the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home LEGISLATURE

ಶೇ.50ರ ಗಡಿಯನ್ನೂ ದಾಟದ 30 ಇಲಾಖೆ, ತೆವಳಿವೆ ಜನಕಲ್ಯಾಣ ಯೋಜನೆಗಳು; ಪ್ರಚಾರಕ್ಕಷ್ಟೇ ಸೀಮಿತ

thefilestack by thefilestack
January 5, 2023
in LEGISLATURE
0
ಶೇ.50ರ ಗಡಿಯನ್ನೂ  ದಾಟದ 30 ಇಲಾಖೆ, ತೆವಳಿವೆ ಜನಕಲ್ಯಾಣ ಯೋಜನೆಗಳು; ಪ್ರಚಾರಕ್ಕಷ್ಟೇ ಸೀಮಿತ

photo credit;basavarajbommai twitter account

0
SHARES
1
VIEWS
Share on FacebookShare on Twitter

ಬೆಂಗಳೂರು; ನಗರಾಭಿವೃದ್ಧಿ, ಕೃಷಿ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಎಲ್ಲಾ ಇಲಾಖೆಗಳು ಅಭಿವೃದ್ಧಿ ಪಥದಲ್ಲಿವೆ ಎಂದು ಭರ್ಜರಿ ಪ್ರಚಾರದಲ್ಲಿ ಮೇಳೈಸುತ್ತಿವೆ. ಆದರೆ ವಾಸ್ತವದಲ್ಲಿ 32 ಇಲಾಖೆಗಳು ಶೇ. 50ರ ಗಡಿಯನ್ನು ದಾಟಿಲ್ಲ. ಕೆಲ ಇಲಾಖೆಗಳು ಶೇ. 30ರ ಗಡಿಯನ್ನೂ ದಾಟಿ ಬಂದಿಲ್ಲ. ಬಹುತೇಕ ಇಲಾಖೆಗಳು ಕಳಪೆ ಪ್ರದರ್ಶನ ತೋರಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ವಿಧಾನಪರಿಷತ್‌ಗೆ ಪಟ್ಟಿಯನ್ನು ಒದಗಿಸಿದ್ದಾರೆ.

 

2022-23ರ ಸಾಲಿನ ಬಜೆಟ್‌ನಲ್ಲಿ ಒಟ್ಟು ಅನುದಾನದಲ್ಲಿಯೆ 15,460 ಕೋಟಿ ಬಾಕಿ ಉಳಿಸಿಕೊಂಡು ಕೇವಲ ಶೇ.47ರಷ್ಟು ಪ್ರಗತಿ ಸಾಧಿಸಿರುವ ಇಲಾಖೆಗಳ ಪಟ್ಟಿಯೂ ಇದೀಗ ಮುನ್ನೆಲೆಗೆ ಬಂದಿವೆ.

 

ಅಲ್ಲದೇ 40 ಪರ್ಸೆಂಟ್‌ ಕಮಿಷನ್‌ ಆರೋಪಕ್ಕೆ ಗುರಿಯಾಗಿದ್ದ ಇಲಾಖೆಗಳಲ್ಲಿ ಕಾರ್ಯಕ್ರಮಗಳಿಗೆ ಚುರುಕಿನ ವೇಗ ದೊರೆತಿದ್ದರೇ ಕುಡಿಯುವ ನೀರು ಸೇರಿದಂತೆ ಜನಕಲ್ಯಾಣ ಯೋಜನೆಗಳ ಪ್ರಗತಿಯು ಶೇ.50ರ ಗಡಿಯನ್ನೂ ದಾಟಿಲ್ಲ. ವಿಧಾನಪರಿಷತ್‌ನಲ್ಲಿ ಜೆಡಿಎಸ್‌ ಸದಸ್ಯ ಟಿ ಎ ಶರವಣ ಅವರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಗತಿಯ ಪಟ್ಟಿಯನ್ನು ಒದಗಿಸಿದ್ದಾರೆ.  ಈ ಸಂಬಂಧ ಅಂಕಿ ಅಂಶಗಳನ್ನೊಳಗೊಂಡ ಪಟ್ಟಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಶೇ. 40ಕ್ಕಿಂತಲೂ ಕಡಿಮೆ ಪ್ರಗತಿ ಸಾಧಿಸಿರುವ ಇಲಾಖೆಗಳ ಪಟ್ಟಿಯಲ್ಲಿ ಕೃಷಿ, ಇ-ಆಡಳಿತ, ಅಲ್ಪಸಂಖ್ಯಾತರ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಾರ್ತೆ, ಪ್ರವಾಸೋದ್ಯಮ, ಆಹಾರ ನಾಗರೀಕ ಸರಬರಾಜು, ವಸತಿ, ಕೈ ಮಗ್ಗ ಜವಳಿ, ಭಾರೀ ಮತ್ತು ಮಧ್ಯಮ ಕೈಗಾರಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಇವೆ.

 

ಶೇ.40ರಿಂದ 50ರ ಆಸುಪಾಸಿನಲ್ಲಿರುವ ಇಲಾಖೆಗಳಿವು

 

ತೋಟಗಾರಿಕೆ, ಆರ್ಥಿಕ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಗ್ರಾಮೀಣ ಮತ್ತು ಪಂಚಾಯತ್‌ ಅಭಿವೃದ್ಧಿ, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ, ಸಹಕಾರ, ಹಿಂದುಳಿದ ವರ್ಗಗಳ ಕಲ್ಯಾಣ, ಮಾಹಿತಿ ತಂತ್ರಜ್ಞಾನ, ಉನ್ನತ ಶಿಕ್ಷಣ, ಸಣ್ಣ ಕೈಗಾರಿಕೆ, ಗಣಿ, ನಗರಾಭಿವೃದ್ಧಿ, ಲೋಕೋಪಯೋಗಿ, ಭಾರೀ ನೀರಾವರಿ, ವೈದ್ಯಕೀಯ, ಆರೋಗ್ಯ, ಕಾರ್ಮಿಕ, ಕೌಶಲ್ಯ, ಇಂಧನ, ಋಣ ಮೇಲುಸ್ತುವಾರಿ ಇಲಾಖೆ ಇವೆ.

 

ಇಲಾಖಾವಾರು ಸಾಧನೆ ಪಟ್ಟಿ 

ಕೃಷಿ ಇಲಾಖೆಗೆ ಆಯವ್ಯಯದಲ್ಲಿ 6,76,115 ಲಕ್ಷ ರು.ಗಳನ್ನು ಒದಗಿಸಿತ್ತು. ಈ ಪೈಕಿ ಅಕ್ಟೋಬರ್‌ 2022ರ ಅಂತ್ಯಕ್ಕೆ 1,63,963 ಲಕ್ಷ ರು. ಖರ್ಚಾಗಿತ್ತು.ಇದು ಒಟ್ಟು ಅನುದಾನಕ್ಕೆ ಶೇ.24ರಷ್ಟು ಮಾತ್ರ ವೆಚ್ಚವಾಗಿತ್ತು. 1,23,998 ಲಕ್ಷ ರು. ಪೈಕಿ 60,657 ಲಕ್ಷ ರು. ಖರ್ಚು ಮಾಡಿರುವ ತೋಟಗಾರಿಕೆ ಇಲಾಖೆಯು ಒಟ್ಟು ಅನುದಾನದಲ್ಲಿ ಶೇ.49ರಷ್ಟು ಮಾತ್ರ ವೆಚ್ಚ ಮಾಡಿದೆ.

 

ಆರ್ಥಿಕ ಇಲಾಖೆಯು 28,48,866 ಲಕ್ಷ ರು.ಪೈಕಿ 12,90,222 ಲಕ್ಷ ರು. ವೆಚ್ಚ ಮಾಡಿ ಶೇ.45ರಷ್ಟು ಪ್ರಗತಿ ಸಾಧಿಸಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು 17,24,308 ಲಕ್ಷ ರು. ಪೈಕಿ 7,03,280 ಲಕ್ಷ ರು. ಖರ್ಚು ಮಾಡಿ ಶೇ. 41ರಷ್ಟೇ ಪ್ರಗತಿ ಸಾಧಿಸಿದೆ. ಅರಣ್ಯ ಇಲಾಖೆಯು ಕೂಡ 2,04,741 ಲಕ್ಷ ರು. ಪೈಕಿ 88,985 ಲಕ್ಷ ರು. ವೆಚ್ಚ ಮಾಡಿ ಶೇ. 43ರಷ್ಟು ಪ್ರಗತಿ ಸಾಧಿಸಿದೆ. ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯು 1,278 ಲಕ್ಷ ರು. ಪೈಕಿ 627 ಲಕ್ಷ ಖರ್ಚು ಮಾಡಿ ಶೇ. 49ರಷ್ಟು ಸಾಧನೆ ತೋರಿದೆ.

 

ಸಹಕಾರ ಇಲಾಖೆಯು 1,78,698 ಲಕ್ಷ ರು ಪೈಕಿ 83,262 ಲಕ್ಷ ರು.ವೆಚ್ಚ ಮಾಡಿ ಶೇ.47ರಷ್ಟು ಸಾಧನೆ ತೋರಿದೆ. ಪರಿಶಿಷ್ಟ ಜಾತಿಗಳ ಕಲ್ಯಾಣ ಇಲಾಖೆಯು3,81,785 ಲಕ್ಷ ರು. ಪೈಕಿ 1,98,107 ಲಕ್ಷ ರು. ಖರ್ಚು ಮಾಡಿ ಶೇ.52ರಷ್ಟು ಪ್ರಗತಿ ಸಾಧಿಸಿದೆ. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯು 1,49,563 ಲಕ್ಷ ರು. ಪೈಕಿ 80,603 ಲಕ್ಷ ರು. ಖರ್ಚು ಮಾಡಿ ಶೆ. 54ರಷ್ಟು ಸಾಧನೆ ಪ್ರದರ್ಶಿಸಿದೆ.

 

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2,37,160 ಲಕ್ಷ ರು. ಪೈಕಿ 1,18,164 ಲಕ್ಷ ರು ಖರ್ಚು ಮಾಡಿ ಶೇ.50ರಷ್ಟು ಪ್ರಗತಿ ಸಾಧಿಸಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 1,49,518 ಲಕ್ಷ ರು.ನಲ್ಲಿ 54,120 ಲಕ್ಷ ರು. ವೆಚ್ಚ ಮಾಡಿ ಕೇವಲ ಶೇ. 36ರಷ್ಟು ಮಾತ್ರ ಪ್ರಗತಿ ಸಾಧಿಸಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು 4,79,159 ಲಕ್ಷ ರು ಪೈಕಿ 1,67,239 ಲಕ್ಷ ರು. ಖರ್ಚು ಮಾಡಿ ಶೇ.36ರಷ್ಟು ಮಾತ್ರ ಪ್ರಗತಿ ಪ್ರದರ್ಶಿಸಿದೆ.

 

ಪ್ರವಾಸೋದ್ಯಮ ಇಲಾಖೆಯು 33,023 ಲಕ್ಷ ರು. ಪೈಕಿ 5,302 ಲಕ್ಷ ರು ಖರ್ಚು ಮಾಡಿ ಶೇ.16ರಷ್ಟು ಮಾತ್ರ ಪ್ರಗತಿ ಸಾಧಿಸಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು 2,98,741 ಲಕ್ಷ ರು. ಪೈಕಿ 73,427 ಲಕ್ಷ ರು. ಖರ್ಚು ಮಾಡುವ ಮೂಲಕ ಶೇ. 25ರಷ್ಟು ಮಾತ್ರ ಪ್ರಗತಿ ಹೊಂದಿದೆ.

 

ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯು 17,129 ಲಕ್ಷ ರು ಪೈಕಿ 8,322 ಲಕ್ಷ ರು. ಖರ್ಚು ಮಾಡಿ ಶೇ.49ರಷ್ಟು ಸಾಧನೆ ತೋರಿದೆ. 3,58,496 ಲಕ್ಷ ರು. ಪೈಕಿ 1,38,410 ಲಕ್ಷ ರು. ಖರ್ಚು ಮಾಡಿರುವ ವಸತಿ ಇಲಾಖೆಯು ಶೇ.39ರಷ್ಟು ಮಾತ್ರ ಪ್ರಗತಿ ಪ್ರದರ್ಶಿಸಿದೆ. ಉನ್ನತ ಶಿಕ್ಷಣ ಇಲಾಖೆಯು 5,52,612 ಲಕ್ಷ ರು ಪೈಕಿ 2,52729 ಲಕ್ಷ ರು. ಖರ್ಚು ಮಾಡಿ ಶೇ.46ರಷ್ಟು ಮಾತ್ರ ಸಾಧಿಸಿದೆ.

 

ಕೈಮಗ್ಗ ಮತ್ತು ಜವಳಿ ಇಲಾಖೆಯು 35,602 ಲಕ್ಷ ರು ಪೈಕಿ 6,333 ಲಕ್ಷ ರು ಖರ್ಚು ಮಾಡಿ ಶೆ.18ರಷ್ಟು ಮಾತ್ರ ಪ್ರಗತಿ ಸಾಧಿಸಿದ್ದರೆ ಭಾರೀ ಮತ್ತು ಮಧ್ಯಮ ಕೈಗಾರಿಕೆ ಇಲಾಖೆಯು 1,17,042 ಲಕ್ಷ ರು ಪೈಕಿ 38,791 ಲಕ್ಷ ರು ಖರ್ಚು ಮಾಡಿ ಶೇ. 33ರಷ್ಟು ಮಾತ್ರ ಸಾಧನೆ ತೋರಿದೆ.

 

ಸಣ್ಣ ಕೈಗಾರಿಕೆಯು 52,223 ಲಕ್ಷ ರು ಪೈಕಿ 23,388 ಲಕ್ಷ ರು ಖರ್ಚು ಮಾಡಿ ಶೇ.45ರಷ್ಟು ಮಾತ್ರ ಪ್ರಗತಿ ಸಾಧಿಸಿದೆ. ಗಣಿ ಇಲಾಖೆಯು 6,921 ಲಕ್ಷ ರು ಪೈಕಿ 2,815 ಲಕ್ಷ ರು ಖರ್ಚು ಮಾಡಿ ಶೇ.41ರಷ್ಟು, ನಗರಾಭಿವೃದ್ಧಿ ಇಲಾಖೆಯು 14,39,895 ಲಕ್ಷ ರು ವೆಚ್ಚ ಮಾಡಿ ಶೇ.42ರಷ್ಟು ಮಾತ್ರ ಪ್ರಗತಿ ಸಾಧಿಸಿದೆ.

 

ಲೋಕೋಪಯೋಗಿ ಇಲಾಖೆಯು 9,62,369 ಲಕ್ಷ ರು ಪೈಕಿ 4,57,887 ಲಕ್ಷ ರು ಖರ್ಚು ಮಾಡಿ ಶೇ.48ರಷ್ಟು ಭಾರೀ ನೀರಾವರಿ ಇಲಾಖೆಯು 18,01,900 ಲಕ್ಷ ರು ಪೈಕಿ 7,59,943 ಲಕ್ಷ ರು ಖರ್ಚು ಮಾಡಿ ಶೇ. 42ರಷ್ಟು, ವೈದ್ಯಕೀಯ ಶಿಕ್ಷಣ ಇಲಾಖೆಯು 4,40,457 ಲಕ್ಷ ರು ಪೈಕಿ 1,92,521 ಲಕ್ಷ ರು ಖರ್ಚು ಮಾಡಿ ಶೇ.44ರಷ್ಟು , ಆರೋಗ್ಯ ಇಲಾಖೆಯು 9,47,174 ಲಕ್ಷ ರು ಪೈಕಿ 4,23,062 ಲಕ್ಷ ರು ವೆಚ್ಚ ಮಾಡಿ ಶೇ. 45ರಷ್ಟು ಮಾತ್ರ ಪ್ರಗತಿ ಸಾಧಿಸಿದೆ.

 

ಕಾರ್ಮಿಕ ಇಲಾಖೆಯು 65,237 ಲಕ್ಷ ರು ಪೈಕಿ 26,200 ಲಕ್ಷ ರು ವೆಚ್ಚ ಮಾಡಿ ಶೇ. 40ರಷ್ಟು ಮಾತ್ರ ಪ್ರಗತಿ ಹೊಂದಿದ್ದರೇ ಕೌಶಲ್ಯ ಅಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು 1,18,190 ಲಕ್ಷ ರು ನಲ್ಲಿ 56,088 ಲಕ್ಷ ರು ಖರ್ಚು ಮಾಡಿ ಶೇ.47ರಷ್ಟು, ಇಂಧನ ಇಅಖೇಯು 12,65,493 ಲಕ್ಷ ರು ಪೈಕಿ 5,39,999 ರು ಖರ್ಚು ಮಾಡಿ ಶೇ. 43ರಷ್ಟು ಸಾಧನೆ ತೋರಿದೆ.

 

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 23,351 ಲಕ್ಷ ರು ಪೈಕಿ 8,186 ಲಕ್ಷ ರು ಖರ್ಚು ಮಾಡಿ ಶೇ.35, ಯೋಜನೆ, ಸಾಂಖ್ಯಿಕ ಇಲಾಖೆಯು 3,80,632 ಲಕ್ಷ ರು ಪೈಕಿ 1,14,344 ಲಕ್ಷ ರು ಖರ್ಚು ಮಾಡಿ ಶೇ. 30ರಷ್ಟು, ಋಣ ಮೇಲುಸ್ತುವಾರಿ ಇಲಾಖೆಯು 45,57,331 ಲಕ್ಷ ರು ಪೈಕಿ 21,64,434 ಲಕ್ಷ ರು ಖರ್ಚು ಮಾಡಿ ಶೇ 47ರಷ್ಟು ಪ್ರಗತಿ ತೋರಿದೆ.

 

‘ಯಾವೆಲ್ಲಾ ಯೋಜನೆಗಳಲ್ಲಿ ಶೇ.40ರ ಕಮಿಷನ್‌ಗೆ ಅವಕಾಶವಿದೆಯೋ ಆ ಯೋಜನೆಗಳು ಮಾತ್ರ ಚಾಲನೆಗೊಂಡಿರುವುದು ಕಂಡು ಬಂದಿರುತ್ತದೆ. ಕಮಿಷನ್‌ ವ್ಯವಹಾರಗಳಿಗೆ ಮತ್ತು ಅಕ್ರಮಗಳಿಗೆ ಆಸ್ಪದವಿಲ್ಲದಂತಹ ಫಲಾನುಭವಿಗಳಿಗೆ ನೇರವಾಗಿ ತಲುಪುವಂತಹ ಜನಕಲ್ಯಾಣ, ಸಾಮಾಜಿಕ ಭದ್ರತಾ ಯೋಜನೆಗಳು ಘೋಷಣೆಯಾಗಿದ್ದರೂ ಇನ್ನೂ ಅವುಗಳ ಆರಂಭಕ್ಕೆ ಯಾವುದೇ ಕ್ರಮಕೈಗೊಂಡಿಲ್ಲ. ಇದೊಂದು ಚಿತ್ತ ಶುದ್ಧಿಯಿಲ್ಲದ ಪರಮ ಭ್ರಷ್ಟ ಸರ್ಕಾರ. ಮುಖ್ಯಮಂತ್ರಿಯೂ ಸೇರಿದಂತೆ ಯಾವ ಮಂತ್ರಿಗಳಿಗೂ ಹಣ ಬಾರದ ಯಾವ ಯೋಜನೆಗಳ ಬಗ್ಗೆಯೂ ಆಸಕ್ತಿ ಇಲ್ಲ ಮತ್ತು ಆಡಳಿತ ಮತ್ತು ಜನಹಿತದ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ,’ ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ.

Tags: 40 Percent CommissionAgricultral DepartmentBasavaraj BommaiBudget GrantsD K ShivakumarDepartmentsgrantsh d kumarswamyKDPProgressRakesh SinghSiddaramaiahaಅಭಿವೃದ್ದಿಆನಂದ್‌ ಸಿಂಗ್‌ಇಲಾಖಾವಾರು ಸಾಧನೆಕಳಪೆ ಪ್ರದರ್ಶನಗಣಿಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಜೆಡಿಎಸ್‌ಟಿ ಎ ಶರವಣಡಿ ಕೆ ಶಿವಕುಮಾರ್ಪ್ರಗತಿಪ್ರಗತಿ ಪಟ್ಟಿಬಸವರಾಜ ಬೊಮ್ಮಾಯಿಬಳಕೆಯಾಗದ ಅನುದಾನಮುಖ್ಯ ಕಾರ್ಯದರ್ಶಿವಂದಿತಾ ಶರ್ಮಾವಿಧಾನಪರಿಷತ್‌ಶೇ.40 ಕಮಿಷನ್‌ಸಹಕಾರಸಿದ್ದರಾಮಯ್ಯಹಿಂದುಳಿದ ವರ್ಗಗಳ ಕಲ್ಯಾಣಹೆಚ್‌ ಡಿ ಕುಮಾರಸ್ವಾಮಿ
Advertisement Banner
Previous Post

ಕೃಷಿ, ತಯಾರಿಕೆ ಸೇರಿ ಹಲವು ವಲಯಗಳಲ್ಲಿ ಬೆಳವಣಿಗೆ ದರ; ಒಡಿಶಾ, ತೆಲಂಗಾಣಕ್ಕಿಂತಲೂ ಕಡಿಮೆ ದಾಖಲು

Next Post

ಅತ್ಯಾಚಾರ ಪ್ರಕರಣ; 5 ವರ್ಷದಲ್ಲಿ 14,074, ಬಿಜೆಪಿ ಸರ್ಕಾರದ ಅವಧಿಯಲ್ಲಿ 8,909 ಆರೋಪಿಗಳ ಬಂಧನ

thefilestack

thefilestack

Next Post

ಅತ್ಯಾಚಾರ ಪ್ರಕರಣ; 5 ವರ್ಷದಲ್ಲಿ 14,074, ಬಿಜೆಪಿ ಸರ್ಕಾರದ ಅವಧಿಯಲ್ಲಿ 8,909 ಆರೋಪಿಗಳ ಬಂಧನ

Recommended

ಎಪಿಪಿಗಳ ಅಕ್ರಮ ನೇಮಕದಲ್ಲಿ ಭಾಗಿಯಾಗಿದ್ದ 2ನೇ ಆರೋಪಿ ಅಧಿಕಾರಿಗೆ ಆಡಳಿತಾಧಿಕಾರಿ ಹುದ್ದೆ

3 years ago

ಕೋವಿಡ್‌ 3ನೇ ಅಲೆ; ಆಕ್ಸಿಜನ್‌ ಘಟಕ ಖರೀದಿಗೆ ಪಿಎಂ ಕೇರ್ಸ್‌ ಫಂಡ್‌ನಿಂದ ಅನುದಾನ ಕೋರದ ಸರ್ಕಾರ

4 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd