಲ್‌ ಟೆಂಪಲ್‌ಮಠಮಠದ ಆಸ್ತಿಯಲಹಂಕರಸ್ತೆವಸತಿಶಂಕರಪುರಂಶಾಲೆಶೃಂಗೇರಿಸಿದ್ದರಾಮಯ್ಯಸುಂಕೇನಹಳ್ಳಿ
Advertisement Banner
Previous Post

ಪಹಣಿ ಕಾಲಂ 9ರಲ್ಲಿ ವಕ್ಫ್‌ ಆಸ್ತಿ ನಮೂದು; ಸಿದ್ದರಾಮಯ್ಯರ ಮೊದಲ ಅವಧಿಯಲ್ಲೇ ಸೂಚನೆ, ಮುನ್ನೆಲೆಗೆ ಬಂದ ಸುತ್ತೋಲೆ

Next Post

ವಕ್ಫ್‌ ಗದ್ದಲ; 2017ರ ಅಂತ್ಯಕ್ಕೇ 8,622 ಆಸ್ತಿಗಳು ವಕ್ಫ್‌ ಸ್ವತ್ತೆಂದು ನಮೂದು, ಕಲ್ಬುರ್ಗಿಯಲ್ಲೇ ಅತೀ ಹೆಚ್ಚು

thefilestack

thefilestack

Next Post

ವಕ್ಫ್‌ ಗದ್ದಲ; 2017ರ ಅಂತ್ಯಕ್ಕೇ 8,622 ಆಸ್ತಿಗಳು ವಕ್ಫ್‌ ಸ್ವತ್ತೆಂದು ನಮೂದು, ಕಲ್ಬುರ್ಗಿಯಲ್ಲೇ ಅತೀ ಹೆಚ್ಚು

Recommended

ಮರಣ ಪರಿಹಾರ, ನಿವೃತ್ತಿ ಸಹಾಯಧನ; ಕಾನೂನು ಇಲಾಖೆ ಪ್ರಸ್ತಾವ ತಿರಸ್ಕೃತ, ವಕೀಲರುಗಳಿಗೆ ಕೈಕೊಟ್ಟ ಸರ್ಕಾರ

3 years ago

ಲೋಕಾಯುಕ್ತರ ಪತ್ನಿ ವಿರುದ್ಧ ಪ್ರಕರಣ; ದೂರರ್ಜಿ ಮೇಲೆ ಕೈಗೊಂಡ ಕ್ರಮಗಳ ಮಾಹಿತಿ ಒದಗಿಸದ ಐಜಿ ಕಚೇರಿ

2 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd