the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home LOKAYUKTA

ಸಾಫ್ಟ್‌ವೇರ್‌, ಕೃಷಿ ಕಂಪನಿಯಿಂದ ಪಿಪಿಇ ಕಿಟ್‌ ಖರೀದಿ; ವರದಿ ಸಲ್ಲಿಸಲು ಲೋಕಾಯುಕ್ತರ ಸೂಚನೆ

ಜಿ ಮಹಂತೇಶ್ by ಜಿ ಮಹಂತೇಶ್
August 8, 2020
in LOKAYUKTA
0
0
SHARES
0
VIEWS
Share on FacebookShare on Twitter

ಬೆಂಗಳೂರು; ಸಾಫ್ಟ್‌ವೇರ್‌ ಕಂಪನಿ ಮತ್ತು ಕೃಷಿ ಉತ್ಪನ್ನಗಳ ತಯಾರಿಕೆ ಕಂಪನಿಯಿಂದ ಪಿಪಿಇ ಕಿಟ್‌ ಖರೀದಿಸಿದ್ದ ಪ್ರಕರಣಗಳ ಕುರಿತು ತನಿಖೆ ನಡೆಸಬೇಕು ಎಂದು ಬಿಜೆಪಿ ಮಾಜಿ ಶಾಸಕ ಡಾ ಸಾರ್ವಭೌಮ ಬಗಲಿ ಅವರು ಸಲ್ಲಿಸಿದ್ದ ದೂರಿನನ್ವಯ ವರದಿ ಸಲ್ಲಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಲೋಕಾಯುಕ್ತ ಸಂಸ್ಥೆ ಸೂಚಿಸಿದೆ.

ದೂರಿನ ವಿಚಾರಣೆ ನಡೆಸುತ್ತಿರುವ ವಿಚಾರಣಾಧಿಕಾರಿ 2020ರ ಆಗಸ್ಟ್‌ 24ಕ್ಕೆ ಪ್ರಕರಣವನ್ನು ಮುಂದೂಡಿದ್ದಾರೆ. ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ನಡೆದಿದೆ ಎನ್ನಲಾಗಿರುವ ವಿವಿಧ ಸ್ವರೂಪದ ಅಕ್ರಮ ಪ್ರಕರಣಗಳ ಕುರಿತು ಸರಣಿ ದೂರು ಸಲ್ಲಿಸುತ್ತಿರುವ ಬಿಜೆಪಿ ಮಾಜಿ ಶಾಸಕ ಡಾ ಸಾರ್ವಭೌಮ ಬಗಲಿ ಅವರು 2020ರ ಆಗಸ್ಟ್‌ 8ರಂದು ಹೆಚ್ಚುವರಿ ದಾಖಲೆಗಳನ್ನು ಲೋಕಾಯುಕ್ತಕ್ಕೆ ಒದಗಿಸಿರುವುದು ತಿಳಿದು ಬಂದಿದೆ.

ಇದಕ್ಕೂ ಮೊದಲು ಜುಲೈ 8ರಂದು ದೂರಿನಲ್ಲಿ ಸಲ್ಲಿಸಿದ್ದ ದಾಖಲೆಗಳನ್ನು ವಿಚಾರಣಾಧಿಕಾರಿಗಳು ಪ್ರಾಥಮಿಕ ಪರಿಶೀಲನೆಯನ್ನು ಪೂರ್ಣಗೊಳಿಸಿರುವುದು ಗೊತ್ತಾಗಿದೆ.

ಪಿಪಿಇ ಕಿಟ್‌ ಖರೀದಿಗೆ ಸಂಬಂಧಿಸಿದಂತೆ ತಜ್ಞರ ಅಭಿಪ್ರಾಯ ಪಡೆದಿಲ್ಲ ಮತ್ತು ಉನ್ನತ ಮಟ್ಟದ ಸಭೆ ನಡೆಸಿಲ್ಲ. ಕಿಟ್‌ಗಳನ್ನು ತಯಾರಿಸುವ ಸಾಮರ್ಥ್ಯ ಇರುವ ಬಗ್ಗೆ ಮತ್ತು ತಯಾರಿಕೆ ಕಂಪನಿಗೆ ನೀಡಿರುವ ತಯಾರಿಕೆ ಪರವಾನಿಗೆಯನ್ನು ಪರಿಶೀಲಿಸದೇ ಅಧಿಕಾರಿಗಳು ಕಳಪೆ ಕಿಟ್‌ಗಳನ್ನು ಖರೀದಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಈ ದೂರಿನಲ್ಲಿಯೂ ಕೆಎಸ್‌ಡಿಡಬ್ಲ್ಯೂಎಸ್‌ನ ಮುಖ್ಯ ಪರಿವೀಕ್ಷಕ ಡಾ ಮಹೇಶ್‌ಕುಮಾರ್‌, ಆಹಾರ ಸುರಕ್ಷತೆ ನಿರ್ದೇಶನಾಲಯದ ಡಾ ಲತಾ ಪರಿಮಳ, ಡಾ ಪ್ರಿಯಲತಾ ಅವರನ್ನು ಪ್ರತಿವಾದಿಗಳನ್ನಾಗಿಸಲಾಗಿದೆ.ಸಾಫ್ಟ್‌ವೇರ್‌ ಕಂಪನಿಯಿಂದ ಕಿಟ್‌ ಖರೀದಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕೋವಿಡ್‌-19ರ ತುರ್ತು ಸಂದರ್ಭದಲ್ಲಿ ಮೂಲತಃ ಸಾಫ್ಟ್‌ವೇರ್‌ ಕಂಪನಿಯಾಗಿರುವ ಎಟೆಕ್‌ ಟ್ರಾನ್‌ ಮತ್ತು ಕೃಷಿ ಉತ್ಪನ್ನಗಳ ತಯಾರಿಕೆ ಕಂಪನಿಯ ರುದ್ರಾಂಶ್‌ ವಿಗ್‌ ಆಗ್ರೋ ಇಂಡಿಯಾದಿಂದ 2020ರ ಮಾರ್ಚ್‌ 20ರಂದು ಒಟ್ಟು 50,000 ಪಿಪಿಇ ಕಿಟ್‌ಗಳನ್ನು ಕರ್ನಾಟಕ ಸ್ಟೇಟ್‌ ಡ್ರಗ್‌ ಲಾಜಿಸ್ಟಿಕ್‌ ವೇರ್‌ಹೌಸಿಂಗ್‌ ಸೊಸೈಟಿಯು ಖರೀದಿಸಿತ್ತು ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಅದೇ ರೀತಿ ಎಚ್‌ಎಲ್‌ಎಲ್‌ ಲೈಫ್‌ಕೇರ್‌, ಇಂಡಸ್‌ ಬಯೋ ಸೈನ್ಸ್‌, ಡಿಎಚ್‌ಬಿ ಗ್ಲೋಬಲ್‌ ಚೀನಾ, ಬಿಗ್‌ ಫಾರ್ಮಾಸ್ಯುಟಿಕಲ್ಸ್‌ನಿಂದ 133.76 ಕೋಟಿ ರು.ಮೊತ್ತದಲ್ಲಿ ಪಿಪಿಇ ಕಿಟ್‌ಗಳನ್ನು ಖರೀದಿಸಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕಿಟ್‌ ಸರಬರಾಜಿಗೆ 21.00 ಕೋಟಿ ವೆಚ್ಚ

ಈ ಪೈಕಿ ಚೀನಾದ ಡಿಎಚ್‌ಬಿ ಗ್ಲೋಬಲ್‌ ಮತ್ತು ಬಿಗ್‌ ಫಾರ್ಮಾಸ್ಯುಟಿಕಲ್ಸ್‌ ಹೊರತುಪಡಿಸಿದರೆ ಉಳಿದ 5 ಕಂಪನಿಗಳು ವೈದ್ಯಕೀಯ ಪರಿಕರಗಳನ್ನು ತಯಾರಿಸುವ ಕಂಪನಿಗಳಲ್ಲ. ಡಿಎಚ್‌ಬಿ ಗ್ಲೋಬಲ್‌ ಮತ್ತು ಬಿಗ್‌ ಫಾರ್ಮಾಸ್ಯುಟಿಕಲ್ಸ್‌ ಹೊರತುಪಡಿಸಿ ಉಳಿದ ಕಂಪನಿಗಳು ಸರಬರಾಜು ಮಾಡಿರುವ ಪಿಪಿಇ ಕಿಟ್‌ಗಳು 60-90 ಜಿಎಸ್‌ಎಮ್‌ ಗುಣಮಟ್ಟ ಹೊಂದಿಲ್ಲ. ಚೀನಾ ಮೂಲದಿಂದ ಖರೀದಿಸಿದ ಪಿಪಿಇ ಕಿಟ್‌ಗಳ ಸರಬರಾಜು ಸಂಬಂಧ 21.00 ಕೋಟಿ ರು.ಗಳನ್ನು ಸಾರಿಗೆ ವೆಚ್ಚಕ್ಕಾಗಿ ನೀಡಿದೆ ಎಂದು ವಿವರಿಸಿದ್ದಾರೆ.

ಪ್ಲಾಸ್ಟಿ ಸರ್ಜಿ ಇಂಡಸ್ಟ್ರೀಸ್‌ ಪ್ರೈವೈಟ್‌ ಲಿಮಿಟೆಡ್‌ನಿಂದ ಖರೀದಿಸಿದ್ದ ಪಿಪಿಇ ಕಿಟ್‌ಗಳು ಉತ್ತಮ ಗುಣಮಟ್ಟದಿಂದ ಕೂಡಿರಲಿಲ್ಲ ಎಂದು ಕೆಡಿಎಲ್‌ಡಬ್ಲ್ಯೂಎಸ್‌ನ ಹೆಚ್ಚುವರಿ ನಿರ್ದೇಶಕರೇ ಆಯುಕ್ತರಿಗೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದ್ದರು. ಅಸಲಿಗೆ ಪಿಪಿಇ ಕಿಟ್‌ ತಯಾರಿಸುವ ತಯಾರಿಕೆಯ ಪರವಾನಿಗೆಯೇ ಈ ಕಂಪನಿಗೆ ಇರಲಿಲ್ಲ ಎಂದು ದಾಖಲೆ ಸಮೇತ ದೂರಿನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಸಾಫ್ಟ್‌ವೇರ್ ಕಂಪನಿ ಮತ್ತು ಕೃಷಿ ಉತ್ಪನ್ನಗಳ ತಯಾರಿಕೆ ಕಂಪನಿಯಿಂದ ಪಿಪಿಇ ಕಿಟ್‌ಗಳನ್ನು ಖರೀದಿಸಿದ್ದನ್ನು ‘ದಿ ಫೈಲ್‌’ ಏಪ್ರಿಲ್‌ 27, 2020ರಂದು ಹೊರಗೆಡವಿದ್ದನ್ನು ಸ್ಮರಿಸಬಹುದು.

Tags: Agro IndiaAtechTronB S YediyurappaB SriramuluDR C N AshwathNarayandr k sudhakarDR Sarvabhouma Bagalih d kumarswamyJaved AktharKSDLWSLokyuktaManjusrip vishwanathshettyPankaj Kumar PandeyPPE KitRudranshsiddaramaihaಎಚ್‌ ಡಿ ಕುಮಾರಸ್ವಾಮಿಎಟೆಕ್‌ ಟ್ರಾನ್‌ಕೆಎಸ್‌ಡಿಡಬ್ಲ್ಯೂಎಸ್‌ಜಾವೇದ್‌ ಅಖ್ತರ್‌ಡಾ ಸಾರ್ವಭೌಮ ಬಗಲಿಡಾ ಸಿ ಎನ್ ಅಶ್ವಥ್‌ನಾರಾಯಣ್ಡಾ ಸುಧಾಕರ್‌ಪಿ ವಿಶ್ವನಾಥಶೆಟ್ಟಿಪಿಪಿಇ ಕಿಟ್‌ಬಿ ಎಸ್‌ ಯಡಿಯೂರಪ್ಪಬಿ ಶ್ರೀರಾಮುಲುಬಿಜೆಪಿ ಮಾಜಿ ಶಾಸಕಮಂಜುಶ್ರೀರುದ್ರಾಂಶ್‌ ವಿಗ್‌ ಆಗ್ರೋ ಇಂಡಿಯಾಲೋಕಾಯುಕ್ತಸಿದ್ದರಾಮಯ್ಯ
Advertisement Banner
Previous Post

ಸಾಫ್ಟ್‌ವೇರ್‌, ಕೃಷಿ ಕಂಪನಿಯಿಂದ ಪಿಪಿಇ ಕಿಟ್‌ ಖರೀದಿ; ವರದಿ ಸಲ್ಲಿಸಲು ಲೋಕಾಯುಕ್ತರ ಸೂಚನೆ

Next Post

ಹಣದ ಥೈಲಿ ಸಮೇತ ಸಿಕ್ಕಿಬಿದ್ದ ಸರ್ಕಾರಿ ನೌಕರ; ಎಸಿಬಿ ತನಿಖೆ ಮೇಲೆ ಪ್ರಭಾವ ಬೀರಿದ ಬಿಜೆಪಿ ಶಾಸಕಿ?

ಜಿ ಮಹಂತೇಶ್

ಜಿ ಮಹಂತೇಶ್

Next Post

ಹಣದ ಥೈಲಿ ಸಮೇತ ಸಿಕ್ಕಿಬಿದ್ದ ಸರ್ಕಾರಿ ನೌಕರ; ಎಸಿಬಿ ತನಿಖೆ ಮೇಲೆ ಪ್ರಭಾವ ಬೀರಿದ ಬಿಜೆಪಿ ಶಾಸಕಿ?

Discussion about this post

Recommended

ನೀಟ್‌, ಜೆಇಇ, ಸಿಇಟಿ ತರಬೇತಿ ನೀಡುವ ಸಂಸ್ಥೆ ಆಯ್ಕೆಯಲ್ಲಿ ಅಕ್ರಮ ವಾಸನೆ; ನಿರ್ದಿಷ್ಟ ಸಂಸ್ಥೆಯ ಪಾಲಾದ 12 ಕೋಟಿ?

2 years ago

ಅಬಕಾರಿಯಲ್ಲಿ 1,000 ಕೋಟಿ ಅಕ್ರಮ ಆರೋಪ; ನ್ಯಾಯಾಧೀಶರಿಂದ ತನಿಖೆಗೆ ಸಿಎಂ, ಸಿಎಸ್‌ಗೆ ಮನವಿ

3 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd