the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

ಅಮಿತ್‌ ಶಾ ಉದ್ಘಾಟಿಸಿದ ಕಾರ್ಯಕ್ರಮಗಳಿಗೆ 89. 46 ಲಕ್ಷ ರು. ಜಾಹೀರಾತು ವೆಚ್ಚ

thefilestack by thefilestack
August 31, 2021
in GOVERNANCE
0
0
SHARES
1
VIEWS
Share on FacebookShare on Twitter

ಬೆಂಗಳೂರು; ಪೊಲೀಸ್‌ ಗೃಹ 2025 ಯೋಜನೆಗೆ ಚಾಲನೆ, ಬಹುಮಹಡಿ ಪೊಲೀಸ್‌ ವಸತಿ ಗೃಹಗಳ ಉದ್ಘಾಟನೆ, ಭದ್ರಾವತಿಯಲ್ಲಿ ಕ್ಷಿಪ್ರ ಕಾರ್ಯಪಡೆ (ಆರ್‌ಎಎಫ್‌) ಆಡಳಿತ ಕಚೇರಿ ಸ್ಥಾಪನೆಗೊಳಿಸಲು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ರಾಜ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಸರ್ಕಾರವು ಒಟ್ಟು 89.46 ಲಕ್ಷ ರು.ಗಳನ್ನು ಜಾಹೀರಾತಿಗೆ ಖರ್ಚು ಮಾಡಿದೆ.

ಇದೇ ಸೆಪ್ಟಂಬರ್‌ ತಿಂಗಳಲ್ಲಿ ದಾವಣಗೆರೆಯಲ್ಲಿರುವ ಪೊಲೀಸ್‌ ಪಬ್ಲಿಕ್‌ ಸ್ಕೂಲ್‌ ಉದ್ಘಾಟನೆ ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳ ಉದ್ಘಾಟನೆಗೆ ಅಮಿತ್‌ ಶಾ ಅವರು ಭೇಟಿ ನೀಡುತ್ತಿರುವ ಬೆನ್ನಲ್ಲೇ 2021ರ ಜನವರಿ 18ರಂದು ಆಗಮಿಸಿದ್ದ ಸಂದರ್ಭದಲ್ಲಿ ಜಾಹೀರಾತಿಗೆ ಖರ್ಚು ಮಾಡಿದ್ದ ವೆಚ್ಚದ ವಿವರವು ಮುನ್ನೆಲೆಗೆ ಬಂದಿದೆ.

2021ರ ಜನವರಿ 18ರಂದು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅಮಿತ್‌ ಶಾ ಅವರು ಪೊಲೀಸರ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಕುರಿತು  ಪತ್ರಿಕಾ ಜಾಹೀರಾತನ್ನು ನೇರವಾಗಿ ಏಜೆನ್ಸಿಗಳಿಗೆ ಬಿಡುಗಡೆ ಮಾಡಿತ್ತು ಎಂದು ತಿಳಿದು ಬಂದಿದೆ. ಬಹುವರ್ಣದಲ್ಲಿ ಒಳಪುಟಗಳಲ್ಲಿ ಪ್ರಕಟವಾಗುವ ಜಾಹೀರಾತುಗಳಿಗೆ ಶೇ.25ರಷ್ಟು ಹೆಚ್ಚುವರಿ ದರ ಅನ್ವಯವಾಗಿತ್ತು.

ಜಾಹೀರಾತು ಸಂಸ್ಥೆಗಳಿಗೆ ಪಾವತಿಸಿರುವ ಮೊತ್ತದ ವಿವರ

ಎಂ ಸಿ ಎ ಬೆಂಗಳೂರು – 19, 66, 277 ರು.

ಆಡ್ವಿಟ್‌ ಇಂಡಿಯಾ ಬೆಂಗಳೂರು- 13, 06, 286 ರು.

ಬ್ರಾಂಜ್‌ ಕಮ್ಯುನಿಕೇಷನ್‌ ಬೆಂಗಳೂರು 9, 63, 850 ರು.

ಶ್ರೇಷ್ಠ ಕಮ್ಯುನಿಕೇಷನ್‌ ಬೆಂಗಳೂರು- 6, 50, 890 ರು.

ಯಕ್ಷಿ ಕಮ್ಯುನಿಕೇಷನ್‌ ಬೆಂಗಳೂರು – 5, 50, 805 ರು.

ಝೇಂಕಾರ್‌ ಅಡ್ವರ್ಟೈಸಿಂಗ್‌ ಬೆಂಗಳೂರು – 1, 64, 850 ರು.

ಝೇಂಕಾರ್‌ ಅಡ್ವರ್ಟೈಸಿಂಗ್‌ ಬೆಂಗಳೂರು – 1, 64, 850 ರು.

ಫೋರ್‌ ವಿಂಡ್ಸ್‌ ಮಾಸ್‌ ಕಮ್ಯುನಿಕೇಷನ್ಸ್‌ – 5, 34, 114 ರು.

ಆವಂತಿ ಅಡ್ವರ್ಟೈಸಿಂಗ್‌ ಬೆಂಗಳೂರು – 5, 98, 182 ರು.

ಸ್ಪಾನ್‌ ಕಮ್ಯುನಿಕೇಷನ್‌ ಬೆಂಗಳೂರು – 5, 34, 773 ರು.

ಆಕಾರ್‌ ಅಡ್ವರ್ಟೈಸಿಂಗ್‌ ಬೆಂಗಳೂರು – 13, 07, 773 ರು.

ರಾಜ್ಯ ಬಿಜೆಪಿ ಸರ್ಕಾರವು ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬಕ್ಕೆ ಪತ್ರಿಕೆಗಳ ಪ್ರಾಯೋಜಿತ ಪುರವಣಿಗಳಿಗೆ 44.85 ಲಕ್ಷ ರು.ಗಳನ್ನು ವೆಚ್ಚ ಮಾಡಿದ್ದನ್ನು ಸ್ಮರಿಸಬಹುದು.

ಅತಿಥಿ ಉಪನ್ಯಾಸಕರಿಗೆ ಗೌರವ ಸಂಭಾವನೆ, ಆಟೋ ಚಾಲಕರು, ತರಕಾರಿ, ಹೂ ಬೆಳೆಗಾರರು, ನೇಕಾರರು, ಸವಿತಾ ಸಮಾಜ, ವಲಸೆ ಕಟ್ಟಡ ಕಾರ್ಮಿಕರು ಸೇರಿದಂತೆ ಇನ್ನಿತರರಿಗೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ನೀಡದ ಸರ್ಕಾರ ಅಮಿತ್‌ ಶಾ ಕಾರ್ಯಕ್ರಮಗಳ ಜಾಹೀರಾತಿಗೆ 89 ಲಕ್ಷ ರು. ಖರ್ಚು ಮಾಡಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.

Tags: AdvertisementsAmit Shahb l santhoshB S YediyurappaBanquet HallBasavaraj BommaiBhadravathiD K Shivakumarh d kumarswamyInformation Departmentnarendra modiPolice Housing SchemeRAFSiddaramaiahVidhana SoudhaVijayapuraಅಮಿತ್‌ ಶಾಆರ್‌ಎಎಫ್‌ಎಚ್‌ ಡಿ ಕುಮಾರಸ್ವಾಮಿಕಾಂಗ್ರೆಸ್‌ಕೆ ಎಸ್‌ ಈಶ್ವರಪ್ಪಕ್ಷಿಪ್ರ ಕಾರ್ಯಪಡೆಜಾಹೀರಾತುಜೆಡಿಎಸ್‌ಡಿ ಕೆ ಶಿವಕುಮಾರ್ನರೇಂದ್ರ ಮೋದಿಪೊಲೀಸ್‌ ಗೃಹ ಯೋಜನೆಬಸವರಾಜ ಬೊಮ್ಮಾಯಿಬಿ ಎಲ್‌ ಸಂತೋಷ್‌ಬಿ ಎಸ್‌ ಯಡಿಯೂರಪ್ಪಬಿಜೆಪಿಬ್ಯಾಂಕ್ವೆಟ್‌ ಹಾಲ್‌ಬ್ಯಾಂಕ್ವೆಟ್‌ ಹಾಲ್‌ಭದ್ರಾವತಿವಾರ್ತಾ ಸಾರ್ವಜನಿಕ ಸಂಪರ್ಕ ಇಲಾಖೆವಿಜಯಪುರವಿಧಾನ ಸೌಧಸಿದ್ದರಾಮಯ್ಯ
Advertisement Banner
Previous Post

ಅನುಷ್ಠಾನಗೊಳ್ಳದ ಶಿಫಾರಸ್ಸು; ಅಧಿವೇಶನ ಕಾರ್ಯಕಲಾಪಕ್ಕೆ ನಿರ್ಬಂಧ ವಿಧಿಸದ ಪರಿಷತ್‌

Next Post

8 ತಿಂಗಳಲ್ಲಿ ರಾಜ್ಯಕ್ಕೆ 3.54 ಕೋಟಿ ಲಸಿಕೆ ಸರಬರಾಜು; ದರದ ಮಾಹಿತಿ ಲಭ್ಯವಿಲ್ಲವೇ?

thefilestack

thefilestack

Next Post

8 ತಿಂಗಳಲ್ಲಿ ರಾಜ್ಯಕ್ಕೆ 3.54 ಕೋಟಿ ಲಸಿಕೆ ಸರಬರಾಜು; ದರದ ಮಾಹಿತಿ ಲಭ್ಯವಿಲ್ಲವೇ?

Discussion about this post

Recommended

ಗ್ರಾಮ ಪಂಚಾಯ್ತಿಗಳಲ್ಲಿ 409.96 ಕೋಟಿ ರು. ದುರುಪಯೋಗ; ಲೆಕ್ಕಪರಿಶೋಧನೆ ವರದಿ ಬಹಿರಂಗ

4 years ago

ಕಾಕಂಬಿ ಹಗರಣ; ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಅಧಿಕಾರ ಹಿಡಿದು ತಿಂಗಳಾದರೂ ಉಸಿರೆತ್ತದ ಕಾಂಗ್ರೆಸ್‌

3 years ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd