the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

ಬಹುಕೋಟಿ ಒಡೆಯ ಜಮೀರ್‌, ಇಫ್ತಿಯಾರ್‌ ಔತಣಕೂಟ ಸಂಚಾರ ನಿಯಂತ್ರಣ ಶುಲ್ಕದಿಂದ ವಿನಾಯಿತಿ ಕೋರಿಕೆ

thefilestack by thefilestack
July 11, 2022
in GOVERNANCE
0
0
SHARES
1
VIEWS
Share on FacebookShare on Twitter

ಬೆಂಗಳೂರು; ಚಾಮರಾಜಪೇಟೆ ಕಾಂಗ್ರೆಸ್‌ ಶಾಸಕ ಬಿ ಜೆಡ್‌ ಜಮೀರ್‌ ಅಹ್ಮದ್‌ ಖಾನ್‌ ಅವರು 2 ತಿಂಗಳ ಹಿಂದೆ ಬೆಂಗಳೂರು ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಇಫ್ತಿಯಾರ್‌ ಔತಣ ಕೂಟ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಗೆ ಪಾವತಿಸಬೇಕಿರುವ ಸಂಚಾರ ನಿಯಂತ್ರಣ ಶುಲ್ಕದಿಂದ ವಿನಾಯಿತಿ ಕೋರಿದ್ದಾರೆ. ಅದೇ ರೀತಿ ಪ್ರಮೋದಾದೇವಿ ಒಡೆಯರ್‌ ಜಾಗದಲ್ಲಿ ನಡೆದಿದ್ದ 5 ಕಾರ್ಯಕ್ರಮಗಳ ಶುಲ್ಕವೂ ಪಾವತಿಯಾಗಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ.

 

ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪಕ್ಕೆ ಗುರಿಯಾಗಿ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಒಳಗಾಗಿರುವ ಬಿ ಜೆಡ್‌ ಜಮೀರ್‌ ಅಹ್ಮದ್‌ ಖಾನ್‌ ಅವರು ಬಿಬಿಎಂಪಿಗೆ ಪಾವತಿಸಬೇಕಿರುವ ಕೇವಲ 15,000 ರು. ಸಂಚಾರ ನಿಯಂತ್ರಣ ಶುಲ್ಕದಿಂದ ವಿನಾಯಿತಿ ಕೋರಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಬೆಂಗಳೂರು ಅರಮನೆ ಮೈದಾನದ ನಲಪಾದ್‌ ಪೆವಿಲಿಯನ್‌ ಜಾಗದಲ್ಲಿ 2022ರ ಏಪ್ರಿಲ್ 15ರಂದು ನಡೆಸಿದ್ದ ಇಫ್ತಿಯಾರ್‌ ಕೂಟವು ಖಾಸಗಿ ಕಾರ್ಯಕ್ರಮವಾಗಿದ್ದರೂ ಸಂಚಾರ ನಿಯಂತ್ರಣ ಶುಲ್ಕ ಪಾವತಿಸುವುದರಿಂದ ವಿನಾಯಿತಿ ಕೋರಿರುವುದಕ್ಕೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ತಕರಾರು ಎತ್ತಿದೆ. ಈ ಸಂಬಂಧ ಬೆಂಗಳೂರು ಅರಮನೆ ಮೈದಾನದ ಶ್ರೇಯಂ ಗೇಟ್‌ ನಂ 5ರ ರುದ್ರಪ್ರತಾಪ್‌ ಸಿಂಗ್‌ ಅವರಿಗೆ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಅವರು 2022ರ ಜುಲೈ 6ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಬಿಬಿಎಂಪಿಗೆ ಪಾವತಿಸಬೇಕಾದ 15,000 ರು.ಗಳಿಂದ ವಿನಾಯಿತಿ ಕೋರಿರುವ ಮನವಿಯನ್ನು ಪರಿಶೀಲಿಸಲಾಗಿದೆ. ಪ್ರಸ್ತಾಪಿತ ಕಾರ್ಯಕ್ರಮವು ಸಂಪೂರ್ಣವಾಗಿ ಖಾಸಗಿ ಕಾರ್ಯಕ್ರಮವಾಗಿರುವುದರಿಂದ ಬಿಬಿಎಂಪಿಗೆ ಪಾವತಿಸಬೇಕಾದ ಶುಲ್ಕದಿಂದ ವಿನಾಯಿತಿ ನೀಡುವಂತೆ ಕೋರಿರುವುದನ್ನು ಒಪ್ಪಲು ಬರುವುದಿಲ್ಲ. ಆದ್ದರಿಂದ ನಿಯಮಾನುಸಾರ ಬಿಬಿಎಂಪಿಗೆ ಪಾವತಿಸಬೇಕಾದ ಶುಲ್ಕವನ್ನು ಪಾವತಿಸಿ ಕೂಡಲೇ ದಾಖಲೆ ಸಲ್ಲಿಸಬೇಕು,’ ಎಂದು ಪತ್ರದಲ್ಲಿ ನಿರ್ದೇಶಿಸಿದ್ದಾರೆ.

 

ರುದ್ರಪ್ರತಾಪ್‌ ಸಿಂಗ್‌ ಅವರಿಗೆ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ ಬರೆದಿರುವ ಪತ್ರದ ಪ್ರತಿ

 

ಇನ್ನು, ಪ್ರಮೋದಾದೇವಿ ಒಡೆಯರ್‌ ಇವರ ಜಾಗದಲ್ಲಿ 2010 ಮತ್ತು 2018ನೆ ಸಾಲಿನಲ್ಲಿ ಒಟ್ಟು 10 ಕಾರ್ಯಕ್ರಮಗಳು ನಡೆದಿದ್ದವು. ಈ ಪೈಕಿ 5 ಕಾರ್ಯಕ್ರಮಗಳಿಗೆ ಮಾತ್ರ ಶುಲ್ಕ ಪಾವತಿಸಿ ಇನ್ನುಳಿದ 5 ಕಾರ್ಯಕ್ರಮಗಳ ಶುಲ್ಕವನ್ನು ಪಾವತಿಸಿಲ್ಲ.

 

ಶುಲ್ಕ ಪಾವತಿಸಿ ಎಂದು ವಾರಸುದಾರರಿಗೆ ಸೂಚಿಸಿದ್ದರೂ ಇದುವರೆಗೂ ಪಾವತಿಯಾಗಿಲ್ಲ ಎಂಬುದು 2022ರ ಜೂನ್‌ 29ರಂದು ನಡೆದ ಸಭೆ ನಡವಳಿಯಿಂದ ತಿಳಿದು ಬಂದಿದೆ.

Tags: B Z Zamir Ahmed KhanBakridBasavaraj BommaiBengaluru Palace GroundD K ShivakumarDispropotinaite Assetsh d kumarswamyIfitiyarNalapad PevilionsPalace GroundRamzanRudra Pratap SinghSiddaramaiahಅಕ್ರಮ ಆಸ್ತಿಅಗ್ನಿಶಾಮಕ ಇಲಾಖೆಅರಮನೆ ಮೈದಾನಆದಾಯಕ್ಕೂ ಮೀರಿದ ಆಸ್ತಿಇ ಡಿ ದಾಳಿಇಫ್ತಿಯಾರ್‌ ಕೂಟಎಚ್‌ ಡಿ ಕುಮಾರಸ್ವಾಮಿಡಿ ಕೆ ಶಿವಕುಮಾರ್ನಲಪಾಡ್‌ ಪೆವಿಲಿಯನ್‌ಬಕ್ರೀದ್‌ಬಸವರಾಜ ಬೊಮ್ಮಾಯಿಬಿ ಝಡ್‌ ಜಮೀರ್‌ ಅಹ್ಮದ್‌ ಖಾನ್‌ಬೆಂಗಳೂರು ಅರಮನೆ ಮೈದಾನರಂಜಾನ್‌ರುದ್ರಪ್ರತಾಪ್‌ ಸಿಂಗ್‌ಸಂಚಾರ ನಿಯಂತ್ರಣ ಶುಲ್ಕಸಿದ್ದರಾಮಯ್ಯ
Advertisement Banner
Previous Post

ಪಿಎಸ್‌ಐ ಹಗರಣ; ಕಾಂಗ್ರೆಸ್‌ ಶಾಸಕನ ಪುತ್ರ ಅರುಣ್‌, ಸೋದರ ಎಸ್‌ ವೈ ಪಾಟೀಲ್‌ರಿಂದಲೂ 30 ಲಕ್ಷ ಲಂಚ

Next Post

ಪಿಎಸ್‌ಐ ನೇಮಕ ಅಕ್ರಮ; ಅಭ್ಯರ್ಥಿ ಲೆಕ್ಕದಲ್ಲಿ ತಲಾ 25 ಲಕ್ಷ ಹಂಚಿಕೆ, ದಿವ್ಯಾ ಹಾಗರಗಿಯೇ ಪ್ರಿನ್ಸಿಪಾಲ್‌

thefilestack

thefilestack

Next Post

ಪಿಎಸ್‌ಐ ನೇಮಕ ಅಕ್ರಮ; ಅಭ್ಯರ್ಥಿ ಲೆಕ್ಕದಲ್ಲಿ ತಲಾ 25 ಲಕ್ಷ ಹಂಚಿಕೆ, ದಿವ್ಯಾ ಹಾಗರಗಿಯೇ ಪ್ರಿನ್ಸಿಪಾಲ್‌

Recommended

ಕೋವಿಡ್‌-19; ಬೊಕ್ಕಸದಲ್ಲಿ 27,000 ಕೋಟಿ ಇದ್ದರೂ ಪರಿಹಾರ ನೀಡಿದ್ದು ಕೇವಲ 403 ಕೋಟಿಯಷ್ಟೇ

6 years ago

ರೂಟ್‌ಸ್ಟಾಕ್‌ ಯೋಜನೆ ಅನುದಾನ ದುರ್ಬಳಕೆ; ಜಿಪಿಎಸ್‌ ಇಲ್ಲ, ಮುಳ್ಳುಬೇಲಿಯಿಲ್ಲ, ಲೂಟಿಯೇ ಎಲ್ಲ!

2 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd