the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home LEGISLATURE

ಸಾಲ; 2,888 ಮಂದಿ ನಾಪತ್ತೆ, ಅಸಲು ಬಡ್ಡಿ ಸೇರಿ 1,733 ಕೋಟಿ ಬಾಕಿ, ಬಹಿರಂಗವಾಗದ ಅಪೆಕ್ಸ್‌ ಗ್ರಾಹಕರ ಹೆಸರು

thefilestack by thefilestack
July 10, 2023
in LEGISLATURE
0
0
SHARES
0
VIEWS
Share on FacebookShare on Twitter

ಬೆಂಗಳೂರು; ರಾಜ್ಯದ ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಮರು ಪಾವತಿ ಮಾಡದಿರುವ ಸಾಲದ ಅಸಲು 1,400 ಕೋಟಿ ರು., ಬಡ್ಡಿ 333 ಕೋಟಿ ರು. ಇದೆ. ಸಾಲ ಪಡೆದವರ ಪೈಕಿ 2,888 ಮಂದಿ ಪತ್ತೆಯಾಗಿಲ್ಲ.

 

ಇದು ವಿಧಾನ ಪರಿಷತ್‌ ಸದಸ್ಯ ಡಿ ಎಸ್‌ ಅರುಣ್‌ ಅವರು ಕೇಳಿರುವ ಪ್ರಶ್ನೆಗೆ  ಸಹಕಾರ ಸಚಿವ ಕೆ ಎನ್‌ ರಾಜಣ್ಣ ಅವರು ನೀಡಿರುವ ಉತ್ತರ.

 

ಅಪೆಕ್ಸ್‌ ಬ್ಯಾಂಕ್‌ನಲ್ಲಿ 37 ಮಂದಿ ನಾಪತ್ತೆಯಾಗಿದ್ದು 127.79 ಲಕ್ಷ ಅಸಲು ಮ್ತು 68.71 ಲಕ್ಷ  ಬಡ್ಡಿ ಸೇರಿ ಒಟ್ಟು 196.5 ಲಕ್ಷ ಗಳು ಮರುಪಾವತಿಯಾಗಿಲ್ಲ ಎಂದು ಸಚಿವರು ನೀಡಿರುವ ಉತ್ತರದಿಂದ ತಿಳಿದುಬಂದಿದೆ.

 

ರಾಜ್ಯದ ಸಹಕಾರ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಮರು ಪಾವತಿ ಮಾಡದೇ ಪತ್ತೆಯಾಗದವರ ಸಂಖ್ಯೆ ಮತ್ತು ಹೆಸರಿನ ಪಟ್ಟಿಯನ್ನು ಒದಗಿಸಿರುವ ಸಚಿವ ಕೆ ಎನ್‌ ರಾಜಣ್ಣ ಅವರು ಅಪೆಕ್ಸ್‌ ಬ್ಯಾಂಕ್‌ನಲ್ಲಿ ಸಾಲ ಪಡೆದು ಪತ್ತೆಯಾಗದವರ ಹೆಸರುಗಳನ್ನು ಬಹಿರಂಗಪಡಿಸದೇ ಗ್ರಾಹಕರ ಹೆಸರನ್ನು ಮುಚ್ಚಿಟ್ಟಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

 

ಅಪೆಕ್ಸ್‌ ಬ್ಯಾಂಕ್‌ನಿಂದ ಸಾಲ ಪಡೆದು ನಾಪತ್ತೆಯಾದವರ ಹೆಸರುಗಳನ್ನು ಬಹಿರಂಗಪಡಿಸದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ. ವಿಶೇಷವೆಂದರೆ ಕೆ ಎನ್‌ ರಾಜಣ್ಣ ಅವರು ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷರಾಗಿದ್ದ ಅವಧಿಯಲ್ಲಿ 2 ಸಾವಿರ ಕೋಟಿಗೂ ಅಧಿಕ ಮೊತ್ತದ ಅವ್ಯವಹಾರ ನಡೆದಿತ್ತು ಎಂಬ ಬಲವಾದ ಆರೋಪ ಕೇಳಿ ಬಂದಿತ್ತು.

 

ಮರು ಪಾವತಿ ಮಾಡದೇ ಪತ್ತೆಯಾಗದವರು

 

ಪಟ್ಟಣ ಸಹಕಾರ ಬ್ಯಾಂಕ್‌ಗಳ ಪೈಕಿ ಬೆಂಗಳೂರು ನಗರದಲ್ಲಿ 2,485 ವ್ಯಕ್ತಿಗಳಿದ್ದಾರೆ. ಮೈಸೂರಿನಲ್ಲಿ 132, ಕಲ್ಬುರ್ಗಿಯಲ್ಲಿ ಶೂನ್ಯ, ಬೆಳಗಾವಿಯಲ್ಲಿ 15 ಮಂದಿ ಇದ್ದಾರೆ. ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ನಲ್ಲಿ 37 ಮಂದಿ, ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿ 29, ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 158 ಮಂದಿ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನಲ್ಲಿ 13 ಒಟ್ಟು 2,888 ಮಂದಿ ನಾಪತ್ತೆಯಾಗಿರುವುದು ಕೆ ಎನ್‌ ರಾಜಣ್ಣ ಅವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

 

 

ಪಟ್ಟಣ ಸಹಕಾರ ಬ್ಯಾಂಕ್‌ಗಳ ಪೈಕಿ ಬೆಂಗಳೂರು ನಗರದಲ್ಲಿರುವ ಬ್ಯಾಂಕ್‌ಗಳಲ್ಲಿ ಪತ್ತೆಯಾಗದ 2,485 ಮಂದಿಯಿಂದ ಅಸಲು 1,400 ಕೋಟಿ ರು ಅಸಲು ಮತ್ತು 596.72 ಲಕ್ಷ ರು., ಮೈಸೂರಿನಲ್ಲಿ 132 ಮಂದಿಯಿಂದ 24.1 ಲಕ್ಷ ಅಸಲು ಮತ್ತು 32.38 ಬಡ್ಡಿ, ಬೆಳಗಾವಿಯಲ್ಲಿ 15 ಮಂದಿಯಿಂದ 17.24 ಲಕ್ಷ ರು ಅಸಲು ಮತ್ತು 24.44 ಲಕ್ಷ ಬಡ್ಡಿ ವಸೂಲಾಗಬೇಕಿದೆ.

 

ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಿಂದ 29 ಗ್ರಾಹಕರಿದಂದ 14.24 ಲಕ್ಷ ರು ಅಸಲು ಮತ್ತು 24.85 ಲಕ್ಷ ರು. ಬಡ್ಡಿ, ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್‌ನಿಂದ 158 ಮಂದಿಯಿಂದ 141.61 ಲಕ್ಷ ಅಸಲು ಮತ್ತು 178.16 ಲಕ್ಷ ಬಡ್ಡಿ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಿಂದ 13 ಮಂದಿಯಿಂದ 54.82 ಲಕ್ಷ ರು. ಅಸಲು, 41.09 ಲಕ್ಷ ಬಡ್ಡಿ ವಸೂಲಾಗಬೇಕಿದೆ.

 

ಮಂಡ್ಯ ಸಿಟಿ ಕೋ ಆಪರೇಟೀವ್‌ ಬ್ಯಾಂಕ್‌, ಕೊಡಗು ಜಿಲ್ಲಾ ಮಹಿಳಾ ಸಹಕಾರಿ ಬ್ಯಾಂಕ್‌, ಪೊನ್ನಂಪೇಟೆ ಪಟ್ಟಣ ಸಹಕಾರ ಬ್ಯಾಂಕ್‌, ಬೆಂಗಳೂರಿನ ದೀಕ್‌ ಸಹಕಾರಿಬ fಯಾಂಕ್‌, ಜನತಾ ಕೋ ಆಪರೇಟೀವ್ ಬ್ಯಾಂಕ್‌, ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌, ಬೆಂಗಳೂರು ಗ್ರಾಮಾಂತರದ ದಿ ಟೌನ್‌ ಕೋ ಆಪರೇಟೀವ್‌ ಸಹಕಾರಿ ಬ್ಯಾಂಕ್‌, ದೊಡ್ಡಬಳ್ಳಾಪುರ ದಿ ಟೆಕ್ಸ್‌ಟೈಲ್ ಮ್ಯಾನುಫ್ಯಾಕ್ಟರ್‌ ಕೋ ಆಪರೇಟೀವ್‌ ಬ್ಯಾಂಕ್‌, ಗ್ರಾಹಕರ ಹೆಸರುಗಳನ್ನು ಒದಗಿಸಿದೆ.

 

https://stack.thefile.in/2022/02/governance/10869/

ಈ ಮೊತ್ತಗಳ ಪೈಕಿ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಬೆಂಗಳೂರು ಇದರ ಅಸಲು 1,400 ಕೋಟಿ ರು., ಹಾಗೂ ಬಡ್ಡಿ 323.73 ಕೋಟಿ ರು. ಇದೆ. ಬಡ್ಡಿಯನ್ನು ಎವರ್‍‌ ಗ್ರೀನ್‌ ಕ್ರೆಡಿಟ್‌ ಎಂಬುದಾಗಿ ಮತ್ತು 1,400 ಕೋಟಿ ರು. ಸಾಲವನ್ನು ಅನುತ್ಪಾದಕ ಆಸ್ತಿ ನಷ್ಟ ಎಂದು ಘೋಷಿಸಿದೆ.

https://stack.thefile.in/2023/07/legislature/17147/

2020ರ ಮಾರ್ಚ್‌ 31ರಿಂದ ಈ ಸಾಲದ ಖಾತೆಗಳಿಗೆ ಬಡ್ಡಿ ವಿಧಿಸಿರುವುದಿಲ್ಲ ಎಂದು ಗೊತ್ತಾಗಿದೆ.

Tags: Apex BankBDCC BanksCo Opertaive BanksD K ShivakumarD S ArunDCC BanksGuru Raghavendra Sahakara Bankh d kumarswamyK N RajannaLoansLossNPARBIRecoverySiddaramaiahaUrban Co Operative Banksಅನುತ್ಪಾಕಅನುತ್ಪಾದಕಅಪೆಕ್ಸ್‌ ಬ್ಯಾಂಕ್‌ಅಸಲುಆಸ್ತಿಕೆ ಎನ್‌ ರಾಜಣ್ಣಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ಗುರು ರಾಘವೇಂದ್ರ ಸೌಹಾರ್ದ ಕ್ರೆಡಿಟ್‌ ಸೊಸೈಟಿಡಿ ಎಸ್‌ ಅರುಣಡಿ ಕೆ ಶಿವಕುಮಾರ್ಡಿ ಸಿ ಸಿ ಬ್ಯಾಂಕ್‌ಡಿಸಿಸಿ ಬ್ಯಾಂಕ್‌ಗಳುತಲೆ ಮರೆಸಿಕೊಂಡವರುದಕ್ಷಿಣ ಕನ್ನಡ ಜಿಲ್ಲಾಕೇಂದ್ರ ಸಹಕಾರಿ ಬ್ಯಾಂಕ್‌ಪಟ್ಟಣ ಸಹಕಾರ ಬ್ಯಾಂಕ್‌ಪಾವತಿಬಡ್ಡಿಮರು ಪಾವತಿಸಕ್ಕರೆ ಲಾಬಿಸಹಕಾರ ಬ್ಯಾಂಕ್‌ಗಳುಸಾಲಸಿದ್ದರಾಮಯ್ಯಹೆಚ್‌ ಡಿ ಕುಮಾರಸ್ವಾಮಿ
Advertisement Banner
Previous Post

ಸುತ್ತೋಲೆ ಉಲ್ಲಂಘಿಸಿ ಕೆಎಎಸ್‌, ಪಿಡಿಒ, ಅಬಕಾರಿ ನಿರೀಕ್ಷಕರು ಸೇರಿ 63 ಮಂದಿ ವರ್ಗಾವಣೆ

Next Post

ಕರ್ತವ್ಯ ಲೋಪವೆಸಗಿ ಆರ್ಥಿಕ ನಷ್ಟಕ್ಕೆ ಕಾರಣರಾಗಿದ್ದ ಕೆಎಎಸ್‌ ಅಧಿಕಾರಿ, ಈಗ ಸಿಎಂ ಜಂಟಿ ಕಾರ್ಯದರ್ಶಿ

thefilestack

thefilestack

Next Post

ಕರ್ತವ್ಯ ಲೋಪವೆಸಗಿ ಆರ್ಥಿಕ ನಷ್ಟಕ್ಕೆ ಕಾರಣರಾಗಿದ್ದ ಕೆಎಎಸ್‌ ಅಧಿಕಾರಿ, ಈಗ ಸಿಎಂ ಜಂಟಿ ಕಾರ್ಯದರ್ಶಿ

Recommended

ಬಿಟ್‌ಕಾಯಿನ್‌; ಸಚಿನ್‌ ಮಾಮನಿ ಪತ್ರವನ್ನಾಧರಿಸಿ ಪ್ರಧಾನಿ ಕಚೇರಿಯಿಂದ ಪತ್ರ ಬಂದಿಲ್ಲವೆಂದ ಸರ್ಕಾರ

4 years ago

ಬೀಳಗಿ ಸಕ್ಕರೆ ಕಾರ್ಖಾನೆಗೆ ದೊರೆಯದ ಎನ್‌ಒಸಿ; ಅಪೆಕ್ಸ್‌ ಹೆಗಲಿಗೆ ಬಿದ್ದಿದೆ ಸಾಲದ ಹೊಣೆಗಾರಿಕೆ

5 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd