the file
No Result
View All Result
Subscribe to get Updates
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version
The File
No Result
View All Result
Home GOVERNANCE

ಪರಿಶಿಷ್ಟರಿಗಿಟ್ಟಿದ್ದ 300 ಕೋಟಿ ಅನ್ಯ ಉದ್ದೇಶಕ್ಕೆ ಖರ್ಚು; ಪೇಶ್ವೆಗೆ ಆಯೋಗದಿಂದ ನೋಟೀಸ್‌ ಜಾರಿ

thefilestack by thefilestack
October 12, 2021
in GOVERNANCE
0
0
SHARES
0
VIEWS
Share on FacebookShare on Twitter

ಬೆಂಗಳೂರು; ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟು ಪಂಗಡಗಳ ಅಭಿವೃದ್ಧಿಗೆ ಭೂ ಸ್ವಾಧೀನ ವೆಚ್ಚಗಳ ಶೀರ್ಷಿಕೆಯಡಿ ಮತ್ತು ಟಿಎಸ್‌ಪಿ ಅನುದಾನ ಸೇರಿ ಒಟ್ಟು 300 ಕೋಟಿ ರು. ಅನುದಾನವನ್ನು ಮೂಲ ಉದ್ದೇಶಕ್ಕೆ ಹಂಚಿಕೆ ಮಾಡದೇ ಬೇರೊಂದು ಉದ್ದೇಶದ ಕಾಮಗಾರಿಗಳಿಗೆ ಖರ್ಚು ಮಾಡಿರುವ ಪ್ರಕರಣ ಇದೀಗ ಬಹಿರಂಗವಾಗಿದೆ. ಈ ಸಂಬಂಧ ಜಲ ಸಂಪನ್ಮೂಲ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಲಕ್ಷ್ಮಣರಾವ್‌ ಪೇಶ್ವೆ ಅವರಿಗೆ ಕರ್ನಾಟಕ ರಾಜ್ಯ ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳ ಆಯೋಗವು ನೋಟೀಸ್‌ ಜಾರಿಗೊಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಿಗದಿತ ಕಾಲದೊಳಗೆ ಉತ್ತರವನ್ನು ನೀಡದಿದ್ದಲ್ಲಿ ಆಯೋಗದ ಆಧಿನಿಯಮದ ಮೇರೆಗೆ ಸಿವಿಲ್‌ ನ್ಯಾಯಾಲಯಗಳ ಅಧಿಕಾರಗಳನ್ನು ಚಲಾಯಿಸಬಹುದು ಮತ್ತು ಆಯೋಗದ ಮುಂದೆ ಖುದ್ದಾಗಿ ಅಥವಾ ಪ್ರತಿನಿಧಿಯ ಮೂಲಕ ಹಾಜರಾಗಬೇಕು ಎಂದು ನೋಟೀಸ್‌ನಲ್ಲಿ ತಿಳಿಸಲಾಗಿದೆ. 2021ರ ಸೆಪ್ಟಂಬರ್‌ 24ರಂದು ನೀಡಿರುವ ನೋಟೀಸ್‌ನ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಪ್ರಕರಣದ ಹಿನ್ನೆಲೆ

ಕೃಷ್ಣ ಭಾಗ್ಯ ಜಲನಿಗಮದಲ್ಲಿ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿಯಲ್ಲಿ ಭೂ ಸ್ವಾಧೀನ ಪುನರ್‌ ವಸತಿ ಮತ್ತು ಪುನರ್‌ ನಿರ್ಮಾಣ ಕಾಮಗಾರಿಗಳಿಗೆ ಒಟ್ಟು 201.17 ಕೋಟಿ ರು. ಮತ್ತು ಟಿಎಸ್‌ಪಿ ಯೋಜನೆಯಡಿ 98.83 ಕೋಟಿ ರು. ಸೇರಿದಂತೆ ಒಟ್ಟು 300 ಕೋಟಿ ಅನುದಾನ ಮೀಸಲಿರಿಸಿತ್ತು. ಈ ಅನುದಾನದಲ್ಲಿ ಕೃಷ್ಣ ಮೇಲ್ದಂಡೆ ಯೋಜನೆ ಹಂತ -1 ಮತ್ತು ಹಂತ-2ರಲ್ಲಿ ಮುಳುಗಡೆಯಾಗಿರುವ ಗ್ರಾಮಗಳ ಪುನರ್‌ ವಸತಿ ಕೇಂದ್ರಗಳ ಪೈಕಿ ಕೆಲ ಗ್ರಾಮಗಳಲ್ಲಿ ನಿವೇಶನ ಹಂಚಿಕೆ ಮಾಡಲಾಗುತ್ತಿತ್ತು.

ಅಲ್ಲದೆ ಮನೆ ನಿರ್ಮಾಣ ಮಾಡದೇ ಇರುವ ಎಸ್‌ ಸಿ ಎಸ್‌ ಟಿ ಸಂತ್ರಸ್ತರನ್ನು ಗುರುತಿಸಿ ಮನೆ ನಿರ್ಮಿಸಿಕೊಡುವ ಕಾರ್ಯಕ್ರಮಕ್ಕೆ 2017-18ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಪರಿಷತ್‌ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಅದರಂತೆ ಕೃಷ್ಣ ಮೇಲ್ದಂಡೆ ಯೋಜನೆ ಹಂತ-3ರಲ್ಲಿ ಬಾಧಿತರಾಗುವ 20 ಗ್ರಾಮಗಳ ಪೈಕಿ ಆದ್ಯತೆ ಮೇರೆಗೆ 9 ಗ್ರಾಮಗಳಿಗೆ ಸಂಬಂಧಪಟ್ಟಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಫಲಾನುಭವಿಗಳ ಕುಟುಂಬಗಳನ್ನು ಗುರುತಿಸಿ ಪ್ರತಿ ಕುಟುಂಬಕ್ಕೆ ಮನೆ ನಿರ್ಮಾಣ ಮಾಡಿಕೊಡಲು ತೀರ್ಮಾನಿಸಲಾಗಿತ್ತು ಎಂದು ತಿಳಿದು ಬಂದಿದೆ.

ಈ ಉದ್ದೇಶಕ್ಕೆ 2017-18ನೇ ಸಾಲಿನಲ್ಲಿ ಎಸ್‌ಸಿಪಿ ಶೀರ್ಷಿಕೆಯಡಿ 201.17 ಕೋಟಿ ಮತ್ತು ಟಿಎಸ್‌ಪಿ ಅಡಿಯಲ್ಲಿ 98.83 ಕೋಟಿ ರು ಸೇರಿ ಒಟ್ಟು 300 ಕೋಟಿ ರು. ಅನುದಾನವನ್ನು ಭೂ ಸ್ವಾಧೀನ ವೆಚ್ಚಗಳ ಶೀರ್ಷಿಕೆಯಡಿಯಲ್ಲಿ ಬಳಸಲು ಅನುಮೋದನೆ ಕೋರಿ ಕೆಬಿಜೆಎನ್‌ಎಲ್‌ ವ್ಯವಸ್ಥಾಪಕ ನಿರ್ದೇಶಕರು ಜಲ ಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಗೆ 2018ರ ಜೂನ್‌ 30 ಮತ್ತು ಜುಲೈ 3ರಂದು ಪತ್ರ ಬರೆದಿದ್ದರು.

ಆದರೆ ಕೆಬಿಜೆಎನ್‌ಎಲ್‌ ವ್ಯವಸ್ಥಾಪಕ ನಿರ್ದೇಶಕರು ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟು ಆಯೋಗಕ್ಕೆ ಬರೆದಿದ್ದ ಉಲ್ಲೇಖ 2 ರ ಪತ್ರವದಲ್ಲಿ ಜಲ ಸಂಪನ್ಮೂಲ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಿಂದ ಯಾವುದೇ ನಿರ್ದೇಶನಗಳನ್ನು ಸ್ವೀಕರಿಸಿಲ್ಲ ಎಂದು ತಿಳಿಸಿದ್ದರು ಎಂದು ಗೊತ್ತಾಗಿದೆ.

ಅನುದಾನ ಬಳಕೆ ಕುರಿತು ಸರ್ಕಾರದಿಂದ ಯಾವುದೇ ನಿರ್ದೇಶನ ಬರದಿರುವುದನ್ನೇ ಮುಂದಿಟ್ಟುಕೊಂಡು ಕೆಬಿಜೆಎನ್‌ಎಲ್‌ ವ್ಯವಸ್ಥಾಪಕ ನಿರ್ದೇಶಕರು 7(ಡಿ) ಅಡಿಯಲ್ಲಿ ನಿಯಮ ಉಲ್ಲೇಖಿಸಿ ಅನುದಾನ ದುರ್ಬಳಕೆ ಮಾಡಿಕೊಳ್ಳಲು ಜಲ ಸಂಪನ್ಮೂಲ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಪರೋಕ್ಷವಾಗಿ ಕಾರಣರಾಗಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

ಸಂವಿಧಾನಬದ್ಧ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಅಭಿವೃದ್ಧಿಗೆ ಉದ್ದೇಶಪೂರ್ವಕವಾಗಿ ವಿಳಂಬ ನೀತಿ ಅನುಸರಿಸಲಾಗಿದೆ. ಶೋಷಿತ ಸಮುದಾಯಗಳ ಅಭಿವೃದ್ದಿಗೆ ಮೀಸಲಿರಿಸಿದ್ದ ಒಟ್ಟು 300 ಕೋಟಿ ರು.ಗಳ ಅನುದಾನವನ್ನು ಎಸ್‌ ಸಿ ಎಸ್‌ ಟಿ ಸಮುದಾಯಗಳ ಅಭಿವೃದ್ಧಿಗೆ ಸಂಬಂಧಪಡದ ಕಾಮಗಾರಿಗಳಿಗೆ ಅಕ್ರಮವಾಗಿ ಕಾನೂನುಬಾಹಿರವಾಗಿ ಲೆಕ್ಕ ಶೀರ್ಷಿಕೆಯನ್ನೇ ಬದಲಾವಣೆ ಮಾಡಲಾಗಿದೆ ಎಂದು ಗೊತ್ತಾಗಿದೆ.

‘ಇದು ಕೆಬಿಜೆಎನ್‌ಎಲ್‌ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಜಲ ಸಂಪನ್ಮೂಲ ಇಲಾಖೆಯ ಸರ್ಕಾರದ ಕಾರ್ಯದರ್ಶಿಯೂ ಶಾಮೀಲಾಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಇದು ಕಾನೂನಿನ ನಿರ್ದೇಶನಗಳನ್ನು ಉಲ್ಲಂಘಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರಿಗೆ ಅನ್ಯಾಯ ಮಾಡಲಾಗಿದೆಯಲ್ಲದೆ ಕಾನೂನಿನಡಿ ಗುರುತರ ಅಪರಾಧವನ್ನು ಎಸಗಿದ್ದಾರೆ,’ ಎಂದು ಕೊಪ್ಪಳ ಜಿಲ್ಲಾ ಪಂಚಾಯ್ತಿಯ ಮಾಜಿ ಅಧ್ಯಕ್ಷ ಮುಕುಂದರಾವ್‌ ಭವಾನಿಮಠ ಅವರು ಆರೋಪಿಸಿದ್ದಾರೆ.

Tags: Basavaraj BommaiChief SecretaryD K ShivakumarGovind Karjolh d kumarswamyJ C MadhuswamiKBJNLLakshmana Rao PeshveMinor IrrigationMukundrao BhavanimathP RavikumarPrabhakar ChiniRakesh SinghSC ST CommissionSCP TSPSecretarySiddaramaiahWater Resources Departmentಅನುಸೂಚಿತ ಜಾತಿ ಅನುಸೂಚಿತ ಬುಡಕಟ್ಟು ಆಯೋಗಎಚ್‌ ಡಿ ಕುಮಾರಸ್ವಾಮಿಕಾರ್ಯದರ್ಶಿಕೃಷ್ಣ ಭಾಗ್ಯ ಜಲನಿಗಮಕೆಬಿಜೆಎನ್‌ಎಲ್‌ಗೋವಿಂದ ಕಾರಜೋಳಜಲ ಸಂಪನ್ಮೂಲ ಇಲಾಖೆಜೆ ಸಿ ಮಾಧುಸ್ವಾಮಿಡಿ ಕೆ ಶಿವಕುಮಾರ್ಪರಿಶಿಷ್ಟ ಜಾತಿ ಉಪ ಯೋಜನೆಪರಿಶಿಷ್ಟ ಬುಡಕಟ್ಟು ಉಪ ಯೋಜನೆಪಿ ರವಿಕುಮಾರ್‌ಪ್ರಭಾಕರ್‌ ಚಿಣಿಬಸವರಾಜ ಬೊಮ್ಮಾಯಿಬಿ ಎಲ್‌ ಸಂತೋಷ್‌ಮುಕುಂದರಾವ್‌ ಭವಾನಿಮಠಮುಖ್ಯ ಕಾರ್ಯದರ್ಶಿರಾಕೇಶ್‌ ಸಿಂಗ್‌ಲಕ್ಷ್ಮಣರಾವ್‌ ಪೇಶ್ವೆಸಿದ್ದರಾಮಯ್ಯ
Advertisement Banner
Previous Post

ಮುತ್ತಪ್ಪ ರೈ ಭದ್ರತೆ; ಕಾನೂನು ಸುವ್ಯವಸ್ಥೆ ಶಾಖೆಯಲ್ಲಿ ಶ್ರೀರಾಮುಲು ಶಿಫಾರಸ್ಸು ಪತ್ರವೇ ಇಲ್ಲ

Next Post

ಐಟಿ ದಾಳಿ ಬೆನ್ನಲ್ಲೇ ಹೆಟಿರೋ ರೆಮ್‌ಡಿಸಿವಿರ್‌ ವಹಿವಾಟು ಬಹಿರಂಗ; ಸಾವಿರ ಕೋಟಿ ವಹಿವಾಟು!

thefilestack

thefilestack

Next Post

ಐಟಿ ದಾಳಿ ಬೆನ್ನಲ್ಲೇ ಹೆಟಿರೋ ರೆಮ್‌ಡಿಸಿವಿರ್‌ ವಹಿವಾಟು ಬಹಿರಂಗ; ಸಾವಿರ ಕೋಟಿ ವಹಿವಾಟು!

Recommended

ಹಳಿ ತಪ್ಪಿದ ಪರಿಷತ್‌ ಆಡಳಿತ; ಅಧಿಕಾರಿಗಳು ಸಿ ಸಿ ಕ್ಯಾಮರಾಗಳನ್ನು ಹಾಳುಗೆಡವಿದರೇ?

5 years ago
Bangalore highest traffic Namma metro

ಮೆಟ್ರೊ ಪ್ರಯಾಣ ದರ ಹೆಚ್ಚಳ ಬೇಡ ಎಂದು ಅಧ್ಯಯನದ ವರದಿ ಹೇಳಿದ್ದರೂ ದರ ಏರಿಸಿದ ಸರ್ಕಾರ

7 months ago

Don't Miss

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

ಗೃಹಲಕ್ಷ್ಮಿ ವೆಚ್ಚಕ್ಕೂ ಜಿಎಸ್‌ಟಿ ಕೊಡುಗೆಗೂ ಅಜಗಜಾಂತರ; ಹಣಕಾಸು ಹೊಣೆಗಾರಿಕೆ ಸೃಷ್ಟಿಸಿತೇ?

August 16, 2025

ಕಲ್ಯಾಣ ಕರ್ನಾಟಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಆರು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ; ಮೂವರು ಮಾತ್ರ ಅಮಾನತು

August 14, 2025
the file

THE FILE is run by the File Stack Media Private Limited. It is founded and edited by G Mahantesh, a veteran investigative journalist who has worked in the past for mainstream news television, broadsheet newspapers and digital ventures.

Follow us

Recent News

ಕಾಂಗ್ರೆಸ್‌ ಸರ್ಕಾರದಿಂದ ‘ಕಾಂಗ್ರೆಸ್‌ ಭವನ ಟ್ರಸ್ಟ್‌’ಗೆ ಸರ್ಕಾರಿ ಜಾಗ; ಹಿತಾಸಕ್ತಿ ಸಂಘ‍ರ್ಷದ ಸುಳಿಯಲ್ಲಿ ಸಿಎಂ, ಡಿಸಿಎಂ

August 18, 2025

70 ಹುದ್ದೆಗಳಿಗೆ ನೇಮಕ; ಆದೇಶ ನೇರಾನೇರ ಉಲ್ಲಂಘನೆ, ರಾಜ್ಯಪಾಲರ ಕಚೇರಿಯ ಜಾಣ ಕುರುಡು ಬಯಲು

August 18, 2025

Categories

  • Blog
Support Us
  • About
  • Advertise
  • Privacy & Policy
  • Contact

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd

No Result
View All Result
  • Home
  • CBI/CID
  • RTI
  • GOVERNANCE
  • IT/ED
  • LEGISLATURE
  • LOKAYUKTA
  • About Us
  • Contact Us
  • Kannada Version

© THE FILE 2026 All Rights Reserved by File Stack Media Private Limited. Designed by Kalahamsa infotech Pvt.Ltd