the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home LEGISLATURE

ಹಾಸಿಗೆ, ದಿಂಬು ಖರೀದಿ ಹಗರಣ; ವರದಿ ನೀಡಿ 4 ವರ್ಷವಾದರೂ ಕ್ರಮವಿಲ್ಲ

thefilestack by thefilestack
January 18, 2022
in LEGISLATURE
0
0
SHARES
0
VIEWS
Share on FacebookShare on Twitter

ಬೆಂಗಳೂರು; ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿನ ವಸತಿ ಶಾಲೆಗಳ ವಿದ್ಯಾರ್ಥಿ ನಿಲಯಗಳಿಗೆ ಹಾಸಿಗೆ, ದಿಂಬು ಖರೀದಿಯಲ್ಲಿ ನಡೆದಿರುವ ಅವ್ಯವಹಾರ ಪ್ರಕರಣದಲ್ಲಿ ಭಾಗಿ ಆಗಿದ್ದಾರೆ ಎನ್ನಲಾದ ಅಧಿಕಾರಿಗಳ ವಿರುದ್ಧ 4 ವರ್ಷಗಳಾದರೂ ಒಂದೇ ಒಂದು ಕ್ರಮ ಜರುಗಿಸಿಲ್ಲ. ಹಾಸಿಗೆ, ದಿಂಬು, ಸೊಳ್ಳೆ ಪರದೆ, ಹೊದಿಕೆ, ಜಮಖಾನಗಳನ್ನು ಖಾಸಗಿ ಸಂಸ್ಥೆಗಳ ಮೂಲಕ ಪೂರೈಕೆ ಮಾಡಿ 19 ಕೋಟಿಗೂ ಅಧಿಕ ಮೊತ್ತದಲ್ಲಿ ಭ್ರಷ್ಟಾಚಾರ ನಡೆದಿದ್ದರೂ ಸಮಾಜ ಕಲ್ಯಾಣ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದೆ.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಕಾರ್ಯವೈಖರಿ ಬಗ್ಗೆ 14ನೇ ವಿಧಾನಸಭೆಯ ಸಮಿತಿಯು ಈ ಪ್ರಕರಣದ ಕುರಿತು 2017ರ ಮಾರ್ಚ್‌ 27ರಂದು ವರದಿಯನ್ನು ಮಂಡಿಸಿತ್ತು. ವರದಿ ಮಂಡನೆಯಾಗಿ 4 ವರ್ಷಗಳಾದರೂ ವರದಿಯ ಪೂರ್ಣ ಪ್ರಮಾಣದಲ್ಲಿ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಿಲ್ಲ ಎಂದು ತಿಳಿದು ಬಂದಿದೆ.

ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಕಾರ್ಯವೈಖರಿ ಕುರಿತು 14ನೇ ವಿಧಾನಸಭೆ ಸಮಿತಿ 7ನೇ ವರದಿ ಶಿಫಾರಸ್ಸುಗಳ ಅನುಷ್ಠಾನದ ಕುರಿತು 2022ರ ಜನವರಿ 18ರಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಪರಿಶೀಲನೆಗೆ ಕೈಗೆತ್ತಿಕೊಂಡಿದೆ. ಸಮಿತಿಯ ಸಭೆಯ ಕಾರ್ಯಸೂಚಿಯಲ್ಲಿ ಈ ವಿಷಯವನ್ನು ಸೇರ್ಪಡೆಗೊಳಿಸಲಾಗಿದೆ.


ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ನಡೆದಿದೆ ಎನ್ನಲಾಗಿರುವ ಹಾಸಿಗೆ, ದಿಂಬು ಖರೀದಿ ಹಗರಣ ಕುರಿತು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ನೀಡಿದ್ದ ವರದಿಯನ್ನು ಸಮಿತಿಯ ಹಾಲಿ ಅಧ್ಯಕ್ಷ ಕೃಷ್ಣಬೈರೇಗೌಡ ಅವರು ಕೈಗೆತ್ತಿಕೊಂಡಿರುವುದು ಹಗರಣಕ್ಕೆ ಮತ್ತೊಮ್ಮೆ ಮಹತ್ವ ಬಂದಂತಾಗಿದೆ.

ವಸತಿ ಶಾಲೆಗಳಿಗೆ ಬೇಕಾಗುವ ಹಾಸಿಗೆ, ದಿಂಬು, ಮಂಚ, ಊಟದ ಟೇಬಲ್‌ನ್ನು ಒದಗಿಸುವ ಉದ್ದೇಶದಿಂದ 27.16 ಕೋಟಿ ಬಿಡುಗಡೆ ಮಾಡಲಾಗಿತ್ತು. ಆದರೆ ಜಿಲ್ಲಾಧಿಕಾರಿಗಳ ಬಳಿ 3.47 ಕೋಟಿ ಉಳಿದಿತ್ತು. ಇಲಾಖೆ ಟಿಪ್ಪಣಿ ಪ್ರಕಾರ 25.06 ಕೋಟಿ ರು.ಗಳನ್ನು ಉಪಯೋಗಿಸಿ 4.07 ಕೋಟಿ ರು.ಗಳನ್ನು ಹಿಂದಿರುಗಿಸಲಾಗಿತ್ತು. ಈ ಮಾಹಿತಿಯು ಬಿಡುಗಡೆಯಾದ ಅನುದಾನಕ್ಕೆ ಹೊಂದಿಕೆಯಾಗದ ಕಾರಣ ಇದನ್ನು ಮರು ತಪಾಸಣೆ ನಡೆಸಬೇಕು ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಶಿಫಾರಸ್ಸು ಮಾಡಿತ್ತು.

‘ಅನುದಾನ ಬಿಡುಗಡೆ ಮಾಡಿದರೂ ಮೂಲಸೌಕರ್ಯವನ್ನು ಒದಗಿಸುವ ಬಗ್ಗೆ ಗಮನಹರಿಸದೇ ಹಣವನ್ನು ಉಳಿತಾಯವಾಗಿ ಇಟ್ಟಿರುವುದು ಸರಿಯಲ್ಲ. ಖರೀದಿಸಿದ್ದ ಸಾಮಗ್ರಿಗಳು ಉತ್ತಮವಾಗಿಲ್ಲ. ಖರೀದಿಯನ್ನು ಸಮಗ್ರವಾಗಿ ಮತ್ತೊಮ್ಮೆ ಪರಿಶೀಲಿಸಿ ಲೋಪ ಕಂಡು ಬಂದಲ್ಲಿ ನಿರ್ದಾಕ್ಷ್ಯಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿತ್ತು.

ಹಾಸಿಗೆ, ದಿಂಬುಗಳನ್ನು ವಿದ್ಯಾರ್ಥಿಗಳ ದಾಖಲಾತಿಗೆ ಅನುಗುಣವಾಗಿ ಖರೀದಿಸದೇ ಮಂಜೂರಾದ ಸಂಖ್ಯೆಯ ಮೇಲೆ ಖರೀದಿ ಮಾಡಿ ಅಧಿಕ ಪ್ರಮಾಣದಲ್ಲಿ ದಾಸ್ತಾನು ಮಾಡಲಾಗಿತ್ತು. ಹಾಸಿಗೆ, ದಿಂಬುಗಳನ್ನು ಹೆಚ್ಚುವರಿ ಹಣದ ಮೇಲೆ ಖರೀದಿಸಿ ಈ ಖರೀದಿಯ ವೇಳೆ ಕೆಟಿಪಿಪಿ ಅಧಿನಿಯಮ ಉಲ್ಲಂಘನೆ ಮಾಡಲಾಗಿತ್ತು. ಅಲ್ಲದೆ ಈ ಖರೀದಿಯಲ್ಲಿ ವ್ಯಾಟ್‌ ತೆರಿಗೆಯನ್ನು ಶೇ. 14.5ರಂತೆ ನೀಡಿರುವ ಕುರಿತು ಇಲಾಖೆಯ ಗಮನ ಸೆಳೆದಿತ್ತು. ಖರೀದಿಯಲ್ಲಿ ಅಕ್ರಮ ಕಂಡು ಬಂದಲ್ಲಿ ತಪ್ಪಿತಸ್ಥ ಅಧಿಕಾರಿಗಳನ್ನು ಗುರುತಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಮಿತಿಯು ಶಿಫಾರಸ್ಸು ಮಾಡಿತ್ತು.

ಹಾಸಿಗೆ, ದಿಂಬು ಖರೀದಿಯಲ್ಲಿ ನಡೆದಿದೆ ಎನ್ನಲಾಗಿದ್ದ ಅಕ್ರಮಗಳ ಕುರಿತು 2017ರಲ್ಲಿ ಪ್ರತಿಪಕ್ಷ ಬಿಜೆಪಿಯು ಸದನದ ಒಳಗೆ ಮತ್ತು ಹೊರಗೆ ಪ್ರತಿಭಟನೆ ನಡೆಸಿತ್ತು. ವಿದ್ಯಾರ್ಥಿ ನಿಲಯಗಳಿಗೆ ಪೂರೈಸಲು ಎಂಟು ವಿವಿಧ ವಸ್ತುಗಳನ್ನು ₹2,715 ದರದಲ್ಲಿ ಖರೀದಿ ಮಾಡಲಾಗಿದೆ. ಮಾರುಕಟ್ಟೆಯಲ್ಲಿ ಈ ವಸ್ತುಗಳ ಬೆಲೆ ₹1,800 ಇದೆ. ದುಬಾರಿ ದರ ನೀಡಿ ಖರೀದಿ ಮಾಡಿರುವುದರಿಂದ ದೊಡ್ಡ ಮಟ್ಟದ ಅವ್ಯವಹಾರ ಆಗಿದೆ ಎಂದು ಬಿಜೆಪಿಯ ಹಿಂದಿನ ವಕ್ತಾರ ಅಶ್ವತ್ಥನಾರಾಯಣ (ಹಾಲಿ ಸಚಿವ) ಆರೋಪಿಸಿದ್ದರು.

ಹಾಸಿಗೆ, ದಿಂಬು, ಸೊಳ್ಳೆಪರದೆ, ಹೊದಿಕೆ, ಜಮಖಾನಗಳನ್ನು ಕೈಮಗ್ಗ ಅಭಿವೃದ್ಧಿ ನಿಗಮದ ಮೂಲಕ ಖರೀದಿ ಪ್ರಕ್ರಿಯೆ ನಡೆಸಿತ್ತಾದರೂ ಖಾಸಗಿ ಸಂಸ್ಥೆಗಳ ಮೂಲಕ ಇದನ್ನು ಪೂರೈಸಲು ಅವಕಾಶ ಕಲ್ಪಿಸಿ, ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು.

ಖಾಸಗಿ ಸಂಸ್ಥೆ ಮೂಲಕ ದುಬಾರಿ ದರದಲ್ಲಿ ಖರೀದಿಸುವ ಮೂಲಕ ಬೊಕ್ಕಸಕ್ಕೆ ₹ 8ಕೋಟಿಯಿಂದ ₹ 10 ಕೋಟಿ ನಷ್ಟ ಉಂಟು ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ವಿತರಿಸಿದ ಸಮವಸ್ತ್ರ ಕೂಡ ಕಳಪೆಯಾಗಿದ್ದು, ಅಲ್ಲಿಯೂ ಅವ್ಯವಹಾರ ನಡೆದಿರುವ ಸಾಧ್ಯತೆ ಇದೆ. ಎರಡೂ ಹಗರಣಗಳ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಬೇಕು ಎಂಬ ಒತ್ತಾಯವೂ ಕೇಳಿ ಬಂದಿತ್ತು.

ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿ ವಸತಿ ನಿಲಯಗಳ ಹಾಸಿಗೆ ಹಾಗೂ ದಿಂಬು ಖರೀದಿಯಲ್ಲಿ ಪ್ರಕರಣದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಸರ್ಕಾರವು ಉಪ ಕಾರ್ಯದರ್ಶಿ ನೇತೃತ್ವದಲ್ಲಿ ತನಿಖೆ ನಡೆಸುತ್ತಿದ್ದು, ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ಅಂದಿನ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಅವರು ಹೇಳಿದ್ದರು.

ಪ್ರಕರಣದಲ್ಲಿ ಅಧಿಕಾರಿಗಳೇ ತಪ್ಪೆಸಗಿದ್ದಾರೆ ಎಂಬುದಾಗಿ ಖುದ್ದು ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರೇ ಒಪ್ಪಿಕೊಂಡಿದ್ದರು. ಆಡಳಿತ ಪಕ್ಷದ ಸದಸ್ಯರಾಗಿದ್ದ ಪರಿಷತ್‌ನ ಮಾಜಿ ಸದಸ್ಯ ವಿ ಎಸ್ ಉಗ್ರಪ್ಪನವರೂ ಕೂಡ ಪ್ರಕರಣದಲ್ಲಿ ಅಧಿಕಾರಿಗಳೇ ತಪ್ಪೆಸಗಿದ್ದಾರೆ ಎಂದು ಪ್ರಸ್ತಾಪಿಸಿದ್ದರು.

Tags: B S YediyurappaBedChief SecretaryCotD K ShivakumarH Anjeneyah d kumarswamyKota Srinivas PujarykrishnabyregowdaPublic Accounts CommitteeResidential SchoolsSiddaramaiahSocial Welfare Departmentಎಚ್‌ ಆಂಜನೇಯಎಚ್‌ ಡಿ ಕುಮಾರಸ್ವಾಮಿಕೃಷ್ಣಬೈರೇಗೌಡಡಿ ಕೆ ಶಿವಕುಮಾರ್ಪಿಎಸಿಬಿ ಎಸ್‌ ಯಡಿಯೂರಪ್ಪಭ್ರಷ್ಟಾಚಾರಮರು ತಪಾಸಣೆಮುಖ್ಯ ಕಾರ್ಯದರ್ಶಿಸಮಾಜ ಕಲ್ಯಾಣ ಸಚಿವಸಾರ್ವಜನಿಕ ಲೆಕ್ಕಪತ್ರ ಸಮಿತಿಸಿದ್ದರಾಮಯ್ಯಹಾಸಿಗೆ ದಿಂಬು ಖರೀದಿಹಾಸಿಗೆ ದಿಂಬು ಖರೀದಿ ಹಗರಣ
Advertisement Banner
Previous Post

ಚಾಣಕ್ಯ ವಿವಿಗೆ 116 ಎಕರೆ ಬಳುವಳಿ; ಆರೆಸ್ಸೆಸ್‌ ಓಲೈಸಲು ಇಲಾಖೆ ಟಿಪ್ಪಣಿ ಬದಿಗಿರಿಸಿತ್ತೇ?

Next Post

ಸಂತೋಷ್‌ಹೆಗ್ಡೆಗೆ ಗೃಹ ಪರಿಚಾರಿಕೆ ಭತ್ಯೆ ಪರಿಷ್ಕರಣೆ; 60 ದಿನಗಳಾದರೂ ವಿಲೇವಾರಿಯಾಗದ ಕಡತ

thefilestack

thefilestack

Next Post

ಸಂತೋಷ್‌ಹೆಗ್ಡೆಗೆ ಗೃಹ ಪರಿಚಾರಿಕೆ ಭತ್ಯೆ ಪರಿಷ್ಕರಣೆ; 60 ದಿನಗಳಾದರೂ ವಿಲೇವಾರಿಯಾಗದ ಕಡತ

Recommended

ಆರ್‌ಟಿಪಿಸಿಆರ್‌ ಕಿಟ್‌ಗೆ 4 ಪಟ್ಟು ಹೆಚ್ಚುವರಿ ದರ: ಕೊಟೇಷನ್‌ನಲ್ಲಿ ಅಡಗಿದೆಯೇ ಸಂಚು?

6 years ago

ಕೆಪಿಎಸ್ಸಿ ಕಾರ್ಯವಿಧಾನ; ರಾಷ್ಟ್ರಪತಿಗಳ ಸಹಮತಿ ವಿಳಂಬ, ತಿದ್ದುಪಡಿ ವಿಧೇಯಕ ಹಿಂಪಡೆಯಲು ಪರಿಶೀಲನೆ?

8 months ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd