the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

1.50 ಲಕ್ಷ ಕೋಟಿ ಮೌಲ್ಯದ ಅದಿರು ಅಕ್ರಮ ಸಾಗಾಣಿಕೆ; ‘ದಿ ಫೈಲ್‌’ ವರದಿ ಬೆನ್ನಲ್ಲೇ ಹೆಚ್‌ ಕೆ ಪಾಟೀಲ್‌ರಿಂದ ಸಿಎಂಗೆ ಪತ್ರ

thefilestack by thefilestack
June 21, 2025
in GOVERNANCE
0
0
SHARES
0
VIEWS
Share on FacebookShare on Twitter

ಬೆಂಗಳೂರು: 2006ರಿಂದ 2010ರವರೆಗೆ ರಾಜ್ಯದ ರೈಲ್ವೇ ಸೈಡಿಂಗ್‌ಗಳಿಂದ ಅಂದಾಜು 1.45 ಲಕ್ಷ ಕೋಟಿ ರು ಮೌಲ್ಯದ 35 ಕೋಟಿ ಟನ್‌ ಅದಿರನ್ನು  ಅಕ್ರಮವಾಗಿ ಸಾಗಾಣಿಕೆಯಾಗಿದ್ದ ಪ್ರಕರಣದ ಕುರಿತು ಕಾನೂನು ಸಚಿವ  ಹೆಚ್‌ ಕೆ ಪಾಟೀಲ್‌ ಅವರ ಸಮಿತಿ ನೀಡಿದ್ದ ವರದಿ ಮೂಲೆಗುಂಪಾಗಿದೆ ಎಂದು ‘ದಿ ಫೈಲ್‌’  ಸರಣಿ ವರದಿಗಳನ್ನು ಪ್ರಕಟಿಸಿದ ನಂತರ ಇದೀಗ ಖುದ್ದು ಎಚ್‌ ಕೆ ಪಾಟೀಲ್‌ ಅವರೇ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 7 ಪುಟಗಳ ಪತ್ರವನ್ನು ಬರೆದಿದ್ದಾರೆ.

 

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಘಟನೆಗಳು ಇಂತಹ ಅಕ್ರಮದಲ್ಲಿ ಪಾಲ್ಗೊಂಡಿವೆ. ವ್ಯಾಪಕ ಸಂಘಟಿತ ಅಪರಾಧ ಇದರಲ್ಲಿ ಸೇರ್ಪಡೆಗೊಂಡಿದ್ದರಿಂದ ಈ ಪ್ರಕರಣಗಳನ್ನು ವಿಸ್ತೃತವಾಗಿ ತನಿಖೆ ನಡೆಸಬೇಕು ಎಂದು ಹೆಚ್‌ ಕೆ ಪಾಟೀಲ್‌ ಅವರು ಕೊಟ್ಟಿದ್ದ ಮಹತ್ವದ  ವರದಿಯತ್ತ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರಾವಧಿಯುದ್ದಕ್ಕೂ  ಕಣ್ಣೆತ್ತಿಯೂ ನೋಡಿರಲಿಲ್ಲ.

 

ವಿಶೇಷವೆಂದರೇ 35 ಕೋಟಿ ಟನ್‌ ಅದಿರು ಅಕ್ರಮವಾಗಿ ರೈಲ್ವೇ ಸೈಡಿಂಗ್‌ ಮತ್ತು ರೈಲ್ವೇ ನಿಲ್ದಾಣಗಳಿಂದ ಸಾಗಾಣಿಕೆಯಾಗಿತ್ತು ಎಂದು  ಎಚ್‌ ಕೆ ಪಾಟೀಲ್‌ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಚರ್ಚೆಯಾಗಿತ್ತೇ ವಿನಃ, ಅದಿರಿನ ಒಟ್ಟಾರೆ  ಮೌಲ್ಯವನ್ನು ದಾಖಲಿಸಿರಲಿಲ್ಲ.

 

ಸಚಿವ ಸಂಪುಟ  ಉಪ ಸಮಿತಿ ವರದಿ ಸಲ್ಲಿಕೆಯಾಗಿ 10 ವರ್ಷಗಳ  ನಂತರ ಬರೆದಿರುವ ಪತ್ರದಲ್ಲಿ ಅದಿರಿನ ಒಟ್ಟಾರೆ ಮೌಲ್ಯವನ್ನು 1.50 ಲಕ್ಷ ಕೋಟಿ ಎಂದು ಹೇಳಿರುವುದು ಗಮನಾರ್ಹವಾಗಿದೆ.

 

ಸಚಿವ ಎಚ್‌ ಕೆ ಪಾಟೀಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ 7 ಪುಟಗಳ ಪತ್ರವು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

 

 

ಅಲ್ಲದೇ  ಕಳೆದ 10 ವರ್ಷಗಳಿಂದ ಮೂಲೆಗುಂಪಾಗಿದ್ದ ಸಚಿವ ಸಂಪುಟದ ಉಪ ಸಮಿತಿಯ ವರದಿ ಮತ್ತು ಸಭೆ ನಡವಳಿಗಳಿಗೆ ಮರು ಜೀವ ಸಿಕ್ಕಂತಾಗಿದೆ.

 

ಹಾಗೆಯೇ ಲೋಕಾಯುಕ್ತ ಸಂಸ್ಥೆ ಅಂದಾಜಿಸಿರುವ ನಷ್ಟದ ಮೊತ್ತ ಆಧರಿಸಿ ಸಿಇಸಿ ನೀಡಿರುವ ವರದಿಯನ್ನು ಸುಪ್ರೀಂ ಕೋರ್ಟ್​ ಒಪ್ಪಿದೆ. ಹೀಗಾಗಿ ಮತ್ತೊಮ್ಮೆ ನಷ್ಟ ಅಂದಾಜಿಸಬಹುದೇ ಎಂದು ಅರಣ್ಯ, ಕಾನೂನು ಇಲಾಖೆಯ ಅಧಿಕಾರಿಗಳು ಪ್ರಶ್ನಿಸಿದ್ದರು. ಆ  ಮೂಲಕ ಅಕ್ರಮ ಗಣಿಗಾರಿಕೆಯಿಂದಾಗಿರುವ ನಷ್ಟವನ್ನೂ ಮರೆ ಮಾಚಲು ಯತ್ನಿಸಿದ್ದರು. ಇದೀಗ ಅಧಿಕಾರಿವರ್ಗದ  ಓಟಕ್ಕೆ, ಸಚಿವ ಎಚ್‌ ಕೆ ಪಾಟೀಲ್‌ ಅವರು ಬರೆದಿರುವ ಈ ಪತ್ರವು ತಡೆಯೊಡ್ಡಲಿದೆ!

 

ಅಕ್ರಮವಾಗಿ ಅದಿರನ್ನು ಸಾಗಾಣಿಕೆ ಮಾಡಿರುವವರು ದೊಡ್ಡ ಪ್ರಮಾಣದ ಲೂಟಿ ಮಾಡುವ ಮೂಲಕ ರಾಜ್ಯ ವಿದ್ರೋಹ ಎಸಗಿದ್ದಾರೆ. ಈ ಪ್ರಕರಣಗಳು ತನಿಖೆಗೆ ಒಳಪಡಬೇಕಾಗಿತ್ತು. ಅಪರಾಧಿಗಳು ಶಿಕ್ಷೆಗೆ ಗುರಿಯಾಗಬೇಕಿತ್ತು. ಆದರೆ ಅಡಳಿತ ಅನಾಸಕ್ತಿ, ಅಧಿಕಾರಶಾಹಿಯ ರಾಜ್ಯದ್ರೋಹಿ ಮನೋಭಾವದಿಂದ ಈ ಪ್ರಕರಣಗಳ ತನಿಖೆಯು ಆಗಲಿಲ್ಲ. ವಿಚಾರಣೆಗೂ ಗುರಿಯಾಗಲಿಲ್ಲ. ತನಿಖೆಗೆ ವಹಿಸಿದ ಕೆಲವೇ ಕೆಲವು ಪ್ರಕರಣಗಳು ಎಸ್‌ಐಟಿಯು ಯಾವುದೇ ಪ್ರಗತಿಯು ಸಾಧಿಸಲಿಲ್ಲ. ಈ ಅಕ್ರಮಗಳು ಸರ್ಕಾರಿ ಕಡತಗಳಲ್ಲಿ ಅಧಿಕಾರಿಗಳ ವಿಳಂಬ ದ್ರೋಹಗಳಲ್ಲಿ ಹೂತು ಹೋಗುತ್ತಿವೆ. ಪುಣ್ಯದ ಮೇಲೆ ಪಾಪದ ವಿಜಯ ಸಾಧಿಸಿದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿರುವುದು ಪತ್ರದಿಂದ ಗೊತ್ತಾಗಿದೆ.

 

 

ಕ್ರಿಮಿನಲ್‌ ಲಾ ಅಮೆಂಡ್‌ಮೆಂಟ್‌ ಆರ್ಡಿನೆನ್ಸ್‌ ಮೂಲಕ ನಷ್ಟ ವಸೂಲಾತಿ ಮಾಡಲು ಅಪರಾಧಿಗಳ/ ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಒಬ್ಬ ವಸೂಲಾತಿ ಆಯುಕ್ತರನ್ನು ತಕ್ಷಣ ನೇಮಿಸಬೇಕು. ಈ ಆಯುಕ್ತರಿಗೆ ಅಗತ್ಯದ ಬೆಂಬಲ ಮತ್ತು ಬಲ ಒದಗಿಸಬೇಕು. ವಸೂಲಾತಿ ಪರಿಣಾಮಕಾರಿಗೊಳಿಸಲು ದೃಢ ನಿಶ್ಚಯದಿಂದ ಹೆಜ್ಜೆಗಳನ್ನಿರಿಸಬೇಕು ಎಂದು ಪತ್ರದಲ್ಲಿ ಸಲಹೆ ನೀಡಿರುವುದು ತಿಳಿದು ಬಂದಿದೆ.

 

‘ಈಗ ತನಿಖೆ ಪೂರ್ಣಗೊಂಡು ನ್ಯಾಯಾಲಯದ ವಿಚಾರಣೆ ಹಂತದಲ್ಲಿಲರುವ ಪ್ರಕರಣಗಳಿಗಿಂತ ಹತ್ತು ಪಟ್ಟು ಹೆಚ್ಚಿನ ಅಕ್ರಮ ಗಣಿಗಾರಿಕೆ ಪ್ರಕರಣಗಳು ತನಿಖೆಗೆ ಒಳಪಡಲೇ ಇಲ್ಲ. ಅಂತಹ ಪ್ರಕರಣಗಳ ತನಿಖೆ ಅಗತ್ಯವಿದೆ. ಅದಕ್ಕಾಗಿ ಇನ್ನೂ ಬಲಯುತವಾದ ಪೌಜದಾರಿ ವ್ಯಾಪ್ತಿ ಹೊಂದಿರುವ ಅಪರಾಧಿಗಳನ್ನು ಶಿಕ್ಷೆಗೆ ಒಳಪಡಿಸಬಹುದಾದ ವಿಶೇಷ ತನಿಖಾ ತಂಡವೊಂದನ್ನು ರಚಿಸಿ ಪೊಲೀಸ್‌ ವ್ಯವಸ್ಥೆಯನ್ನು ರೂಪಿಸಬೇಕು.
ಅಕ್ರಮ ಗಣಿಗಾರಿಕೆ ಪ್ರಕರಣಗಳ ಅಪರಾಧಿ ಉದ್ದೇಶದ ಪ್ರಕರಣಗಳನ್ನು ತನಿಖೆ ಮಾಡಲು ತಕ್ಷಣ ವಿಶೇಷ ನ್ಯಾಯಾಲಯ ಸ್ಥಾಪನೆಯಾಗಬೇಕು,’ ಎಂದು ಪತ್ರದಲ್ಲಿ ಕೋರಿರುವುದು ಗೊತ್ತಾಗಿದೆ.

 

 

ಶಿಕ್ಷೆಯನ್ನು ತಾಂತ್ರಿಕ, ಕಾನೂನಿನ ದೌರ್ಬಲ್ಯ ವ್ಯವಸ್ಥೆ ಮೂಲಕ ಅನುಕೂಲತೆ ಮತ್ತು ಅನುಮಾನದ ಪ್ರಯೋಜನೆಗಳಿಂದ ವ್ಯಕ್ತಿ ಪಾರಾಗಬಹುದು. ಶಿಕ್ಷೆಯನ್ನು ತಪ್ಪಿಸಿಕೊಳ್ಳಬಹುದು. ಆದರೆ ಗುನ್ನೆಯಿಂದ ಅಪರಾಧಿಗಳು ಗಳಿಸಿದ ಸಂಪತ್ತು ರಾಜ್ಯದ ಖಜಾನೆಗೆ ಮರಳಿ ವಾಪಸ್ಸು ತರದಿದ್ದರೇ ಅದು ವ್ಯವಸ್ಥೆಯ ವಿಡಂಬನೆ, ಅಣಕ ಆದಂತಾಗುವುದು ಎಂದೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪತ್ರದ ಮೂಲಕ ಗಮನಸೆಳೆದಿರುವುದು ತಿಳಿದು ಬಂದಿದೆ.

 

 

‘ನ್ಯಾಯಾಲಯದ ವಿಚಾರಣೆಗಳು, ಪೊಲೀಸ್‌ ತನಿಖೆಗಳು, ಕ್ರಮಗಳು, ಶಿಕ್ಷೆಗಳು ಅಂದು 2007ರಷ್ಟು ಹಿಂದಿನ ದೂರುಗಳನ್ನು ಮತ್ತು ಆರೋಪಗಳನ್ನು ಕೇವಲ ರಾಜಕೀಯ ಕಾರಣಕ್ಕಾಗಿ ಮಾಡಲಾದ ಆರೋಪಗಳು ಎಂದು ಹೀಗಳೆಯಲಾಗುತ್ತಿತ್ತು. ಆದರೆ 16-18 ವರ್ಷಗಳ ನಂತರ ನ್ಯಾಯಾಲಯಗಳು ಅಪರಾಧಿಗಳಿಗೆ ಶಿಕ್ಷೆ ವಿಧಿಸಿರುವುದರಿಂದ ಆರೊಪಗಳಲ್ಲಿ ತಥ್ಯವಿತ್ತೆಂಬುದು ಸಾಬೀತಾಗಿದೆ. ಎಷ್ಟು ದೊಡ್ಡ ಲೂಟಿ ಎಂದು ಎಲ್ಲರೂ ಆಶ್ಚರ್ಯಪಟ್ಟಿದ್ದಾರೆ,’ ಎಂದು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

ಆದರೆ ಇಷ್ಟು ದೊಡ್ಡ ಪ್ರಮಾಣದ ಲೂಟಿಕೋರತನಕ್ಕೆ ತಕ್ಕ ಪ್ರಮಾಣದ ಶಿಕ್ಷೆಯಾಗಲಿ ಅಥವಾ ಕಳುವಿನ ಸಂಪತ್ತು, ಸರ್ಕಾರದಿಂದ ಸರ್ಕಾರಕ್ಕೆ ವಾಪಸ್ಸು ಪಡೆಯುವ ಪ್ರಾಮಣಿಕತನ ಮತ್ತು ನಿಷ್ಠೆಯ ಪ್ರಯತ್ನ ಇಲ್ಲವಾಯಿತೆಂಬ ಆಕ್ರೋಶ ಜನರಲ್ಲಿದೆ. ನಡೆದ ಗಣಿ ಅಕ್ರಮದ ಕೇವಲ ಶೆ 7.6ರಷ್ಟು ಪ್ರಕರಣಗಳು ತನಿಖೆಗೆ ಒಳಪಟ್ಟಿವೆ ಎಂದು ಪತ್ರದಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

 

ಒಟ್ಟು ಅಕ್ರಮದ ಬಾಕಿ ಉಳಿದ ಪ್ರಕರಣಗಳ ತನಿಖೆ ನಡೆಯದೇ ಇದ್ದುದ್ದರಿಂದ ಕೇವಲ ಶೇ.0.02ರಷ್ಟು ಪ್ರಕರಣಗಳಲ್ಲಿ ಅಕ್ರಮದ ತನಿಖೆಗೊಳಪೊಟ್ಟ ಪ್ರಕರಣಗಳಲ್ಲಿ ಕೇವಲ ಶೇ. 2ರಷ್ಟು ಪ್ರಕರಣಗಳಲ್ಲಿ ತೀರ್ಪು ಬಂದಿದೆ. ಕೆಲವೇ ಕೆಲವು ಅಪರಾಧಿಗಳಿಗೆ ಶಿಕ್ಷೆಯಾಗಿವೆ. ಕೆಲವು ಆರೋಪಿಗಳು ಅನುಮಾನದ ಲಾಭ ಪಡೆದು ತಾಂತ್ರಿಕ ಕಾರಣಗಳಿಂದ ಬಿಡುಗಡೆಗೊಂಡು ನ್ಯಾಯಾಲಯದಿಂದ ಖುಲಾಸೆಯಾಗಿದ್ದಾರೆ. ಅವರ ಪ್ರಕರಣಗಳು ಪ್ರಕರಣವಾರು ಮೇಲ್ಮನವಿ ತೀರ್ಮಾನಿಸದೇ ಅಲ್ಲಿಯೇ ಕೊಳೆಯುತ್ತಿವೆ ಎಂದೂ ಆತಂಕ ವ್ಯಕ್ತಪಡಿಸಿರುವುದು ಗೊತ್ತಾಗಿದೆ.

 

2006ರಿಂದ 2009ರ ಡಿಸೆಂಬರ್‍‌ವರೆಗೆ ಒಟ್ಟು  12,891 ಅಕ್ರಮ ಗಣಿಗಾರಿಕೆ ಪ್ರಕರಣಗಳು ಕರ್ನಾಟಕದಲ್ಲಿ ವರದಿಯಾಗಿದ್ದವು. 2010-11ನೇ ಸಾಲಿಗೆ  6,476 ಅಕ್ರಮ ಗಣಿಗಾರಿಕೆ ಪ್ರಕರಣಗಳು  ಬೆಳಕಿಗೆ ಬಂದಿದ್ದವು. ಕರ್ನಾಟಕದಲ್ಲಿ ಉತ್ಪಾದನೆಯಾಗುವ ಕಬ್ಬಿಣದ ಅದಿರಿನ ದತ್ತಾಂಶವನ್ನು ಕೇಂದ್ರೀಕೃತವಾಗಿ ನಿರ್ವಹಿಸಲಾಗುತ್ತಿಲ್ಲ ಎಂಬ ಸತ್ಯವನ್ನು ಸಚಿವ ಸಂಪುಟ ಉಪ ಸಮಿತಿಯು  ಬಯಲಿಗೆಳೆದಿತ್ತು.

 

ಅಕ್ರಮ ಗಣಿಗಾರಿಕೆ ಚಟುವಟಿಕೆಗಳ ಮತ್ತು ಈ ಚಟುವಟಿಕೆಗಳಿಗೆ ಶಾಮೀಲಾಗಿ ನಿಂತಿದ್ದ ಅಧಿಕಾರಶಾಹಿಯು ಒಂದು ಕಡೆ ವಿಳಂಬ ದ್ರೋಹ, ಇನ್ನೊಂದು ಕಡೆ ನಿಷ್ಕ್ರೀಯತೆ ಕರ್ನಾಟಕದ ನೈಸರ್ಗಿಕ ಸಂಪತ್ತು ಲೂಟಿಯಾಗುವುದನ್ನು ಅಟ್ಟಹಾಸದಿಂದ ಸ್ವಾರ್ಥ ಸಾಧನೆಗಾಗಿ ಕುಹಕ ನಗೆ ಬೀರುತ್ತಿತ್ತು. ಸಂಪೂರ್ಣ ವ್ಯವಸ್ಥೆ ಪಟ್ಟಭದ್ರ ಆಸಕ್ತ ಮೂಕ ಪ್ರೇಕ್ಷಕನಂತೆ ವರ್ತಿಸಿ ದೇಶದ್ರೋಹವನ್ನು  ಎಸಗುತ್ತಿತ್ತು ಎಂದು ಸಚಿವ ಹೆಚ್‌ ಕೆ ಪಾಟೀಲ್‌ ಅವರು ಪತ್ರದಲ್ಲಿ ಕಿಡಿ ಕಾರಿರುವುದು ಗೊತ್ತಾಗಿದೆ.

 

‘ನ್ಯಾಯಾಲಯದ ವಿಚಾರಣೆಗಳು, ಪೊಲೀಸ್‌ ತನಿಖೆಗಳು, ಕ್ರಮಗಳು, ಶಿಕ್ಷೆಗಳು ಅಂದು 2007ರಷ್ಟು ಹಿಂದಿನ ದೂರುಗಳನ್ನು ಮತ್ತು ಆರೋಪಗಳನ್ನು ಕೇವಲ ರಾಜಕೀಯ ಕಾರಣಕ್ಕಾಗಿ ಮಾಡಲಾದ ಆರೋಪಗಳು ಎಂದು ಹೀಗಳೆಯಲಾಗುತ್ತಿತ್ತು. ಆದರೆ 16-18 ವರ್ಷಗಳ ನಂತರ ನ್ಯಾಯಾಲಯಗಳು ಅಪರಾಧಿಗಳಿಗೆ ಶಿಕ್ಷೆ ವಿಧಿಸಿರುವುದರಿಂದ ಆರೊಪಗಳಲ್ಲಿ ತಥ್ಯವಿತ್ತೆಂಬುದು ಸಾಬೀತಾಗಿದೆ. ಎಷ್ಟು ದೊಡ್ಡ ಲೂಟಿ ಎಂದು ಎಲ್ಲರೂ ಆಶ್ಚರ್ಯಪಟ್ಟಿದ್ದಾರೆ,’ ಎಂದು ಪತ್ರದಲ್ಲಿ ವಿವರಿಸಿರುವುದು ತಿಳೀದು ಬಂದಿದೆ.

 

ಆದರೆ ಇಷ್ಟು ದೊಡ್ಡ ಪ್ರಮಾಣದ ಲೂಟಿಕೋರತನಕ್ಕೆ ತಕ್ಕ ಪ್ರಮಾಣದ ಶಿಕ್ಷೆಯಾಗಲಿ ಅಥವಾ ಕಳುವಿನ ಸಂಪತ್ತು, ಸರ್ಕಾರದಿಂದ ಸರ್ಕಾರಕ್ಕೆ ವಾಪಸ್ಸು ಪಡೆಯುವ ಪ್ರಾಮಣಿಕತನ ಮತ್ತು ನಿಷ್ಠೆಯ ಪ್ರಯತ್ನ ಇಲ್ಲವಾಯಿತೆಂಬ ಆಕ್ರೋಶ ಜನರಲ್ಲಿದೆ.  ಗಣಿ ಅಕ್ರಮದ ಕೇವಲ ಶೇ 7.6ರಷ್ಟು ಪ್ರಕರಣಗಳು ತನಿಖೆಗೆ ಒಳಪಟ್ಟಿವೆ. ಒಟ್ಟು ಅಕ್ರಮದ ಬಾಕಿ ಉಳಿದ ಪ್ರಕರಣಗಳ ತನಿಖೆ ನಡೆಯದೇ ಇದ್ದುದ್ದರಿಂದ ಕೇವಲ ಶೇ.0.02ರಷ್ಟು ಪ್ರಕರಣಗಳಲ್ಲಿ ಅಕ್ರಮದ ತನಿಖೆಗೊಳಪಟ್ಟ ಪ್ರಕರಣಗಳಲ್ಲಿ ಕೇವಲ ಶೇ. 2ರಷ್ಟು ಪ್ರಕರಣಗಳಲ್ಲಿ ತೀರ್ಪು ಬಂದಿದೆ.

 

ಕೆಲವೇ ಕೆಲವು ಅಪೊರಾಧಿಗಳಿಗೆ ಶಿಕ್ಷೆಯಾಗಿವೆ. ಕೆಲವು ಆರೋಪಿಗಳು ಅನುಮಾನದ ಲಾಭ ಪಡೆದು ತಾಂತ್ರಿಕ ಕಾರಣಗಳಿಂದ ಬಿಡುಗಡೆಗೊಂಡು ನ್ಯಾಯಾಲಯದಿಂದ ಖುಲಾಸೆಯಾಗಿದ್ದಾರೆ. ಅವರ ಪ್ರಕರಣಗಳು ಪ್ರಕರಣವಾರು ಮೇಲ್ಮನವಿ ತೀರ್ಮಾನಿಸದೇ ಅಲ್ಲಿಯೇ ಕೊಳೆಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿರುವುದು ಗೊತ್ತಾಗಿದೆ.

 

‘ಇನ್ನುಳಿದ ಶೇ. 92.4ರಷ್ಟು ಅಕ್ರಮ ಗಣಿಗಾರಿಕೆ ಪ್ರಕರಣಗಳು ತನಿಖೆಗೆ ಒಳಪಡಬೇಕಾಗಿತ್ತು. ಅಪರಾಧಿಗಳು ಶಿಕ್ಷೆಗೆ ಗುರಿಯಾಗಿಬೇಕಿತ್ತು. ಆದರೆ ಅಡಳಿತ ಅನಾಸಕ್ತಿ, ಅಧಿಕಾರಶಾಹಿಯ ರಾಜ್ಯದ್ರೋಹಿ ಮನೋಭಾವದಿಂದ ಈ ಪ್ರಕರಣಗಳ ತನಿಖೆಯು ಆಗಲಿಲ್ಲ. ವಿಚಾರಣೆಗೂ ಗುರಿಯಾಗಲಿಲ್ಲ. ತನಿಖೆಗೆ ವಹಿಸಿದ ಕೆಲವೇ ಕೆಲವು ಪ್ರಕರಣಗಳು ಎಸ್‌ಐಟಿಯು ಯಾವುದೇ ಪ್ರಗತಿಯು ಸಾಧಿಸಲಿಲ್ಲ. ಈ ಅಕ್ರಮಗಳು ಸರ್ಕಾರಿ ಕಡತಗಳಲ್ಲಿ ಅಧಿಕಾರಿಗಳ ವಿಳಂಬ ದ್ರೋಹಗಳಲ್ಲಿ ಹೂತು ಹೋಗುತ್ತಿವೆ,’ ಎಂದು ಪತ್ರದಲ್ಲಿ ಗಮನಸೆಳೆದಿರುವುದು ತಿಳಿದು ಬಂದಿದೆ.

 

2013ರಲ್ಲಿ ರಚಿಸಿದ್ದ ಸಚಿವ ಸಂಪುಟದ ಉಪ ಸಮಿತಿಯು ಮಾಡಿದ ಪ್ರಮುಖವಾದ ಶಿಫಾರಸ್ಸುಗಳಲ್ಲಿ ಒಂದಾದ ಅಕ್ರಮ ಗಣಿಗಾರಿಕೆ ಮೂಲಕ ಲೂಟಿ ಹೊಡೆದು ಸಂಪಾದಿಸಿದ ಅಪರಾಧಿಕ ಆಸ್ತಿ ಸಂಪತ್ತು ಸಂಘಟಿತ ಅಪರಾಧಿ ಗುಂಪನಿಂದ ರಾಜ್ಯದ ಸಂಪತ್ತನ್ನು ಮರಳಿ ವಸೂಲಿ ಮಾಡಲು ಕ್ರಿಮಿನಲ್‌ ಲಾ ಅಮೆಂಡ್‌ಮೆಂಟ್‌ ಆರ್ಡಿನ್ಸನ್ಸ್‌ ಬಳಕೆ ಮಾಡಿಕೊಳ್ಳಬೇಕೆಂಬ ಶಿಫಾರಸ್ಸು,  ಅಧಿಕಾರಶಾಹಿಗಳ ಕಲಸುಮೇಲೋಗರದಿಂದಾಗಿ ವಸೂಲಿ ಕ್ರಮಗಳು ಮುಂದುವರಿಯಲೇ ಇಲ್ಲ ಎಂದು ಅಧಿಕಾರಿವರ್ಗದತ್ತ ಬೊಟ್ಟು  ಮಾಡಿರುವುದು ತಿಳಿದು ಬಂದಿದೆ.

 

‘ಕರ್ನಾಟಕದ ಸಂಪತ್ತಿನ ಲೂಟಿಯ ಪ್ರಕರಣಗಳಲ್ಲಿ ರಾಜ್ಯಕ್ಕೆ ನ್ಯಾಯವೇ ದೊರಕಲಿಲ್ಲ. ನಷ್ಟ ವಸೂಲಿಯಾಗಲಿಲ್ಲ. ನಷ್ಟ ವಸೂಲಿಯಾಗುವ ಮತ್ತು ಆ ಸಂಪತ್ತು ಕರ್ನಾಟಕ ಬೊಕ್ಕಸಕ್ಕೆ ಮರಳುವ ಸಾಧ್ಯತೆಗಳು ದಿನೇ ದಿನೇ ಕ್ಷೀಣವಾಗುತ್ತಿವೆ,’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

 

ಪುಣ್ಯದ ಮೇಲೆ ಪಾಪದ ವಿಜಯ

 

ಅಕ್ರಮ ಗಣಿಗಾರಿಕೆ ಮೂಲಕ ಗಳಿಸಿದ ಸಂಪತ್ತು ಚುನಾವಣೆಯ ಅಕ್ರಮಗಳಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ವಿನಿಯೋಗವಾಗಿದ್ದನ್ನು ನಾವು ಕಂಡಿದ್ದೇವೆ. ಇಂತಹ ಅಕ್ರಮ ಹಣದಿಂದ, ಸಂಪತ್ತಿನಿಂದ ಸರ್ಕಾರಗಳನ್ನು ಉರುಳಿಸಲಾಗಿದೆ. ಶಾಸಕರ ಕುದುರೆ ವ್ಯಾಪಾರಕ್ಕೆ ಈ ಹಣ ಬಳಕೆಯಾಗಿದೆ. ಅನೈತಿಕ ಚಟುವಟಿಕೆಗೆ ಕಾರಣವಾಗಿದೆ. ಅಧಿಕಾರಯುತ ರಾಜಕಾರಣಿಗಳ ಮೋಜು-ಮಸ್ತಿ ಆಡೋಂಬೋಲ ಈ ಹಣದಿಂದ ಕರ್ನಾಟಕ ರಾಜಕೀಯ ವ್ಯವಸ್ಥೆಯನ್ನು ಎರಡು ದಶಕಗಳ ಕಾಲ ನಿಯಂತ್ರಿಸಿದೆ. ಅಲ್ಲೋಲ ಕಲ್ಲೋಲಗೊಳಿಸಿದೆ. ರಾಜಕೀಐ ಪಕ್ಷಗಳು ಸೊಳು ಗೆಲುವು ಈ ಹಣದ ಮೇಲೆ ಅವಲಂಬಿತವಾಗಿದೆ. ಪುಣ್ಯದ ಮೇಲೆ ಪಾಪವು ವಿಜಯ ಸಾಧಿಸುತ್ತಲೇ ಬಂದಿದೆ ಎಂದು ಬಣ್ಣಿಸಿದ್ದಾರೆ.

 

‘ಅಕ್ರಮ ಗಣಿಗಾರಿಕೆಯ ಪ್ರಭಾವಗಳು ರಾಜ್ಯದ ರಾಜಕೀಯದ ಮೆಲೆ ವ್ಯಾಪಕ ಪರಿಣಾಮಗಳುಳ್ಳ ಗಂಭೀರವಾದ ದುಷ್ಪರಿಣಾಮಗಳನ್ನು ಉಂಟು ಮಾಡಿವೆ. ಬದುಕಿನ ಮೌಲ್ಯಗಳು, ರಾಜಕೀಯ ಶಿಸ್ತು ಬದ್ಧತೆಗಳು, ಸೇವಾ ಪಥಗಳು ಎಲ್ಲವೂ ಧಕ್ಕೆಗೊಳಾಗಿವೆ. ತನಿಖೆಗೆ ಒಳಪಡದ ಶಕ್ತಿಗಳು ಪೌರುಷದ ಪ್ರದರ್ಶನ ಮಾಡುತ್ತಾ ಸಂಘಟಿತ ಅಪರಾಧಗಳನ್ನು ಮಾಡಿ ಮುಂದುವರೆಸಿ ರಾಜಕೀಯ ದುರುಪಯೋಗದ ಮೂಲಕ ಮೋಸದ ಭ್ರಷ್ಟ ಹಾದಿ ತುಳಿದು ತಾವು ಹಾನಿ ಮಾಡಿದ್ದರೂ ತಮಗೇನೂ ಆಗಲಿಲ್ಲವೆಂಬ ದಾಷ್ರ್ಟ್ಯ ತೋರುತ್ತಿದ್ದಾರೆ,’ ಎಂದು ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ಕಾಲ ಮಿಂಚಿಲ್ಲ

 

ಕರ್ನಾಟಕದ ಸಂಪತ್ತಿನ ಲೂಟಿಗೆ ಕಾರಣರಾಧ ಪ್ರತಿಯೊಬ್ಬ ಅಪರಾಧಿಗೆ ತಕ್ಕ ಶಾಸ್ತಿಯಾಗಬೇಕು ಮತ್ತು ಕರ್ನಾಟಕ ನಷ್ಟ ಅನುಭವಿಸಿದ ಅಥವಾ ಲೂಟಿಕೋರರ ಪಾಲಾಗಿರುವ ರಾಜ್ಯದ ಅಮೂಲ್ಯವಾದ ಆ ಅಕ್ರಮದಿಂದ ಗುನ್ಹೆಗಾರರು ಪಡೆದುಕೊಂಡ ಆಸ್ತಿ, ಸಂಪತ್ತನ್ನು ರಾಜ್ಯದ ಖಜಾನೆಗೆ ಮರಳಿ ತರಬೇಕು. ಇದಕ್ಕಾಗಿ ನಮ್ಮ ಸರ್ಕಾರ ಏನು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೋ ಅಂತಹ ನಿಷ್ಠುರವಾದ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿರುವುದು ಗೊತ್ತಾಗಿದೆ.

 

ಕಾಗದಗಳು ಕಣ್ಮರೆ

 

ಶಿಕ್ಷೆಯನ್ನು ತಾಂತ್ರಿಕ, ಕಾನೂನಿನ ದೌರ್ಬಲ್ಯ ವ್ಯವಸ್ಥೆ ಮೂಲಕ ಅನುಕೂಲತೆ ಮತ್ತು ಅನುಮಾನದ ಪ್ರಯೋಜನೆಗಳಿಂದ ವ್ಯಕ್ತಿ ಪಾರಾಗಬಹುದು. ಶಿಕ್ಷೆಯನ್ನು ತಪ್ಪಿಸಿಕೊಳ್ಳಬಹುದು. ಆದರೆ ಗುನ್ನೆಯಿಂದ ಅಪರಾಧಿಗಳು ಗಳಿಸಿದ ಸಂಪತ್ತು ರಾಜ್ಯದ ಖಜಾನೆಗೆ ಮರಳಿ ವಾಪಸ್ಸು ತರದಿದ್ದರೇ ಅದು ವ್ಯವಸ್ಥೆಯ ವಿಡಂಬನೆ, ಅಣಕ ಆದಂತಾಗುವುದು. ಅಕ್ರಮದ  ಬಗ್ಗೆ ಅನೇಕ ವಿಷಯಗಳು ಸಾಕಷ್ಟು ಬೆಳಕು ಚೆಲ್ಲುತ್ತವೆ.

 

 

ಗಂಭೀರತೆಯು ಎಲ್ಲರಿಗೂ ವಿಧಿತವಾಗಲಿ ಹಾಗೂ ಈಗಾಗಲೇ ನೀಡಿರುವ ಗಂಭೀರ ರೀತಿಯ ನಿರ್ದೇಶನಗಳು ಅಂದಿನ ಸಚಿವ ಸಂಪುಟ ಉಪ ಸಮಿತಿಗೆ ನೀಡಿರುವ ಪುರಾವೆ ತೋರಿಸಿದ ಕಾಗದಗಳು ಯಾವುದೇ ಕಾರಣಕ್ಕೆ ಮರೆಯಾಗುವ ಮೊದಲೇ ಅವುಗಳ ರಕ್ಷಣೆ ಮತ್ತು ಅಂತಿಮ ನಿರ್ಣಯ ಮಾಡಲೇಬೇಕು ಎಂದು ಸಚಿವ ಎಚ್‌ ಕೆ ಪಾಟೀಲ್‌ ಅವರು ಒತ್ತಾಯಿಸಿರುವುದು ತಿಳಿದು ಬಂದಿದೆ.

 

 

2006ರಿಂದ 2010ರವರೆಗೆ ರಾಜ್ಯದ ರೈಲ್ವೇ ಸೈಡಿಂಗ್‌ಗಳಿಂದ ಅಕ್ರಮವಾಗಿ 35 ಕೋಟಿ ಟನ್‌ ಅದಿರು ಸಾಗಾಣಿಕೆಯಾಗಿತ್ತು. ಈ ತನಿಖೆಯ ಆಯಾಮಗಳು ಇಡೀ ರಾ‍ಷ್ಟ್ರಾದಾದ್ಯಂತ ವ್ಯಾಪಿಸಿದೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಘಟನೆಗಳು ಇಂತಹ ಅಕ್ರಮದಲ್ಲಿ ಪಾಲ್ಗೊಂಡಿವೆ. ವ್ಯಾಪಕ ಸಂಘಟಿತ ಅಪರಾಧ ಇದರಲ್ಲಿ ಸೇರ್ಪಡೆಗೊಂಡಿದ್ದರಿಂದ ಈ ಪ್ರಕರಣಗಳನ್ನು ವಿಸ್ತೃತವಾಗಿ ತನಿಖೆ ನಡೆಸಬೇಕು ಎಂದು ಹೆಚ್‌ ಕೆ ಪಾಟೀಲ್‌ ಅವರು ಕೊಟ್ಟಿದ್ದ ಮಹತ್ವದ  ವರದಿಯತ್ತ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರಾವಧಿಯುದ್ದಕ್ಕೂ  ಕಣ್ಣೆತ್ತಿಯೂ ನೋಡಿರಲಿಲ್ಲ!

 

https://stack.thefile.in/2024/08/governance/25891/

 

ಸಚಿವ ಹೆಚ್‌ ಕೆ ಪಾಟೀಲ್‌ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ಸಚಿವ ಸಂಪುಟ ಉಪ ಸಮಿತಿಯು 2013ರ ಡಿಸೆಂಬರ್‍‌ 20ರಿಂದ 2017ರ ನವೆಂಬರ್‍‌ 14ವರೆಗೆ 11 ಸಭೆಗಳನ್ನು ನಡೆಸಿದೆ. ಸಚಿವ ಸಂಪುಟ ಉಪ ಸಮಿತಿಯು ನಡೆಸಿದ್ದ 11 ಸಭೆಗಳ ನಡವಳಿಗಳನ್ನಾಧರಿಸಿ 'ದಿ ಫೈಲ್‌', ಸರಣಿ ವರದಿಗಳನ್ನು ಪ್ರಕಟಿಸಿತ್ತು.

 

ಈ 11 ಸಭೆಗಳಲ್ಲಿ ತುಂಬಾ ಮುಖ್ಯವಾಗಿ 2015ರ ಅಕ್ಟೋಬರ್‍‌ 16ರಂದು ನಡೆದಿದ್ದ ಸಭೆಯಲ್ಲಿ ಆಘಾತಕಾರಿ ಅಂಶಗಳ ಕುರಿತು ಚರ್ಚೆಯಾಗಿದ್ದವು.

 

ಅಕ್ರಮ ಗಣಿಗಾರಿಕೆ ಪ್ರಕರಣಗಳ ಕುರಿತು ತನಿಖೆ ನಡೆಸಿದ್ದ  ಲೋಕಾಯುಕ್ತ ಸಂತೋಷ್‌ ಹೆಗ್ಡೆ ಅವರ  ವರದಿಯು ಅಂದಾಜಿಸಿದ್ದ ನಷ್ಟದ  ಮೊತ್ತವನ್ನೂ ಹೆಚ್‌ ಕೆ ಪಾಟೀಲ್‌ ಅವರ ಅಧ್ಯಕ್ಷತೆಯ ಸಂಪುಟ ಉಪ ಸಮಿತಿಯ ವರದಿಯು ಊಹೆಗೂ ಮೀರಿ ಲೆಕ್ಕಚಾರ ಮಾಡಿತ್ತು.

 

ಕಬ್ಬಿಣ ಅದಿರು ಅಕ್ರಮ ಸಾಗಾಣಿಕೆಯಿಂದ ರಾಜ್ಯದ ಬೊಕ್ಕಸಕ್ಕೆ ಆಗಿರುವ ನಷ್ಟದ ಕುರಿತು ಲೋಕಾಯುಕ್ತರಾಗಿದ್ದ ಸಂತೋಷ್​​ ಹೆಗ್ಡೆ ಅವರು ವರದಿಯಲ್ಲಿ ನೀಡಿದ್ದ ಅಂದಾಜು ಮೊತ್ತಕ್ಕೂ ರೈಲ್ವೆ ಇಲಾಖೆ ದಾಖಲೆಗಳಿಂದ ಅಂದಾಜಿಸಿರುವ ಮೊತ್ತಕ್ಕೂ ಅಜಗಜಾಂತರ ವ್ಯತ್ಯಾಸ ಇರುವ ಹೊಸ ಅಂಶವನ್ನು  ಸಂಪುಟ ಉಪ ಸಮಿತಿಯು  ಹೊರಗೆಡವಿತ್ತು.

 

https://stack.thefile.in/2021/03/governance/6984/

 

ಲೋಕಾಯುಕ್ತರು ಮಾಡಿದ್ದ ಎಲ್ಲಾ ಅಂದಾಜುಗಳನ್ನು ಪರಿಶೀಲಿಸಿದ್ದರಲ್ಲದೆ ಅವುಗಳನ್ನು ಒರೆಗೆ ಹಚ್ಚಿದ್ದರು. ಇದರ ನಡುವೆಯೇ ರೈಲ್ವೆ ಇಲಾಖೆ ದಾಖಲೆಗಳನ್ನಿಟ್ಟುಕೊಂಡು ಮಾಡಿದ್ದ ಹೊಸ ಲೆಕ್ಕಾಚಾರಗಳನ್ನು ಕಂಡು ಸ್ವತಃ ಎಚ್‌ ಕೆ ಪಾಟೀಲ್‌ ಅವರು ಆಘಾತ ವ್ಯಕ್ತಪಡಿಸಿದ್ದರು.

 

https://stack.thefile.in/2023/06/governance/16626/

 

2015ರ ಅಕ್ಟೋಬರ್​ 16ರಂದು ನಡೆದಿದ್ದ ಸಭೆಯಲ್ಲಿ ಹೊರಬಿದ್ದಿದ್ದ ದಾಖಲೆಗಳು ಲೋಕಾಯುಕ್ತರು ಮಾಡಿದ್ದ ನಷ್ಟದ ಅಂದಾಜನ್ನು ಹಲವು ಪಟ್ಟು ವಿಸ್ತರಿಸಿತ್ತು. 2006ರಿಂದ 2010ರ ಅವಧಿಯಲ್ಲಿ ಕರ್ನಾಟಕದ 10, ಗೋವಾ, ತಮಿಳುನಾಡು ಮತ್ತು ಆಂಧ್ರ ಪ್ರದೇಶದ ವಿವಿಧ ಬಂದರುಗಳ ಮೂಲಕ ಅಕ್ರಮವಾಗಿ 2.98 ಕೋಟಿ ಟನ್ ಅದಿರು ರಫ್ತಾಗಿತ್ತು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ​​ 12,228 ಕೋಟಿ ರೂ.ನಷ್ಟವಾಗಿದೆ (ಟನ್​​ಗೆ 4,103 ರೂ.ಲೆಕ್ಕಚಾರದಲ್ಲಿ) ಎಂದು ಸುಂಕ ಇಲಾಖೆ ನೀಡಿದ್ದ ಅಂಕಿ ಸಂಖ್ಯೆ ಆಧರಿಸಿ ಅಂದಿನ ಲೋಕಾಯುಕ್ತ ಸಂತೋಷ್​ ಹೆಗ್ಡೆ ಅವರು ಈ ಮೊತ್ತವನ್ನು ಅಂದಾಜಿಸಿದ್ದರು. ಇದು ಸುಂಕ ಇಲಾಖೆ ನೀಡಿದ್ದ ಅಂಕಿ ಅಂಶಗಳ ಆಧರಿಸಿದ ಲೆಕ್ಕಾಚಾರಕ್ಕಷ್ಟೇ ಸೀಮಿತವಾಗಿತ್ತು ಎಂದು ವರದಿಯಲ್ಲಿ ಉಲ್ಲೇಖವಾಗಿತ್ತು.

 

 

ಬಳ್ಳಾರಿಯಿಂದ ಹೊರಗಡೆ 6 ರೈಲ್ವೆ ನಿಲ್ದಾಣಗಳಿಂದ ಮತ್ತು 14 ರೈಲ್ವೆ ಸೈಡಿಂಗ್​​ಗಳಿಂದ 2006ರಿಂದ 2010ರವರೆಗೆ ಒಟ್ಟು 20 ಕೋಟಿ ಟನ್​ ಅಕ್ರಮ ಅದಿರು ರಫ್ತಾಗಿದೆ. ರೈಲ್ವೆ ಹಾಗೂ ಇತರೆ ಮೂಲಗಳ ಮೂಲಕ ಸಾಗಣೆ ಮಾಡಿರುವ ಒಟ್ಟು 35 ಕೋಟಿ ಟನ್​ ಅಕ್ರಮ ಅದಿರು ರಫ್ತಾಗಿದೆ. 2009ರ ಸೆಪ್ಟಂಬರ್​ನಿಂದ ಜೂನ್​ 2010ರವರೆಗೆ ಕೇವಲ 9 ತಿಂಗಳ ಅವಧಿಯಲ್ಲಿ 14 ಕೋಟಿ ಟನ್​ ಕಬ್ಬಿಣದ ಅದಿರು ಪ್ರತಿನಿತ್ಯ 20 ಸಾವಿರ ಟ್ರಕ್​​ಗಳ ಮೂಲಕ ಸಾಗಣೆಯಾಗಿದೆ ಎಂದು ರೈಲ್ವೆ ಇಲಾಖೆ ನೀಡಿದ್ದ ದಾಖಲೆಗಳು ಬಹಿರಂಗಪಡಿಸಿದ್ದವು. ಇವೆಲ್ಲವೂ ಕರ್ನಾಟಕಕ್ಕೆ ಆಘಾತಕಾರಿ ಘಟನೆಗಳು ಎಂದು ಸಚಿವ ಸಂಪುಟದ ಉಪ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್​ ಸಭೆಯಲ್ಲಿ ವಿವರಿಸಿದ್ದರು.

 

ಆದರೆ ರೈಲ್ವೆ ಇಲಾಖೆ ದಾಖಲೆಗಳನ್ನು ಪಡೆದು ಚರ್ಚಿಸಿದ್ದ ಸಚಿವ ಸಂಪುಟ ಉಪ ಸಮಿತಿಯು 2006ರಿಂದ 2010ರ ಅವಧಿಯಲ್ಲಿ ಒಟ್ಟು 35 ಕೋಟಿ ಟನ್​​ ಅಕ್ರಮವಾಗಿ ಅದಿರು ಸಾಗಣೆಯಾಗಿದೆ ಎಂದು ಹೇಳಿತ್ತು. ಆದರೆ ನಷ್ಟದ ಮೊತ್ತವನ್ನು ಉಪ ಸಮಿತಿ ಅಂದಾಜಿಸಿರಲಿಲ್ಲ. ಲೋಕಾಯುಕ್ತರು ಮಾಡಿದ್ದ ಸರಾಸರಿ ಅಂದಾಜು 4,103 ರೂ.ಗಳನ್ನು 35 ಕೋಟಿ ಟನ್​​ಗೆ ಅನ್ವಯಿಸಿ  ಅಂದಾಜಿಸಿದಲ್ಲಿ ನಷ್ಟದ ಮೊತ್ತ  1 ಲಕ್ಷ 43 ಸಾವಿರ ಕೋಟಿ ರೂಪಾಯಿ ಆಗಲಿತ್ತು.

 

‘ರೈಲ್ವೆಯ ವ್ಯಾಗನ್​ಗಳು ಮತ್ತು ಟ್ರಕ್​ಗಳ ಮೂಲಕ ರಾಜಕಾರಣಿಗಳು ತೋಳ್ಬಲದ ಮೂಲಕ ಇಷ್ಟೊಂದು ಪ್ರಮಾಣದಲ್ಲಿ ಅಕ್ರಮವಾಗಿ ಅದಿರು ಸಾಗಣೆ ಆಗಿದೆ. ಸುಪ್ರೀಂ ಕೋರ್ಟ್​ ನೇರ ಉಸ್ತುವಾರಿಯಲ್ಲಿ ಈ ಪ್ರಕರಣದ ಮೇಲ್ವಿಚಾರಣೆ ಆಗುತ್ತಿದೆ. ಸಾರ್ವಜನಿಕ ಆಸ್ತಿ ರಕ್ಷಣೆಯಂತಹ ಕ್ರಮಗಳಿಗೆ ಅಧಿಕಾರಿಗಳು ಮುಂದಾಗದಿರುವುದು ಆತಂಕ ಸೃಷ್ಟಿಸುತ್ತಿದೆ,’ ಎಂದು ಸಚಿವ ಸಂಪುಟ ಉಪ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್​ ಅವರು ಹೇಳಿದ್ದರು. ಆದರೆ ಇವರ ಮಾತನ್ನು ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ.

 

ಭಾರತ್​ ಮೈನ್ಸ್​ ಎಂಬ ಕಂಪನಿಯನ್ನು ಉದಾಹರಿಸಿರುವ ಎಚ್.ಕೆ.ಪಾಟೀಲ್ ಅವರು, 2009ರಿಂದ 2010ರ ಅವಧಿಯಲ್ಲಿ 2,11,422 ಮೆ.ಟನ್​ ಅದಿರು ರಫ್ತು ಮಾಡಿತ್ತು.  ಈ ಪ್ರಕರಣದಲ್ಲಿ ಅದಿರಿನ ರಫ್ತು ಪ್ರಮಾಣ ತಿಳಿದಿರುವ ಕಾರಣ ಇಂತಹ ಕಂಪನಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಇದರ ಅಧಾರದ ಮೇಲೆ ವಸೂಲಾತಿಗೆ ಕ್ರಮ ಕೈಗೊಂಡಿರಲಿಲ್ಲ.

 

‘ರೈಲ್ವೆಯ ವ್ಯಾಗನ್‌ಗಳ ಮೂಲಕ ಮತ್ತು ಟ್ರಕ್‌ಗಳ ಮೂಲಕ ಅಧಿಕಾರಸ್ತ ರಾಜಕಾರಿಣಿಗಳ ತೋಳ್ಬಲದ ಹಿನ್ನೆಲೆಯಲ್ಲಿ ಸಾಗಣೆಯಾಗಿದೆ ಎಂಬ ವಿಷಯವು ಬಹಿರಂಗಕ್ಕೆ ಬಂದಿದ್ದರಿಮದ ಮತ್ತು ಡಜನ್‌ಗಟ್ಟಲೇ ಪ್ರಮುಖ ರಾಜಕಾರಣಿಗಳು, ಶಾಸಕರು ಮತ್ತು ಸಚಿವರು ಬಂಧನಕ್ಕೊಳಗಾಗಿ ಸರ್ವೋಚ್ಛ ನ್ಯಾಯಾಲಯವೇ ನೇರ ಉಸ್ತುವಾರಿಯಲ್ಲಿ ಪ್ರಕರಣವನ್ನು ಮೇಲ್ವಿಚಾರಣೆ ಮಾಡುತ್ತಿರುವಾಗ ಸಾರ್ವಜನಿಕ ಆಸ್ತಿಯ ರಕ್ಷಣೆಯಂತಹ ಕ್ರಮಗಳಿಗೆ ಮುಂದಾಗದ ವಿಷಯವು ಆತಂಕ ಸೃಷ್ಟಿಸುತ್ತಿದೆ,’ ಎಂದು ಹೇಳಿದ್ದರು.

 

ರಾಷ್ಟ್ರದ ಸಂಪತ್ತು ಕೆಲವು ಬಲಾಢ್ಯ ವ್ಯಕ್ತಿಗಳ ಪಾಲಾಗಿದ್ದು, ಈ ನಷ್ಟವನ್ನು ವಸೂಲು ಮಾಡಲು ಹಾಗೂ ಸ್ಥಿರಾಸ್ತಿ-ಚರಾಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳದೇ ಸುಮ್ಮನೆ ಕುಳಿತು ಕೊಳ್ಳಲು ಸಾಧ್ಯವೇ ಇಲ್ಲ. ಅಂತಹ ಹಣದಿಂದ ಗಳಿಸಿದ ಅಕ್ರಮ ಆಸ್ತಿಯನ್ನು ಮನಿ ಲ್ಯಾಂಡ್ರಿಂಗ್​ ಕಾಯ್ದೆ ಅಥವಾ ಸೂಕ್ತ ಕಾಯ್ದೆ ಅಡಿಯಲ್ಲಿ ವಸೂಲು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಎಚ್.ಕೆ.ಪಾಟೀಲ್​ ಅವರು ಹೇಳಿದ್ದ ಮಾತುಗಳನ್ನು ಸಿದ್ದರಾಮಯ್ಯ ಅವರು ಕಿವಿ ಮೇಲೆ ಹಾಕಿಕೊಂಡಿರಲಿಲ್ಲ.

Tags: AccusedB S YediyurappaB Y VijayendraBangaloreBasavarajBellary MiningbjpBommaiCabinetCabinet Sub CommittieechitradurgaD K ShivakumarExportForceh d kumarswamyH K PatilIllegalityinvestigationIronJanardhanlawminingministerOrerailwayReddySiddaramaiahaSpecialTaskTeamTumakuruಅಕ್ರಮಅಂದಾಜು ಸಮಿತಿಅದಿರುಅಪರಾಧಅಪರಾಧಿಉಪಗಣಿಗಾರಿಕೆಜನಾರ್ದನ ರೆಡ್ಡಿತನಿಖಾಸ್ತ್ರತನಿಖೆದುಷ್ಪರಿಣಾಮನಾಗರಿಕನಿಷ್ಪಕ್ಷಪಾತಪೊಲೀಸ್‌ಪೌರುಷಬಸವರಾಜಬಿ ಎಸ್‌ ಯಡಿಯೂರಪ್ಪಬೊಮ್ಮಾಯಿಭ್ರಷ್ಟಮೂಲೆಗುಂಪುರಾಜಕೀಯವ್ಯವಸ್ಥೆಸಚಿವಸಂಪುಟಸಮಿತಿಸಾಗಾಣಿಕೆಸಿದ್ದರಾಮಯ್ಯಸ್ವಾರ್ಥರಹಿತಹೆಚ್‌ ಕೆ ಪಾಟೀಲ್‌
Advertisement Banner
Previous Post

ಲೋಕಾಯುಕ್ತರೇ ದಾಖಲಿಸಿದ್ದ ಸ್ವಯಂ ಪ್ರೇರಿತ ಪ್ರಕರಣದ ಆರೋಪಿಗಳ ಬೆನ್ನೆತ್ತಿದ್ದ ಆರೋಪಿ ನಿಂಗಪ್ಪ?

Next Post

ನಿಂಗಪ್ಪನಿಗೆ ಕಪ್ಪ ಕೊಟ್ಟ ಅಧಿಕಾರಿಗಳೊಂದಿಗೆ ಸಿಎಂ ಸಲಹೆಗಾರರು, ಮೈಸೂರಿನ ಸಚಿವರ ನಂಟು?

thefilestack

thefilestack

Next Post

ನಿಂಗಪ್ಪನಿಗೆ ಕಪ್ಪ ಕೊಟ್ಟ ಅಧಿಕಾರಿಗಳೊಂದಿಗೆ ಸಿಎಂ ಸಲಹೆಗಾರರು, ಮೈಸೂರಿನ ಸಚಿವರ ನಂಟು?

Recommended

ನಿವೇಶನ ಬಿಡುಗಡೆಗೂ 3.00 ಲಕ್ಷ ರು. ಲಂಚಕ್ಕೆ ಬೇಡಿಕೆ; ಅಧಿಕಾರಿಗಳ ವಿರುದ್ಧ ದೂರು, ಸಚಿವರ ಮೌನ

2 years ago

ನಿಂಗಪ್ಪನಿಗೆ ಅಬಕಾರಿ, ಬಿಬಿಎಂಪಿ ಅಧಿಕಾರಿಗಳೇ ಗುರಿ; ಎಫ್‌ಐಆರ್‍‌ನಲ್ಲಿಲ್ಲ ಎಸ್ಪಿ ಜೋಷಿ ಹೆಸರು

9 months ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd