the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

ನೀಗದ ಆಮ್ಲಜನಕ ಕೊರತೆ; 14 ದಿನದಲ್ಲಿ ಜಿಂದಾಲ್‌ ಸ್ಟೀಲ್ಸ್‌ ಪೂರೈಸಿದ್ದು 1,473 ಮೆ.ಟನ್‌

thefilestack by thefilestack
May 14, 2021
in GOVERNANCE
0
0
SHARES
1
VIEWS
Share on FacebookShare on Twitter

ಬೆಂಗಳೂರು; ಕೋವಿಡ್‌ ದೃಢಪಟ್ಟ ಪ್ರಕರಣಗಳು ಮತ್ತು ತೀವ್ರನಿಗಾ ಘಟಕ ಅವಲಂಬಿತ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ಆಮ್ಲಜನಕ ಬೇಡಿಕೆಯೂ ಹೆಚ್ಚುತ್ತಿದೆ. ಇದನ್ನು ಸರಿದೂಗಿಸಲು ಮೂರಂಶಗಳ ಕಾರ್ಯತಂತ್ರ ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳುತ್ತಿದ್ದಾರಾದರೂ ಆಮ್ಲಜನಕದ ಬೇಡಿಕೆ ಪ್ರಮಾಣ ಹೆಚ್ಚುತ್ತಿದೆಯೇ ವಿನಃ ಕಡಿಮೆಯಾಗುತ್ತಿಲ್ಲ.

ಕೇಂದ್ರ ಸರ್ಕಾರವು ರಾಜ್ಯಕ್ಕೆ ಆಮ್ಲಜನಕ ಪ್ರಮಾಣವನ್ನು 965 ಮೆಟ್ರಿಕ್‌ ಟನ್‌ನಿಂದ 1,015 ಮೆ.ಟನ್‌ಗೇರಿಸಿದೆ. ಈ ಪೈಕಿ ರಾಜ್ಯದಲ್ಲಿ 765 ಮೆ.ಟನ್‌ ದೊರೆಯುತ್ತಿದೆ. 60 ಟನ್‌ ಪಿಎಸ್‌ಎ ಘಟಕಗಳಿಂದ ದೊರೆಯುತ್ತಿದ್ದರೆ ಒಡಿಶಾದಿಂದ 160 ಟನ್‌, ವಿಶಾಖಪಟ್ಟಣದಿಂದ 30 ಟನ್‌ ದೊರೆಯುತ್ತಿದೆ.

ಹಾಗೆಯೇ ಬಹ್ರೇನ್‌ನಿಂದ 40 ಟನ್‌, ಕುವೈತ್‌ನಿಂದ 100 ಟನ್‌ ಆಮ್ಲಜನಕ ಬಂದಿದೆಯಾದರೂ ಸದ್ಯ ಉದ್ಭವಿಸಿರುವ ಆಮ್ಲಜನಕ ಕೊರತೆ ಶೇಕಡ ಅರ್ಧದಷ್ಟೂ ನೀಗಿಲ್ಲ. ಆಕ್ಸಿಜನ್‌ ಎಕ್ಸ್‌ಪ್ರೆಸ್‌ ಮೂಲಕ ರಾಜ್ಯಕ್ಕೆ 240 ಮೆಟ್ರಿಕ್‌ ಟನ್‌ ಬಂದಿದೆ. ಉತ್ತರಪ್ರದೇಶಕ್ಕೆ ಹೋಲಿಸಿದರೆ ಇದು ಕಡಿಮೆ.

ಈ ನಡುವೆ ರಾಜ್ಯದಲ್ಲಿ ಆಮ್ಲಜನಕ ಉತ್ಪಾದಕ ಕಂಪನಿಗಳು ಏಪ್ರಿಲ್‌ 28ರಿಂದ ಮೇ 12ರವರೆಗೆ ಒಟ್ಟು 10,821 ಮೆಟ್ರಿಕ್‌ ಟನ್‌ನಷ್ಟು ರಾಜ್ಯಕ್ಕೆ ಸರಬರಾಜು ಮಾಡಿದೆ. ಈ ಪೈಕಿ ಜಿಂದಾಲ್‌ ಸ್ಟೀಲ್ಸ್‌ನಿಂದ 1,473 ಮೆ.ಟನ್‌ ಪೂರೈಕೆಯಾಗಿದೆ. 2021ರ ಏಪ್ರಿಲ್‌ 27ರಿಂದ 30 ರವರೆಗೆ ರಾಜ್ಯಕ್ಕೆ ಜಿಂದಾಲ್‌ ಸ್ಟೀಲ್‌ ಕಂಪನಿಯೊಂದೇ 290.93 ಟನ್‌ ಅಮ್ಲಜನಕ ಸರಬರಾಜು ಮಾಡಿದೆ.

ಈ ಸಮೂಹದ 4 ಕಂಪನಿಗಳು ಪ್ರತಿನಿತ್ಯ ಸರಾಸರಿ 1,000 ಟನ್‌ ಆಮ್ಲಜನಕವನ್ನು ಉತ್ಪಾದಿಸುತ್ತಿದೆ. ಇದರ ಪ್ರಕಾರ 4 ದಿನದಲ್ಲಿ 4,000 ಟನ್‌ ಆಮ್ಲಜನಕವನ್ನು ಉತ್ಪಾದಿಸಿದ್ದರೂ ಒಟ್ಟು ಉತ್ಪಾದನೆಯಲ್ಲಿ ರಾಜ್ಯಕ್ಕೆ ಅರ್ಧದಷ್ಟು ಮಾತ್ರ ಸರಬರಾಜು ಮಾಡಿತ್ತು.

4 ಘಟಕಗಳಿಂದ 1,000 ಟನ್‌ ಆಮ್ಲಜನಕ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಜಿಂದಾಲ್‌ ಸಮೂಹದ ಕಂಪನಿಗಳು 4 ದಿನದಲ್ಲಿ ಒಟ್ಟು 4,000 ಟನ್‌ ಆಮ್ಲಜನಕವನ್ನು ಪೂರೈಕೆ ಮಾಡಬಹುದಿತ್ತು. ಏಪ್ರಿಲ್‌ 27ರಂದು 569.71 ಟನ್‌ ಸರಬರಾಜು ಮಾಡಿದೆ. ಅದೇ ರೀತಿ ಏಪ್ರಿಲ್‌ 28ರಂದು 520.9, ಏಪ್ರಿಲ್‌ 29ರಂದು 531.72 ಟನ್‌, ಏಪ್ರಿಲ್‌ 30ರಂದು 450.82 ಟನ್‌ ಸೇರಿದಂತೆ ಒಟ್ಟು 4 ದಿನದಲ್ಲಿ 2,073.15 ಟನ್‌ ಸರಬರಾಜು ಮಾಡಿತ್ತು.

ಔಷಧ ನಿಯಂತ್ರಕರ ಕಚೇರಿ ದಾಖಲೆಗಳ ಪ್ರಕಾರ ರಾಜ್ಯದಲ್ಲಿ 69 ಮೆಡಿಕಲ್‌ ಆಕ್ಸಿಜನ್‌ ತಯಾರಿಸುವ ಘಟಕಗಳಿವೆ. ಆದರೆ ರಾಜ್ಯಕ್ಕೆ ಈ ಪೈಕಿ 7 ಘಟಕಗಳು ಮಾತ್ರ ಆಕ್ಸಿಜನ್‌ ಸರಬರಾಜು ಮಾಡಿವೆ. 62 ಕಂಪನಿಗಳಲ್ಲಿ ಉತ್ಪಾದನೆಯಾಗುತ್ತಿರುವ ಆಮ್ಲಜನಕವು ಯಾವ ರಾಜ್ಯಕ್ಕೆ ಸರಬರಾಜು ಅಗುತ್ತಿದೆ ಎಂಬ ಬಗ್ಗೆ ಔಷಧ ನಿಯಂತ್ರಕರ ಕಚೇರಿ ಮೂಲಗಳು ಮಾಹಿತಿ ಒದಗಿಸಲು ನಿರಾಕರಿಸಿದವು.

Tags: B S YediyurappaBJP KarnatakaChief SecretaryCovid 19D K ShivakumarDrugs ControllerJindal SteelsKPCCMedical OxygenOxygenOxygen ExpressOxygen shortagePraxairSiddaramaiahಆಕ್ಸಿಜನ್‌ಎಕ್ಸ್‌ಪ್ರೆಸ್‌ಆಮ್ಲಜನಕಆಮ್ಲಜನಕ ಕೊರತೆಔಷಧ ನಿಯಂತ್ರಕರುಕೆಪಿಸಿಸಿಕೋವಿಡ್‌ 19ಜಿಂದಾಲ್‌ ಸ್ಟೀಲ್ಸ್‌ಡಿ ಕೆ ಶಿವಕುಮಾರ್ಬಿ ಎಸ್‌ ಯಡಿಯೂರಪ್ಪಬಿಜೆಪಿ ಕರ್ನಾಟಕಮುಖ್ಯ ಕಾರ್ಯದರ್ಶಿವೈದ್ಯಕೀಯ ಆಮ್ಲಜನಕಸಿದ್ದರಾಮಯ್ಯ
Advertisement Banner
Previous Post

ಮುಂದುವರೆದ ಕೇಂದ್ರದ ಅಸಡ್ಡೆ; ಉತ್ತರ ಪ್ರದೇಶಕ್ಕೆ 3,310, ಕರ್ನಾಟಕಕ್ಕೆ 240 ಮೆ.ಟನ್‌ ಆಮ್ಲಜನಕ

Next Post

ಅಂತಿಮವಾಗದ ದರಪಟ್ಟಿ; ಕಚ್ಛಾ ಸಾಮಾಗ್ರಿ ದರ ಹೆಚ್ಚಳದ ಹೊರೆ, ಔಷಧಗಳ ತೀವ್ರ ಕೊರತೆ?

thefilestack

thefilestack

Next Post

ಅಂತಿಮವಾಗದ ದರಪಟ್ಟಿ; ಕಚ್ಛಾ ಸಾಮಾಗ್ರಿ ದರ ಹೆಚ್ಚಳದ ಹೊರೆ, ಔಷಧಗಳ ತೀವ್ರ ಕೊರತೆ?

Discussion about this post

Recommended

ಕೋವಿಡ್‌ ನಿರ್ವಹಣೆಗೆ 2,118.02 ಕೋಟಿ ಖರ್ಚು; ಇದು 14 ಇಲಾಖೆಗಳ ಲೆಕ್ಕ

6 years ago

ವಿಐಎಸ್‌ಎಲ್‌;ನಿಯಂತ್ರಣ ಮೀರಿದೆ, ಮುಚ್ಚಲು ಬಿಡುವುದಿಲ್ಲ ಎಂದವರಲ್ಲಿ ಯಾರು ಕಳ್ಳರು, ಯಾರು ಸುಳ್ಳರು?

3 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd