the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

36.25 ಲಕ್ಷ ಅನುದಾನ ದುರ್ಬಳಕೆ ಆರೋಪ; ಮಾಜಿ ಎಂಎಲ್ಸಿ ಶ್ರೀಕಾಂತ್‌ ಘೋಟ್ನೇಕರ್‌ ವಿಚಾರಣೆಗೆ ಅನುಮತಿ

thefilestack by thefilestack
April 7, 2022
in GOVERNANCE
0
0
SHARES
0
VIEWS
Share on FacebookShare on Twitter

ಬೆಂಗಳೂರು: ಹಣ ದುರ್ಬಳಕೆ ಆರೋಪಕ್ಕೆ ಗುರಿಯಾಗಿರುವ ವಿಧಾನಪರಿಷತ್‌ನ ಮಾಜಿ ಸದಸ್ಯ ಶ್ರೀಕಾಂತ್‌ ಎಲ್‌ ಘೋಟ್ನೇಕರ್‌ ಅವರ ವಿರುದ್ಧ ವಿಚಾರಣೆ ನಡೆಸಲು ರಾಜ್ಯಪಾಲರ ಥಾವರ್‌ಚಂದ್‌ ಗೆಹ್ಲೋಟ್‌ ಅವರು ಅನುಮತಿ ನೀಡಿದ್ದಾರೆ.

 

ಸಮುದಾಯ ಭವನಕ್ಕಾಗಿ ರಾಜ್ಯಸರ್ಕಾರದಿಂದ ಮಂಜೂರಾಗಿದ್ದ ಅನುದಾನದ ಪೈಕಿ 36.25 ಲಕ್ಷ ರು. ದುರ್ಬಳಕೆ ಮಾಡಿಕೊಂಡಿದ್ದರ ಬಗ್ಗೆ ಲೋಕಾಯುಕ್ತ ತನಿಖೆಯು ಸಾಬೀತುಗೊಳಿಸಿತ್ತು. ಇದನ್ನಾಧರಿಸಿ ಕ್ರಮಕ್ಕೆ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಲಾಗಿತ್ತು. ಇದೀಗ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿದ್ದಾರೆ. ಈ ಸಂಬಂಧ 2022ರ ಮಾರ್ಚ್‌ 29ರಂದು ಲೋಕಾಯುಕ್ತ ರಿಜಿಸ್ಟ್ರಾರ್‌ ಉಷಾರಾಣಿ ಅವರಿಗೆ ಗೌಪ್ಯ ಪತ್ರ ಬರೆದಿದ್ದಾರೆ. ಇದರ ಪ್ರತಿ ಮತ್ತು ಲೋಕಾಯುಕ್ತ ತನಿಖಾ ವರದಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ರಾಜ್ಯಪಾಲರು ಅನುಮತಿ ನೀಡಿರುವ ಪತ್ರ

 

ಶ್ರೀಕಾಂತ್‌ ಎಲ್ ಘೋಟ್ನೇಕರ್‌ ಅವರು ಇತ್ತೀಚೆಗಷ್ಟೇ ವಿಧಾನಪರಿಷತ್‌ ಸದಸ್ಯ ಸ್ಥಾನದಿಂದ ನಿವೃತ್ತರಾಗಿದ್ದಾರೆ.

 

ಸಮುದಾಯ ಭವನಕ್ಕಾಗಿ ರಾಜ್ಯ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಿಕೊಂಡು ಆ ನಂತರ ಹಳಿಯಾಳದಲ್ಲಿ ತಮ್ಮದೇ ಹೆಸರಿನಲ್ಲಿರುವ ಎಸ್‌ ಎಲ್‌ ಘೋಟ್ನೇಕರ್‌ ಆಂಗ್ಲ ಮಾಧ್ಯಮ ಶಾಲೆ ನಿರ್ಮಾಣಕ್ಕೆ ಬಳಸಿಕೊಂಡಿದ್ದರು ಎಂಬ ಆರೋಪ ಕುರಿತು ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‌ನ ನಾಗೇಂದ್ರ ಜಿವೋಜಿ ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.

 

ಈ ದೂರನ್ನಾಧರಿಸಿ ತನಿಖೆ ನಡೆಸಿದ್ದ ಲೋಕಾಯುಕ್ತ ಸಂಸ್ಥೆಯು ದೂರಿನಲ್ಲಿದ್ದ ಅಂಶಗಳನ್ನು ಸಾಬೀತುಗೊಳಿಸಿತ್ತು. ಈ ಸಂಬಂಧ ಲೋಕಾಯುಕ್ತಕ್ಕೆ 2021ರ ಡಿಸೆಂಬರ್‌ 6ರಂದು ವರದಿಯನ್ನು ರಾಜ್ಯಪಾಲರಿಗೆ ಸಲ್ಲಿಸಿತ್ತು. ವರದಿ ಸಲ್ಲಿಸಿದಾಗ ಶ್ರೀಕಾಂತ್‌ ಎಲ್ ಘೋಟ್ನೇಕರ್‌ ಅವರು ವಿಧಾನಪರಿಷತ್‌ ಸದಸ್ಯರಾಗಿದ್ದರು ಎಂಬುದು ತಿಳಿದು ಬಂದಿದೆ.

 

ಈ ಕುರಿತು ಲೋಕಾಯುಕ್ತ ಸಂಸ್ಥೆಯ ಎಸ್‌ಪಿ 2021ರ ಜೂನ್‌ 14ರಂದು ತನಿಖಾ ವರದಿ ಸಲ್ಲಿಸಿದ್ದರು. ಜತೆಗೆ ಲೋಕಾಯುಕ್ತ ಸಂಸ್ಥೆಯ ತಾಂತ್ರಿಕ ಕೋಶವೂ ವರದಿ ನೀಡಿತ್ತು. ಇದನ್ನಾಧರಿಸಿ ಹಣ ದುರ್ಬಳಕೆ ಆರೋಪದಡಿ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13(1)ಎ ನೊಂದಿಗೆ ಐಪಿಸಿ ಸೆಕ್ಷನ್ 120 ಬಿ, 403, 406 ಅನ್ವಯ ಘೋಟ್ನೆಕರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು, ಶೇ. 10 ರಷ್ಟು ಬಡ್ಡಿಯೊಂದಿಗೆ 5 ಲಕ್ಷ ರೂ. ವಸೂಲಿ ಮಾಡಬೇಕೆಂದು ಹಿಂದಿನ ಲೋಕಾಯುಕ್ತ ವಿಶ್ವನಾಥ್‌ ಶೆಟ್ಟಿ ಅವರು ಶಿಫಾರಸು ಮಾಡಿದ್ದರು.

 

ಆದರೆ ಶ್ರೀಕಾಂತ್‌ ಎಲ್‌ ಘೋಟ್ನೇಕರ್‌ ಅವರು ತಮ್ಮ ವಿರುದ್ಧದ ಆರೋಪಗಳನ್ನು ಅಲ್ಲಗಳೆದಿದ್ದರು. ಈ ಸಂಬಂಧ 2021ರ ಅಕ್ಟೋಬರ್‌ 29ರಂದು ಹೇಳಿಕೆಯನ್ನೂ ನೀಡಿದ್ದರಲ್ಲದೆ ದೂರನ್ನು ವಜಾಗೊಳಿಸಬೇಕು ಎಂದು ಕೋರಿದ್ದರು.

 

ಪ್ರಸ್ತುತ ಶಾಲೆ ನಡೆಸುತ್ತಿರುವ ಹಳಿಯಾಳದ ಶ್ರೀ ಛತ್ರಪತಿ ಶಿವಾಜಿ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ರಾಯಣ್ಣ ಸೋಮನಿಂಗ ಅವರಿಂದಲೂ ವಾರ್ಷಿಕ ಶೇ. 10 ರಷ್ಟು ಬಡ್ಡಿಯೊಂದಿಗೆ ರೂ. 36.25 ಲಕ್ಷ ಹಣ ವಸೂಲಿ ಮಾಡಬೇಕೆಂದು ಲೋಕಾಯುಕ್ತರು ಶಿಫಾರಸು ಮಾಡಿದ್ದರು.

 

ಹಳಿಯಾಳದಲ್ಲಿ ಕ್ಷತ್ರಿಯ ಮರಾಠ ಸಮುದಾಯದ ಸಮುದಾಯ ಭವನ ನಿರ್ಮಾಣಕ್ಕೆ ಹಣವನ್ನು ಬಿಡುಗಡೆ ಮಾಡಿಸಿಕೊಂಡಿದ್ದ ಘೋಟ್ನೆಕರ್ ಅವರು ಅದನ್ನು ತಮ್ಮ ಹೆಸರಿನಲ್ಲಿರುವ ಶಾಲೆಯ ಕಟ್ಟಡದ ಮೊದಲ ಮಹಡಿ ನಿರ್ಮಾಣಕ್ಕೆ ಬಳಸಿಕೊಂಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

 

 

ಶ್ರೀ ಛತ್ರಪತಿ ಶಿವಾಜಿ ಎಜುಕೇಶನ್ ಟ್ರಸ್ಟ್ ಸೇರಿದಂತೆ ಸಂಸ್ಥೆಗೆ ಹಾಗೂ ಘೋಟ್ನೇಕರ ಮತ್ತು ರಾಯಣ್ಣ ಸಂಬಂಧಿತ ಸಂಸ್ಥೆಗಳಿಗೆ ಐದು ವರ್ಷಗಳ ಅವಧಿಗೆ ಯಾವುದೇ ಉದ್ದೇಶಕ್ಕೆ ಅನುದಾನ ಬಿಡುಗಡೆ ಮಾಡದಂತೆ ಲೋಕಾಯುಕ್ತ ಸಂಸ್ಥೆಯು ಸರ್ಕಾರಕ್ಕೆ ಶಿಫಾರಸು ಮಾಡಿದೆ.

 

ಪ್ರಸ್ತುತ ಬೀದರ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಆಗಿನ ಕಾರವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿ ಜಿಲ್ಲಾಧಿಕಾರಿ, ಬಸವರಾಜ ಮಹಾದೇವ ಬಡಿಗೇರ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಲೋಕಾಯುಕ್ತ ಸೂಚಿಸಿದೆ.

Tags: Backward Class DepartmentBasavaraj HorattibjpcongressD K ShivakumarGovernorh d kumarswamyInivestigationjdsKarnataka Kshtriya Maratha ParishadLegislative CouncillokayuktaMisuse of FundsMisuse of PowerMLCN RavikumarP Vishwanath ShettyProceutationSiddaramaiahSrikanth GhotnekarThavarChand GeholetUttara Kannadaಅಧಿಕಾರ ದುರುಪಯೋಗಅನುದಾನ ದುರ್ಬಳಕೆಉತ್ತರ ಕನ್ನಡಎಚ್‌ ಡಿ ಕುಮಾರಸ್ವಾಮಿಕರ್ನಾಟಕ ಕ್ಷತ್ರಿಯ ಮರಾಠ ಪರಿಷದ್‌ಕಾಂಗ್ರೆಸ್‌ಜೆಡಿಎಸ್‌ಡಿ ಕೆ ಶಿವಕುಮಾರ್ತನಿಖೆಥಾವರ್‌ಚಂದ್‌ ಗೆಹ್ಲೋಟ್‌ಪಿ ವಿಶ್ವನಾಥ ಶೆಟ್ಟಿಬಸವರಾಜ ಹೊರಟ್ಟಿಬಿಜೆಪಿರಾಜಭವನರಾಜ್ಯಪಾಲರುಲೋಕಾಯುಕ್ತವಿಧಾನಪರಿಷತ್‌ ಸದಸ್ಯಶ್ರೀಕಾಂತ್‌ ಘೋಟ್ನೇಕರ್‌ಸಿದ್ದರಾಮಯ್ಯಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
Advertisement Banner
Previous Post

ಅಧಿಕಾರ ದುರುಪಯೋಗ, ಭ್ರಷ್ಟಾಚಾರದ ಆರೋಪ; ಐಪಿಎಸ್‌ ಶಿವಕುಮಾರ್‌ ವಿರುದ್ಧ ಕ್ರಮಕ್ಕೆ ಪತ್ರ

Next Post

ಅಸ್ಸಾಂ ಮಾದರಿ ಒಪ್ಪದ ಸರ್ಕಾರ; ಎನ್ಎಚ್‌ಎಂ ಗುತ್ತಿಗೆ ನೌಕರರಿಗೆ ಶಿಶುಪಾಲನಾ ರಜೆ ನೀಡಲು ನಿರಾಕರಣೆ

thefilestack

thefilestack

Next Post

ಅಸ್ಸಾಂ ಮಾದರಿ ಒಪ್ಪದ ಸರ್ಕಾರ; ಎನ್ಎಚ್‌ಎಂ ಗುತ್ತಿಗೆ ನೌಕರರಿಗೆ ಶಿಶುಪಾಲನಾ ರಜೆ ನೀಡಲು ನಿರಾಕರಣೆ

Recommended

ಪಿಐಎಲ್‌ ವಿಚಾರಣೆ ; ಪೊಲೀಸ್‌ ಪೇದೆಗಳು ಮುಚ್ಚಿಟ್ಟಿದ್ದ ಸತ್ಯ ಬಹಿರಂಗಗೊಳ್ಳುವುದೇ?

6 years ago

ಗುತ್ತಿಗೆದಾರರಿಂದ ‘ಲಂಪ್‌ಸಮ್‌’ ವಸೂಲಿಗೆ ಸೂಚನೆ; ಸಿಎಂ ವಿರುದ್ಧ ಮತ್ತೊಂದು ಗುರುತರ ಆರೋಪ

4 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd