the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

2,161 ಹುದ್ದೆಗಳನ್ನೇ ಮುಚ್ಚಿಟ್ಟ ಕೆಪಿಎಸ್‌ಸಿ; ಹೈ.ಕ. ಭಾಗಕ್ಕೆ ಮತ್ತೊಂದು ದ್ರೋಹ

thefilestack by thefilestack
May 7, 2022
in GOVERNANCE
0
0
SHARES
0
VIEWS
Share on FacebookShare on Twitter

ಬೆಂಗಳೂರು; ಅಕ್ರಮಗಳ ಸ್ವರ್ಗಸೀಮೆಯಾಗಿರುವ ಕರ್ನಾಟಕ ಲೋಕಸೇವಾ ಆಯೋಗವು ಇದೀಗ 371 ಜೆ ಅಡಿಯಲ್ಲಿ ನೇರ ನೇಮಕಾತಿಗೆ ಬಾಕಿ ಇರುವ ಇಲಾಖೆವಾರು ನೀಡಿರುವ ಹುದ್ದೆಗಳ ಅಸಲಿ ಸಂಖ್ಯೆಯನ್ನೇ ಮುಚ್ಚಿಟ್ಟಿರುವುದು ಬಹಿರಂಗವಾಗಿದೆ.

 

ಭಾರತದ ಸಂವಿಧಾನದ ಅನುಚ್ಛೇಧ 371(ಜೆ) ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಚಿಸಲಾಗಿರುವ ಸಚಿವ ಸಂಪುಟದ ಉಪ ಸಮಿತಿಗೆ ನೀಡಿರುವ ಇಲಾಖಾವಾರು ನೇರ ನೇಮಕಾತಿಗೆ ಬಾಕಿ ಇರುವ ಹುದ್ದೆಗಳ ಸಂಖ್ಯೆಯನ್ನು ಒದಗಿಸಿರುವ ಆಯೋಗವು 2,161 ಹುದ್ದೆಗಳ ಸಂಖ್ಯೆಯನ್ನೇ ಮುಚ್ಚಿಟ್ಟಿದೆ.

 

ಹೈದರಾಬಾದ್ ಕರ್ನಾಟಕ ಭಾಗದ ವ್ಯಾಪ್ತಿಯಲ್ಲಿರುವ ಖಾಲಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಲಾಗುವುದು ಎಂದು ಬಸವರಾಜ ಬೊಮ್ಮಾಯಿ ಅವರು ಹೇಳಿಕೆ ನೀಡಿದ್ದರ ಬೆನ್ನಲ್ಲೇ ಕೆಪಿಎಸ್‌ಸಿಯು ನೇರ ನೇಮಕಾತಿಯಲ್ಲಿ  ಬಾಕಿ ಇರುವ ನೈಜ ಹುದ್ದೆಗಳನ್ನು ಮರೆಮಾಚುತ್ತಿರುವುದು ಮುನ್ನೆಲೆಗೆ ಬಂದಿದೆ.

 

ವಿಕಾಸಸೌಧದ 3ನೇ ಮಹಡಿಯಲ್ಲಿ ಮೇ 7ರ ಇಂದು ನಡೆಯಲಿರುವ ಸಚಿವ ಸಂಪುಟ ಉಪ ಸಮಿತಿಯ ಕಾರ್ಯಸೂಚಿ ಮತ್ತು ವಿಷಯ ಟಿಪ್ಪಣಿಯ ವಿವರಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಸಚಿವ ಸಂಪುಟ ಉಪ ಸಮಿತಿಗೆ ಮಂಡಿಸಿರುವ ಟಿಪ್ಪಣಿ ಪ್ರತಿ

 

371(ಜೆ) ಅಡಿಯಲ್ಲಿ ಸ್ಥಳೀಯ ವೃಂದದಲ್ಲಿ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನೇರ ನೇಮಕಾತಿಗೆ ಬಾಕಿ ಇರುವ ಹುದ್ದೆಗಳ ಮಾಹಿತಿಯನ್ನು ಸಂಪುಟ ಉಪ ಸಮಿತಿಯು ವಿವಿಧ ಇಲಾಖೆಗಳಿಂದ ಪಡೆದಿದೆ. ಇದರ ಪ್ರಕಾರ ಗ್ರೂಪ್‌ ಎ ನಲ್ಲಿ 55, ಗ್ರೂಪ್‌ ಬಿ ಯಲ್ಲಿ 541, ಗ್ರೂಪ್‌ ಸಿ ಯಲ್ಲಿ 2,682 ಸೇರಿ ಒಟ್ಟಾರೆ 3,447 ಹುದ್ದೆಗಳು ನೇರ ನೇಮಕಾತಿ ಪ್ರಕ್ರಿಯೆಗೆ ಬಾಕಿ ಇದೆ. ಆದರೆ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ವಿವಿಧ ಹಂತಗಳಲ್ಲಿ 1,386 ಹುದ್ದೆಗಳು ನೇರ ನೇಮಕಾತಿಗೆ ಬಾಕಿ ಇವೆ.

 

‘ವಿವಿಧ ಇಲಾಖೆಗಳು ನೀಡಿರುವ ಮಾಹಿತಿಯಂತೆ ಒಟ್ಟು 3,447 ಹುದ್ದೆಗಳು ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನೇರ ನೇಮಕಾತಿಗೆ ಬಾಕಿ ಇರುತ್ತದೆ. ವಿವಿದ ಇಲಾಖೆಗಳು ನೀಡಿರುವ ಮಾಹಿತಿಗೂ ಕರ್ನಾಟಕ ಲೋಕಸೇವಾ ಆಯೋಗದ ಮಾಹಿತಿಗೂ 2,161 ಹುದ್ದೆಗಳ ವ್ಯತ್ಯಾಸ ಕಂಡು ಬಂದಿರುತ್ತದೆ,’ ಎಂದು ಟಿಪ್ಪಣಿಯಲ್ಲಿ ವಿವರಿಸಲಾಗಿದೆ.

 

371 (ಜೆ) ಅಡಿಯಲ್ಲಿ ಸ್ಥಳೀಯ ವೃಂದದಲ್ಲಿ ನೇರ ನೇಮಕಾತಿ ಅಡಿಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಗ್ರೂಪ್‌ ಎ , ಬಿ ಮತ್ತು ಸಿ ಯಲ್ಲಿ ಒಟ್ಟು 408 ಹುದ್ದೆಗಳು ಬಾಕಿ ಇದ್ದರೆ ಕೆಪಿಎಸ್‌ಸಿಯು ಈ ಇಲಾಖೆಗೆ ಸಂಬಂಧಿಸಿದಂತೆ ನೇರ ನೇಮಕಾತಿಗೆ ಯಾವ ಹುದ್ದೆಗಳೂ ಇಲ್ಲ ಎಂದು ಮಾಹಿತಿ ಒದಗಿಸಿದೆ.

 

ಅದೇ ರೀತಿ ಉನ್ನತ ಶಿಕ್ಷಣ ಇಲಾಖೆಯಲ್ಲಿ 182, ನಗರಾಭಿವೃದ್ಧಿ ಇಲಾಖೆಯಲ್ಲಿ 384, ಪ್ರಾಥಮಿಕ ಪ್ರೌಢಶಿಕ್ಷಣದಲ್ಲಿ 176, ಜಲಸಂಪನ್ಮೂಲ ಇಲಾಖೆಯಲ್ಲಿ 169, ಸಮಾಜ ಕಲ್ಯಾಣ ಇಲಾಖೆಯಲ್ಲಿ 189, ಕಾನೂನು ಇಲಾಖೆಯಲ್ಲಿ 121, ಒಳಾಡಳಿತ ಇಲಾಖೆಯಲ್ಲಿ 70 ಹುದ್ದೆಗಳು ನೇರ ನೇಮಕಾತಿಗೆ ಬಾಕಿ ಇದ್ದರೆ ಕರ್ನಾಟಕ ಲೋಕಸೇವಾ ಆಯೋಗವು ನೀಡಿರುವ ಮಾಹಿತಿ ಪ್ರಕಾರ ಈ ಇಲಾಖೆಗಳಲ್ಲಿ ಒಂದೇ ಒಂದು ಹುದ್ದೆಯು ಖಾಲಿ ಇಲ್ಲ ಎಂದು ಮಾಹಿತಿ ಒದಗಿಸಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

ಕೇವಲ ಆರೇ ಆರು ಇಲಾಖೆಗಳಲ್ಲಿ ನೇರ ನೇಮಕಾತಿಗೆ ಬಾಕಿ ಇರುವ ಹುದ್ದೆಗಳಿಗೆ ಸಂಬಂಧಿಸಿದಂತೆ ಕೆಪಿಎಸ್ಸಿ ನೀಡಿರುವ ಮಾಹಿತಿಯಂತೆ ಒಟ್ಟು 1,871 ಹುದ್ದೆಗಳ ವ್ಯತ್ಯಾಸವಿರುವುದು ಕಂಡು ಬಂದಿದೆ.

 

ಇನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 439 ಹುದ್ದೆಗಳು ಖಾಲಿ ಇವೆ ಎಂದು ಇಲಾಖೆಗಳು ಮಾಹಿತಿ ನೀಡಿದ್ದರೆ ಕೆಪಿಎಸ್‌ಸಿ ಲೆಕ್ಕದ ಪ್ರಕಾರ ಕೇವಲ 149 ಹುದ್ದೆಗಳಷ್ಟೇ ಬಾಕಿ ಇವೆ. ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್‌ ಇಲಾಖೆಗೆ ಸಂಬಂಧಿಸಿದಂತೆ 106 ಹುದ್ದೆಗಳು ಖಾಲಿ ಇದ್ದರೆ ಕೆಪಿಎಸ್‌ಸಿ ಪ್ರಕಾರ 25, ಸಹಕಾರ ಇಲಾಖೆಯಲ್ಲಿ 92 ಹುದ್ದೆಗಳು ಖಾಲಿ ಇದ್ದರೆ ಕೆಪಿಎಸ್ಸಿ ಪ್ರಕಾರ 5 ಹುದ್ದೆಗಳಷ್ಟೇ ಖಾಲಿ ಇವೆ. 11 ಇಲಾಖೆಗಳಲ್ಲಿ ಒಟ್ಟಾರೆ 2,508 ಹುದ್ದೆಗಳು ನೇರ ನೇಮಕಾತಿಗೆ ಬಾಕಿ ಇದ್ದರೆ ಕೆಪಿಎಸ್ಸಿ ಪ್ರಕಾರ ಕೇವಲ 179 ಹುದ್ದೆಗಳಷ್ಟೇ ಬಾಕಿ ಇವೆ ಎಂದು ಮಾಹಿತಿ ಒದಗಿಸಿದೆ.

 

ಅದೇ ರೀತಿ ಸಾರಿಗೆ, ವಾಣಿಜ್ಯ ಕೈಗಾರಿಕೆ, ಸಿಬ್ಬಂದಿ ಆಡಳಿತ ಸುಧಾರಣೆ, ಅಲ್ಪಸಂಖ್ಯಾತರ ಅಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆಹಾರ ನಾಗರಿಕ ಸರಬರಾಜು, ಕಂದಾಯ, ಇಂಧನ, ಮೂಲಸೌಲಭ್ಯ ಅಭಿವೃದ್ಧಿ, ರೇಷ್ಮೆ ಇಲಾಖೆಯಲ್ಲಿ ಒಟ್ಟು 248 ಹುದ್ದೆಗಳು ಖಾಲಿ ಇದ್ದರೂ ಕೆಪಿಎಸ್ಸಿಯು ಈ ಯಾವ ಇಲಾಖೆಗಳಲ್ಲೂ ಒಂದೇ ಒಂದು ಹುದ್ದೆಗಳು ನೇರ ನೇಮಕಾತಿಗೆ ಬಾಕಿ ಇಲ್ಲವೆಂದು ಮಾಹಿತಿ ಒದಗಿಸಿದೆ.

 

ಇದಲ್ಲದೆ ಆರ್ಥಿಕ, ಪಶುಸಂಗೋಪನೆ, ಕಾರ್ಮಿಕ, ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಜೀವನೋಪಾಯ, ಅರಣ್ಯ ಪರಿಸರ, ಪ್ರವಾಸೋದ್ಯಮ, ಸಿಬ್ಬಂದಿ ಅಡಳಿತ ಸುಧಾರಣೆ( ಆಡಳಿತ), ಯುವ ಸಬಲೀಕರಣ ಕ್ರೀಡಾ, ಯೋಜನಾ, ಹಿಂದುಳಿದ ವರ್ಗಗಳ ಕಲ್ಯಾಣ, ವಸತಿ, ಕನ್ನಡ ಸಂಸ್ಕೃತಿ, ಕೃಷಿ ಇಲಾಖೆಯೂ ಸೇರಿದಂತೆ ಒಟ್ಟಾರೆ 24 ಇಲಾಖೆಗಳ ಪಟ್ಟಿಯಲ್ಲಿ 946 ಹುದ್ದೆಗಳು ಖಾಲಿ ಇದ್ದರೆ ಕೆಪಿಎಸ್ಸಿಯು 646 ಹುದ್ದೆಗಳಷ್ಟೇ ಖಾಲಿ ಇದೆ ಎಂದು ತಿಳಿಸಿದೆ. ಈ ಇಲಾಖೆಗಳು ನೀಡಿರುವ ಮಾಹಿತಿಗೂ ಮತ್ತು ಕರ್ನಾಟಕ ಲೋಕಸೇವಾ ಆಯೋಗವು ನೀಡಿರುವ ಮಾಹಿತಿ ಮಧ್ಯೆ 300 ಹುದ್ದೆಗಳ ವ್ಯತ್ಯಾಸವಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

ಹಾಗೆಯೇ 44 ಆಡಳಿತ ಇಲಾಖೆಗಳಲ್ಲಿ ಮುಂಬಡ್ತಿಯಿಂದ ತುಂಬಬೇಕಿರುವ 32,278 ಹುದ್ದೆಗಳಲ್ಲಿ 22,578 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಹೀಗಾಗಿ ಇನ್ನೂ ಮುಂಬಡ್ತಿ ನೀಡಲು 9,731 ಹುದ್ದೆಗಳು ಬಾಕಿ ಇವೆ. ಜತೆಗೆ 371 ಜೆ ಅಡಿ 1,431 ಮಂದಿ ಮುಂಬಡ್ತಿಗೆ ಅನರ್ಹರಾಗಿದ್ದಾರೆ. ಪ್ರಾಥಮಿಕ ಪ್ರೌಢಶಿಕ್ಷಣ ಇಲಾಖೆಯಲ್ಲಿ ಗ್ರೂಪ್‌ ಎ , ಬಿ ಮತ್ತು ಸಿ ಅಡಿಯಲ್ಲಿ ಇನ್ನೂ 2,085, ಇಂಧನ ಇಲಾಖೆಯಲ್ಲಿ 1,419, ನಗರಾಭಿವೃದ್ಧಿಯಲ್ಲಿ 956, ವಾಣಿಜ್ಯ ಕೈಗಾರಿಕೆ ಇಲಾಖೆಯಲ್ಲಿ 653 ಹುದ್ದೆಗಳು ಮುಂಬಡ್ತಿಗೆ ಬಾಕಿ ಇವೆ.

 

ಅಲ್ಲದೆ 44 ಆಡಳಿತ ಇಲಾಖೆಗಳಲ್ಲಿ ನೇರ ನೇಮಕಾತಿ ಅಡಿಯಲ್ಲಿ 83, 651 ಹುದ್ದೆಗಳನ್ನು ಗುರುತಿಸಲಾಗಿದ್ದರೆ ಈ ಪೈಕಿ 57, 928 ಹುದ್ದೆಗಳು ಭರ್ತಿಯಾಗಿವೆ. ಇನ್ನೂ 25, 723 ಹುದ್ದೆಗಳು ಭರ್ತಿಗೆ ಬಾಕಿ ಇವೆ. ಚಾಲ್ತಿ ನೇರ ನೇಮಕಾತಿ ಪ್ರಕ್ರಿಯೆಯಡಿಯಲ್ಲಿ ಕೆಪಿಎಸ್‌ಸಿ ಪ್ರಕಾರ 3,454 ಹುದ್ದೆಗಳು ಬಾಕಿ ಇವೆ. ಕೆಇಎ ಮತ್ತು ಇತರೆ ನೇಮಕಾತಿ ಸಂಸ್ಥೆಗಳಲ್ಲಿ 9.010 ಹುದ್ದೆಗಳು ಬಾಕಿ ಇವೆ ಎಂಬುದು ಯೋಜನೆ ಸಾಂಖ್ಯಿಕ ಇಲಾಖೆಯು ನೀಡಿರುವ ಮಾಹಿತಿಯಿಂದ ತಿಳಿದು ಬಂದಿದೆ.

Tags: 371 ಜೆB S YediyurappaBasavanagouda Patil YatnalBasavraj BommaiCabinet Sub CommittieeGroup A Gazzeted Probhationersh d kumarswamyHyderabad KarnatakaHyderabad Karnataka RegionKarnataka Public Service CommissionKpscPriyank KhargerecruitmentSiddaramaiahVacant Postsಅಂಕಿ ಅಂಶಗಳ ಮರೆಮಾಚಿದ ಕೆಪಿಎಸ್ಸಿಅನುಷ್ಠಾನಇಲಾಖೆಗಳುಎಚ್‌ ಡಿ ಕುಮಾರಸ್ವಾಮಿಕರ್ನಾಟಕ ಲೋಕಸೇವಾ ಆಯೋಗಗ್ರೂಪ್‌ ಎ ಹುದ್ದೆಗಳುಗ್ರೂಪ್‌ ಬಿಗ್ರೂಪ್‌ ಸಿ ಹುದ್ದೆಗಳುಡಿ ಕೆ ಶಿವಕುಮಾರ್ತಾರತಮ್ಯನೇಮಕಾತಿಯಲ್ಲಿ ತಾರತಮ್ಯನೇರ ನೇಮಕಾತಿಪರೀಕ್ಷೆಗಳುಪ್ರಿಯಾಂಕ್‌ ಖರ್ಗೆಬಸವನಗೌಡ ಪಾಟೀಲ್‌ ಯತ್ನಾಳ್‌ಬಸವರಾಜ ಬೊಮ್ಮಾಯಿಬಸವರಾಜ ರಾಯರೆಡ್ಡಿಬಿ ಎಸ್‌ ಯಡಿಯೂರಪ್ಪಭಾರತ ಸಂವಿಧಾನಸಚಿವ ಸಂಪುಟ ಉಪ ಸಮಿತಿಸಿದ್ದರಾಮಯ್ಯಸ್ಥಳೀಯ ವೃಂದಹುದ್ದೆಗಳ ವ್ಯತ್ಯಾಸಹೈದರಾಬಾದ್‌ ಕರ್ನಾಟಕ
Advertisement Banner
Previous Post

ಕಾನೂನು, ಆರ್ಥಿಕ ಇಲಾಖೆ ವಿರೋಧದ ನಡುವೆಯೂ ರಾಷ್ಟ್ರೋತ್ಥಾನ ಪರಿಷತ್‌ಗೆ ಗೋಮಾಳ ಮಂಜೂರು

Next Post

ರಾಷ್ಟ್ರೋತ್ಥಾನ ಪರಿಷತ್‌ ಖಾಸಗಿ ಸಂಸ್ಥೆಯೇ ಹೊರತು, ನೋಂದಾಯಿತ ಸಂಸ್ಥೆಯಲ್ಲವೆಂದ ಕಾನೂನು ಇಲಾಖೆ

thefilestack

thefilestack

Next Post

ರಾಷ್ಟ್ರೋತ್ಥಾನ ಪರಿಷತ್‌ ಖಾಸಗಿ ಸಂಸ್ಥೆಯೇ ಹೊರತು, ನೋಂದಾಯಿತ ಸಂಸ್ಥೆಯಲ್ಲವೆಂದ ಕಾನೂನು ಇಲಾಖೆ

Recommended

ಮಹಿಳೆ, ಮಕ್ಕಳ ಅನೈತಿಕ ಸಾಗಾಣಿಕೆ; ವಿಮಾನ ನಿಲ್ದಾಣ ಪೊಲೀಸರಿಗೆ ಅರಿವೇ ಇಲ್ಲ!

6 years ago

ಅಕ್ರಮ ಆಸ್ತಿ ಗಳಿಕೆ; ಹೈಕೋರ್ಟ್‌ ವಿಸ್ತೃತ ಪೀಠದ ವಿಚಾರಣೆ ನಡುವೆಯೇ ಡಿಕೆಶಿ ವಿರುದ್ಧ ಎಫ್‌ಐಆರ್‍‌

2 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd