the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

ಪಠ್ಯ ಪರಿಷ್ಕರಣೆ ವಿವಾದ; ಪಾಠ, ಪದ್ಯ, ಲೇಖನ ಹಿಂಪಡೆದ ಸಾಹಿತಿಗಳ ಮನವೊಲಿಕೆಗೆ ದುಂಬಾಲು ಬಿದ್ದ ಸರ್ಕಾರ

thefilestack by thefilestack
August 10, 2022
in GOVERNANCE
0
0
SHARES
0
VIEWS
Share on FacebookShare on Twitter

ಬೆಂಗಳೂರು; ಪಠ್ಯ ಪುಸ್ತಕ ಪರಿಷ್ಕರಣೆಗೆ ವಿರೋಧ ವ್ಯಕ್ತಪಡಿಸಿ ಪಾಠ, ಪದ್ಯ ಸೇರ್ಪಡೆಗೆ ಅನುಮತಿ ನಿರಾಕರಿಸಿದ್ದ ಸಾಹಿತಿಗಳ ಮನವೊಲಿಕೆಗೆ ಮುಂದಾಗಿರುವ ಸರ್ಕಾರವು ಪರಿಷ್ಕರಣೆಯಾಗಿರುವ ಪಠ್ಯದಲ್ಲಿಯೇ ಪಾಠ ಮತ್ತು ಪದ್ಯಗಳನ್ನು ಮುಂದುವರೆಸಲು ಅನುಮತಿ ಪಡೆಯಲು ಸಾಹಿತಿಗಳ ದುಂಬಾಲು ಬಿದ್ದಿದೆ.

 

2022-23ನೇ ಶೈಕ್ಷಣಿಕ ಸಾಲಿಗೆ 01ರಿಂದ 10ನೇ ತರಗತಿ ಪರಿಷ್ಕೃತ ಕನ್ನಡ ಭಾಷಾ ಪಠ್ಯ ಪುಸ್ತಕಗಳಲ್ಲಿ ಅಳವಡಿಸಿದ್ದ ಪಾಠ/ಪದ್ಯಗಳನ್ನು ಸೇರ್ಪಡೆಗೊಳಿಸಲು ಅನುಮತಿ ನೀಡಿದ್ದ ಲೇಖಕ ದೇವನೂರು ಮಹಾದೇವ ಅವರು ಸೇರಿದಂತೆ ಹಲವರು ಅನುಮತಿಯನ್ನು ಹಿಂಪಡೆದಿದ್ದರು.

 

ಆದರೀಗ ಶೈಕ್ಷಣಿಕ ಹಿತದೃಷ್ಟಿಯನ್ನು ಮುಂದಿರಿಸಿರುವ ಸರ್ಕಾರವು ಪಠ್ಯ, ಪದ್ಯಗಳನ್ನು ಪರಿಷ್ಕೃತ ಪಠ್ಯಪುಸ್ತಕಗಳಲ್ಲಿ ಮುಂದುವರೆಸಲು ಅನುಮತಿ ಕೋರಬೇಕು ಎಂದು ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದೆ. ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ 2022ರ ಆಗಸ್ಟ್‌ 8ರಂದು ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘2022-23ನೇ ಶೈಕ್ಷಣಿಕ ಸಾಲಿಗೆ 01ರಿಂದ 10ನೇ ತರಗತಿ ಪರಿಷ್ಕೃತ ಕನ್ನಡ ಭಾಷಾ ಪಠ್ಯಪುಸ್ತಕಗಳಲ್ಲಿ ಅಳವಡಿಸಲಾದ ಪಾಠ/ಪದ್ಯಗಳಿಗೆ ಲೇಖಕರಿಂದ ನೀಡಲಾದ ಅನುಮತಿಯನ್ನು ಹಿಂಪಡೆಯುವ ಬಗ್ಗೆ ಪರಿಶೀಲಿಸಲಾಗಿದೆ. ಪಠ್ಯಪುಸ್ತಕಗಳು ಮುದ್ರಣಗೊಂಡು ಶಾಲೆಗಳಿಗೆ ಸರಬರಾಜಾಗಿರುವ ಹಿನ್ನೆಲೆಯಲ್ಲಿ ಶೈಕ್ಷಣಿಕ ಹಿತದೃಷ್ಟಿಯಿಂದ ತಮ್ಮ ಪಠ್ಯ/ಪದ್ಯಗಳನ್ನು ಪಠ್ಯಪುಸ್ತಕಗಳಲ್ಲಿ ಮುಂದುವರೆಸಲು ಅನುಮತಿ ಕೋರಿ ಸಂಬಂಧಿಸಿದ ಲೇಖಕರಿಗೆ ಅರೆ ಸರ್ಕಾರಿ ಪತ್ರ ಬರೆದು ವಿನಂತಿಸಬೇಕು,’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪತ್ರದಲ್ಲಿ ನಿರ್ದೇಶಿಸಿದ್ದಾರೆ. ಸಚಿವ ಬಿ ಸಿ ನಾಗೇಶ್‌ ಅವರ ಸೂಚನೆ ಮೇರೆಗೆ ಈ ಪತ್ರವನ್ನು ಬರೆಯಲಾಗಿದೆ ಎಂದು ಗೊತ್ತಾಗಿದೆ.

 

 

ಪಠ್ಯ ಪುಸ್ತಕ ಪರಿಷ್ಕರಣೆಗೆ ವಿರೋಧ ವ್ಯಕ್ತಪಡಿಸಿದ್ದ ಲೇಖಕ ದೇವನೂರ ಮಹಾದೇವ, ಬೊಳುವಾರು ಮಹಮದ್ ಕುಂಞ, ರೂಪಾ ಹಾಸನ, ಈರಪ್ಪ ಎಂ. ಕಂಬಳಿ, ಚಂದ್ರಶೇಖರ್ ತಾಳ್ಯ, ಮೂಡ್ನಾಕೂಡು ಚಿನ್ನಸ್ವಾಮಿ, ಸರಜೂ ಕಾಟ್ಕರ್‌, ಎಸ್‌ ಜಿ ಸಿದ್ದರಾಮಯ್ಯ ಸೇರಿದಂತೆ ಹಲವರು ತಮ್ಮ ‍ಪಾಠ ಸೇರ್ಪಡೆಗೆ ಅನುಮತಿ ನಿರಾಕರಿಸಿದ್ದರು. ಅಲ್ಲದೆ ತಮ್ಮ ಪಾಠ ‘ಸೇರಿದ್ದರೆ’ ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದ್ದರು.

 

‘ಈ ಹಿಂದಿನ ಪಠ್ಯದಲ್ಲಿದ್ದ ಎಲ್.ಬಸವರಾಜು, ಎ.ಎನ್.ಮೂರ್ತಿರಾವ್, ಪಿ.ಲಂಕೇಶ್, ಸಾರಾ ಅಬೂಬಕರ್ ಮೊದಲಾದವರ ಕತೆ, ಲೇಖನಗಳನ್ನು ಕೈಬಿಟ್ಟವರಿಗೆ ಕನ್ನಡ ನಾಡು, ನುಡಿ, ಸಂಸ್ಕೃತಿ ಕುರಿತು ಏನೇನೂ ತಿಳಿದಿಲ್ಲ ಎಂದೇ ಅರ್ಥ. ಚಾತುರ್ವರ್ಣ ಹಿಂದೂ ಪ್ರಭೇದದ ಆರ್‌ಎಸ್‌ಎಸ್‌ ಸಂತಾನವಾದ ಬಿಜೆಪಿ ತನ್ನ ಆಳ್ವಿಕೆಯಲ್ಲಿ ಮೊದಲು ಕೈ ಹಾಕುವುದೇ ಶಿಕ್ಷಣ ಮತ್ತು ಇತಿಹಾಸದ ಕುತ್ತಿಗೆಗೆ. ನೂತನ ಪಠ್ಯ ಪರಿಷ್ಕರಣೆಯಲ್ಲಿಯೂ ಇದೇ ಆಗಿದೆ’ ಎಂದು ಆರೋಪಿಸಿದ್ದರು.

Tags: B C NageshBasavaraj BommaiDevanuru Mahaddevah d kumarswamyHistory Text BookKannada Text BookMoodnakudu ChinnaswamyN SelvakumarPrimary and Secondary EducationRohit ChakartirthaS G SiddaramaiahSiddarmaiahText Book RevisedText Withdrawnಅನುಮತಿಅನುಮತಿ ಹಿಂಪಡೆದ ಸಾಹಿತಿಗಳುಅರೆ ಸರ್ಕಾರಿ ಪತ್ರಎಚ್‌ ಡಿ ಕುಮಾರಸ್ವಾಮಿಎಸ್‌ ಜಿ ಸಿದ್ದರಾಮಯ್ಯಕನ್ನಡ ಭಾಷಾ ಪಠ್ಯಪುಸ್ತಕಕರ್ನಾಟಕ ಪಠ್ಯ ಪುಸ್ತಕ ಸಂಘಕವಿಟಿಪ್ಪು ಸುಲ್ತಾನ್ಡಿ ಕೆ ಶಿವಕುಮಾರ್ದುಂಬಾಲುದೇವನೂರು ಮಹಾದೇವಪಠ್ಯ ಸೇರ್ಪಡೆಪಠ್ಯಪುಸ್ತಕ ಪರಿಶೀಲನಾ ಸಮಿತಿಪಠ್ಯಪುಸ್ತಕ ವಿವಾದಪಠ್ಯಪುಸ್ತಕಗಳ ಮುದ್ರಣಪದ್ಯಗಳುಬರಗೂರು ರಾಮಚಂದ್ರಪ್ಪಬಸವರಾಜ ಬೊಮ್ಮಾಯಿಮೂಡ್ನಾಕೂಡು ಚಿನ್ನಸ್ವಾಮಿರೂಪ ಹಾಸನಶೈಕ್ಷಣಿಕ ಹಿತದೃಷ್ಟಿಸಿದ್ದರಾಮಯ್ಯ
Advertisement Banner
Previous Post

ಕೇಂದ್ರದಿಂದ ಬಾರದ ಅನುದಾನ; ಕಿಸಾನ್‌ ಸಮ್ಮಾನ್‌, ಕೃಷಿ ವಿಕಾಸ, ಬಿಸಿಯೂಟ, ಮಾತೃ ವಂದನಾ ಯೋಜನೆ ಕುಂಠಿತ

Next Post

ರಾಷ್ಟ್ರೋತ್ಥಾನ ಟ್ರಸ್ಟ್‌ಗೆ 10 ಎಕರೆ; ಸಿಎಂ ತವರು ಜಿಲ್ಲೆ ಹಾವೇರಿಯಲ್ಲಿಯೂ ಪ್ರಸ್ತಾವನೆ ಸಲ್ಲಿಸಲು ಸೂಚನೆ

thefilestack

thefilestack

Next Post

ರಾಷ್ಟ್ರೋತ್ಥಾನ ಟ್ರಸ್ಟ್‌ಗೆ 10 ಎಕರೆ; ಸಿಎಂ ತವರು ಜಿಲ್ಲೆ ಹಾವೇರಿಯಲ್ಲಿಯೂ ಪ್ರಸ್ತಾವನೆ ಸಲ್ಲಿಸಲು ಸೂಚನೆ

Recommended

ರಸಗೊಬ್ಬರ; ಸೆಪ್ಟಂಬರ್‍‌ವರೆಗೆ 26.77 ಲಕ್ಷ ಮೆಟ್ರಿಕ್‌ ಟನ್ ಬೇಡಿಕೆ, ನಿರ್ವಹಣೆಯಲ್ಲಿ ವಿಫಲವಾಯಿತೇ ಸರ್ಕಾರ?

7 months ago

ಖರ್ಗೆ ಕುಟುಂಬದಿಂದ ಜಮೀನು ಕಬಳಿಕೆ ಆರೋಪ; ಟ್ರಸ್ಟಿಗಳ ವಿರುದ್ಧ ದೂರು, ದಾಖಲಾಗದ ಎಫ್‌ಐಆರ್

1 year ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd