the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

260 ಕೋಟಿ ಮೌಲ್ಯದ ಕಾಕಂಬಿ ಹಗರಣ; ‘ದಿ ಫೈಲ್‌’ ವರದಿ ಬೆನ್ನಲ್ಲೇ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ ಕಾಂಗ್ರೆಸ್‌

thefilestack by thefilestack
March 1, 2023
in GOVERNANCE
0
0
SHARES
0
VIEWS
Share on FacebookShare on Twitter

ಬೆಂಗಳೂರು; ಮುಂಬೈ ಮೂಲದ ಕೆ ಎನ್‌ ರಿಸೋರ್ಸ್‌ ಪ್ರೈವೈಟ್‌ ಲಿಮಿಟೆಡ್‌ಗೆ ಅಂದಾಜು 260 ಕೋಟಿ ರು. ಮೌಲ್ಯದ 2 ಲಕ್ಷ ಮೆಟ್ರಿಕ್‌ ಟನ್‌ ಪ್ರಮಾಣದ ಕಾಕಂಬಿಯನ್ನು ಕರ್ನಾಟಕದಿಂದ ಗೋವಾಕ್ಕೆ ರಫ್ತು ಪರವಾನಗಿಗಳನ್ನು ಮಂಜೂರು ಮಾಡಿರುವ ಪ್ರಕ್ರಿಯೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಆರ್ಥಿಕ ಸಚಿವರೂ ಪ್ರಭಾವ ಬೀರಿದ್ದಾರೆ ಎಂಬ ಕುರಿತು ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿದ್ದ ದೂರು ಮತ್ತು ಆಡಿಯೋವನ್ನಾಧರಿಸಿ ‘ದಿ ಫೈಲ್‌’ ವರದಿ ಪ್ರಕಟಿಸಿದ್ದ ಬೆನ್ನಲ್ಲೇ ಇದೀಗ ಪ್ರತಿಪಕ್ಷ ಕಾಂಗ್ರೆಸ್‌ ಕೂಡ ಈ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದೆ.

 

ಈ ಕುರಿತು ಶಾಸಕ ಪ್ರಿಯಾಂಕ್‌ ಖರ್ಗೆ ಮತ್ತು ವಿಧಾನಪರಿಷತ್‌ನ ಮಾಜಿ ಸದಸ್ಯ ರಮೇಶ್‌ಬಾಬು ಅವರು ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಣಕಾಸು ಸಚಿವರ ಹೆಸರು ಪ್ರಸ್ತಾಪವಾಗಿರುವ ಆಡಿಯೋವನ್ನು ಬಹಿರಂಗಗೊಳಿಸಿದರು.

 

ಬಿಜೆಪಿಯವರು ಯಾವುದನ್ನು ಬಿಡದೇ ಲೂಟಿಗಿಳಿದಿದ್ದಾರೆ. ಅಬಕಾರಿ ಇಲಾಖೆಯಲ್ಲೂ  ಕಾಕಂಬಿಯಲ್ಲೂ ಹಗರಣ ನಡೆಯುತ್ತಿದೆ. ಮುಂಬೈ ಮೂಲದ ಕೆ ಎನ್‌ ರಿಸೋರ್ಸ್‌ ಖಾಸಗಿ ಕಂಪನಿ ಬಳಿ ಯಾವುದೇ ದಾಖಲೆ ಇಲ್ಲದಿದ್ದರೂ ಎಂ 1 ಎಂ 2 ಪರವಾನಿಗೆ ಕೊಟ್ಟಿದ್ದಾರೆ. ಕೇವಲ 2 ತಿಂಗಳಲ್ಲಿ ಯಾವುದೇ ದಾಖಲೆ ಇಲ್ಲದಿದ್ದರೂ ಪರವಾನಿಗೆ ನೀಡಿದ್ದಾರೆ ಎಂದು ಪ್ರಿಯಾಂಕ್‌ ಖರ್ಗೆ ಅವರು ಆರೋಪಿಸಿದರು.

 

 

ಕಾಕಂಬಿ ರಫ್ತು ಹಗರಣದಲ್ಲಿ ಸ್ವತಃ ಸಿಎಂ ಡೀಲಿಗೆ ಇಳಿದಿರುವ ಸಂಗತಿ ಬಹಿರಂಗವಾಗಿದೆ. ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ಮಾತನಾಡಲು ಹೆದುರುತ್ತಿರುವುದೇಕೆ, ನಿಯಮ ಮೀರಿ ಕಾಕಂಬಿ ರಫ್ತು ಮಾಡಲು ಸಹಕರಿಸಿದ್ದೇಕೆ? ಯಥಾ ಪ್ರಕಾರ ದಾಖಲೆ ಕೊಡಿ, ಸಾಕ್ಷಿ ಕೊಡಿ ಎನ್ನುವಿರಾ ಅಥವಾ ಸೂಕ್ತ ತನಿಖೆಯ ಅಗ್ನಿಪರೀಕ್ಷೆಗೆ ಒಳಪಟ್ಟು ಪ್ರಾಮಾಣಿಕತೆ ಸಾಬೀತುಪಡಿಸುವಿರಾ ಎಂದು ಪ್ರಶ್ನಿಸಿದ್ದಾರೆ.

 

ಬಿಜೆಪಿ ಸಂಸದರು ನೇರವಾಗಿ ಸಿ ಎಂ ಬಳಿ ಈ ಡೀಲ್‌ ಮಾಡಿದ್ದಾರೆ. ಇದು ದೊಡ್ಡ ಮಟ್ಟದ ಡೀಲ್‌ ಎಂದು ಅವರು ದೂರವಾಣಿಯಲ್ಲಿ ಮಾತನಾಡುತ್ತಾರೆ. ಮುಖ್ಯಮಂತ್ರಿಗಳೇ ಅಬಕಾರಿ ಸಚಿವರು ಹಾಗೂ ಆಯುಕ್ತರನ್ನು ಕರೆಸಿ ಇದಕ್ಕೆ ಅನುಮತಿ ಕೊಡಿಸಿದ್ದಾರೆ. ರಾಜ್ಯದ ಬೊಕ್ಕಸಕ್ಕೆ ನಷ್ಟವಾದರೂ ಸರಿ ಹೈಕಮಾಂಡ್‌ ಮನವೊಲಿಸಲು ಈ ಅನುಮತಿ ಕೊಟ್ಟರಾ ಎಂದೂ ಪ್ರಶ್ನಿಸಿದ್ದಾರೆ.

 

 

ಅನಧಿಕೃತ ಲಾಭ ಪಡೆಯುವ ಉದ್ದೇಶದಿಂದ ಅಗತ್ಯ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಉಲ್ಲಂಘಿಸಿ ಮುಂಬೈ ಮೂಲದ ಕೆ ಎನ್‌ ರಿಸೋರ್ಸ್‌ ಪ್ರೈವೈಟ್‌ ಲಿಮಿಟೆಡ್‌ಗೆ 2 ಲಕ್ಷ ಮೆಟ್ರಿಕ್‌ ಟನ್‌ ಪ್ರಮಾಣದ ಕಾಕಂಬಿಯನ್ನು ಕರ್ನಾಟಕದಿಂದ ಗೋವಾಕ್ಕೆ ರಫ್ತು ಪರವಾನಗಿಗಳನ್ನು ಮಂಜೂರು ಮಾಡಿರುವ ಪ್ರಕ್ರಿಯೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಆರ್ಥಿಕ ಸಚಿವರೂ ಪ್ರಭಾವ ಬೀರಿದ್ದಾರೆ ಎಂಬ ಕುರಿತು ಲೋಕಾಯುಕ್ತಕ್ಕೆ ದೂರು ದಾಖಲಾಗಿತ್ತು.

 

ಇದರ ಬೆನ್ನಲ್ಲೇ ಇದೀಗ ಕಾಕಂಬಿ ಸಾಗಾಣಿಕೆ ವ್ಯವಸ್ಥೆ ಗುತ್ತಿಗೆದಾರ ಶಿವರಾಜ್‌, ಮತ್ತು ಕೆ ಎನ್‌ ರಿಸೋರ್ಸ್‌ ಪ್ರೈ ಲಿಮಿಟೆಡ್‌ ಪ್ರತಿನಿಧಿ ಎಂದು ಗುರುತಿಸಿಕೊಂಡಿರುವ ಸುರೇಶ್‌ ಇವರಿಬ್ಬರ ನಡುವಿನ ಸಂಭಾಷಣೆಯೂ ಬಹಿರಂಗಗೊಂಡಿತ್ತು. ಈ ಕುರಿತು 'ದಿ ಫೈಲ್‌' 2023ರ ಫೆ.20ರಂದು ಎಕ್ಸ್‌ಕ್ಲೂಸಿವ್ ವರದಿಯನ್ನು ಪ್ರಕಟಿಸಿತ್ತು.

https://stack.thefile.in/2023/02/lokayukta/15388/

ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿರುವ ದೂರಿನಲ್ಲಿಯೂ ಸಂಭಾಷಣೆಯ ವಿವರಗಳನ್ನೂ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ. ದೂರಿನೊಂದಿಗೆ ಸಲ್ಲಿಸಲಾಗಿರುವ ಸಂಭಾಷಣೆ ವಿವರವನ್ನು ಇಲ್ಲಿ ಕೊಡಲಾಗಿದೆ.

 

ಪ್ರತಿನಿಧಿ; ನಮಸ್ಕಾರ

 

ಗುತ್ತಿಗೆದಾರ; ನಮಸ್ಕಾರ ಸಾರ್‌…ಎಲ್ಲಿದ್ದೀರಾ ಸಾರ್‌?

 

ಪ್ರತಿನಿಧಿ; ಬೆಳಗಾವಿಲಿ ಇದ್ದೇನೆ

 

ಗುತ್ತಿಗೆದಾರ; ಬೆಳಗಾವೀಲಿ ಎಲ್ಲಿ?

 

ಪ್ರತಿನಿಧಿ; ಫ್ಯಾಕ್ಟರಿಯಲ್ಲಿ ಇದ್ದೇನೆ. ಫ್ಯಾಕ್ಟರೀಲಿ

 

ಗುತ್ತಿಗೆದಾರ; ಯಾಕೆ?

 

ಪ್ರತಿನಿಧಿ; ಸರ್‌ ಅದು ಫ್ಯಾಕ್ಟರೀಲಿ ತೋಡಾ ಅಂಡರ್‌ಗ್ರೌಂಡ್‌ ಮಾಡಿಸ್ತಾ ಇದ್ದೇನೆ

 

ಗುತ್ತಿಗೆದಾರ; ಹಾ

 

ಪ್ರತಿನಿಧಿ; ಮತ್ತೆ ಅದು ಮಾಲು ಜಾಸ್ತಿಯಾದರೇ ಮತ್ತೆ ಮಾಲ್‌ ತೆಗೆಯಲು ಜಾಗ ಇಲ್ಲಾ, ಜಾಗ ಮಾಡ್ಕೋಬೇಕು ಅಂತ ಮಾತನಾಡಲು ಬಂದೆ.

 

ಗುತ್ತಿಗೆದಾರ; ಬೆಳಗಾವಿ, ಖಾನಾಪುರ

 

ಪ್ರತಿನಿಧಿ; ನಾನು ಬೆಳಗಂ ಇದ್ದೇನೆ. ಬೆಳಗಾಂನಲ್ಲಿ ರೂಮ್‌ ಮಾಡ್ಕೊಂಡು ದಿfದೇನೆ. ಫ್ಯಾಕ್ಟರಿಗೆ ಬಂದೆ. ಲೈಲಾ ಷುಗರ್‌ನಲ್ಲಿ ಇದ್ದೇನೆ…ಲೈಲಾ ಷುಗರ್‌ನಲ್ಲಿ ಇದ್ದೇನೆ

 

ಗುತ್ತಿಗೆದಾರ; ಏನು ಪರ್ಮಿಟ್‌ ಗಿರ್ಮಿಟ್‌ ಎಲ್ಲಾ ಆಗಿದ್ಯಾ?

 

ಪ್ರತಿನಿಧಿ; ಪರ್ಮಿಟ್‌ ಮಾಡ್ಸಿದಾರೆ. ಎಲ್ಲಾ ನಾಳೆಗೆ ಆಗುತ್ತದೆ ಎಲ್ಲಾ

 

ಗುತ್ತಿಗೆದಾರ; ಯಾರು ಮಾಡಿಸ್ತಿದಾರೆ?

 

ಪ್ರತಿನಿಧಿ; ಬೆಳಗಾಂ ಆಫೀಸ್‌ನಾಗ

 

ಗುತ್ತಿಗೆದಾರ; ಅಲ್ಲ ಅಲ್ಲ ನೀವು ಮಾಡಿಸುತ್ತಿದ್ದೀರಾ? ಸುರೇಶ್‌ ಮಾಡಿಸುತ್ತಿದ್ದಾರಾ?

 

ಪ್ರತಿನಿಧಿ; ನಾನೇ ಆದರೆ ಏನು ? ಸುರೇಶ್‌ ಮಾಡಿಸಿದರೇನು?

 

ಗುತ್ತಿಗೆದಾರ; ಅಲ್ಲ…ಅಲ್ಲಾ… ಎರಡು ಒಂದೇ ಗೊತ್ತು

 

ಪ್ರತಿನಿಧಿ; ಸುರೇಶ್‌ ಇಲ್ಲಿಗೆ ಬರೋದಿತ್ತು. ಇವತ್ತು ಬರುತ್ತಾನೆ. ನಾನು ಇಲ್ಲೇ ಇದ್ದು 2 ದಿನ ಆಯ್ತು. ರೋಡ್‌ ಒಂದು ಮಾಡಿಸೋದು ಇದೆ. ರೋಡ್‌ ಕೆಲ್ಸ ಮಾಡಿಸ್ತಿದ್ದೇನೆ.

 

ಗುತ್ತಿಗೆದಾರ; ಹೌದಾ

 

ಪ್ರತಿನಿಧಿ; ರೋಡ್‌ ಅಂದರೆ ಖಾನಾಪುರ ರೋಡ್‌ ಚಾಲೂ ಮಾಡುವ ಸಲುವಾಗಿ

 

ಗುತ್ತಿಗೆದಾರ; ಇದು ಯಾವ ಕಂಪನಿ ಸಾರ್‌

 

ಪ್ರತಿನಿಧಿ; ಇದು ಕೆ ಎನ್‌ ಆಗ್ರೋ ಕಂಪನಿ. ನಾನು ಈ ಫ್ಯಾಕ್ಟರೀಲಿ ಇವರು ಎಕ್ಸೋಪೋರ್ಟ್‌ನಲ್ಲಿ ಇದ್ದಾರೆ. ನಾನು ಈ ಕಂಪನಿಯಲ್ಲಿ 20 ವರ್ಷಗಳಿಂದ ಕೆಲ್ಸ ಮಾಡ್ತೀದಿನಿಪ್ಪಾ

 

ಗುತ್ತಿಗೆದಾರ; ಹೌದಾ

 

ಪ್ರತಿನಿಧಿ; ಊಂ ಎಕ್‌ದಮ್‌ ಕ್ಲೋಸ್‌ ದೋಸ್ತ್‌ ಅವ

 

ಗುತ್ತಿಗೆದಾರ; ಹೌದಾ

 

ಪ್ರತಿನಿಧಿ; ಹೌದು…ಹೌದು…ವಿಜಯದುರ್ಗ, ಕೊಲ್ಲಾಪುರದಲ್ಲಿ ವಿಜಯದುರ್ಗ

 

ಗುತ್ತಿಗೆದಾರ; ಹೂನ್ರಿ

 

ಪ್ರತಿನಿಧಿ; 91-92ರಲ್ಲಿ ಗೋವಾದಿಂದ ಮಾಡಿದವನು ನಾನು

 

ಗುತ್ತಿಗೆದಾರ; ಹೂನ್ರಿ

 

ಪ್ರತಿನಿಧಿ; ಮತ್ತೆ ನಲಬಗ್‌ ಜೆಎನ್‌ಪಿಟಿ ಮಾಡ್ತಾ ಇದ್ದಾ

 

ಗುತ್ತಿಗೆದಾರ; ಹೂನ್ರಿ

 

ಪ್ರತಿನಿಧಿ; ಎಲ್ಲಾ ಎಕ್ಸ್‌ಪೋರ್ಟ್‌ ಜವಾಬ್ದಾರಿ ನಂದೆ

 

ಗುತ್ತಿಗೆದಾರ; ಹಾಗಾದಲ್ಲಿ ಎಲ್ಲಾ ಜವಾಬ್ದಾರಿ ನಿಮ್ದೇ ಅಂತ ಆಯ್ತು

 

ಪ್ರತಿನಿಧಿ; ಹೌದು ಮೊಲಾಸಸ್‌ ಪರ್ಮಿಟ್‌, ಎಕ್ಸೈಸ್‌ ಪರ್ಮಿಷನ್‌, ಗಾಡಿಯಿಂದ ಹಿಡಿದು ಟ್ರಾನ್ಸ್‌ಪೋರ್ಟ್‌ ಎಲ್ಲವೂ ನನ್ನದೇ ಜವಾಬ್ದಾರಿ

 

ಗುತ್ತಿಗೆದಾರ; ಯಾವ ಮಿನಿಸ್ಟರ್‌ ಅನ್ನು ಹಿಡಿದಿದ್ದೀರಪ್ಪಾ

 

ಪ್ರತಿನಿಧಿ; ಮಿನಿಸ್ಟರ್‌ ಇಲ್ಲಾ ಇವರು ಹೈಲೆವೆಲ್‌ ದೊಡ್ಡ ಕಂಪನಿಯವರು. ಮೂರು ಸಾವಿರ ಕೋಟಿ ಕೆ ಎನ್‌ ಆಗ್ರೋ ಎಕ್ಸ್‌ಪೋರ್ಟರ್‌ ಅವರು ಹಳೇಯವರೇ. ಹೊಸದಾಗಿ ಏನೂ ಇಲ್ಲಾ

 

ಗುತ್ತಿಗೆದಾರ; ಕರ್ನಾಟಕದಲ್ಲಿ ಯಾರನ್ನು ಹಿಡಿದಿದ್ದೀರಾ? ನಮ್ಮ ಸಿಎಂ ಬೊಮ್ಮಾಯಿ ಅವರನ್ನು ಹಿಡಿದಿದ್ದೀರಾ? ಅಥವಾ ಎಕ್ಸೈಸ್‌ ಮಿನಿಸ್ಟರ್‌ನ್ನು ಹಿಡಿದಿದ್ದೀರಾ?

 

ಪ್ರತಿನಿಧಿ; ಈಗ ಯಾರೇನು ಗೊತ್ತೇನು? ಕೆ ಎನ್‌ ಆಗ್ರೋದಲ್ಲಿ ಯಾರು ಎಂ ಪಿ ಇದ್ದಾರೆ ಅವರು ಹನ್ನೊಂದು ಮಂದಿ ನಿರ್ದೇಶಕರಿದ್ದಾರೆ. ಎಲ್ಲಾ ಬಿಗ್‌ ಶಾಟ್ಸ್‌ ಅವರೇ ಇದ್ದಾರೆ. ಆ ಎಂ ಪಿ ಗಳು ಬಿಜೆಪಿಯವರೇ. ಅವರು ಡೈರೆಕ್ಟ್‌ ಆಗಿ ಬೊಮ್ಮಾಯಿಯವರಿಗೆ ಫೋನ್‌ ಮಾಡಿಸಿದಾರೆ.

 

ಗುತ್ತಿಗೆದಾರ; ಡೈರೆಕ್ಟ್‌ ಬೊಮ್ಮಾಯಿಯವರಿಗೆ ಹೇಳಿ ಮಾಡಿಸಿದ್ದೀರಾ?

 

ಪ್ರತಿನಿಧಿ; ಹೌದು ಮತ್ತು ಸೆಂಟ್ರಲ್ ಮಿನಿಸ್ಟರ್‌ ಅವರ ಪತ್ರ ಇದೆ. ಫೈನಾನ್ಸ್‌ ಮಿನಿಸ್ಟರ್‌ ಸಹ ವಿನಂತಿ ಮಾಡಿಕೊಂಡಿದಾರೆ. ಎಂಎಎಂಸಿಎಲ್‌ ಬಹಳ ಅಡ್ಡ ಹಾಕಿದರೂ ಮಾಡಬಾರದು ಎಂದು. ಅದಕ್ಕೆ ಲೇಟ್‌ ಆಯಿತು

 

ಗುತ್ತಿಗೆದಾರ; ಅವರೆಕೆ ಅಡ್ಡ ಹಾಕ್ತಾರೆ ನಿಮ್ಮ ವ್ಯಾಪಾರಕ್ಕೆ?

 

ಪ್ರತಿನಿಧಿ; ಪರ್ಮಿಷನ್‌ ಕೊಡಬೇಡಿ ಅಂತ ಆಯುಕ್ತರ ಆಫೀಸ್ಸಿಗೆ ಒತ್ತಡ ಹೇರಿದ್ದಾರೆ

 

ಗುತ್ತಿಗೆದಾರ; ನಿಮ್ಮ ವ್ಯಾಪಾರಕ್ಕೂ ಅವರ ವ್ಯಾಪಾರಕ್ಕೂ ಏನು ಸಂಬಂಧ?

 

ಪ್ರತಿನಿಧಿ; ಸಂಬಂಧ ಏನೂ ಇಲ್ಲಾ. ಈ ತರಹ ಆಗಿದೆ ಅಂತ ತಮಗೆ ಹೇಳ್ತೀದ್ದೀನಿ

 

ಗುತ್ತಿಗೆದಾರ; ಹೌದಾ

 

ಪ್ರತಿನಿಧಿ; ನಾನು ಬೆಂಗಳೂರಿಗೆ ಹೋಗಿದ್ದೆ. ಅವರ ಸಂಗಡ ನಾನೂ ಇದ್ದೆ. ಆಗ ಎಂಎಂಎಸಿಎಲ್‌ ಪ್ರಾಬ್ಲಮ್‌ ಬಂತು. ಅವಾಗ ತೊಂದರೆ ಇತ್ತು. ಆವಾಗಲೇ ಸಾಲ್ವ್‌ ಆಯ್ತು. ಬೊಮ್ಮಾಯಿ ಕೈಲಿ ಮಾಡಿಸಿದ್ದು.

 

ಗುತ್ತಿಗೆದಾರ; ಹೌದಾ

 

ಪ್ರತಿನಿಧಿ; ಆಮೇಲೆ ಗೋವಾ ಪರ್ಮಿಷನ್‌ ಮಾಡಿಕೊಂಡಿದ್ದೇವೆ. ಬೇಕಾದರೆ ಎರಡೂ ಪರ್ಮಿಷನ್‌ ನಿಮ್ ವಾಟ್ಸಾಪ್‌ಗೆ ಹಾಕ್ತೇನೆ

 

ಗುತ್ತಿಗೆದಾರ; ಆಯ್ತು ಹಾಕಿ

 

ಪ್ರತಿನಿಧಿ; ಅದೇ 2 ಲಕ್ಷ ಟನ್‌ ಕೆಲಸ ಇದೆ. ಕೆಲಸ ಎಲ್ಲಾ ನಡೆಯುತ್ತಿದೆ. ಅದು ನನ್ನ ಕೈಯಲ್ಲೇ ಇದೆ.

 

ಗುತ್ತಿಗೆದಾರ; ನಿಮ್ ಕಲಿ ಇರುವಾಗ ಕೆಲಸ ಸರಿಯಾಗಿ ನಡೆಯುತ್ತದೆ. ಎಕ್ಸೈಸ್‌ ಮಿನಿಸ್ಟರ್‌ಗೆ ಏನು ಕಮ್ಯುನಿಕೇಟ್‌ ಮಾಡ್ಲಿಲ್ವಾ?

 

ಪ್ರತಿನಿಧಿ; ಅವರೇ ಕರೆಸಿ ಹೇಳಿದರು

 

ಗುತ್ತಿಗೆದಾರ; ಯಾರು ಬೊಮ್ಮಾಯಿ ಅವರಾ?

 

ಪ್ರತಿನಿಧಿ; ಹೌದು, ಬೊಮ್ಮಾಯಿ ಅವರೇ ಕರೆಸಿ ಕಮಿಷನರ್‌ಗೂ ಫೋನ್‌ ಮಾಡಿ, ಕಮಿಷನರ್‌ ಅವರಿಗೂ ಬೊಮ್ಮಾಯಿ ಅವರೇ ಫೋನ್‌ ಮಾಡಿದ್ದಾರೆ. ಎನ್‌ಒಸಿಗೆ ಏನೂ ತೊಂದರೆ ಆಗದ ಹಾಗೆ ಹೇಳಿದರು.

 

ಗುತ್ತಿಗೆದಾರ: ಈಗ ಕರ್ನಾಟಕದಲ್ಲಿ ಅವರ ಯಾವ ಪರ್ಸನ್‌ ಬಂದಿರೋದು? ಕೆ ಎನ್‌ ಆಗ್ರೋದು?

 

ಪ್ರತಿನಿಧಿ; ಕೆಎನ್‌ ಆಗ್ರೋದು ಅನಿಲ್‌ ಅಗರವಾಲ್‌ ಅಂತ. ಅವರು ಬರ್ತಾರೆ

 

ಗುತ್ತಿಗೆದಾರ: ಅವರು ಓನರ್‌ ರಾ…?

 

ಪ್ರತಿನಿಧಿ; ಅವರು ಒನ್‌ ಆಫ್‌ ದಿ ಡೈರೆಕ್ಟರ್‌

 

ಗುತ್ತಿಗೆದಾರ; ಹೌದಾ ಸರಿ ಸರಿ

 

 

ಪ್ರತಿನಿಧಿ; ಅವರು ನನಗೆ ಕ್ಲೋಸ್‌ ಇದ್ದಾರೆ. 1990ರಿಂದ. ನನಗೆ 8 ದಿನಕ್ಕೊಮ್ಮೆ ಫೋನ್‌ ಮಾಡುತ್ತಾರೆ. ಅವರದ್ದೂ ಕೆಲಸ ಮಾಡಿಕೊಟ್ಟಿದ್ದೇನೆ. ಕಂಪ್ಲೀಟ್‌ 2001ರಲ್ಲಿ

 

ಗುತ್ತಿಗೆದಾರ; ನೀವು ಮಹಾರಾಷ್ಟ್ರದಲ್ಲಿ ಮಾಡ್ತಾ ಇದ್ದಿದ್ದು ಇವರ ಜತೆನಾ?

 

ಪ್ರತಿನಿಧಿ; ಹೌದು…ಹೌದು…ಇವರೊಟ್ಟಿಗೆ ಮಾಡಿದ್ದೀನಿ. ಲಾಸ್ಟ್‌ ಇಯರ್‌ನಲ್ಲಿ ಜೆಎನ್‌ಪಿಟಿ ಇಂದ 4,50,000 ಟನ್‌ ಆಗಿದೆ. ಈ ವರ್ಷ 6,00,000 ಟನ್‌ ಮಾಡಲು ಫ್ಲಾನ್‌ ನಡೆದಿದೆ.

 

ಗುತ್ತಿಗೆದಾರ; ಹೌದಾ

 

ಪ್ರತಿನಿಧಿ; ಈ ಮೂರು ಠಿಕಾಣಿ ಕಡೆ, ಜಾಗದಲ್ಲೂ ನಡೆಯುತ್ತದೆ. ಒಂದು ಕಾಂಡ್ಲ ಚಾಲೂ ಇದೆ. ಅಲ್ಲಿ ಪಂಜಾಬ್‌ ಗುಜರಾತ್‌ ಮತ್ತು ಎಂಪಿಯಿಂದ ಮಾಲು ಬರುತ್ತೆ. ಈ ಎಲ್ಲಾ ಮಾಲು ಜೆಎನ್‌ಪಿಟಿಗೆ ಬರುತ್ತೆ.

 

ಗುತ್ತಿಗೆದಾರ; ಈಗ ಇಲ್ಲಿ ಎಷ್ಟು ಲಿಫ್ಟ್‌ ಮಾಡಬೇಕು ಎಣಿಸಿದ್ದೀರಿ?

 

ಪ್ರತಿನಿಧಿ; ಇಲ್ಲಿ 2 ಲಕ್ಷ ಪೂರ್ತಿ ಮಾಡುವುದು ಇದೆ

 

ಗುತ್ತಿಗೆದಾರ; ಎಲ್ಲಿ ಇದೆ 2 ಲಕ್ಷ ಟನ್‌ ಕರ್ನಾಟಕದಲ್ಲಿ?

 

ಪ್ರತಿನಿಧಿ; ಎಲ್ಲಾ ಸಿಗುತ್ತೆ, ಯಾಕೆ ಸಿಗೋದಿಲ್ಲ?

 

ಗುತ್ತಿಗೆದಾರ; ಅಯ್ಯೋ ದೇವರೇ, ಎಲ್ಲಿ ತರುತ್ತೀರಿ ಕರ್ನಾಟಕದಲ್ಲಿ?

 

ಪ್ರತಿನಿಧಿ; ಸಿಗುತ್ತದೆ ಕರ್ನಾಟಕದಲ್ಲಿ. ಯಾವುದೇ ತೊಂದರೆ ಇಲ್ಲ. ನಾವು ಈಗಾಗಲೇ ತೆಗೆದುಕೊಂಡಿದ್ದೇವೆ.

15ರಿಂದ 20 ತೆಗೆದುಕೊಂಡಿದ್ದೇವೆ. ನಾವು ಈಗಾಗಲೇ

 

 

ಗುತ್ತಿಗೆದಾರ; ನಂದಿ ಶುಗರ್‌ ಟೆಂಡರ್‌ಗೆ ಹೋಗಿದ್ದೀರಾ?

 

ಪ್ರತಿನಿಧಿ; ಹೋಗಿದ್ದಾರಾಲ್ಲಾ

 

ಗುತ್ತಿಗೆದಾರ; ಯಾರು ಹೋಗಿದ್ದಾರೆ?

 

ಪ್ರತಿನಿಧಿ; ಸುರೇಶ್‌ ಹೋಗಿದ್ದಾರೆ. ಮಾಲು ತೆಗೆದುಕೊಂಡಿದ್ದೇವೆ

 

ಗುತ್ತಿಗೆದಾರ; ಹೌದಾ ಸರಿ ಸರಿ, ಬ್ಯುಸಿ ಇದ್ದೀರಾ?

 

ಪ್ರತಿನಿಧಿ; ಬ್ಯುಸಿ ಇಲ್ಲಾ ಫ್ಯಾಕ್ಟರೀಲಿ ಇದ್ದೇನೆ. ಈ ಸಾಯಂಕಾಲ ಮಾತಾಡಿ ಎಲ್ಲಾ ವಿಷಯವನ್ನು ಹೇಳ್ತೇನೆ.

Tags: AudioB S PatilBasavaraj BommaiBJP MP'SBribe Free KarnatakaD K ShivakumarExcise ScamFinance MinisterGujarath d kumarswamyK GopalaiahaK N Resources Private LimitedlokayuktaLokayukta SPMallikarjunMolassesMumbaiNirmala SitaramanNOCPriyank KhargeRamesh BabuSiddaramaiahaಅಬಕಾರಿಆಡಿಯೋಎಂ 2 ಲೈಸೆನ್ಸ್‌ಎನ್‌ಒಸಿಕಾಕಂಬಿಕೆ ಎನ್‌ ರಿಸೋರ್ಸ್‌ ಪ್ರೈವೈಟ್‌ ಲಿಮಿಟೆಡ್‌ಕೆ ಗೋಪಾಲಯ್ಯಗುಜರಾತ್‌ಗೋವಾಡಿ ಕೆ ಶಿವಕುಮಾರ್ನಿರ್ಮಲಾ ಸೀತಾರಾಮನ್‌ಪ್ರಿಯಾಂಕ್‌ ಖರ್ಗೆಬಸವರಾಜ ಬೊಮ್ಮಾಯಿಬಿ ಎಸ್‌ ಪಾಟೀಲ್‌ಬಿಜೆಪಿ ಸಂಸದರುಮಲ್ಲಿಕಾರ್ಜುನ್‌ಮುಂಬೈಮೊಲಾಸಿಸ್‌ಮೊಲ್ಯಾಸಿಸ್‌ರಫ್ತುರಮೇಶ್‌ಬಾಬುಲಂಚಮುಕ್ತ ಕರ್ನಾಟಕಲೋಕಾಯುಕ್ತಲೋಕಾಯುಕ್ತ ಎಸ್‌ಪಿಸಿದ್ದರಾಮಯ್ಯಹಣಕಾಸು ಸಚಿವರುಹೆಚ್‌ ಡಿ ಕುಮಾರಸ್ವಾಮಿ
Advertisement Banner
Previous Post

ಮೂಲಸೌಕರ್ಯಕ್ಕೆ 93,226 ಕೋಟಿ, ಇಂಧನ ವಲಯಕ್ಕೆ 81,974 ಕೋಟಿ, ಕೃಷಿಗೆ ಕೇವಲ 1,053 ಕೋಟಿ ಹೂಡಿಕೆ

Next Post

ಮೈಷುಗರ್‌ ಆಧುನೀಕರಣ; 74 ಕೋಟಿ ಹೂಡಿಕೆ ಮಾಡಿದ್ದರೂ ಕಾರ್ಯಾಚರಿಸದ ಕೋ-ಜನರೇಷನ್ ಘಟಕ

thefilestack

thefilestack

Next Post

ಮೈಷುಗರ್‌ ಆಧುನೀಕರಣ; 74 ಕೋಟಿ ಹೂಡಿಕೆ ಮಾಡಿದ್ದರೂ ಕಾರ್ಯಾಚರಿಸದ ಕೋ-ಜನರೇಷನ್ ಘಟಕ

Recommended

ಕೆಲಸದ ಹೊರೆ, ಕಾಯ್ದುಕೊಳ್ಳದ ದಕ್ಷತೆ; ಕಾರ್ಯದರ್ಶಿ-2 ಹುದ್ದೆಗೆ ಸ್ಪೀಕರ್‌ ಸಮರ್ಥನೆ

2 years ago

ಜಂಗಲ್‌ ಲಾಡ್ಜ್‌ಸ್‌ ರೆಸಾರ್ಟ್‌ನಲ್ಲೂ ಕಮಿಷನ್‌ ಆರೋಪ; ಬಿಡ್‌ನಲ್ಲಿ ಯಶಸ್ವಿಯಾದ ಕಂಪನಿಗೆ ಸಿಗದ ಕಾರ್ಯಾದೇಶ

4 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd