the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

ಸರ್ಕಾರಕ್ಕೆ 751 ಕೋಟಿ ವಾಪಾಸ್‌; ದುರ್ಬಲ ವರ್ಗಗಳಿಗೆ ಸೂರು ಕಲ್ಪಿಸಲು ವಿಫಲವಾಯಿತೇ?

thefilestack by thefilestack
July 15, 2021
in GOVERNANCE
0
0
SHARES
0
VIEWS
Share on FacebookShare on Twitter

ಬೆಂಗಳೂರು; ದುರ್ಬಲ ವರ್ಗದವರಿಗೆ ಕೈಗೆಟುಕುವ ರೀತಿಯಲ್ಲಿ ವಸತಿ ಒದಗಿಸುವ ಗುರಿ ಹೊಂದಿರುವ ಪ್ರಧಾನಮಂತ್ರಿ ಆವಾಸ್‌ ಯೋಜನೆ ನಗರ ಮತ್ತು ಗ್ರಾಮೀಣ ಯೋಜನೆಯೂ ಸೇರಿದಂತೆ ಹಲವು ಯೋಜನೆಗಳಿಗೆ ಮಂಜೂರಾಗಿದ್ದ ಒಟ್ಟು ಅನುದಾನದ ಪೈಕಿ 751.35 ಕೋಟಿ ರು.ಗಳನ್ನು ವಸತಿ ಇಲಾಖೆಯು ಉಳಿತಾಯದ ಹೆಸರಿನಲ್ಲಿ ಸರ್ಕಾರಕ್ಕೆ ಮರಳಿಸಿದೆ.

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಸತಿ ರಹಿತ ದುರ್ಬಲ ವರ್ಗಗಳಿಗೆ ಸೂರು ಕಲ್ಪಿಸುವ ಯೋಜನೆ ಅನುಷ್ಠಾನಗೊಳಿಸುವಲ್ಲಿ ರಾಜ್ಯ ಬಿಜೆಪಿ ಸರ್ಕಾರವು ವಿಫಲವಾಗಿದೆ ಎಂಬ ಬಲವಾದ ಆರೋಪ ಮತ್ತು ರಾಜ್ಯ ಸರ್ಕಾರದ ಬಸವ ವಸತಿ ಯೋಜನೆ ಸೇರಿದಂತೆ ಇನ್ನಿತರೆ ವಸತಿ ಯೋಜನೆಗಳಡಿಯಲ್ಲಿ ಮನೆಗಳನ್ನು ಪೂರ್ಣಗೊಳಿಸಲು 6,200 ಕೋಟಿ ರು.ಗಳನ್ನು ಅಗತ್ಯವಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಸತಿ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾಹಿತಿ ಒದಗಿಸಿದ ಬೆನ್ನಲ್ಲೇ 751 ಕೋಟಿ ರು.ಗಳನ್ನು ಆರ್ಥಿಕ ಇಲಾಖೆಗೆ ಹಿಂದಿರುಗಿಸಿರುವುದು ಮುನ್ನೆಲೆಗೆ ಬಂದಿದೆ.

ವಸತಿ ಇಲಾಖೆಯ 2020-21ನೇ ಸಾಲಿನ ಲೆಕ್ಕ ಶೀರ್ಷಿಕೆ (2216-80-198-6-02)ಯಲ್ಲಿ ಪ್ರಧಾನಮಂತ್ರಿ ಆವಾಸ್‌ ಗ್ರಾಮೀಣ ಉಪ ಲೆಕ್ಕ ಶೀರ್ಷಿಕೆ (300) ಯಡಿಯಲ್ಲಿ 50000.00 ಲಕಷ ರು., ಲೆಕ್ಕ ಶೀರ್ಷಿಕೆ (2216-02-800-0-04) ಪ್ರಧಾನ ಮಂತ್ರಿ ಆವಾಸ್‌ ಯೋಜನೆ ನಗರ ಉಪ ಲೆಕ್ಕ ಶೀರ್ಷಿಕೆ (032) ಬಂಡವಾಳ ಆಸ್ತಿ ಸೃಜನೆಗೆ ಅವಕಾಶಗಳ ಅಡಿಯಲ್ಲಿ 0.46 ಲಕ್ಷ, ಪರಿಶಿಷ್ಟ ಜಾತಿ ಉಪ ಯೋಜನೆ ಅಡಿ 1134.40 ಲಕ್ಷ, ಮತ್ತು ಗಿರಿಜನ ಉಪ ಯೋಜನೆಯಡಿ 13536.00 ಲಕ್ಷ, ಆಶ್ರಯ ಸಾಲ ಮತ್ತು ಬಡ್ಡಿ ಪಾವತಿ, ಸಾಲ ಮೇಲುಸ್ತುವಾರಿ ಅಡಿ 174.25 ಲಕ್ಷ, ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮ 28.14 ಲಕ್ಷ, ಸಹಾಯನುದಾನ 56.28 ಲಕ್ಷ ಸೇರಿದಂತೆ ಒಟ್ಟು 751.35 ಕೋಟಿ ರು.ಗಳನ್ನು ಹಿಂದಿರುಗಿಸಲು ಆರ್ಥಿಕ ಇಲಾಖೆಯು ಒಪ್ಪಿರುವುದು ದಾಖಲೆಯಿಂದ ತಿಳಿದು ಬಂದಿದೆ.

2015ರ ಜೂನ್‌ 25ರಂದು ಆರಂಭಗೊಂಡಿರುವ ಪ್ರಧಾನಮಂತ್ರಿ ಆವಾಸ್‌ ಯೋಜನೆ ಪ್ರಕಾರ 2022ರ ಮಾರ್ಚ್‌ ಅಂತ್ಯಕ್ಕೆ ನಗರಗಳಲ್ಲಿ ವಾಸಿಸುವ ಬಡವರಿಗೆ 2 ಕೋಟಿ ಮನೆಗಳನ್ನು ನಿರ್ಮಿಸಬೇಕು. ಇದನ್ನು ರಿಯಲ್‌ ಎಸ್ಟೇಟ್‌ ಬಿಲ್ಡರ್‌ಗಳೊಂದಿಗೆ ಆಯ್ದ ನಗರಗಳಲ್ಲಿ ಪರಿಸರ ಸ್ನೇಹಿ ಪದ್ಧತಿಗಳನ್ನು ಬಳಸಿಕೊಂಡು ಪಕ್ಕಾ ಮನೆಗಳನ್ನು ಕಟ್ಟುವ ಉದ್ಧೇಶ ಹೊಂದಿದೆ.

ರಾಜ್ಯದಲ್ಲಿ ಈ ಯೋಜನೆಯಡಿ 6,51,203 ಮನೆಗಳು ಮಂಜೂರಾಗಿವೆ. ಆದರೆ ಈವರೆವಿಗೆ ಶೇ.25ರಷ್ಟು ಮಾತ್ರ ಪ್ರಗತಿ ಕಂಡಿದೆ ಎಂದು ತಿಳಿದು ಬಂದಿದೆ. ಬಿಡುಗಡೆಯಾಗಿದ್ದ ಅನುದಾನವನ್ನು ಪೂರ್ಣ ಪ್ರಮಾಣವಾಗಿ ಬಳಸಿಕೊಳ್ಳದ ವಸತಿ ಇಲಾಖೆಯು 500 ಕೋಟಿಯಷ್ಟು ಹಣವನ್ನು ಉಳಿತಾಯದ ಹೆಸರಿನಲ್ಲಿ ಸರ್ಕಾರಕ್ಕೆ ಹಿಂದಿರುಗಿಸಿರುವುದು ಸರ್ಕಾರದ ಇಚ್ಛಾಶಕ್ತಿಯ ಕೊರತೆಗೆ ಕೈಗನ್ನಡಿ ಹಿಡಿದಂತಾಗಿದೆ.

ಇತ್ತೀಚೆಗಷ್ಟೇ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯು ವಸತಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿತ್ತು. ವಿವಿಧ ವಸತಿ ಯೋಜನೆಗಳಡಿಯಲ್ಲಿ ಮುಂದಿನ ಎರಡು ವರ್ಷಗಳಲ್ಲಿ 9 ಲಕ್ಷ ಮನೆಗಳನ್ನು ನಿರ್ಮಿಸಲು ನಿರ್ಧರಿಸಿತ್ತು. ಈ ಪೈಕಿ ರಾಜ್ಯದ ವಸತಿ ಯೋಜನೆಗಳಡಿ ನಿರ್ಮಿಸುವ 5 ಲಕ್ಷ ಮನೆ ಮತ್ತು ಕೇಂದ್ರ ಸರ್ಕಾರದ ಯೋಜನೆಗಳಡಿ 4 ಲಕ್ಷ ಮನೆಗಳೂ ಸೇರಿವೆ ಎಂದು ಸಭೆಯಲ್ಲಿ ಮಾಹಿತಿ ಒದಗಿಸಿತ್ತು.

ಮನೆ ನಿರ್ಮಿಸಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಫಲಾನುಭವಿಗಳಿಗೆ 1.75 ಲಕ್ಷ ಹಾಗೂ ಇತರರಿಗೆ 1.20 ಲಕ್ಷ ಸಹಾಯ ಧನ ನೀಡುವುದಲ್ಲದೆ ಕೇಂದ್ರದ ವಸತಿ ಯೋಜನೆಗಳಡಿ ಮಂಜೂರಾಗಿರುವ ಮನೆಗಳ ಫಲಾನುಭವಿಗಳಿಗೆ ಶೇ.60 ಅಂದರೆ 72,000 ಮತ್ತು ರಾಜ್ಯದ ಪಾಲು ಶೇ.40 ಅಂದರೆ 48,000 ರು. ಸಹಾಯಧನ ಲಭ್ಯವಿದೆ ಎಂದು ಸಚಿವ ಸೋಮಣ್ಣ ಅವರು ಬೀಗಿದ್ದರು.

ಬಸವ ವಸತಿ, ಡಾ ಬಿ ಆರ್‌ ಅಂಬೇಡ್ಕರ್‌ ನಿವಾಸ್‌, ದೇವರಾಜು ಅರಸು ಮತ್ತು ವಾಜಪೇಯಿ ನಗರ ವಸತಿ ಯೋಜನೆಗಳಡಿಯಲ್ಲಿ ಕೈಗೆತ್ತಿಕೊಂಡಿರುವ ಮನೆಗಳನ್ನು ಪೂರ್ಣಗೊಳಿಸಲು 6,200 ಕೋಟಿ ರು. ಅಗತ್ಯವಿದೆ ಎಂದು ಗೊತ್ತಾಗಿದೆ. ಅಲ್ಲದೆ ಮುಖ್ಯಮಂತ್ರಿಗಳ 1 ಲಕ್ಷ ಬೆಂಗಳೂರು ಬಹುಮಹಡಿ ಯೋಜನೆಯಡಿ ಆಗಸ್ಟ್‌ 15ರಂದು 5 ಸಾವಿರ ಮನೆಗಳನ್ನು ಹಂಚಿಕೆ ಮಾಡಲು ಸಭೆಯು ತೀರ್ಮಾನಿಸಿದೆ.

2013-14ನೇ ಸಾಲಿನಿನಿಂದಲೂ ಆಡಳಿತಾತ್ಮಕ ವೆಚ್ಚಕ್ಕಾಗಿ ಪ್ರತಿಶತ 4ರಷ್ಟು ಅನುದಾನವನ್ನು ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗಿತ್ತು. ಆದರೆ ಈ ಅನುದಾನವನ್ನು ಖರ್ಚು ಮಾಡುವ ಸಂಬಂಧವಾಗಿ ನಿಗಮದಿಂದಲೇ ಕ್ರಿಯಾ ಯೋಜನೆಯನ್ನು ತಯಾರಿಸಿ ಈಗಾಗಲೇ ಹಣ ನೀಡಲಾಗಿದ್ದರೂ ಬಹಳಷ್ಟು ಜಿಲ್ಲೆಗಳು ಅನುದಾನವನ್ನು ಖರ್ಚು ಮಾಡಿರಲಿಲ್ಲ.

2016-17ನೇ ಸಾಲಿನ 2ನೇ ಕಂತಿನ ಅನುದಾನ ಮತ್ತು 2017-18ನೇ ಸಾಲಿನ ಆಡಳಿತಾತ್ಮಕ ವೆಚ್ಚದ ಅನುದಾನವನ್ನು ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿರಲಿಲ್ಲ. ಆದರೂ ಸುಮಾರು 76.85 ಕೋಟಿಯಷ್ಟು ಅನುದಾನವು ಖರ್ಚಾಗದೇ ಉಳಿದಿತ್ತು.

Tags: Ambedkar Housing SchemeB S YediyurappaBasava Housing SchemeChief SecretaryD K ShivakumarFinance Departmenth d kumarswamyHousing DepartmentHousing SchemesKHBPMAYPradhan Mantri Awas YojanaRajiv Gandhi Housing CorporationSiddaramaiahv somannaVajpayee Housing Schemeಅಂಬೇಡ್ಕರ್‌ ವಸತಿ ಯೋಜನೆಆರ್ಥಿಕ ಇಲಾಖೆಎಚ್‌ ಡಿ ಕುಮಾರಸ್ವಾಮಿಕರ್ನಾಟಕ ಗೃಹ ಮಂಡಳಿಕೆಎಚ್‌ಬಿಡಿ ಕೆ ಶಿವಕುಮಾರ್ಪಿಎಂಎವೈಪ್ರಧಾನಮಂತ್ರಿ ಆವಾಸ್‌ ಯೋಜನೆಬಸವ ವಸತಿ ಯೋಜನೆಬಿ ಎಸ್‌ ಯಡಿಯೂರಪ್ಪಮುಖ್ಯ ಕಾರ್ಯದರ್ಶಿರಾಜೀವ್‌ಗಾಂಧಿ ವಸತಿ ನಿಗಮವಸತಿ ಇಲಾಖೆವಸತಿ ಯೋಜನೆಗಳುವಾಜಪೇಯಿ ವಸತಿ ಯೋಜನೆವಿ ಸೋಮಣ್ಣಸಿದ್ದರಾಮಯ್ಯ
Advertisement Banner
Previous Post

ಸಿ ಎಂ ಕಚೇರಿಯಲ್ಲಿ ಅನಧಿಕೃತ ಕೆಲಸ; ಸಾಕ್ಷ್ಯಾಧಾರಗಳಿದ್ದರೂ ದೂರರ್ಜಿ ಮುಕ್ತಾಯ

Next Post

ಕೆಆರ್‌ಎಸ್‌ ಪ್ರಕರಣ; ಅಕ್ರಮ ಗಣಿಗಾರಿಕೆ ಪ್ರದೇಶಗಳ ಪರಿವೀಕ್ಷಣೆಗೆ ಸಿದ್ಧತೆ ನಡೆಸಿದ ಪಿಎಸಿ

thefilestack

thefilestack

Next Post

ಕೆಆರ್‌ಎಸ್‌ ಪ್ರಕರಣ; ಅಕ್ರಮ ಗಣಿಗಾರಿಕೆ ಪ್ರದೇಶಗಳ ಪರಿವೀಕ್ಷಣೆಗೆ ಸಿದ್ಧತೆ ನಡೆಸಿದ ಪಿಎಸಿ

Discussion about this post

Recommended

1,830  ಪಂಚಾಯ್ತಿಗಳಲ್ಲಿ ದುರುಪಯೋಗ; 356.65 ಕೋಟಿ ವೆಚ್ಚಕ್ಕೆ ಪೂರಕ ಬಿಲ್‌ಗಳೇ ಇಲ್ಲ, ಜಿಯೋಗೂ ಉದಾರತೆ

9 months ago

ಉಕ್ಕು ಕಾರ್ಖಾನೆ ಸ್ಥಾಪಿಸದ ಮಿತ್ತಲ್‌ ಕಂಪನಿಯ ಓಲೈಕೆ, ವಿಐಎಸ್‌ಎಲ್‌ನ್ನು ಸುಪರ್ದಿಗೆ ಪಡೆಯಲು ಹಿಂದೇಟೇಕೆ?

3 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd