the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

ರಾಷ್ಟ್ರೀಯ ಲಾಂಛನ; ಡಿ ಸಿ ಕಚೇರಿ ಕಟ್ಟಡಗಳ ಮೇಲೆ ಪ್ರದರ್ಶನಕ್ಕೆ ಕೇಂದ್ರದ ಸ್ಪಷ್ಟನೆ ಕೋರಿದ ರಾಜ್ಯ ಸರ್ಕಾರ

thefilestack by thefilestack
August 24, 2022
in GOVERNANCE
0
0
SHARES
1
VIEWS
Share on FacebookShare on Twitter

ಬೆಂಗಳೂರು; ಅಶೋಕ ಸ್ತಂಭದಲ್ಲಿರುವ ಸಿಂಹಗಳನ್ನು ಒಳಗೊಂಡ ರಾಷ್ಟ್ರೀಯ ಲಾಂಛನವನ್ನು ರಾಜ್ಯ ಸರ್ಕಾರದ ಜಿಲ್ಲಾಧಿಕಾರಿಗಳ ಕಚೇರಿಗಳ ಕಟ್ಟಡದ ಮೇಲೆ ಪ್ರದರ್ಶಿಸುವ ಸಂಬಂಧ ರಾಜ್ಯ ಬಿಜೆಪಿ ಸರ್ಕಾರವು ಸ್ಪಷ್ಟನೆ ಬಯಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.

 

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು  ರಾಷ್ಟ್ರ ಲಾಂಛನದ ಸ್ವರೂಪವನ್ನು ತಿರುಚಿದೆ  ಎಂದು  ವಿರೋಧ ಪಕ್ಷಗಳು ಮತ್ತು ಸಾಮಾಜಿಕ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ರಾಜ್ಯ ಬಿಜೆಪಿ ಸರ್ಕಾರವು 2022ರ ಆಗಸ್ಟ್‌ 23ರಂದು ಕೇಂದ್ರ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿಗೆ ಬರೆದಿರುವ ಪತ್ರವು ಮುನ್ನೆಲೆಗೆ ಬಂದಿದೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪತ್ರದಲ್ಲೇನಿದೆ?

 

ರಾಜ್ಯ ಸರ್ಕಾರದ ಜಿಲ್ಲಾ ಮ್ಯಾಜಿಸ್ಟ್ರೇಟ್‌/ಕಮಿಷನರ್‌ ಕಚೇರಿ ಕಟ್ಟಡಗಳ ಮೇಲೆ ಪ್ರದರ್ಶಿಸಲು ಸ್ಪಷ್ಟನೆ ಬಯಸಿದೆ. ಭಾರತೀಯ ರಾಜ್ಯ ಲಾಂಛನ (ನಿಯಂತ್ರಣ) ಅಧಿನಿಯಮ ಪ್ರಕಾರ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡಗಳ ಮೇಲೆ ಪ್ರದರ್ಶಿಸಬಹುದೇ ಇಲ್ಲವೇ, ಭಾರತದ ರಾಜ್ಯ ಲಾಂಛನ (ಬಳಕೆಯ ನಿಯಂತ್ರಣ) ಅಧಿನಿಯಮ 2007ರ ತಿದ್ದುಪಡಿ ಅಧಿಸೂಚನೆ, ಭಾರತದ ರಾಜ್ಯ ಲಾಂಛನ (ಬಳಕೆಯ ನಿಯಂತ್ರಣ) ಅಧಿನಿಯಮ 2010ರಂತೆ ಅಥವಾ ಕೇಂದ್ರ ಸರ್ಕಾರದ ಸಚಿವಾಲಯವು ಮಾಡಿರುವ ನಿಯಮಗಳನ್ನು ಅನುಸರಿಸಬೇಕೇ ಎಂಬ ಕುರಿತು ಸ್ಪಷ್ಟನೆ ನೀಡಬೇಕು ಎಂದು ಸಿಬ್ಬಂದಿ ಆಡಳಿತ ಮತ್ತು ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಕೋರಿರುವುದು ಪತ್ರದಿಂದ ತಿಳಿದು ಬಂದಿದೆ.

 

ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ ಬರೆದಿರುವ ಪತ್ರದ ಪ್ರತಿ

 

2007ರ ಅಧಿನಿಯಮದಲ್ಲೇನಿದೆ?

 

ಸಾರ್ವಜನಿಕ ಕಟ್ಟಡಗಳ ಮೇಲೆ ಪ್ರದರ್ಶನ ಕುರಿತು ಕೇಂದ್ರ ಸರ್ಕಾರವು ನಿಯಮಗಳನ್ನು ರೂಪಿಸಿದೆ.
(1) ಲಾಂಛನವನ್ನು ರಾಷ್ಟ್ರಪತಿ ಭವನ, ಸಂಸತ್ ಭವನ, ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸಚಿವಾಲಯದ ಕಟ್ಟಡಗಳಂತಹ ಅತ್ಯಂತ ಪ್ರಮುಖ ಸಾರ್ವಜನಿಕ ಕಟ್ಟಡಗಳ ಮೇಲೆ ಪ್ರದರ್ಶಿಸಬಹುದು.

 

(2) ಲಾಂಛನವನ್ನು ರಾಜ್ ಭವನ ಅಥವಾ ರಾಜ್ ನಿವಾಸ್ ಮತ್ತು ಲಾಂಛನವನ್ನು ಅಳವಡಿಸಿಕೊಂಡ ಅಥವಾ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಲಾಂಛನದಲ್ಲಿ ಲಾಂಛನವನ್ನು ಅಳವಡಿಸಿರುವ ರಾಜ್ಯಗಳ ಅಥವಾ ಕೇಂದ್ರಾಡಳಿತ ಪ್ರದೇಶಗಳ ರಾಜ್ಯ ಶಾಸಕಾಂಗ, ಉಚ್ಚ ನ್ಯಾಯಾಲಯಗಳು ಮತ್ತು ಸಚಿವಾಲಯದ ಕಟ್ಟಡಗಳಲ್ಲಿ ಪ್ರದರ್ಶಿಸಬಹುದು. .

 

(3) ಲಾಂಛನವನ್ನು ವಿದೇಶದಲ್ಲಿರುವ ಭಾರತದ ರಾಜತಾಂತ್ರಿಕ ಮಿಷನ್ ಆವರಣದಲ್ಲಿ ಪ್ರದರ್ಶಿಸಬಹುದು ಮತ್ತು ಮಿಷನ್‌ಗಳ ಮುಖ್ಯಸ್ಥರು ತಮ್ಮ ಮಾನ್ಯತೆ ಪಡೆದ ದೇಶಗಳಲ್ಲಿನ ತಮ್ಮ ನಿವಾಸಗಳಲ್ಲಿ ಲಾಂಛನವನ್ನು ಪ್ರದರ್ಶಿಸಬಹುದು.

 

(4) ಲಾಂಛನವನ್ನು ವಿದೇಶದಲ್ಲಿ ಭಾರತದ ದೂತಾವಾಸಗಳು ಆಕ್ರಮಿಸಿಕೊಂಡಿರುವ ಕಟ್ಟಡಗಳ ಮೇಲೆ ಅದರ ಪ್ರವೇಶ ದ್ವಾರಗಳಲ್ಲಿ ಮತ್ತು ಅವರ ಮಾನ್ಯತೆ ಪಡೆದ ದೇಶಗಳಲ್ಲಿ ಕಾನ್ಸುಲರ್ ಹುದ್ದೆಗಳ ಮುಖ್ಯಸ್ಥರ ನಿವಾಸಗಳಲ್ಲಿ ಪ್ರದರ್ಶಿಸಬಹುದು.

 

ಭಾರತದ ರಾಷ್ಟ್ರ ಲಾಂಛನದ ವಿವರಣೆ ಮತ್ತು ವಿನ್ಯಾಸದ ಕುರಿತು ಭಾರತದ ರಾಷ್ಟ್ರ ಲಾಂಛನ (ಅನುಚಿತ ಬಳಕೆ ನಿಷೇಧ) ಅಧಿನಿಯಮ 2005ರಲ್ಲೂ ಜಾರಿಗೆ ತರಲಾಗಿತ್ತು. ಇದರ ಪ್ರಕಾರ ಯಾರೇ ವ್ಯಕ್ತಿಯು ನಿಯಮಿಸಬಹುದಾದಂಥ ಪ್ರಕರಣಗಳಲ್‌ಲಿ ಮತ್ತು ಅಂಥ ಷರತ್ತುಗಳನ್ನು ಹೊರತುಪಡಿಸಿ, ಯಾವುದೇ ವ್ಯಾಪಾರ, ವ್ಯವಹಾಋ, ಅಜೀವಿಕೆ ಅಥವಾ ವೃತ್ತಿಯ ಉದ್ದೇಶಕ್ಕಾಗಿ ಅಥವಾ ಯಾವುದೇ ಪೇಟೆಂಡ್‌ ಹಕ್ಕು ಸ್ವಾಮ್ಯದಲ್ಲಿ ಅಥವಾ ಯಾವುದೇ ವ್ಯಾಪಾರ ಚಿಹ್ನೆಯಲ್ಲಿ ಅಥವಾ ವಿನ್ಯಾಸದಲ್ಲಿ ಲಾಂಛನವನ್ನು ಬಳಸತಕ್ಕದ್ದಲ್ಲ ಎಂದಿದೆ.

 

ನಿರ್ಮಾಣ ಹಂತದಲ್ಲಿರುವ ನೂತನ ಸಂಸತ್ ಭವನದ ಕಟ್ಟಡದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣ ಮಾಡಿದ್ದ ಲಾಂಛನದಲ್ಲಿರುವ ಸಿಂಹಗಳು ಕೆರಳಿದ ರೂಪದಲ್ಲಿದ್ದವು. ಆದರೆ ಅಶೋಕ ಸ್ತಂಭದಿಂದ ಆಯ್ಕೆ ಮಾಡಿಕೊಳ್ಳಲಾಗಿರುವ ಲಾಂಛನದಲ್ಲಿರುವ ಸಿಂಹಗಳು ಘನಗಂಭೀರ ಭಾವದಲ್ಲಿದ್ದವು. ಈ ಕುರಿತು ಸಾಕಷ್ಟು ಆಕ್ಷೇಪಗಳು ವ್ಯಕ್ತವಾಗಿದ್ದನ್ನು ಸ್ಮರಿಸಬಹುದು.

Advertisement Banner
Previous Post

ಜನಸೇವಾ ಟ್ರಸ್ಟ್‌ಗೆ 35 ಎಕರೆ ಗೋಮಾಳ; ಕ್ಯಾಬಿನೆಟ್‌ ಅನುಮೋದನೆಗೂ ಮುನ್ನ ತಿರಸ್ಕೃತಗೊಂಡಿದ್ದ ಪ್ರಸ್ತಾವನೆ

Next Post

ಭೂ ಹಗರಣ; ಶ್ರೀರಾಮುಲುಗೆ ಸಹಕರಿಸಲು ಹಿಡುವಳಿದಾರರನ್ನೇ ಬದಲಿಸಿದ ಅಕ್ರಮ ಕೂಟ

thefilestack

thefilestack

Next Post

ಭೂ ಹಗರಣ; ಶ್ರೀರಾಮುಲುಗೆ ಸಹಕರಿಸಲು ಹಿಡುವಳಿದಾರರನ್ನೇ ಬದಲಿಸಿದ ಅಕ್ರಮ ಕೂಟ

Recommended

ಕೊರೊನಾ; ತಪಾಸಣೆಗೊಳಗಾಗಿರುವ ಶಂಕಿತರ ನೈಜ ಸಂಖ್ಯೆಯನ್ನು ಮುಚ್ಚಿಡಲಾಗಿದೆಯೇ?

6 years ago

ಇಂಧನ ಇಲಾಖೆಯ ಹಗರಣ; 1,848 ಕೋಟಿ ಕಾಮಗಾರಿ ಗುತ್ತಿಗೆ ಹಿಂದಿದೆ ಕಿಕ್‌ಬ್ಯಾಕ್‌ ವ್ಯವಹಾರ?

5 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd