the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

ಅನಿಶ್ಚಿತ ಅವಧಿ ಬಂಧನ; 38 ಪ್ರಜೆಗಳ ಬಿಡುಗಡೆಗೆ ಸಿಎಂ ಮೊರೆ ಹೊಕ್ಕ ಶ್ರೀಲಂಕಾ ಡೆಪ್ಯುಟಿ ಹೈ ಕಮಿಷನ್‌

thefilestack by thefilestack
July 2, 2022
in GOVERNANCE
0
0
SHARES
0
VIEWS
Share on FacebookShare on Twitter

ಬೆಂಗಳೂರು; ಮಾನವ ಕಳ್ಳಸಾಗಣೆ, ಮೋಸ, ಪಾಸ್‌ಪೋರ್ಟ್ ಕಾಯ್ದೆ 1967, ವಿದೇಶಿಯರ ಕಾಯ್ದೆ 1945ಯಡಿ ಕಳೆದ ಒಂದು ವರ್ಷದಿಂದಲೂ ಬಂಧನದಲ್ಲಿರುವ ಶ್ರೀಲಂಕಾದ 38 ಜನರನ್ನು ಬಿಡುಗಡೆಗೊಳಿಸುವ ಸಂಬಂಧ ದಕ್ಷಿಣ ಭಾರತದ ಶ್ರೀಲಂಕಾ ಡೆಪ್ಯುಟಿ ಹೈ ಕಮಿಷನರ್‌ ಮಧ್ಯ ಪ್ರವೇಶಿಸಿದ್ದಾರೆ.

 

ತಮಿಳುನಾಡಿನಿಂದ ಮಂಗಳೂರು ನಗರಕ್ಕೆ ಬಂದು ಆಕ್ರಮವಾಗಿ ನೆಲೆಸಿದ್ದರು ಎಂಬ ಆರೋಪದ ಮೇರೆಗೆ ಕಳೆದ ಒಂದು ವರ್ಷದ (ಜೂನ್‌ 11, 2021) ಬಂಧಿಸಿರುವ ಮಂಗಳೂರು ನಗರ ಪೊಲೀಸರು ತನಿಖೆ ಕೈಗೊಂಡಿರುವ ಬೆನ್ನಲ್ಲೇ ಶ್ರೀಲಂಕಾ ಡೆಪ್ಯುಟಿ ಹೈ ಕಮಿಷನರ್‌ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ 2022ರ ಜೂನ್‌ 13ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಶ್ರೀಲಂಕಾದ ಡೆಪ್ಯುಟಿ ಹೈಕಮಿಷನ್‌ ಬರೆದಿರುವ ಪತ್ರದ ಪ್ರತಿ

 

‘ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದ ಕಾರಣ 38 ಶ್ರೀಲಂಕಾ ಪ್ರಜೆಗಳನ್ನು 2021ರ ಜೂನ್‌ 11ರಂದು ಬಂಧಿಸಲಾಗಿತ್ತು. ಆದರೀಗ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಉದ್ಭವಿಸಿದೆ. ಬಂಧನಕ್ಕೊಳಗಾಗಿರುವ ಕುಟುಂಬಗಳು ಅತಂತ್ರವಾಗಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸುವ ಮೂಲಕ ಅವರನ್ನು ಬಿಡುಗಡೆಗೊಳಿಸಲು ಕ್ರಮವಹಿಸಬೇಕು. ಮತ್ತು ಅವರನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ಶ್ರೀಲಂಕಾಕ್ಕೆ ಕಳಿಸಲು ವ್ಯವಸ್ಥೆ ಮಾಡಬೇಕು,’ ಎಂದು ಶ್ರೀಲಂಕಾ ಡೆಪ್ಯುಟಿ ಹೈ ಕಮಿಷನರ್‌ ಡಾ ಡಿ ವೆಂಕಟೇಶ್ವರನ್‌ ಅವರು ಪತ್ರದಲ್ಲಿ ಕೋರಿದ್ದಾರೆ.

 

ಕಳೆದ ಒಂದು ವರ್ಷದ ಹಿಂದೆಯೇ ಬಂಧನಕ್ಕೊಳಗಾಗಿರುವ ಶ್ರೀಲಂಕಾ ಪ್ರಜೆಗಳನ್ನು ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿರಿಸಲಾಗಿದೆ. ಈ ಕುರಿತು ಎನ್‌ಐಎ ವಿಶೇಷ ನ್ಯಾಯಾಲಯವು 2021ರ ಅಕ್ಟೋಬರ್‌ 30ರಂದು ನೀಡಿರುವ ಆದೇಶದ ಪ್ರಕಾರ ಬಂಧನಕ್ಕೊಳಗಾದವರನ್ನು ನೆಲಮಂಗಲದಲ್ಲಿರುವ ವಿದೇಶಿಯರ ಬಂಧನ ಕೇಂದ್ರದಲ್ಲಿರಿಸಲು ತನಿಖಾಧಿಕಾರಿಯು ನಿರ್ಧರಿಸಬೇಕು ಎಂದು ಆದೇಶವೊಂದರಲ್ಲಿ ಹೇಳಿದೆ. ಆದರೆ ಅವರನ್ನು ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ ಎಂದು ಡಾ ಡಿ ವೆಂಕಟೇಶ್ವರನ್‌ ಅವರು ಮುಖ್ಯಮಂತ್ರಿಯ ಗಮನಕ್ಕೆ ತಂದಿರುವುದು ಪತ್ರದಿಂದ ಗೊತ್ತಾಗಿದೆ.

 

ಅದೇ ರೀತಿ ಜೈಲುಗಳಲ್ಲಿ ಮತ್ತು ವಿದೇಶಿಯರ ಬಂಧನ ಕೇಂದ್ರದಲ್ಲಿ ಅನಿಶ್ಚಿತ ಅವಧಿಯವರೆಗೆ  ಶ್ರೀಲಂಕಾ ಪ್ರಜೆಗಳನ್ನು ಬಂಧನದಲ್ಲಿರಿಸಿರುವುದಕ್ಕೆ ಯಾವುದೇ ಅರ್ಥವಿಲ್ಲ ಎಂದೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಸೆಳೆದಿರುವುದು ಪತ್ರದಿಂದ ತಿಳಿದು ಬಂದಿದೆ.

 

ಶ್ರೀಲಂಕಾದ 38 ಪ್ರಜೆಗಳು ಅಕ್ರಮವಾಗಿ ತಮಿಳುನಾಡಿಗೆ ಪ್ರವೇಶಿಸಿ ಮಂಗಳೂರು ತಲುಪಿದ್ದರು. ಕಳೆದ ಒಂದು ವರ್ಷದ ಹಿಂದೆ ಎರಡು ಲಾಡ್ಜ್‌ಗಳು ಮತ್ತು ಎರಡು ಮನೆಗಳಲ್ಲಿ ತಂಗಿದ್ದರು ಮತ್ತು ತಮ್ಮನ್ನು ದೈನಂದಿನ ಕೂಲಿ ಕಾರ್ಮಿಕರು, ತಮಿಳುನಾಡಿನ ಕಾರ್ಮಿಕರು ಮತ್ತು ಮೀನುಗಾರರೆಂದು ಹೇಳಿಕೊಂಡಿದ್ದರು. ಮಾರ್ಚ್ 17 ರಂದು ಶ್ರೀಲಂಕಾದ ಏಜೆಂಟರಿಗೆ 6 ರಿಂದ 10 ಲಕ್ಷ ಶ್ರೀಲಂಕಾ ನಗದನ್ನು ಪಾವತಿಸಿ ಶ್ರೀಲಂಕಾದಿಂದ ಹೊರಟಿದ್ದರು.

 

ಅವರಿಗೆ ಕೆನಡಾದಲ್ಲಿ ಉದ್ಯೋಗ ನೀಡುವ ಭರವಸೆ ನೀಡಲಾಗಿತ್ತು. ದೋಣಿ ಮೂಲಕ ತಮಿಳುನಾಡಿನ ತೂತುಕುಡಿ ತಲುಪಿದ ನಂತರ, ಹತ್ತಿರದ ಬಂದರನ್ನು ತಲುಪಿ ಖಾಸಗಿ ದೋಣಿಗಳು ಮತ್ತು ಸರಕು ಹಡಗುಗಳ ಮೂಲಕ ಕೆನಡಾಕ್ಕೆ ಪ್ರಯಾಣಿಸುವುದು ಅವರ ಯೋಜನೆಯಾಗಿತ್ತು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್‌ ಅವರು ಮಾಧ್ಯಮಗಳಿಗೆ ವಿವರಿಸಿದ್ದನ್ನು ಸ್ಮರಿಸಬಹುದು.

 

ಅಲ್ಲದೆ ತಮಿಳುನಾಡಿನಲ್ಲಿ ಚುನಾವಣೆ ಮತ್ತು ಪೊಲೀಸರ ಹೆಚ್ಚಿನ ತಪಾಸಣೆಯಿಂದಾಗಿ ಅವರನ್ನು ಸ್ವಲ್ಪ ಸಮಯದವರೆಗೆ ಮಂಗಳೂರಿಗೆ ತೆರಳಲು ಹೇಳಲಾಗಿತ್ತು. ತಮಿಳುನಾಡಿನಿಂದ ಅವರು ಖಾಸಗಿ ಬಸ್‌ಗಳಲ್ಲಿ ಬೆಂಗಳೂರಿಗೆ ಸಣ್ಣ ಗುಂಪುಗಳಲ್ಲಿ ಪ್ರಯಾಣಿಸಿದರು, ಅಲ್ಲಿ ಬೆಂಗಳೂರಿನಲ್ಲಿ  ಏಜೆಂಟರೂ ಇದ್ದರು. ಬೆಂಗಳೂರಿನಿಂದ ಅವರು ಮಂಗಳೂರು ತಲುಪಿದ್ದರು. ಇವರ ವಿರುದ್ಧ ಐಪಿಸಿ ಮಾನವ ಕಳ್ಳಸಾಗಣೆ, ಮೋಸ, ಪಾಸ್‌ಪೋರ್ಟ್ ಕಾಯ್ದೆ 1967, ವಿದೇಶಿಯರ ಕಾಯ್ದೆ 1945 ಮತ್ತು ವಿದೇಶಿಯರ ಆದೇಶ 1948 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

Tags: Aaraga JnanendraArrestedBasavaraj BommaiCentral PrisonChief SecretaryD K ShivakumarDemocarticDetainedDetention CentreDR D VenkateshwaranFamiliesForeigner's Detention Centreh d kumarswamyHigh CommissionIllegal MigrationManaglore Police CommissionerMangaloreMangalore PoliceNelamangalaRepublicSiddaramaiahSocialsitSole Bread-winnersSouthern IndiaSri LankaSri Lankan NationalsUncertain Periodvictimsಅನಿಶ್ಚಿತ ಅವಧಿಆರಗ ಜ್ಞಾನೇಂದ್ರಆರ್ಥಿಕ ಬಿಕ್ಕಟ್ಟುಎಚ್‌ ಡಿ ಕುಮಾರಸ್ವಾಮಿಎನ್‌ಐಎಎನ್‌ಐಎ ನ್ಯಾಯಾಲಯಕೇಂದ್ರ ಕಾರಾಗೃಹಡಾ ಡಿ ವೆಂಕಟೇಶ್ವರನ್‌ಡಿ ಕೆ ಶಿವಕುಮಾರ್ಡೆಪ್ಯುಟಿ ಹೈಕಮಿಷನ್‌ತನಿಖಾಧಿಕಾರಿತಮಿಳುನಾಡುತೂತುಕುಡಿನೆಲಮಂಗಲಬಸವರಾಜ ಬೊಮ್ಮಾಯಿಮಂಗಳೂರು ದಕ್ಷಿಣ ಪೊಲೀಸ್ ಠಾಣೆಮಾನವ ಕಳ್ಳ ಸಾಗಣೆವಿದೇಶಿಯರ ಕಾಯ್ದೆವಿದೇಶಿಯರ ಬಂಧನ ಕೇಂದ್ರಶ್ರೀಲಂಕಾ ನಾಗರೀಕರ ಬಂಧನಶ್ರೀಲಂಕಾ ಪ್ರಜೆಗಳುಸಿದ್ದರಾಮಯ್ಯ
Advertisement Banner
Previous Post

ಕೋಲ್ಡ್‌ ಸ್ಟೋರೇಜ್‌ ಕಾಮಗಾರಿ ಪ್ಯಾಕೇಜ್‌ ಟೆಂಡರ್‌ನಲ್ಲಿ ಅಕ್ರಮ; ನಿರ್ದಿಷ್ಟ ಗುತ್ತಿಗೆದಾರರಿಗೆ ಅನುಕೂಲ?

Next Post

ಪೌರ ಕಾರ್ಮಿಕರ ವಿಶೇಷ ನೇಮಕಾತಿಗೆ ನಿಗದಿಯಾಗದ ಮೀಸಲಾತಿ; 5,533ಕ್ಕೂ ಹೆಚ್ಚು ಹುದ್ದೆ ಖಾಲಿ

thefilestack

thefilestack

Next Post

ಪೌರ ಕಾರ್ಮಿಕರ ವಿಶೇಷ ನೇಮಕಾತಿಗೆ ನಿಗದಿಯಾಗದ ಮೀಸಲಾತಿ; 5,533ಕ್ಕೂ ಹೆಚ್ಚು ಹುದ್ದೆ ಖಾಲಿ

Recommended

ಅನ್ನಭಾಗ್ಯ ಹಣಪಾವತಿಯಲ್ಲಿ ವಿಳಂಬ; ಛತ್ತೀಸ್‌ಗಡ್‌ ಆಹಾರ ನಿಗಮಕ್ಕೆ 5.25 ಕೋಟಿ ಬಡ್ಡಿ ಪಾವತಿ

4 years ago

ಮತದಾರರಿಗೆ ಲಂಚ, ಆಮಿಷ ಆರೋಪ; ಡಾ ಕೆ ಸುಧಾಕರ್‍‌ ವಿರುದ್ಧ ಎಫ್‌ಐಆರ್‍‌, 4.8 ಕೋಟಿ ನಗದು ವಶ

2 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd